ಒಟ್ಟು 4 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲೋಕನೀತಿ ಇತ್ತಿತ್ತ ಬಾರೆಂದು ಕರೆಯುವವರಿಲ್ಲದಿರೆ ವ್ಯರ್ಥವಲ್ಲವೆ ಜನ್ಮವು ಪ. ಅತ್ತತ್ತ ಹೋಗೆಂಬ ನುಡಿ ಕೇಳಿ ಜಗದೊಳಗೆ ಮತ್ತೆ ಇರಬಹುದೆ ಹರಿಯೆ ಅ.ಪ. ಆರಿಗಾರಾಗುವರೊ ಪ್ರಾರಬ್ಧ ನೀಗದಲೆ ಶೌರಿ ದಾರಿಯ ತೋರನು ಈ ರೀತಿಯರಿತು ಹೇ ದುರ್ಮನವೆ ನರಹರಿಯ ಆರಾಧನೆಯನೆ ಮಾಡೊ 1 ಏಕಾದಶ್ರೇಂದ್ರಿಯವ ಶ್ರೀ ಕಳತ್ರನೊಳಿಟ್ಟು ಏಕ ಮನದಲ್ಲಿ ಭಜಿಸು ಏಕೆ ತಲ್ಲಣಿಸುವೆ ಶೋಕಕ್ಕೆ ಒಳಗಾಗಿ ನೂಕು ಭವತಾಪ ಜಗದಿ 2 ಗೋಪಾಲಕೃಷ್ಣವಿಠ್ಠಲನೆ ಗತಿ ಎಂತೆಂದು ಈ ಪರಿಯಿಂದ ಭಜಿಸು ಶ್ರೀ ಪರಮ ಕಾರುಣ್ಯ ಗುರುಗಳಂತರ್ಯಾಮಿ ತಾಪ ಹರಿಸುವನು ಭವದಿ 3
--------------
ಅಂಬಾಬಾಯಿ
ವ್ಯರ್ಥವಲ್ಲವೇ ಜನ್ಮವ್ಯರ್ಥವಲ್ಲವೆ ಪಾದ ಅರ್ತು ಬೆರೆಯದವನ ಜನ್ಮ ಧ್ರುವ ಇಡಾ ಪಿಂಗಳೆರಡು ಥಡಿಯ ಮಧ್ಯಸುಷಮ್ನದಲಿ ಗುಪ್ತವಾಹಿನಿಯ ಸುಸ್ನಾನ ಮಾಡದವನ1 ಪಿಂಡ ಬ್ರಹ್ಮಾಂಡ ಭ್ರೂಮಧ್ಯ ತ್ರಿವೇಣೀಕ್ಷೇತ್ರ ಪುಣ್ಯಸಂಗಮದ ತೀರ್ಥಯಾತ್ರೆ ಮಾಡದವನ ಜನ್ಮ 2 ಆರು ಸೋಪಾನವೇರಿ ಮೂರು ಗೋಪುರವ ದಾಟಿ ಮೂರ್ತಿ ನೋಡದವನ ಜನ್ಮ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ವ್ಯರ್ಥವಲ್ಲವೆ - ಜನುಮ ವ್ಯರ್ಥವಲ್ಲವೆ ಪ.ತೀರ್ಥಪದನ ಭಜಿಸಿ ತಾ ಕೃ - |ತಾರ್ಥನಾಗದವನ ಜನುಮ ಅಪಒಂದು ಶಂಖವುದಕದಿಂದ |ಚೆಂದದಲಭಿಷೇಕ ಮಾಡಿ ||ಗಂಧ - ಪುಷ್ಪ ಹರಿಗೆ ಅರ್ಪಿಸಿ |ವಂದನೆ ಮಾಡದವನ ಜನುಮ 1ಮುಗುಳುದೆನೆಯ ಎಳೆ ತುಳಸಿ ದ - |ಳಗಳ ತಂದು ಪ್ರೇಮದಿಂದ ||ಜಗನ್ಮೋಹನ ಪೂಜೆಯ ಮಾಡಿ |ಚರಣಕೆರಗದವನ ಜನುಮ 2ಕಮಲ ಮಲ್ಲಿಗೆ ಸಂಪಿಗೆ ಜಾಜಿ |ವಿಮಲ ಕೇದಗೆ ಪ್ರೇಮದಿಂದ ||ಕಮಲನಾಭನ ಅರ್ಚನೆ ಮಾಡಿ |ಕರವ ಮುಗಿಯದವನ ಜನುಮ 3ಪಂಚಭಕ್ಷ್ಯ ಪಾಯಸಘೃತ |ಪಂಚಾಮೃತ ಹರಿಗರ್ಪಿಸದೆ ||ಮುಂಚೆ ಉಂಡು ಹೊರಗೆ ತಾ ಪ್ರ - |ಪಂಚಮಾಡುವವನ ಜನುಮ 4ಸಜ್ಜನಸಂಗ ಮಾಡದವನ |ದುರ್ಜನ ಸಂಗವ ಬಿಡದವನಅರ್ಜುನಸಖಪುರಂದರ |ವಿಠಲನನ್ನು ಭಜಿಸಿದವನ 5
--------------
ಪುರಂದರದಾಸರು