ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ನರಸಿಂಹ ನರಸಿಂಹ ಪಾಹಿ ಶ್ರೀಶ ಪೊರೆವರಾರಿಲ್ಲ ಬೇರೆ ಸೇವ್ಯ ಪ ಅನಿರುದ್ಧ ನಾ ನಿನ್ನ ಮರೆತೆ ಶುದ್ಧವೈಷ್ಣವತನವನೀಯೊ ಪ್ರಸಿದ್ಧಿ ಅದ್ಭುತಶಕ್ತ ವಿಭುವೆ 1 ಸಾಧ್ಯಸಾಧನವನ್ನು ಬಿಟ್ಟು ಪ್ರದ್ಯುಮ್ನ ನಾ ನಿನ್ನ ಮರೆತೆ ವಿದ್ಯುದೀಶನೆಸ್ವಾಮಿ ಸಲಹೊ ವೇದವೇದ್ಯಾನಂತ ಮಹಿಮ 2 ಸಂಚಿಂತೆ ಸಂಸ್ಮರಣೆ ತೊರೆದು ಸಂಕರ್ಷಣ ನಿನ್ನ ಮರೆತೆ ಸಂಸಾರತಾಪಗಳ 1 ತೊರೆಯೊ ಶಂಕರ ಸುರ ಶಂಭು ಸೇವ್ಯ 3 ವಸನ ಮನೆ ಹಣ ಹೆಣ್ಣು ಹುಡುಕಿ ವಾಸುದೇವನೆ ನಿನ್ನ ಮರೆತೆ ಪಸು ಶಿಶುವಾದೆನ್ನ ಪೊರೆಯೊ ಶ್ರೀಶ ಮುಕ್ತೇಶ ಸರ್ವೇಶ 4 ಅನಿಮಿತ್ತಬಂಧು ಮೂಲೇಶ ಅನ್ಯರ ನಾನರಿಯೆ ನಾರಾಯಣ ವನರುಹಾಸನ ತಾತ ಪ್ರಸನ್ನ ಶ್ರೀನಿವಾಸನೆ ಕೃಷ್ಣವ್ಯಾಸ 5
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ರಘೂತ್ತಮ ಗುರು ಸ್ತೋತ್ರ ಗುರುರಾಜ ರಘೂತ್ತಮ ಗುರುರಾಜ ಗುರುರಾಜ ನಮೋ ನಮೋ ನಿನ್ನ ಪಾದ ಸರಸಿಜಯುಗಳದಿ ನಾ ಶರಣು ಅಹ ಧರಣಿಜಾಪತಿ ರಾಮ ಭದ್ರಗೆ ಪ್ರಿಯ ನೀನು ಕರುಣದಿ ಸಲಹೆನ್ನ ದುರಿತಗಳಳಿದು ಪ ನಿವ್ರ್ಯಾಜ ಕರುಣಿ ರಘುವರ್ಯ ಗುರು ವರ್ಯ ಸುಮೇಧರ ದಿವ್ಯ ಚಾರು ತೋಯಜ ಕರದಿಂದ ಉದಯನಾಗಿ ನಿಗಮ ಸಾಮ್ರಾಜ್ಯ ಅಹ ಮಾಯೇಶ ಕಾಳೀಶ ಗುರುಗಳ ಪ್ರಿಯ ಬಾಲ ವಯಸ್ಸಲ್ಲೇ ಉದ್ದಾಮ ಪಂಡಿತನಾದಿಯೋ 1 ಬದರೀಶ ನಿರ್ಣೀತತತ್ವ ಅರ್ಥ ವಿಸ್ತಾರ ಮಾಡಿದ ಮಧ್ವ ಟೀಕೆ ಜಯತೀರ್ಥ ಬರೆದ ತದ್ಭಾವ ಪೇಳಿ ಒದಗಿಸಿದೆಯೊ ಜ್ಞಾನ ಸುಖವ ಅಹ ಮುದ ಜ್ಞಾನ ಸೌಭಾಗ್ಯ ಸಾಧು ವೈಷ್ಣವತನ ಇತ್ತು ಪಾಲಿಪುದೆನ್ನ ಕುಂದುಗಳೆಣಿಸದೆ 2 ಧರೆಯಲ್ಲಿ ದಕ್ಷಿಣಕಾಶಿ ಸ್ವರ್ಗ ಧರೆಯಳದವನ ಸೇವಿಸಿ ಗಂಗಾ ಧರಷಡಾನನ ಇಲ್ಲಿ ವಾಸಿಸುವ ಈ ಕ್ಷೇತ್ರ ವೃಂದಾವನ ವಾಸಿ ಅಹ ಪರಮೇಶ ಕೇಶವ ಪ್ರಿಯಾ ಪಿನಾಕಿನಿಯಿಂದ್ರಾ ತೀರ ಮಧ್ಯದಿ ತಪಗೈದು ಭಕ್ತರ ಕಾಯ್ವಿ 3 ಸುರವೃಂದ ಶ್ರೇಷ್ಠ ನೀನಹುದು ಎನ್ನ ಪರಿ ಬಾಧೆಯ ತರಿದು ಸರ್ವ ಸಿರಿ ಇತ್ತು ಹರಿ ಗುರು ಭಕ್ತಿ ಬೆಳೆಸಿ ಪಾಲಿಪುದು ಅಹ ಹರ ಸಮೀಪಕೆ ಒಳ್ಳೆ ಸಾಧನ ಸರ್ವದಾ ಕಾರುಣ್ಯದಲಿ ಎನ್ನೊಳ್ ನಿಂತು ಮಾಡಿಸೋ ಗುರೋ 4 ರಾಮನೃಕೇಸರಿ ವ್ಯಾಸ ಸತ್ಯ ಭಾಮ ರುಕ್ಮೀಣಿ ದೇವಿ ಅರಸ ಭೂಮ ಶ್ರೀಮಂತ ಕ್ಷೀರಾಬ್ಧಿವಾಸ ಮಧ್ವ ಭೀಮಹನುಮ ವಂದ್ಯ ಶ್ರೀಶ ಅಹ ಹೇಮಗರ್ಭನ ತಾತ `ಪ್ರಸನ್ನ ಶ್ರೀನಿವಾಸ' ರಮೆಯರಸನ ಪ್ರಿಯತಮ ಜೀಯ 5 || ಶ್ರೀ ಕೃಷ್ಣಾರ್ಪಣಮಸ್ತು ||
--------------
ಪ್ರಸನ್ನ ಶ್ರೀನಿವಾಸದಾಸರು