ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣದಿ ಕಾಯೊ ಗೋಪಾಲಾಚರಣವ ಸ್ಮರಿಸುವೆ ಶರಣರ ಪಾಲಾ ಪ ಹರಣ ಹೋಗದ ಮುನ್ನ | ಹರಿ ನಿನ್ನ ಹಂಬಲನ್ನಕರುಣಿಸಿ ಕಾವುದೆನ್ನ | ಕರುಣ ನಿಧಿಯೆ ಘನ್ನಮೊರೆಯಿಡುವೆನು ನಿನ್ನ | ಚರಣ ಸರೋಜವನ್ನಶಿರದೊಳಗಿರಿಸೆನ್ನ | ಪರಮ ಪಾವನ್ನ 1 ಮರುತನ ಮತದಲ್ಲಿ | ಕರೆ ತಂದು ಎನ್ನನುತರತಮ ಜ್ಞಾನವ | ಅರುಹುವುದೊಳಿತಲ್ಲೆ |ಹರಿಯೆ ಸರ್ವೋತ್ತಮ | ಮರುತ ಜೀವೋತ್ತಮಹರ ವೈಷ್ಣವೋತ್ತಮ | ವರ ಜ್ಞಾನ ಪಾಲಿಸಿ 2 ಪನ್ನಗಾಚಲವಾಸ | ಪ್ರಸನ್ನರಘನಾಶನಿನ್ನ ನಾಮವ ಅನಿಶ | ಎನ್ನಿಂದ ನುಡಿಸೀಶ |ಅನ್ನಂತ ಗುಣ ಗುರು | ಗೋವಿಂದ ವಿಠಲನೆಎನ್ನ ಬಿನ್ನಪ ಸಲಿಸು | ಮನ್ನಿಸಿ ಕುಂದುಗಳ 3
--------------
ಗುರುಗೋವಿಂದವಿಠಲರು
ತಂದೆಯಿಂದಲಿ ತಾಯಿ ಗರ್ಭಕೆ ನೂಕಿದ್ವಂದ್ವ ಜನ್ಮಕೆ ಕರ್ತ ಇಂದ್ರ ರಕ್ಷಿಪುದೆಂದೋ ಜನ್ಮದಿಂದ |ಇಂದ್ರಾದಿ ಪ್ರಾವರ್ತಕನಿಂದು ಪ್ರಲಯಾದಲ್ಲಿನಂದಕರ ಮುಕ್ತರಿಗೆ ಮಂದಿರವು ಸಿತ ದ್ವೀಪ ಗುರು ಗೋ-ವಿಂದ ವಿಠಲಾತ್ಮಕ ಸಂಕ್ಷೇಪ್ತø ಶರಣು ||ಹರಣ ಹೋಗದ ಮುನ್ನ | ಹರಿ ನಿನ್ನ ಹಂಬಲನ್ನಕರುಣಿಸಿ ಕಾವುದೆನ್ನ | ಕರುಣಾನಿಧಿಯೆ ಘನ್ನಸ್ವರ್ಣ ಗರ್ಭನನಯ್ಯ | ಅರ್ಣ ಸಂಪ್ರತಿಪಾದ್ಯಕರ್ಣರಹಿತ ಶಯ್ಯ | ವರ್ಣಿಸೆ ನಿನ್ನನಯ್ಯಮರುತನ ಮತದಲ್ಲಿ | ಕರೆ ತಂದು ಎನ್ನನುತರತಮ ಜ್ಞಾನವನ್ನ | ಅರುಹುವುದೊಳಿತಲ್ಲೆಹರಿಯೆ ಸರ್ವೋತ್ತಮ | ಮರುತ ಜೀವೋತ್ತಮಹರ ವೈಷ್ಣವೋತ್ತಮ | ವರ ಜ್ಞಾನ ಪಾಲಿಸಿಪನ್ನಗಾಚಲವಾಸ ಪ್ರ | ಸನ್ನ ರಘನಾಶಘನ್ನ ಗುರು ಗೋವಿಂದ ವಿಠಲಾ ಗೋ ಪ್ರಸನ್ನ ||
--------------
ಗುರುಗೋವಿಂದವಿಠಲರು
ದೇವಾ ನೀ ಪಾಲಿಪುದೂ ಓ ಹರಿಯೆ ಹರಿಯೆ ಪ ಮದನ ಜನಕ ರಂಗಾ ಪಾವನಾಂಗನೆ ನಿಜಸೇವೆಯೊಳಿರಿಸೆಂದೂ 1 ದಾರುಧಿ ಭೀಕರನ್ಯಾರೊ ವೈಷ್ಣವೋತ್ತಮ ಬಾರೊ ಸಾಧುಶಿಖರನಾರೊ ಸತ್ವರೂಪನು ತೋರೊ 2 ಧರಣೀನಾಗನಗರಿ ಕರುಣವಾರುಧಿಯಾದಾ ಗುರುವೆ ತುಳಶೀರಾಮ ಪರಮಾತ್ಮನೆ ನೀ ಬಾರೊ 3
--------------
ಚನ್ನಪಟ್ಟಣದ ಅಹೋಬಲದಾಸರು
ಹಟವ ಮಾಡದಿರು ಕೇಳೆಲೊ ಮೂಢ ಪ ಕುಟಿಲವ ಬಿಡು ನೀ ಗಾಢ ಅ.ಪ. ಹರಿ ಸರ್ವೋತ್ತಮ ವಾಯು ಜೀವೋತ್ತಮ ಹರ ವೈಷ್ಣವೋತ್ತಮನೆನ್ನೊ 1 ಮಧ್ವ ಸಿದ್ಧಾಂತದ ಪದ್ಧತಿ ಬಿಡದಲೆ ಶುದ್ಧ ವೈಷ್ಣವರೊಳಾಡೊ 2 ಹರಿ ಶರಣರ ಚರಣ ಕಮಲಂಗಳಿಗೆ ಗರುವಪಡದೆ ನೀ ಬೀಳೊ 3 ಸಂತತದಲಿ ಶ್ರೀಕಾಂತನ ಗುಣಗಳ ಚಿಂತನೆ ಮಾಡುತ ಬಾಳೊ 4 ಮಂಗಳಾಂಗ ತ್ರಿಜಗಂಗಳ ಪೊರೆವವ ರಂಗೇಶವಿಠಲನೆನ್ನೊ 5 ನೆಲವಿತ್ತ ದಯವಂತ ಶ್ರೀಕಾಂತ 3
--------------
ರಂಗೇಶವಿಠಲದಾಸರು
ಕೃಷ್ಣ ಮಂತ್ರವ ಜಪಿಸೊ - ಏ ಮನುಜ |ಕೃಷ್ಣ ಮಂತ್ರವ ಜಪಿಸೊ ಪ.ವೈಷ್ಣವೋತ್ತಮನಾಗಿ ವಿಷ್ಣುವೆ ಗತಿಯೆಂದು ಅಪಜಪತಪಾನುಷ್ಟಾನ ಸ್ನಾನಕ್ಕೆ ಈ ಮಂತ್ರ |ಕಪಟಬುದ್ದಿಗಳನ್ನು ಕಟ್ಟುವ ಮಂತ್ರ ||ಉಪದೇಶದಲಿ ಜ್ಞಾನಕೊಟ್ಟು ಸಲಹುವ ಮಂತ್ರ |ಸುಪವಿತ್ರ ಮಾಡಿ ಸ್ವರ್ಗ ಸೂರೆಗೊಡುವ ಮಂತ್ರ 1ಸಕಲ ಸಾಧನೆಗಳಿಗೆ ಸಾರಭೂತದ ಮಂತ್ರ |ನಿಖಿಳ ದೇವರಿಗೆಲ್ಲ ಸಾಕ್ಷಿ ಭೂತದ ಮಂತ್ರ ||ಭಕುತಿಯಲಿ ದ್ರೌಪದಿಯ ಭಜಿಸಿದ ಈ ಮಂತ್ರ |ಮುಕುತಿಯ ಕೊಟ್ಟು ಜನರ ಪೋಷಿಸುವ ಮಂತ್ರ 2ಭಾವಿಸಲಣುರೇಣು ಪರಿಪೂರ್ಣವಾದ ಮಂತ್ರ |ಜೀವಗಳಿಗೆಲ್ಲ ಸಂಜೀವ ಮಂತ್ರ ||ಪಾವನ ಮಾಡಿ ಪಾಲಿಪುದೀ ಮಂತ್ರ |ದೇವ ಪುರಂದರವಿಠಲ ಮಹಾ ಮಂತ್ರ 3
--------------
ಪುರಂದರದಾಸರು