ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅವನೆವೆ ದಾನವನು ನೋಡಿರೋ | ಅವನವೇ ದಾನವನು ಪ ದಾವನು ಸಾಕುವ ದೇವರ ಮರೆದು | ಅವಿವೇಕತನದಲಿ ಜೀವಿಸುತಿಹಾ ಅ.ಪ ವಿಷಯದ ಸಂಭ್ರಮದಾ ಸ್ಥಿರಪಟ್ಟಾ | ವಸುಧಿಲಿ ಬಗದಾವಾ | ಆಶನ ವ್ಯಸನದೊಳು ಪಶುವಿನ ಪರಿಯಲಿ | ನಿಶಿದಿನ ಗಳೆವುತ ದೆಶೆಗೆಟ್ಟು ಹೋದಾ 1 ಸಾಧು ಸಂಗಕ ದೂರಾ ಶ್ರವಣದ | ಹಾದಿಗೆಂದಿಗೆ ಬಾರಾ | ಸಾಧಿಸಿ ಕುವಿದ್ಯಾವಾದಾ ಆಟಗಳನು | ಸಾದರ ನೋಡುತಾ ತಾ ದಿನಗಳೆವಾ 2 ಗುರು ಮಹಿಪತಿ ಬೋಧಾ ನಂದನು | ಸಾರಿದನಾ ಹಿತವಾದಾ | ಹರಿನಾಮಾವೆಂದಿಗೆ ಸ್ಮರಿಸು ಮುಖದೊಳು | ನರದೇಹವೆಂಬುದು ಬಾರದು ನೋಡಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮತಿಗೆಟ್ಟೆ ಭವತಾಪವ್ಯಥೆಯಿಂದ ನಾನು ಸುತನರಿಕೆ ಹಿತದಿಂದ ಕೇಳು ಮಮಪಿತನೆ ಪ ವಿಧಿವಶದಿ ಸಿಲ್ಕಿ ನಾ ಉದಿಸಿ ಈ ಬುವಿಯೊಳಗೆ ಸದಮಲನೆ ತವಸ್ಮರಣವಿಧಿಯ ತಿಳಿಯದಲೆ ಉದಯದೇಳುತ ನಾನು ಅಧಮ ಉದರಕ್ಕಾಗಿ ವದನತೆರೆದನ್ಯರನು ಹುದುಗಿ ಬೇಡುತಲಿ 1 ಹಸಿತೃಷೆಯ ತಡೆಯದೆ ಪುಸಿಯಾಡಿ ದಿನಗಳೆದೆ ನಿಶೆಯೆಲ್ಲ ಸಂಸಾರವ್ಯಸನದೊಳು ಕಳೆದೆ ವಸನ ಒಡೆವೆಗೆ ಮೆಚ್ಚಿ ವಸುಧೆಯೊಳ್ತಿರುತಿರುಗಿ ಪುಸಿಯ ಮಾನವರನ್ನು ರಸನೆಯಿಂದ್ಹೊಗಳಿ 2 ವಾನರಗೆ ವಶನಾದಿ ದಾನವನ ರಕ್ಷಿಸಿದಿ ಮಾನವಗೆ ಆಳಾದಿ ದೀನದಯಾಸಿಂಧು ನೀನೆ ಗತಿಯೆನಗಿನ್ನು ಜ್ಞಾನಬೋಧಿಸಿ ಕಾಯೊ ಹೀನಭವ ಗೆಲಿಸಿ ಮಮಪ್ರಾಣ ಶ್ರೀರಾಮ 3
--------------
ರಾಮದಾಸರು
ಯಾರ ಕೃತಕವು ಇದು ವಿಚಾರವನು ಮಾಡಿ ಕಾರಣೀಕದ ಸ್ವಪ್ನ ಕಾಣುತಿದೆ ನೋಡಿ ಪ ಕಾಳ ಮೇಘಧ್ವನಿಯು ಗಾಳಿ ಮಳೆ ಮಿಂಚುಗಳು ಧಾಳಿ ಇಡುತಿಹ ಸಿಡಿಲು ಬಹಳ ಕತ್ತಲೆಯು ಹಾಳೂರ ಮಧ್ಯದೊಳು ಬೀಳುತಿಹ ವಾರಿಗಳು ಮೃಗ ಮೈಮೇಲೆ ಬೀಳುವುದ 1 ವೃಷ್ಟಿ ತೀರುವ ತನಕ ಇಟ್ಟೆಡೆಯೊಳಿರುತಿರ್ದು ಕೆಟ್ಟ ಪಥದಲಿ ಚಾರುಗಟ್ಟಿವಿಳಿದು ಗಟ್ಟಿಯಾಗಿಹ ಚಳಿಯು ಹುಟ್ಟಿ ಕೈಕಾಲುಗಳು ಒಟ್ಟಾಗಿ ಕೂಡಿರ್ದು ದೃಷ್ಟಿ ಬಿಡುತಿಹುದು 2 ಬಿಸಿನೀರ ಮಳೆಯೊಳಗೆ ನುಸಿತ ಗುಣೆಯಸೆಯೊಳಗೆ ಎಸೆದು ತೋರುವ ಉರಿಯ ಹಸಿಯ ಮೆಣಸಿನೊಳು ಗಸಣಿಯನು ಕೈಕೊಂಡು ಕಸಮುಸುರೆಯಾಗಿರ್ದು ಉಸುರಲಾರದೆ ತೃಷೆಯ ಹಸಿದ ಬಳಲಿಕೆಯ 3 ನಿಂದೆಯಾಗಿಹ ಮೃಗದ ಚಂದವನು ಮೈಗೊಟ್ಟು ಬಂದುದೆನಗೈಶ್ವರ್ಯ ಎಂದು ಹರುಷಿಸುತ ಮಂದಹಾಸದ ಒಳಗೆ ಬಂಧನದಲಿರುತಿರ್ದು ಮುಂದುವರಿದು ವ್ಯಸನದೊಳು ಬಂದಿರ್ದ ಬಗೆಯ 4 ಮೂರು ಮಂದಿಯು ಬಂದು ಸೇರಿದರು ದೂರಿಡುವ ಆರು ಕರೆದರು ತಾನು ಬಾರೆನೆಂಬ ಮೇರೆಯಾಗಿಯೆ ಬಪ್ಪ ಮೂರಾರು ತಾ ಬಿಡುವ ಸಾರಿ ಚೋರತ್ವದಲ್ಲಿ ಪರವೂರ ಸುಲಿವ 5 ಮೇಲು ದುರ್ಗವ ಕಂಡು ಗಾಳಿಗೋಪುರವನ್ನು ಆಳ ಬಲುಹುಳ್ಳವನು ಅವಸರದೊಳು ನೂಲಯೇಣಿಯನಿರಿಸಿ ಏರಿಳಿದು ಬಾಹಾಗ ಕಾಲು ಜಾರಿಯೆ ಬಸಿದ ಶೂಲದೊಳು ಬೀಳುವುದು 6 ಹೀಗಿರುವ ಕೃತ್ಯಗಳು ನಾಗಶಯನನಿಗರುಹು ಬೇಗದೊಳು ಪರಿಹರಿಪ ಯೋಗವನು ಕೊಡುವ ನಾಗಗಿರಿವಾಸನಹ ವರಾಹತಿಮ್ಮಪ್ಪ ತೂಗುವನು ತೊಟ್ಟಿಲೊಳು ಆಗುವುದನಿತ್ತು 7
--------------
ವರಹತಿಮ್ಮಪ್ಪ
ನರರ ಪಾಡಲು ಬೇಡ ನಾಯಿ ಮನವೆಮುರಹರನ ಭಕುತಿನೆಲೆ ಹೊಂದು ಮನವೆ ಪ.ದಾರಿದ್ರ್ಯ ವ್ಯಸನದೊಳು ಮುಳುಗಿ ನರಧನಿಕರನುಆರಾಧನೆಯ ಮಾಡಿ ಬರಿದೆ ಕೆಡುವೆಘೋರನರಕದ ಭಯಗಳನು ನೋಡೈ ತಿಳಿದುನಾರಸಿಂಹನ ನಂಬು ದೃಢದಿ ಮನವೆ 1ಬಲ್ಲಿದರ ಬಳಿವಿಡಿದು ಪೋಗಿ ಭ್ರಮೆಗೊಳ್ಳದಿರುಭುಲ್ಲೈಸಿ ಬಳಲಿಮೃಗತೃಷೆಯಂದದಿಫುಲ್ಲಲೋಚನ ಹರಿಯ ದಾಸರನು ಅನುಸರಿಸಿಸೊಲ್ಲುಸೊಲ್ಲಿಗೆ ಸುಧೆಯ ಸವಿದುಣ್ಣು ಮನವೆ2ಮದದಿ ಮತ್ಸರದಿ ಪ್ರಜ್ವಲಿಸುತಿಹ ದೇಹದಲಿಕುದಿಯದಿರುತ್ರಿವಿಧತಾಪದಲಿ ಉಕ್ಕಿಹದಿನಾಲ್ಕು ಭುವನದೊಡೆಯನ ನಂಬಿದರೆ ನಿನಗೆಪದವಿತ್ತು ಪೊರೆಯನೆ ಪೇಳು ಮನವೆ 3ಮಂದಮತಿಯಾಗಿ ಬಹುವಿಷಯ ಭ್ರಾಂತಿಯಲಿ ಮದಾಂಧರನೋಲೈಸಿ ಕೃಶವಾದರೆಮುಂದುಗಾಣದೆ ಖಳರು ನೋಯಿಸಿ ನುಡಿದರೆಕಂದಿ ಕುಂದಿ ಬಳಲುವೆಯಲಾ ಮರುಳು ಮನವೆ 4ಮುನ್ನಸಂಚಿತಸುಕೃತವೆಂತುಟೊ ತಂದೆ ಪ್ರಸನ್ನವೆಂಕಟಪತಿಯ ಒಲುಮ್ಯಾಯಿತುಇನ್ನಾದರೆಚ್ಚರಿತು ವಿವಿಧ ಭಕುತಿಯ ಗಳಿಸಿಧನ್ಯ ನೀನೆನಿಸಿ ಸಾರ್ಥಕವಾಗು ಮನವೆ 5
--------------
ಪ್ರಸನ್ನವೆಂಕಟದಾಸರು