ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯತೀರ್ಥ ಗುರು ಹೃದ್ಗುಹಾಂತರ ವಾಸ ವಾಯ್ವಂತರ್ಗತ ಶ್ರೀ ಕೃಷ್ಣಯ್ಯ ಜೀಯಾ ಪ ಕಾಯೈಯ ನಿನ್ನವ ನಿವನೆಂದು ಅನುದಿನದಿ ಕಾಯ ಮನ ವಚನದಲಿ ನಿನ್ನ ನೆನವಿರಲಿ ಜೀಯಾ ಶ್ರೀ ವಿಜಯರಾಯರ ಸೇವೆ ಕಾರ್ಯಗಳಿಗಭಯವ ನಿಡೈಯಾ ಜೀಯಾ 1 ಲೌಕಿಕದಲ್ಲಿಹನೆಂದು ನಿರಾಕರಿಸದೇಲೆ ನಿನ್ನ ಏಕಾಂತ ಭಕುತಿಯನಿತ್ತು ಸಲಹೋ ಶ್ರೀ ಕಳತ್ರನೆ ಇವನ ವ್ಯಾಕುಲಗಳ ಹರಿಸಿ ಕೃಪಾಕಟಾಕ್ಷದಿ ನೋಡಿ ಕಾಯಬೇಕೈಯಾ 2 ಭಕ್ತವತ್ಸಲ ನಿನ್ನ ಭಕ್ತನಿವನೆಂದೆನಿಸು ಭಕ್ತಿಬಲಜ್ಞಾನ ಸಾಧನವನಿತ್ತು ಶಕ್ತನೆನಿಸಿಹಪರದಿ ಭಕ್ತಿನಿನ್ನೊಳು ಇರಲಿ ಮುಕ್ತರೊಡೆಯ ಕೃಷ್ಣವಿಠಲ ಶ್ರೀ ವೆಂಕಟೇಶ 3
--------------
ಕೃಷ್ಣವಿಠಲದಾಸರು
ನೀಚನಲ್ಲವೇ ಇವನು ನೀಚನಲ್ಲವೇ ಪ ಕೀಚಕಾರಿಪ್ರಿಯನ ಗುಣವ ಯೋಚಿಸದಲೆ ಯಾಚಿಸುವÀನು ಅ.ಪ. ಶ್ರೀಕಳತ್ರನಂಘ್ರಿ ಕಮಲವೇಕಚಿತ್ತದಲ್ಲಿ ಮನೋ ವ್ಯಾಕುಲಗಳ ಬಿಟ್ಟು ಸುಖೋದ್ರೇಕದಿಂದ ಭಜಿಸದವನು 1 ಲೋಕವಾರ್ತೆಗಳಲಿ ಏಡ ಮೂಕರೆನಿಸಿ ವಿಷಯಗಳವ ಲೋಕಿಸದಲೆ ಶ್ರೀಶಗಿವು ಪ್ರತೀಕವೆಂದು ತಿಳಿಯದವನು 2 ಜನನಿ ಜನಕರಂತೆ ಜನಾರ್ದನನು ಸಲಹುತಿರಲು ಬಿಟ್ಟು ಧನಿಕರ ಮನೆಮನೆಗಳರಸಿ ಶುನಕನಂತೆ ತಿರುಗುವವನು 3 ಹರಿಕಥಾಮೃತವ ಬಿಟ್ಟು ನರ ಚರಿತ್ರೆಯಿಂದ ದ ರ್ದುರಗಳಂತೆ ಹರಟೆ ದಿವಸ ಬರಿದೆ ಕಳೆಯುತಿಪ್ಪ ಮನುಜ4 ಕರ್ಮ ತೊರೆದು ಪರರ ಗೃಹಗಳಲ್ಲಿ ಸಂಚರಿಸುತ ನಿಂದಿಸುವ ಮನುಜ5 ಬಹಳ ದ್ರವ್ಯದಿಂದ ಗರುಡ ವಾಹನನಂಘ್ರಿ ಭಜಿಸಿ ಅನು ಗ್ರಹವ ಮಾಡು ಎಂದು ಬೇಡಿ ಐಹಿಕಸುಖವ ಬಯಸುವವನು 6 ಕರಣ ಜನ್ಯ ಪುಣ್ಯಪಾಪವೆರಡು ಹರಿಯಧೀನವೆಂದು ಸ್ಮರಿಸುತಲತಿ ಭಕುತಿಯಿಂದ ಹರುಷಪಡದಲಿಪ್ಪ ಮನುಜ 7 ಜೀವನ ಕರ್ತೃತ್ವ ಬಿಟ್ಟು ದೇವನೊಬ್ಬ ಕರ್ತೃ ರಮಾ ದೇವಿ ಮೊದಲುಗೊಂಡು ಹರಿಯ ಸೇವಕರೆಂದರಿಯದವನು 8 ವಾತಜನಕನೆನಿಪ ಜಗನ್ನಾಥವಿಠ್ಠಲನ ಪದಾಬ್ಜ ಭವ ವೈತರಣಿಯ ದಾಟದವನು 9
--------------
ಜಗನ್ನಾಥದಾಸರು
ಪತಿತಪಾವನ ಕರಿವದನ ನಾರಾಯಣ ಮತಿಗೆಮಂಗಳವೀಯೋ ಮುನಿಜನಾಭರಣ ಪ ಇತರವ್ಯಾಕುಲಗಳ ಮಥನವು ಮನದೆ ಬಹಳ ವ್ಯಥೆಯ ತೋರುತ್ತಲಿದೆ ಗತಿಯಾವುದೊ ಹರಿಯೆ ಸತತ ನಿನ್ನ ಗುಣಕಥನ ಮಾಡುವ ಅತಿಶಯ ಮಾರ್ಗದಿ ಕ್ಷತಿಯೊಳು ಪೊರೆಯ್ಯೆ 1 ಧ್ರುವ ಪ್ರಹ್ಲಾದ ನರ ದ್ರೌಪದಿ ಅಂಬರೀಷ ಇವರ ಕಷ್ಟಗಳಿಂದ ಪಾರುಗಾಣಿಸಿದೆ ಅವನೀಭಾರವನಿಳುಹುವ ದೊರೆಯೇ ಕುವಲಯನೇತ್ರ ಕುಮಾರನ ಕೈಪಿಡಿ2 ಶ್ರೀರಮಣೀವರ ಸಾರಗುಣಾಕರ ಸಿರಿ ಜಾಜೀಶ್ವರ ಕೋರುತಿರುವೆಮಗೆ ತೋರಿಸು ತವಪದ ನಾರದ ಮುನಿನುತ ಸಾರುತೆ ನಮಿಪೆ 3
--------------
ಶಾಮಶರ್ಮರು