ಕೇಳು ಕಂಡ್ಯಾ ಒಂದು ಮನವೇ | ಕೇಳು ಕಂಡ್ಯಾ ಪ
ಕೇಳು ಕಂಡ್ಯಾ ವಂದ | ಪ್ರೇಮ ಭಾವದಿಂದ
ಬಾಳು ದೀಪರಿಂದ ನಿನಗೆ ಬಂದಕೀದೆ ಛಂದ 1
ವಿಡಿದು ಗುರುಪಾದಾ ಪಡಿಯೋ ನಿಜಬೋಧಾ |
ಕಡಿದು ಕಾಮ ಕ್ರೋಧ | ನೀಗು ವ್ಯವಾಧಾ 2
ಅನ್ಯ ಮಾರ್ಗ ನೋಡಾದಿರುವ ಬಲಿದೃಢಾ |
ಘನಗುರು ಗೂಢಾ | ವಿದ್ಯೆ ಸಾಧಿಸೆಲೋ ಮೂಢ 3
ದೊಡ್ಡವ ನಾನೆಂಬ ದೋರದೆÉ ನೀಡಂಭ |
ಜಡ್ಡಾಗದೇ ಗುಂಭಿ | ನಿಜ ನೋಡಿ ನಿರಾಲಂಬ 4
ಮಹಿಪತಿ ಜನಸೊಲ್ಲ ಹಾದಿಯಂತಿದಲ್ಲ
ಮಹಿಮನೇ ಬಲ್ಲನಿದರ ಸವಿಸುಖವೆಲ್ಲ 5