ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿಪ ವೇದಶಾಸ್ತ್ರ ಪಂಚಾಂಗವ ಓದಿಕೊಂಡು ಅನ್ಯರಿಗೆಬೋಧನೆಯ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ 1 ಚಂಡಭಟರಾಗಿ ನಡೆದು ಕತ್ತಿ ಢಾಲು ಕೈಲಿ ಹಿಡಿದುಖಂಡ ತುಂಡ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 2 ಅಂಗಡಿ ಮುಂಗಟ್ಟನ್ಹೂಡಿ ವ್ಯಂಗ್ಯ ಮಾತುಗಳನ್ನಾಡಿಭಂಗ ಬಿದ್ದು ಗಳಿಸುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 3 ಕುಂಟೆ ತುದಿಗೆ ಕೊರಡು ಹಾಕಿ ಹೆಂಟೆ ಮಣ್ಣು ಸಮನು ಮಾಡಿರೆಂಟೆ ಹೊಡೆದು ಬೆಳೆಸುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 4 ಬೆಲ್ಲದಂತೆ ಮಾತಾನಾಡಿ ಎಲ್ಲರನ್ನು ಮರುಳು ಮಾಡಿಸುಳ್ಳು ಬೊಗಳಿ ತಿಂಬುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 5 ಕೊಟ್ಟಣವನು ಕುಟ್ಟಿಕೊಂಡು ಕಟ್ಟಿಗೆಯನು ಹೊತ್ತುಕೊಂಡುಕಷ್ಟ ಮಾಡಿ ಉಣ್ಣುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 6 ತಾಳ ದಂಡಿಗೆ ಶ್ರುತಿ ಮೇಳ ತಂಬೂರಿಯ ಹಿಡಿದುಕೊಂಡುಸೂಳೆಯಂತೆ ಕುಣಿಯುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 7 ಸಂನ್ಯಾಸಿ ಜಂಗಮ ಜೋಗಿ ಜಟ್ಟಿ ಮೊಂಡ ಬೈರಾಗಿನಾನಾ ವೇಷಗಳೆಲ್ಲ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 8 ಹಳ್ಳದಲ್ಲಿ ಕುಳಿತುಕೊಂಡು ಕಲ್ಲು ದೊಣ್ಣೆ ಹಿಡಿದುಕೊಂಡುಕಳ್ಳತನವ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 9 ಅಂದಣ ಪಲ್ಲಕ್ಕಿ ಏರಿ ಮಂದಿ ಮಾರ್ಬಲ ಕೂಡಿಚಂದದಿಂದ ಮೆರೆಯುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 10 ಉನ್ನತ ಕಾಗಿನೆಲೆಯಾದಿಕೇಶವನಾ ಧ್ಯಾನವನ್ನುಮನಮುಟ್ಟಿ ಮಾಡುವುದು ಮುಕ್ತಿಗಾಗಿ ಆನಂದಕಾಗಿ 11
--------------
ಕನಕದಾಸ
ಮಾನಿನಿ ಬಲು ನುಡಿಯೋದುಚಿತವೆಭಲಾ ಭಲಾ ಎನಿಸು ಅನುಗಾಲ ಪ. ಬಂದ ಜನರು ಬಲು ಚಂದಾಗಿ ಕುಳಿತಿಹರು ಚಂದಿರವದನೆ ಸುಭದ್ರಾಚಂದಿರವದನೆ ಸುಭದ್ರಾ ನಿನ್ನ ಮುಖಕುಂದಿತಾಕೆಂದು ಕಮಲಾಕ್ಷ 1 ಬಲ್ಲೆ ಭಾಷೆ ನಿನ್ನ ಕ್ಷುಲ್ಲತನದ ಬುದ್ಧಿಮಲ್ಲಿಗೆಯಂಥ ಸುಕುಮಾರಿಮಲ್ಲಿಗೆಯಂಥ ಸುಕುಮಾರಿ ಗರತಿಗೆ ಹೊಲ್ಲ ಮಾತುಗಳ ನುಡಿಯೋರೆ2 ಮಾನುಳ್ಳ ಮಗಳಿಗೆ ನಾನಾ ಮಾತುಗಳಂದಿ ಏನೆಂಬೋರಿದಕೆ ಜನರೆಲ್ಲಏನೆಂಬೋರಿದಕೆ ಜನರೆಲ್ಲ ಸತ್ಯಭಾವೆಮಾನಾಪಮಾನ ನಿನಗಿಲ್ಲ3 ಮದ್ಗುಣಕಿ ಹೂವು ಉದ್ದಾದರೇನ ಮುದ್ದು ಮಲ್ಲಿಗೆಯ ಸರಿಯೇನ ಮುದ್ದು ಮಲ್ಲಿಗೆಯ ಸರಿಯೇನ ಭಾವೆ ಸುಭದ್ರಾಗೆ ನೀನು ಸರಿಯೇನ 4 ತಂಗಿಗಾಡಿದ ಮಾತು ರಂಗರಾಮೇಶ ಕೇಳಿಬಂಗಾರದಂಥ ಗುಣನಿಧಿಬಂಗಾರದಂಥ ಗುಣನಿಧಿ ಸುಭದ್ರೆಗೆವ್ಯಂಗ್ಯ ಮಾತುಗಳ ನುಡಿವೋರೆ5
--------------
ಗಲಗಲಿಅವ್ವನವರು
ಸ್ಮರಿಸುವೆನು ಗುರುರಾಯ ವರಮಂತ್ರ ಪುರಾಧಿಪ ಪೊರೆಯೊ ಎನ್ನನು ಜೀಯಾ ತವ ಮಹಿಮ ವರ್ಣಿಸ ಲರಿಯ ಮುರಹರಪ್ರೀಯಾ ಅಧ ಮಾಧಮನ ಮಮ ಪರಿಯ ನೀ ಬಲ್ಲೆಯ್ಯಾ ತೋರಯ್ಯಾ ದಯ ವರದ ಚರಿತೆಯ ಅರುಹುವದಕೆ ಪರವಾಕ್ಯರಣಿಯನು ಪಾಲಿಸಿ ನಿರುತ ಹರಿಗುರು ಚರಣದಲಿ ರತಿ ತ್ವರಿತ ಕರುಣಿಸು ರಾಘವೇಂದ್ರನೆ ಪ ಹಿಂದೆ ಕೃತಯುಗದಲಿ ಪ್ರಹ್ಲಾದ ನಾಮದಿ ತಂದೆ ಹಿರಣ್ಯಾಕ್ಷನಲಿ ಸರ್ವೋತ್ತಮನು ಹರಿ ದ್ವಂದ್ವ ಕರ್ಮವನಲಿ ಅರ್ಪಿಸಲು ಮಹದಾ ನಂದ ಪೊಂದುವರಲ್ಲಿ ಎಂದು ಪೇಳುತಿರೆ ಮಂದ ದೈತ್ಯವನಂದ ಮಾತಿಗೆ ಬಂಧನಾದಿಗ ಳಿಂದ ಶಿಕ್ಷಿಸೆ ಬಂದ ದುರಿತವನಂದು ಕಳೆದಾ ಕಂದನನು ಹರಿಪೊರೆಯೆ ದಿತಿಜನು ಒಂದೂ ತಿಳಿಯದೆ ಮಂದಿರ ಗೋವಿಂನೆಲ್ಲಿಹ ನೆಂದು ಕೇಳುತ ಮಂದರರೋದ್ಧಾರ ನಿಲ್ಲದಿಹ ಸ್ಥಳ ವಂದೂ ಇಲ್ಲವೂ ಎಂಂದು ಸಾರಿದೆ ತಂದು ತೋರಿಸು ಸ್ತಂಭದಲಿ ತವ ಇಂದಿರಾಪತಿಯೆಂದು ಗರ್ಜಿಸೆ ಕಂದನಾಡಿದ ಮಾತುಗಳನು ನಿಜ ವೆಂದು ನರಹರಿ ಪೊರೆದೆ 1 ಶ್ರೀಶನಾಜ್ಞೆಯ ವಹಿಸಿ ದ್ವಿತೀಯಾವತಾರದಿ ವ್ಯಾಸರಾಯನು ಎನಿಸಿ ಬ್ರಹ್ಮಣ್ಯರÀಲಿ ಸ ನ್ಯಾಸವನು ಸ್ವೀಕರಿಸಿ ಸರ್ವಜ್ಞ ಶಾಸ್ತ್ರಾಭ್ಯಾಸವನು ಪೂರೈಸಿ ವ್ಯಾಸತ್ರಯ ರಚಿಸಿ ದೇಶದೇಶಗಳನ್ನು ಚರಿಸುತ ಆ ಸಮಸ್ತ ಕುವಾದಿಗಳ ಮತ ನಾಶಗೊಳಿಸಿ ರ ಮೇಶ ಶ್ರೀ ವೆಂಕಟೇಶನನು ಬಹುದಿನವು ಪೋಜಿಸಿ ವಾಸಿಸುತ ಗಜರಾಮ ಪುರಧಾಧೀಶರಾಯನ ಕುಹಯೋಗವ ಪುರಂದರ ದಾಸರಿಂದೊಡಗೂಡಿ ಕೃಷ್ಣನುಪಾಸನೆಯ ಭಕ್ತಿಯಲಿ ಗೈಯುತ ವಾಸುದೇವನ ಶಿಲ್ಪ ಶಾಸ್ತ್ರದ ಶಾಸನಕೆ ಪ್ರತಿಯಾಗಿ ನಿಲ್ಲಿಸಿ ತೋಷಿಸಿದ ಸೌಭಾಗ್ಯ ವೈಭವ 2 ಪದುವ ಸಂಭವ ಜಾತ ಶ್ರೀ ರಾಘವೇಂದ್ರ ಸು ಪದವ ಪಡೆದ ಪ್ರಖ್ಯಾತ ಜಯತೀರ್ಥ ಮುನಿಕೃತ ಸುಧೆಗೆ ಪರಿಮುಳ ಗ್ರಂಧ ರಚಿಸಿ ಮೆರೆದಾತ ಬಧಿರ ಮೂಕಾಂಧ ವ್ಯಂಗ್ಯರು ವಿಧ ವಿಧಿದ ಘನರೋಗಗ್ರಸ್ತರು ಸದಯ ನೀಗತಿಯೆಂದು ಸೇವಿಸೆ ತ್ರಿದಶ ಭೂರುಹದಂತೆ ಸಲಹುವಿ ಕುಧರ ತೀರದಿ ಮೂಲ ರಘುಪತಿ ಪದವ ಪೂಜಿಸುತಲಿ ಸಜೀವದಿ ಮುದದಿ ವೃಂದಾವನ ಪ್ರವೇಶಿಸಿ ಪದುಮನಾಭ ಶ್ರೀ ಶಾಮಸುಂದರ ಮಧು ವಿರೋಧಿಯನು ಧ್ಯಾನಿಸುತ ಶಿರಿ ಸದನನು ವಲಿಸುತ್ತ ಕರುಣಾ ನಿಧಿಯು ಭಜಕರ ಪೊರೆವ ಮಹಿಮೆಯ 3
--------------
ಶಾಮಸುಂದರ ವಿಠಲ
ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ಪ.ವೇದ ಶಾಸ್ತ್ರ ಪಂಚಾಗ ಓದಿಕೊಂಡು ಪರರಿಗೆಬೋಧನೆಯ ಮಾಡವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 1ಚಂಡ ಭಟರಾಗಿ ನಡೆದು ಕತ್ತಿಢಾಲು ಕೈಲಿ ಹಿಡಿದುಖಂಡ ತುಂಡು ಮಾಡುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 2ಅಂಗಡಿಗಳನ್ನೆ ಹೂಡಿ ವ್ಯಂಗ್ಯ ಮಾತುಗಳಾಡಿಭಂಗಬಿದ್ದು ಗಳಿಸುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 3ಕುಂಟಿ ತುದಿಗೆ ಕೊರಡುಹಾಕಿ ಹೆಂಟೆಮಣ್ಣು ಸಮಮಾಡಿರೆಂಟೆ ಹೊಡೆದು ಬೆಳೆಸುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 4ಬೆಲ್ಲದಂತೆ ಮಾತನಾಡಿ ಎಲ್ಲರನ್ನು ಮರುಳು ಮಾಡಿಸುಳ್ಳು ಬೊಗಳಿ ತಿಂಬುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 5ಕೊಟ್ಟಣವ ಕುಟ್ಟಿಕೊಂಡು ಕಟ್ಟಿಗೆಯ ಹೊತ್ತುಕೊಂಡುಕಷ್ಟಮಾಡಿ ತಿಂಬುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 6ತಾಳದಂಡಿಗೆ ಶೃತಿ ಮೇಳ ತಂಬೂರಿ ಹಿಡಿದುಕೊಂಡುಸೂಳೆಯಂತೆ ಕುಣಿಯುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 7ಸನ್ಯಾಸಿ ಜಂಗಮ ಜೋಗಿ ಜಟ್ಟಿ ಮೊಂಡ ಭೈರಾಗಿನಾನಾ ವೇಷ ಹಾಕುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 8ಹಳ್ಳದಲ್ಲಿ ಕುಳಿತು ಕೊಂಡು ಕಲ್ಲು ದೊಣ್ಣೆ ಹಿಡುದುಕೊಂಡುಕಳ್ಳತನವ ಮಾಡುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 9ಅಂದಣ ಪಲ್ಲಕ್ಕಿ ಏರಿ ಮಂದಿ ಮಾರ್ಬಲ ಕೂಡಿಚಂದದಿಂದ ಮೆರೆಯುವುದುಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 10ಉನ್ನಂತಪುರಂದರ ರಾಯನ ಧ್ಯಾನವನುಮನಮುಟ್ಟಿ ಮಾಡುವುದುಮುಕ್ತಿಗಾಗಿ ಆನಂದಕಾಗಿ* 11
--------------
ಪುರಂದರದಾಸರು