ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೋರು ನಿಜಜ್ಞಾನ ಸುಖವ ಮಾರನಯ್ಯ ಮರೆಯ ಬಿದ್ದೆ ಪ ಪಾರಮಾರ್ಥ ಪರಮ ಸವಿ ಚಾರಮೆನಿಪ ಪಾವನ ಸುಪಥ ಅ.ಪ ತೀರದಂಥ ಅಪಾರಭವದ ವಾರಧಿ ಈಸಿ ಘೋರಬಡುವೆ ನೀರಜಾಕ್ಷ ನಿಗಮವಿನುತ ಪಾರುಮಾಡು ಕಾರುಣ್ಯಶರಧಿ 1 ವಿಷಯಲಂಪಟ ಮುಸುಕು ಮುಸುಕಿ ವ್ಯಸನಚಿತೆಯೋಳ್ ಬಸವಳಿದೆ ಅಸಮಹಿಮ ತವಪಾದ ಕುಸುಮ ಮರೆದು ಕೆಟ್ಟೆನಭವ 2 ನಾಶಮತಿಯಿಂದಾಸೆಗೈದ ದೋಷಗಳನ್ನು ಕ್ಷಮಿಸಿ ಬೇಗ ಪೋಷಿಸಿಭವ ಶ್ರೀಶ ಶ್ರೀರಾಮ ದಾಸಜನರುಲ್ಲಾಸ ಪ್ರಭು 3
--------------
ರಾಮದಾಸರು