ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೇಳಿದಾಗಲೇ ಹೇಳಬಹುದೇನೋ ಬ್ರಹ್ಮಾನುಭವಮಿದು ಪ ಹಾಳುವಾದವಲಾ ವಿಚಾರಿಸಲೇಳು ವ್ಯಸನಕೆ ಸಿಲ್ಕಿ ಕುಣಿಯುವ ಅ.ಪ ಖೂಳ ಕಪಟರಿಗೆಂತು ಅನುಭವಶಾಲಿಗಾಗಿಹ ಪರತರಾನ್ವಯ ಸುಳ್ಳಮಳ್ಳರಿಗಾಗದಹುದಣ್ಣ ವೇದಾಂತಸಾರಸ ಮೂಲ ಪ್ರಣವ ವಿಚಾರಕಹುದಣ್ಣ ಯಾರಾದಡಾಗಲೀ ನೀಲಜ್ಯೋತಿಯ ಕಾಣದೆ ಬರಿ ಶೂಲ ಶೀಲಕೆ ಸಿಲ್ಕಿ ಕುಣಿಯುತ ಆಲಿಸೆಂದು ನಮಸ್ಕರಿಸುತಿಹ ಜಾವಿದ್ಯದ ಪೋಲಿ ಜನಗಳು 1 ಪಂಡಿತರಿಗೇನದು ಕಂಡು ತಿಳಿಯಣ್ಣ ದೂರವಿಲ್ಲವು ಅಂಡದೊಳಗಿಹ ಪಿಂಡವೇ ಬ್ರಹ್ಮಾಂಡ ವೇದಾಂತಾರ್ಥ ಸಮ್ಮತಿ ಭಂಡರಿಗೆ ಬಹುಭಾಷೆಗಹುದೇನ ಕುಂಡಲೀಪುರ ತತ್ಪ್ರಯಾಣವು 2 ಓದಿ ವಿಕ್ರಯವನ್ನು ಮಾಡ್ಯಾರು ಓಂಕಾರ ಬೀಜದ ಹಾದಿಯನು ತಾವು ಕಾಣದೋಡ್ಯಾರೊ ರಾ ಜಾಧಿರಾಜರೂ ಕಾವಿ ಜಗಳವ ಕುಂತು ನೋಡ್ಯಾರು ವೇದಾಂತಿಗಳೂ ನಿಜ ಜ್ಞಾನಪುತ್ಥಳಿಯನ್ನು ಕಂಡ್ಯಾರು ಆದಿಮಧ್ಯಾಂತಗಳರಿಯದ ವಾದಿಗಳಿಗೆಂತಕ್ಕು ತತ್ವದ ಬೋಧೆಯೊಳಗಿಹುದು ಆದಿತತ್ವವು 3 ಕವಿಗಳೆಷ್ಟೋ ಕಷ್ಟಪಟ್ಯಾರು ಅವಸಾನಕರಂ ಭವದ ಬಲೆಯೊಳು ಕಟ್ಟಿಕುಟ್ಯಾರು ಆಗಲ್ಲಿ ಸುಜನರು ಜ್ಞಾ ನವೈರಾಗ್ಯವನು ಕೊಟ್ಯಾರು ಶಿವನು ತಾನೆಂತೆಂಬ ಅದ್ವೈತವನು ಆಡಲ್ಕಡಕಲಹುದೇ ಭುವನದೊಳು ಪಂಚಾಕ್ಷರೋ ನಿಜತ್ರಿಣೆಯಸತಿ ಮೋಕ್ಷೆಚ್ಛೆ ಕವಚಂ4 ನಾಗನಗರಿಪುರೀಶ ಕಾಣಣ್ಣ ಆಧ್ಯಾತ್ಮದನುಭವ ಕಾಗಿ ನಿನ್ನೊಳ ಹುಡುಕಬೇಕಣ್ಣ ಹಂಸಾಶ್ರಯದಿ ನಿನ್ನೊ ಳಗಿದೆಲ್ಲವು ಹುಡುಕಿ ನೋಡಣ್ಣ ಭೋಗಿಶಯನ ಶ್ರೀ ತುಲಸೀರಾಮನ ರಾಗವಿರಹಿತನಾಗಿ ಭಜಿಸಿದಡಾಗ ನಿನ್ನೊಳಗಂಕುರಿಪುದ 5
--------------
ಚನ್ನಪಟ್ಟಣದ ಅಹೋಬಲದಾಸರು
ಬ್ರಹ್ಮಜ್ಞಾನ | ಬಿಡು ಬಿಡು ಬಿಡು ನೀ ಸಂಸಾರ ಧ್ಯಾನ |ಕಡೆಯಲ್ಲಿ ನಿನ್ನ ಕಳಹುವರಲ್ಲಿಗೆ | ಬಿಡದಿರು ಸದ್ಗುರುವಿನ ಧ್ಯಾನ ಪ ಯಾತಕೆ ಕಲಿತ್ಯೋ ಬಹು ಯುಕ್ತಿಗಳ | ಬರಿ ಮಾತಿಲಿ ಆಗದು ನಿಜ ಮುಕ್ತಿ | ನೀತಿಯಿಂದ ನೀ ಅರಿತು ನೋಡಲು | ಸ್ವಾತ್ಮದ ಜ್ಞಾನವು ಆಗುವದಿದಕೆ1 ಸತಿ ಸುತರಾ ನೀ ನೋಡಿ ಹಿಗ್ಗುತಿ | ಮಿತಿಯಿಲ್ಲದೆ ಅವರಿಗೆ ತಗ್ಗುತಿ | ಗತಿಯ ಕೊಡುವ ಸಂತರು ಬಂದರೆ | ಮೋತಿಯ ತಿರುವಿ ವ್ಯಸನಕೆ ತಗ್ಗುತಿ 2 ಸಾಧು ಪುರುಷರ ಸಂಗವ ಹಿಡಿಯೊ | ಬೋಧಾಮೃತವನು ನೀ ಕುಡಿಯೊ | ಆದಿಯಲಿ ಭವತಾರಕ ಭಜಕರು | ಹೋದ ಹಾದಿಯ ನೀ ಹಿಡಿಯೊ 3
--------------
ಭಾವತರಕರು
ಯಾವ ಭಯವು ನಮಗೆ |ಶಂಕರ ದೇವನೊಲಿದು ಕಡೆಗೆ ಪಸಾವಧಾನದಿ ಸರ್ವಭಕ್ತ ಜನರಕಾವ|ದೇವ ದೇವೇಶ ಸರ್ವೇಶ ನೀನೊಲಿದರೆ ಅಪದುರಿತದ ಭಯವೇನಲೇ | ಶಂಕರ ನಿನ್ನ |ಸ್ಮರಿಸಲು ದೂರವಲೇ |ಮರಣದ ಭಯವೆನೆ | ಅಂತಕಾಂತಕ ನೀನು ||ಉರಗನ ಭಯವೆನೆ | ಗರಳಕಂಧರನೂ 1ಚೋರರ ಭಯವೇನೂ | ದಧಿಘೃತ |ಚೋರ ನಿನ್ನಯ ಸಖನೂ ||ನಾರೀ ಚೋರನ ದೇವ | ಧೀರಕೈರಾತನೀ |ಘೋರರಕ್ಕಸರೆನೆ | ತ್ರಿಪುರಸಂಹಾರ2ಮೃಗಪಕ್ಷಿ ಭಯವೆನಲೇ |ಸತಿಸುತಸಖ|ಖಗಮೃಗವೇರ್ದರೆಲೇ |ಜಗದೊಡತಿಯು ಲಕ್ಷ್ಮೀ | ಗಗ್ರಜನೆನಿಸಿಹೆ ||ಭಗಪೀಠನು ಧನ | ಮಾನಾಭಿಮಾನಕೇ 3ವಸನಕ್ಕೆ ಚರ್ಮಾಂಬರನೂ |ಸಂಸಾರವೆಂಬ ವ್ಯಸನಕೆ ದಿಗಂಬರನೂ ||ತೃಷೆಗೆ ಗಂಗಾಧರ | ಅಶನಕ್ಕೆ ಬಿಕ್ಷುಕನೀ |ಅಂಗ ಶೃಂಗಾರಕೆ | ಭಸ್ಮಲೇಪನನೂ 4ಪೊಗಳಲಳವೇ ನಿನ್ನಾ | ಮಹೇಶ್ವರ |ಜಗದಿ ಭಕ್ತರ ಸಂಪನ್ನಾ ||ಭೃಗುಲಾಂಛನಧರ ಗೋವಿಂದದಾಸನ |ಹಗಲಿರುಳೆನ್ನದೆಪೊರೆಯೋ ಮಹಾದೇವ 5
--------------
ಗೋವಿಂದದಾಸ