ಭಯವುಂಟೆ ಹರಿಯ ಭಕುತರಿಗೆ ಪ
ತತ್ವಗಳರಿಯುತ ಕೃತ್ಯವ ಮಾಡುವ
ಸಾತ್ವಿಕರಾಗಿರುವ ಸುಜನರಿಗೆ1
ಕಾಲ ವ್ಯರ್ಥಮಾಡದೆ ಪುರು
ಪಾರ್ಥಪ್ರದನ ಪದನ ಭಜಿಪರಿಗೆ 2
ಕಾಮ ಕ್ರೋಧಗಳ ಬಿಟ್ಟ ಮನದಿ ಶ್ರೀ
ರಾಮನ ಚರಣಗಳ ಭಜಿಪರಿಗೆ 3
ಸಾಧು ಸಂಗದಲಿ ಮೋದವಗೊಳ್ಳುತ
ಮಾಧವನನು ಸತತ ನೆನೆವರಿಗೆ 4
ಚಿನ್ಮಯ ರೂಪ ಪ್ರಸನ್ನ ಶ್ರೀಕೃಷ್ಣನ
ಉನ್ನತ ಮಹಿಮೆಗಳ ಸನ್ನುತಿಸಲು 5