ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನಂದವಾಹನ ವಿಠಲ ನೀನಿವಳ ಕಾಯಬೇಕೋ |ಜ್ಞಾನಪೂರ್ಣನೆ ನಿನ್ನ ಸುಜ್ಞಾನ ಪಾಲಿಸುತ ಹರಿಯೆ ಪ ನಿಗಮವೇದ್ಯನೆ ದೇವ ಜಗದಂತರಾತ್ಮನೆಬಗೆಬಗೆಯ ಲೀಲೆಗಳ ನಗುನಗುತ ತೋರೀ ಬಗೆಹರಿಸು ಭವರೊಗ ಭಿನ್ನೈಪೆ ನಾನಿದನನಗಚಾಪ ಪರಿಪಾಲ ಖಗವಹನೆ ದೇವಾ1 ಪಂಚರೂಪಾತ್ಮಕನೆ ಪಂಚ ಬಾಣನ ಪಿತನೆಪಂಚ ಭೇದ ಜ್ಞಾನ ಸಂಚಿಂತನೆಯನಿತ್ತು |ವಾಂಚಿತಾರ್ಥದ ಹರಿಯೆ ವೈರಾಗ್ಯ ಸದ್ಭಕುತಿವಾಂಚಿಪಳಿಗೀಯೊ | ನಿಷ್ಕಿಂಚನರ ಪ್ರೀಯಾ 2 ಪತಿಸುತರು ಹಿತದಲ್ಲಿ ಮತಿ ಮತಾಂವರರಲ್ಲಿಕೃತಿಪತಿಯೆ ನಿನವ್ಯಾಪ್ತಿ ಅತಿಶಯದಿ ತೋರುತಲಿಹಿತದಿಂದ ಸೇವಿಸುವ ಮತಿಯಿತ್ತು ನೀನಿವಳ ಗತಿಗೆ ಸಾಧನನೆನಿಸು ಪ್ರತಿರಹಿತ ದೇವಾ 3 ನಾಮ ಮಹಿಮೆಯ ತಿಳಿಸಿ ಪ್ರೇಮದಿಂದಲಿ ನಿನ್ನನಾಮದುಚ್ಛಾರಣೆಯ ನೇಮವನೆ ಪಾಲಿಸುತ |ಕಾಮಿತವ ಸಲಿಸುವುದು ಭೂಮ ಗುಣ ನಿಸ್ಸೀಮರಾಮಚಂದ್ರನೆ ಸರ್ವ ಸ್ವಾಮಿ ಎನಿಸುವನೇ 4 ಶ್ರೀವರನೆ ಭವವನಧಿ ನಾವೆ ಎಂದೆನಿಸಿಹನೆಕಾವುದಿವಳನು ಸತತ ಸರ್ವಾಂತರಾತ್ಮ |ನೀವೊಲಿಯದಿನ್ನಾರು ಕಾವವರ ನಾಕಾಣೆದೇವವರ ವಂದ್ಯ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಉಪೇಂದ್ರ ಹರಿ ವಿಠಲ ಕೃಪೆಯಲಿಂದಲಿ ಇವನಕಾಪಾಡ ಬೇಕೆಂದು ಪ್ರಾರ್ಥಿಸುವೆ ಹರಿಯೇ ಅ.ಪ. ಹರಿಗುರೂ ಭಕ್ತಿಯುತ | ತರಳ ನಿರುವನು ಹರಿಯೆಸುರರಾಜ ಭೋಗಗಳ | ಕರುಣಿಸುತ ಇವಗೇ |ಒರೆದು ತತ್ವ ಜ್ಞಾನ | ಮರಳಿ ಭಕ್ತ್ಯಭಿವೃದ್ಧಿಕರುಣಿಸುತ ಕಾಪಾಡೊ | ಕರಿವರದ ಹರಿಯೆ 1 ವಿಯದಧಿಪ ಸುತನಿಗೆ | ಭಯವ ಪರಿಹರಗೈದುದಯದಿಂದ ಪೊರೆದಂತೆ | ಕಾಯಬೇಕೋಹಯವೇರಿ ಇಂದ್ರಿಯದ | ಜಯಸೂಚಿ ಸ್ವಪ್ನದಲಿಭಯಕೃತೂ ಭಯನಾಶ | ಅಭಯನೀಯೋ2 ಪಿತೃ ಮಾತೃ ಸೇವೆಯಲಿ | ರತನನ್ನ ಮಾಡುತಲಿಹಿತ ಆಹಿತ ವೆರಡನ್ನು | ಸಮತೆಯಲಿ ಉಂಬಾಮತಿಯನ್ನೆ ಕರುಣಿಸುತ | ಕೃತಕಾರ್ಯನೆಂದೆನಿಸಿಸತತ ತವ ಸಂಸ್ಕøತಿಯ | ಇತ್ತು ಪೊರೆ ಇವನಾ 3 ಕಾಕು ಪಾದ | ಪಂಕಜವ ತೋರೋ 4 ಪಾವಮಾನಿಯ ಪ್ರೀಯ | ಶ್ರೀವರನೆ ಈಶಿಯವಕೋವಿದನ ಗೈಯ್ಯತ್ತ | ಭುವಿಯೊಳಗೆ ಮೆರೆಸೋಗೋವಿದಾಂಪತಿಯೆ ಗುರು | ಗೋವಿಂದ ವಿಠ್ಠಲನೆನೀ ವೊಲಿಯದಿನ್ನಾರು | ಕಾವರನು ಕಾಣೇ 5
--------------
ಗುರುಗೋವಿಂದವಿಠಲರು
ಹಿತದಿಂದ ಪೊರೆಯೆನ್ನ | ವಿತತ ಮಹಿಮ ಹರಿಯೇ ಹಿತ ಅಹಿತವೆರಡನ್ನು | ಸಹಿಸುವಂತೇ ಪ ಅತಿ ದಯಾಪರನೆಂದು | ಖತಿದೂರನೆಂದೆನುತಶ್ರುತಿ ನಿಚಯ ಸಾರುತಿದೆ | ಗತಿ ಪ್ರದನೆ ದೇವಾ ಅ.ಪ. ವೇದ ವೇದ್ಯನೆ ದೇವ | ಆದ್ಯಂತ ರಹಿತನೇಕಾದುಕೋ ಎನ್ನನು | ಮೋದಗಳನಿತ್ತೂ ||ಸಾಧನ ಸುಮಾರ್ಗದಲಿ | ಹಾದಿಯನು ಕಾಣದಲೆಬಾಧೆಗೊಳಗಾಗಿಹನ | ಆದರಿಸು ದಯವನಧೀ 1 ಪ್ರಾಣಪತಿಯೇ ಎನ್ನ | ಪ್ರಾಣಗಳು ವಶವಿಲ್ಲಧ್ಯಾನ ಮಾಡುವೆನೆನ್ನ | ಮನನಿಲ್ಲಧ್ಹರಿಯೇ ||ಜ್ಞಾನ ಕರ್ಮೇದ್ರಿಗಳು | ಏನೊಂದು ನಿನ್ನಯಾಧೀನವಿರಲೂ ನಾನು | ಏನು ಮಾಡಲು ಸಾಧ್ಯ 2 ಗೋವರ್ಧನೋದ್ಧರನೆ | ಗೋವುಗಳ ಪರಿಪಾಲಕಾವ ಕರುಣೀ ನಮ್ಮ | ದೇವರ ದೇವಾ ||ಗೋವಿದಾಂಪತಿ ಗುರು | ಗೋವಿಂದ ವಿಠಲನೆನೀವೊಲಿಯದಿನ್ನಾರು | ಕಾವರನು ಕಾಣೆನಯ್ಯಾ 3
--------------
ಗುರುಗೋವಿಂದವಿಠಲರು