ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವಬಂಧುಗಳೆಲೋ ಜೀವ ವಿಚಾರಿಸೋ ಕಾವ ಸಮರ್ಥದೇವ ಹರಿಯಲ್ಲದೆ ಪ ಮಾಯಮೋಹವ ನೀಗಿ ಕಾಯಶುದ್ಧಲಿ ಮನ ಪಾದ ದಿವ್ಯಭಕ್ತಿಲಿ ಭಜಿಸೊ ಅ.ಪ ಜನನಿ ಬಂದಹಳೆಂಬೆ ಜನನಿರ್ದಳಾಧ್ರುವಗೆ ಜನಕನ ತೊಡೆಯಿಂದ ಕನಿಕರಿಲ್ಲದೆ ಮಲ- ಜನನಿ ನೂಕಲು ಕಂದ ವನಕ್ಹೊರಟು ಪೋಗಲು ಜನನಿ ಸಲಹಿದಳೆನೋ ವನಜಾಕ್ಷನಲ್ಲದೆ 1 ಸತಿಹಿತದವಳೆನುವೆ ಸತಿಯಿರ್ದು ಸುಗ್ರೀವ ಖತಿಪಟ್ಟಾಗ್ರಜನಿಂ ವ್ಯಥೆಯಿಂದುಸುರ ಬಿಡಲು ಸತಿಬಂದು ಪತಿಯನ್ನು ಹಿತದಿ ಕರೆದೊಯ್ದಳೆ ಹಿತದ ಬಂಧುಗಳಿವರೇ ಕ್ಷಿತಿಪತಿಯಲ್ಲದೆ 2 ಸುತರ ಬಲವಿಹುದೆನುವೆ ಸುತರತಿ ಬಲಾನ್ವಿತರು ಜಿತಮಾರನಿಗಿರೆ ಉರಿಹಸ್ತ ವರವಿತ್ತು ಗತಿದೋರದಿರುತಿರೆ ಸುತರು ನೆರವಾದರೆ ಗತಿ ರಮಾಪತಿಯೆನೆ ಹಿತದಿಂ ಮೊರೆಕಾಯ್ದ 3 ಬಂಧುಗಳತಿಶಯದ ವೃಂದನೆರೆದು ಇರ ಲಂದು ಕರಿಮಕರಿಕೆಯಿಂದ ಬಂಧನ ಪಡಲ ವಂದು ಬೆಂಬಲಗೊಟ್ಟು ಬಂಧನವ ಬಿಡಿಸಿದುವೆ ತಂದೆಯಾ ಶ್ರಿ ಮುಕ್ಕುಂದನಲ್ಲದಲೆ 4 ಹರಿಯೆ ಪರದೈವವೋ ಹರಿಯೆ ಪರಲೋಕವು ಹರಿಯೇ ಸ್ಥಿರಸುಖವು ಹರಿಯೆ ವರ ಮುಕ್ತಿಯೋ ಹರಿಯೆಂದು ಅಜಮಿಳ ನರಕಯಾತನೆ ಗೆದ್ದ ಪಾದ 5
--------------
ರಾಮದಾಸರು
ಪಾಹಿ ಪಾಹಿ ಮೋಹನ್ನರೆ | ಲೋಹಲೊಷ್ಟ ಸಮೇಕ್ಷಣ ಪ ಪಾದ ಸೇವೆ | ವಿಹಿತದಿ ನೀಡೆನಗೆ ಅ.ಪ. ಪಾದ | ಬಂಡುಣಿಯಂದದಲೀಮಾಂಡವ್ಯರಾಗಿರುವಾಗ | ಚಂಡತಪ ಮಾಡಿದಿರಿ 1 ಗಾಣಿಗನುದರದೀ | ಜನಿಸುತ ಪೂರ್ವದೀಧನ ಬಹುಗಳಿಸುತ | ಜನುಮವ ನೂಕಿದಿರಿ2 ಗಳಿಸಿದ ಧನವನೂ | ಲಲನೆಗೂ ಪೇಳದೇಮಲಿನ ದೇಹವನೀಗಿ | ಕಳೆದಿರಿ ಪ್ರಾರಬ್ಧವ 3 ಸತಿಸುತ ಬಂಧು ಜನ | ಗತಿತಪ್ಪಿ ಭ್ರಾಂತರಾಗೀಅತಿ ಅತಿ ವ್ಯಥೆಯಿಂದ | ಪಾಥೇಯವ ಕಾಣಲಿಲ್ಲ 4 ಚಿನಿವಾರ ನೂದರದೀ | ಪುನರಪಿ ಜನಿಸಲೂಜನನಿಯು ಅನುವನು | ಕಾಣದಲೆ ಚಿಂತಿಸಿದಳ್ 5 ಆರ್ತಳಾಗುತ ಚಕ್ರ | ತೀರ್ಥವ ಪೊಗಲೂ ಬರೇಪಾರ್ಥ ಸಖನ ಭಕ್ತ | ಆರ್ತೆಯನು ತಡೆದರು 6 ಆಕೆಯ ಶಿಶು ಸಹಾ | ಸಾಕುವೆನೆನುತಲೀಶ್ರೀಕರ ವಾಕ್ಯವಿತ್ತು | ಭೀಕರವ ತಪ್ಪಿಸಿದ 7 ವಿಜಯರಾಯರು ಬಂದೂ | ನಿಜಸತಿ ಮಡುವಿನೊಳ್‍ತೇಜಸ್ಸಿನಿಂ ಮೆರೆವಂಥ | ದ್ವಿಜಸುತನರ್ಪಿಸಿದರ್ 8 ಮೋಹನ ಬಾಲನಿಗೆ | ಮೋಹನ ವಿಠಲನಾಮೋಹದಂಕಿತವಿತ್ತು | ಮಾಹಿತಾಂಘ್ರಿ ನೆನೆಸಿದರ್ 9 ಮುಂಜಿ ಮದುವೆ ಮಾಡೀ | ಹಂಜರದಿ ನಿಲಿಸುತಾಕಂಜಾಕ್ಷನಂಘ್ರಿಯನು | ಅಂಜಾದಲೆ ಭಜಿಸೆಂದರ್10 ಚಿನಿವಾರತನದಿಂದ | ಧನವನು ಗಳಿಸಿದಾಜನುಮ ಪೂರ್ವದಸ್ಮøತಿ | ಮನದೊಳು ನೆನೆದೆಯೋ11 ಗಾನವ ಮಾಡುತಲೀ | ಗಾಣಿಗತನಯರನೂಕಾಣುತಲೀ ಪೇಳಿದೆಯೊ | ಧನವಿಟ್ಟ ಸ್ಥಳವನು 12 ಗುರುಗಳ ಕರುಣಿಯಿಂ | ಹರಿದೆಯೊ ಅಪಮೃತೀನೆರೆದಿದ್ದ ಜನರುಗಳ್ | ಅರೀಯರು ಸೋಜಿಗವ 13 ಮೋದ ತೀರ್ಥರ ಮತ | ಸಾಧಿಸಿದೆ ಜಗದೊಳು14 ಪವನಾಂತರಾತ್ಮ ಗುರು | ಗೊವಿಂದ ವಿಠಲನಾಪಾವನಾ ಸ್ಮರಣೆಯಿಂ | ಭವವನು ಕಳೆದೆಯೋ 15
--------------
ಗುರುಗೋವಿಂದವಿಠಲರು
ಮತಿಗೆಟ್ಟೆ ಭವತಾಪವ್ಯಥೆಯಿಂದ ನಾನು ಸುತನರಿಕೆ ಹಿತದಿಂದ ಕೇಳು ಮಮಪಿತನೆ ಪ ವಿಧಿವಶದಿ ಸಿಲ್ಕಿ ನಾ ಉದಿಸಿ ಈ ಬುವಿಯೊಳಗೆ ಸದಮಲನೆ ತವಸ್ಮರಣವಿಧಿಯ ತಿಳಿಯದಲೆ ಉದಯದೇಳುತ ನಾನು ಅಧಮ ಉದರಕ್ಕಾಗಿ ವದನತೆರೆದನ್ಯರನು ಹುದುಗಿ ಬೇಡುತಲಿ 1 ಹಸಿತೃಷೆಯ ತಡೆಯದೆ ಪುಸಿಯಾಡಿ ದಿನಗಳೆದೆ ನಿಶೆಯೆಲ್ಲ ಸಂಸಾರವ್ಯಸನದೊಳು ಕಳೆದೆ ವಸನ ಒಡೆವೆಗೆ ಮೆಚ್ಚಿ ವಸುಧೆಯೊಳ್ತಿರುತಿರುಗಿ ಪುಸಿಯ ಮಾನವರನ್ನು ರಸನೆಯಿಂದ್ಹೊಗಳಿ 2 ವಾನರಗೆ ವಶನಾದಿ ದಾನವನ ರಕ್ಷಿಸಿದಿ ಮಾನವಗೆ ಆಳಾದಿ ದೀನದಯಾಸಿಂಧು ನೀನೆ ಗತಿಯೆನಗಿನ್ನು ಜ್ಞಾನಬೋಧಿಸಿ ಕಾಯೊ ಹೀನಭವ ಗೆಲಿಸಿ ಮಮಪ್ರಾಣ ಶ್ರೀರಾಮ 3
--------------
ರಾಮದಾಸರು
ರಾಘವೇಂದ್ರನೆಂದು ನುಡಿದವರಿಗೆ | ಅನುರಾಗದಿಸಲಹುವರಾ ಯೋಗಿ ಶ್ರೀ ರಾಘವೇಂದ್ರರಾಯಾ ಪ ರಾಮಧ್ಯಾನವನು ಮಾಡುತಲನುದಿನ | ಜಯಿಸಿದಿ ರಾಕ್ಷಸರಾ ರಾಯರಾವ್ಯಾಧಿಗಳಳಿದು ಸೇವಾ ಕೊಡುತಿಹರಾ ರಮಾವಲ್ಲಭನಾಶ್ರಯ ಮಾಡಿ | ರಾಜ್ಯವಾಳಿದರೆ ರಾಘವೇಂದ್ರ 1 ಘಾತುಕ ದನುಜನ ಕಾಲವಿದೆಂದು ಎಣಿಸದೆ ಕಲಿಯುಗ ಘನ ಪರಾಕ್ರಮದಿಂದ ಮೆರೆಯುವಿ | ಸುಯತೀಂದ್ರ ನೀ ಘನ ಜಾಡ್ಯಗಳ ಕಳೆದು ಜನರಿಗೆ ಸುರಿಸಿದಿ ಸುಖಮೇಘ ಘಾ ಬುರಿಯಿಂದಲಿ ಬಂದ ಆತುರರಿಗೆ ಕಳದಿರೊ ನೀ ಅಘವಾ 2 ವೇದಶಾಸ್ತ್ರ ಪಾರಾಯಣ ಮಾಡುತ | ವೃಂದಾವನ ದೊಳಿರುವೇ ವ್ಯಥೆಯಿಂದಲಿ ಬಂದಾ ತುರರಿಗೆ | ಅತಿಸುಖವನು ಸುರಿವೇ ವೇದವ್ಯಾಸರು ಮೊದಲಾದರೊಳು | ಆಧಾರದೊಲಿರುವೇ ವೇಷತಾಳಿ ನೀ ಯತಿಯಾಗಿ ಈ ಜಗದೊಳುನೀ ಮೆರೆವೆ 3 ಬಿಡುವೆನುರಾಘವೇಂದ್ರಾ ಮತ್ಸ್ಯ ದ್ರಾಕ್ಷಾಫಲದಂತೆ ಮಧುರವು ತೋರಿಸಲಹೊಗುಣಸಾಂದ್ರಾ ದ್ರವ್ಯ ಪತಿಸಿರಿ ನರಸಿಂಹ ವಿಠಲನ ತೋರೋದಯದಿಂದ ನೀರಾಘವೇಂದ್ರಾ 4
--------------
ಓರಬಾಯಿ ಲಕ್ಷ್ಮೀದೇವಮ್ಮ
ಹಲವು ಹಂಬಲಿಸಿದಲ್ಲೇನೂ ಇಲ್ಲ ಜಲಜನಾಭನ ಕರುಣÉೂೀದಯವು ತಪ್ಪಿದ ವೇಳ್ಯಾ ಪ ಬರಿಗಂಟು ಅಪೇಕ್ಷೆ ಬಯಸುವುದೆಲ್ಲಾ ಪೂರ್ವಾಕೃತ ಇದ್ದದ್ದು ಬಿಟ್ಟದ್ದೆ ಇಲ್ಲ ಬಿರುದು ಬಾವಲಿ ದೇಹಾಭಂಗ ಬಡುವಾದೊಂದೆ ಪರಿ ವ್ಯಥೆಯಿಂದ ಫಲವೇನೊ ಇಲ್ಲ ಮುಂದಾ 1 ಬಿತ್ತಿದ ಬೀಜ ಎಷ್ಟು ಬೆಳೆಯ----ಲಿನೂ ಸುತ್ತಾ ದೇಶವು ತಿರುಗಿ ಸೂಸಿದರೇನೂ ಪತ್ರ ಬರೆದ ಬ್ರಹ್ಮ ಫಣಿಯ ಲಿಖಿತವಲ್ಲದೆ ಪ್ರತ್ಯೇಕ ನಿನಗೊಂದು ಬಾಹೋದು ಇನ್ನುಂಟೆ 2 ಅನುಭವ ಇದ್ದವಲ್ಲಾ ------ಇಲ್ಲಾ ಮನದಿ ತಿಳಿದು ಇನ್ನು ಮರಿಯದು ಎಲ್ಲಾ ಘನ್ನ 'ಹೊನ್ನೆ ವಿಠ್ಠಲ ನಾ ಕರುಣಾವಿಲ್ಲ ----- ಮನಸಿನೊಳಗೆ ಸ್ಮರಿಸಿ ಮುಕುತನಾಗೋದು ಬಿಟ್ಟು 3
--------------
ಹೆನ್ನೆರಂಗದಾಸರು
ಯಾರೂ ಸಂಗಡ ಬಾಹೋರಿಲ್ಲನಾರಾಯಣ ನಿಮ್ಮ ನಾಮವೊಂದಲ್ಲದೆ ಪ.ಹೊತ್ತು ನವಮಾಸ ಪರಿಯಂತರವು ಗರ್ಭದಲಿಹೆತ್ತು ಬಲು ನೋವು ಬೇನೆಗಳಿಂದಲಿತುತ್ತು ಬುತ್ತಿಯ ಕೊಟ್ಟು ಸಲಹಿದಂಥ ತಾಯಿಅತ್ತು ಕಳುಹುವಳಲ್ಲದೆ ನೆರೆಬಾಹಳೆ 1ದೇವವಿಪ್ರರು ಅಗ್ನಿಸಾಕ್ಷಿಯಿಂದಲಿ ತನ್ನಭಾವಶುದ್ಧಿಯಲಿ ಧಾರೆಯೆರಿಸಿಕೊಂಡದೇವಿ ತನ್ನ ತಲೆಗೆ ಕೈಯಿಟ್ಟುಕೊಂಡು ಇನ್ನಾವ ಗತಿಯೆಂದೆನುತ ಗೋಳಿಡುವಳಲ್ಲದೆ 2ಮತ್ತೆ ಪ್ರಾಣನು ತನುವ ಬಿಟ್ಟು ಹೋಗುವಾಗಎತ್ತಿವನ ಹೊರಗೊಯ್ಧ ಹಾಕೆಂಬರುಎತ್ತಿದ ಕಸಕಿಂತ ಕಡೆಯಾಯಿತೀ ದೇಹವಿತ್ತವೆಷ್ಟಿದ್ದರೂ ಫಲವಿಲ್ಲ ಹರಿಯೆ 3ಪುತ್ರಮಿತ್ರರು ಸಕಲ ಬಂಧು ಬಳಗಗಳೆಲ್ಲಹತ್ತಿರ ನಿಂತು ನೋಡುವರಲ್ಲದೆಮೃತ್ಯುದೇವಿಯ ಬಂದು ಅಸುಗಳನು ಸೆಳೆವಾಗಮತ್ತೆ ತನ್ನವರಿದ್ದು ಏನು ಮಾಡುವರು 4ಯಮನ ದೂತರು ಬಂದು ಪಾಶಂಗಳನೆ ಎಸೆದುಮಮತೆಯಿಲ್ಲದೆ ಪ್ರಾಣ ಎಳೆಯುತಿರಲುವಿಮುಖನಾಗಿ ತಾನು ವ್ಯಥೆಯಿಂದ ಪೋಪಾಗಕಮಲಾಕ್ಷ ಪುರಂದರವಿಠಲ ನೀನಲ್ಲದೆ * 5
--------------
ಪುರಂದರದಾಸರು