ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾಕೆ ನಿರ್ದಯ ಮಾಡಿದೆ ರಂಗಯ್ಯ ನೀನ್ಯಾಕೆ ನಿರ್ದಯ ಮಾಡಿದೆ ಪ ವ್ಯಾಕುಲ ಪಡಲಾರೆ ನಿಮ್ಮ ಲೋಕವ ಸೇರಿಸು ಅ.ಪ ದುಷ್ಟರ ಮಧ್ಯದಲ್ಲಿ ನಾನಿರಲಾರೆ ಸೃಷ್ಟಿಗೀಶ್ವರನೆ ಕೇಳು ಮುಟ್ಟಿ ಭಜಸಿ ನಿಮ್ಮ ಪಾದಪದ್ಮದ ಭಕ್ತಿಯಿಟ್ಟೇನೆಂದರೆ ದುಷ್ಟ ಇಂದ್ರಿಯ ಬಿಡದೆನ್ನ 1 ಪಂಚೇಂದ್ರಿಯಗಳೆನ್ನ ಬಹುಬೇಗ ವಂಚನೆ ಮಾಡುತಿದೆ ಪಂಚಬಾಣನ ಪಿತ ಪರಮಪುರುಷ ರಂಗ ಅ ಕಿಂಚನಾದೆ ನಿನ್ನಂಘ್ರಿಯ ಸೇರಿಸು 2 ಸಂಸಾರವೆಂಬ ಸರ್ಪ ಕಚ್ಚಿ ವಿಷ ಕ್ಷಣದಲ್ಲಿ ತಲೆಗೇರಿತು ಪರಮ ಹಂಸರ ಸಂಗದೊಳಗೆಯಿರಿಸಿ ಎನಗೆ ಭರದಿಂದೇರಿದ ವಿಷ ತಿರುಗೆಸೋ ಶ್ರೀಹರಿ 3 ಸರ್ಪ ತುಂಬಿದ ಕೂಪದಿ ಬಿದ್ದಿಹೆನು ಎನ್ನಪ್ಪ ರಕ್ಷಿಸೊ ಬೇಗದಿ ಸರ್ಪಶಯನ ಶ್ರೀಅಪ್ರಮೇಯ ರಂಗ ಇನ್ನು ಕ್ಷಿಪ್ರದಿಂ ಮುಕ್ತಿಯ ಒಲಿದು ಪಾಲಿಸು ರಂಗ 4 ಅಮ್ಬುಜನಾಭನೆ ನಿಮ್ಮ ಪಾದದಧ್ಯಾನ ಒಂದು ನಿಮಿಷವಾದರು ಮಾಡಲೀಸದು 5 ಹಿಂದಿನ ಕರ್ಮಂಗಳು ಇಂದಿರೇಶ ನಿಂದಕರ ವಶವಾಯಿತು ಇಂದು ಧರ್ಮದಲಿರ್ದೆ ಬಂಧುಗಳ ವಶವಾಯ್ತು ಇನ್ನು ಬಂಧನವೇನಯ್ಯ ಮುಕ್ತ್ಯಾನಂದ ತೋರುವುದಕ್ಕೆ 6 ಎಂದಿಗಾದರೂ ಮುಕ್ತಿಯ ಕೊಡುವೆಯೆಂದಾನಂದ ಇಂದು ಈ ಸಂಸಾರ ಬಂಧನದೊಳಗೆ ನಾ ಒಂದು ನಿಮಿಷ ಜೀವಿಸಲಾರೆನು ರಂಗ 7 ಅಂದು ದ್ರೌಪದಿ ಧ್ರುವÀ ಗಜೇಂದ್ರನ ರಕ್ಷಿಸಲಿಲ್ಲವೆ ಬಂದು ಅಂಬರೀಷ ಅಜಾಮಿಳರ ಪ್ರಹ್ಲಾದನ ಕಂಬದಿಂದಲೆ ಬಂದು ಕಾಯ್ದ ಗೋವಿಂದ 8 ಭಕ್ತವತ್ಸಲನೆಂತೆಂಬೊ ಬಿರುದು ಈಗ ವ್ಯರ್ಥವಾಯಿತೆ ಶ್ರೀರಂಗ ಉತ್ತಮ ಗುರುಗಳು ಶ್ರೇಯೋನಿಧಿಗಳ ವಾಕ್ಯ ಸತ್ಯವ ಮಾಡಿ ಮುಕ್ತ್ಯಾನಂದ ಪಾಲಿಸು 9 ರಂಗನಾಥ ನೀ ಕೈ ಬಿಟ್ಟರೆ ಎನ್ನ ಲೋಕಮಾತೆ ಬಿಡುವಳೆ ಬೇಗ ಮುಕ್ತಿಪಥವ ಪಾಲಿಸುವಳು 10 ಮಾಡಬಾರದ ಮಾಡಿದೆ ಈ ಸಂಸಾರದೆ ನೋಡಬಾರದ ನೋಡಿದೆ ಆಡಬಾರದ ವಾರ್ತೆಗಳನಾಡಿದೆ ಇನ್ನು ಗಾಡನೆ ಮುಕ್ತಿಯ ನೀಡೊ ವೆಂಕಟರಮಣ 11
--------------
ಯದುಗಿರಿಯಮ್ಮ
ವ್ಯರ್ಥವಾಯಿತೆನ್ನಿ ಜನ್ಮ ಸ್ವಾರ್ಥವಿಲ್ಲದೆ ಪರ ಕೃತ್ತಿ ವಾಸನ ಪೂಜೆಯನ್ನು ಮಾಡದೆ ಪ ಹಿಂದೆ ಜನನಿ ಗರ್ಭವಾಸದಿಂದ ಹೊರಟು ಬಂದ ಮೇಲೆ ಕೊಂದು ದಿವಸನಾನು ನಿಷ್ಠೆಯಿಂದ ಲಿರ್ದು ಆಗಮೋಕ್ತ ದಿಂದ ಶಿವಗೆ ಜಲದಿ ರುದ್ರದಿಂದ ಜಳಕ ಗೈದು ಶ್ರೀ ಗಂಧ ಪುಷ್ಪ ಪತ್ರೆಯಿಂದ ಪೂಜೆಯನ್ನು ಮಾಡದೆ 1 ಪುಣ್ಯನದಿಯು ಪುಣ್ಯಕ್ಷೇತ್ರ ಪುಣ್ಯ ಭೂಮಿಯಲ್ಲಿ ವಾಸ ಪುಣ್ಯಕಥೆಯು ಪುಣ್ಯತೀರ್ಥ ಸ್ನಾನವಿಲ್ಲದೆ ಪುಣ್ಯ ಮೂರ್ತಿಯಲ್ಲಿ ಧ್ಯಾನ ಪುಣ್ಯಪುರುಷರೊಡನೆ ಸಂಗ ಪುಣ್ಯ ಕಾಲದಲ್ಲಿ ಶಿವನ ಪೂಜೆಯನ್ನು ಮಾಡದೆ 2 ಮಂಡೆ ಜುಟ್ಟ ಸೂತ್ರವನ್ನು ಖಂಡಿಸಿರ್ದುಯತಿಎನುತ್ತ ದಂಡವನ್ನು ಧರಿಸಿ ಪೀತ ಕೌಶೇಯ ವಸನವನ್ನು ಪೊದ್ದು ಮೊಂಡತನದಿ ಸಕಲ ವಿಷಯ ಭೋಗವನು ಭೋಗಿಸುತ್ತ ಮಂಡೆ ಬೋಳನಾದರೇನು ಮನವ ಬÉೂೀಳಮಾಡದೆ 3 ಕಾಮಾರಿಯನ್ನು ಆಗಮೋಕ್ತದಿಂದ ಪೂಜೆಯನ್ನು ಮಾಡಿ ಘೋರಪಾತಕಂಗಳನು ಸುಟ್ಟುಸೂರೆಮಾಡದೆ 4 ಬೆಟ್ಟದೊಳಗನಂತ ವ್ಯಕ್ಷ ಹುಟ್ಟಿಮಡಿದ ವೊಲು ಜನ್ಮ ನಷ್ಟ ವಾಯ್ತು ವಿಧಿಯು ಬರೆದಿಟ್ಟ ದುರ್ಲಿಖಿತವೆಲ್ಲ ತುಟ್ಟಿಸಿತ್ತು ತಿಳಿದು ಶಿವನ ಮುಟ್ಟಿ ಪೂಜಿಸಾದರಿನ್ನು ಕೆಟ್ಟು ಹೋಗ ಬೇಡ ಲಕ್ಷ್ಮೀಪತಿಯ ಸ್ಮರಣೆಮಾಡದೆ 5
--------------
ಕವಿ ಪರಮದೇವದಾಸರು