ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನವನೆನಿಸಿದಾ ಮಾನವನಿಂಗೆ ಇನ್ನು ಭವಭಯ ಉಂಟೇ ಭಕುತ ವತ್ಸಲ ಕೃಷ್ಣಾ ಪ ಶ್ರವಣ ದರಹು ಇಲ್ಲಾ ನವವಿಧ ಭಜನಿಲ್ಲಾ ಕವಿತದನುಡಿಯ ಚಾತುಯ್ರ್ಯವಿಲ್ಲಾ ತವಚರಣವನಂಬಿ ಅವನಿಯೋಳಗನಿಶಿ ದಿವಸದಿ ಅಚ್ಯುತಾನಂತ ಗೋವಿಂದ ಯನುತಲಿ 1 ಘನ್ನ ವಿರಕ್ತಿಯಿಲ್ಲಾ ಮನ್ನಣೆಯ ತಪವಿಲ್ಲಾ ಉನ್ನತ ದ ವ್ಯತಶೀಲ ಕರ್ಮವಿಲ್ಲಾ ಅನ್ಯದೈವ ಕೆರಗದೆ ನಿನ್ನ ನಾಮ ನಿನ್ನ ಮುದ್ರೆ ನಿನ್ನವರಪರಿಚಾರ ತನದಲ್ಲಿ ರಮಿಸುತಾ 2 ಮರೆದೊಮ್ಮೆನೆನೆದರೆ ಸರಿವದಘರಾಶಿ ಅರಿದೊಮ್ಮೆನೆನೆಯಲು ಗತಿಸಂಪದಾ ದೊರೆವುದೆನುತಶೃತಿ ನಿರುತ ಸಾರುತಲಿದೆ ಗುರುಮಹಿಪತಿ ಪ್ರಭು ಎನ್ನನುದ್ದರಿಸುದೈಯ್ಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು