ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನಳವೆ ಯೋಗದಭ್ಯಾಸ ಹರಿಯೇ ಎನ್ನಕೈ ನೀ ಪಿಡಿಯದಿಹುದು ಸರಿಯೇ ಪ ದಿವ್ಯಯೋಗದ ಬಗೆಯ ಪೇಳಿದೈ ಗೋಪಾಲ ಸವ್ಯಸಾಚಿಯ ಧನ್ಯನೆನಿಸಿದೈ ಶ್ರೀಲೋಲ ಭವ್ಯವಾದಾಕೃತಿಯ ತೋರ್ದೆ ಗೋಪಿಬಾಲಾ ಅವ್ಯಯಾನಂದ ಮಾಂಗಿರಿರಂಗ ವಿಠಲ 1 ನಿರ್ಮಮತೆಯೇ ಬೀಜ ಸರ್ವಸೇವೆಯೇ ಬೇರು ಕರ್ಮದೊಳಗುತ್ಸಾಹವಿರಲದೇ ಸುರಿನೀರು ಮರ್ಮವಿಲ್ಲದ ಹೃದಯವೈಶಾಲ್ಯವೇ ಕುಸುಮ ನಿರ್ಮಲತೆಯೇ ಫಲವು ಇದು ಕರ್ಮಯೋಗ 2 ಭಕ್ತಿಯೆಂಬುದೆ ಬೀಜ ಸಮ್ಮತಿಯೆ ತಾಬೇರು ಭಕ್ತಜನರ ಸೇವೆಯೇ ಮೇಲೆರೆವ ನೀರು ಏಕಾಗ್ರಚಿತ್ತವೇ ಸರಸಪರಿಮಳಪುಷ್ಪ ಮುಕ್ತಿಯೇ ಫಲಮಿದೆ ಭಕ್ತಿಯೋಗ3 ಆಸನವೇ ಬೀಜ ಪ್ರಾಣಾಯಾಮವೇ ಬೇರು ಆಸೆಯಿಂ ಗೈವ ದಿನಚರ್ಯೆಯೇ ನೀರು ಮಾಸದಿರುವಾರೋಗ್ಯ ಪುಷ್ಪತಾನೊಮ್ಮನಮೆ ಭಾಸಿಪಾ ಫಲಮಿದೆ ಹಟಯೋಗವಯ್ಯ 4 ಯಮನಿಯಮಗಳೆ ಬೀಜಧಾರಣವೆ ತಾಂಬೇರು ಕ್ರಮಮಾದಘ್ರಣಿದಾನ ಮೇಲೆರೆವ ನೀರು ವಿಮಲಮಾಗಿಹ ಧ್ಯಾನ ಪೂರ್ವಸಂಪ್ರಜ್ಞತಾ ಕ್ರಮಸಮಾಧಿಯೆ ಫಲವು ಇದು ರಾಜಯೋಗ 5 ವರವಿವೇಕ ಬೀಜ ವೈರಾಗ್ಯವೇ ಬೇರು ಗುರುಕರುಣಮೆಂಬುದೇ ಮೇಲೆರೆವ ನೀರು ಪರಬ್ರಹ್ಮ ಜ್ಞಾನವೇ ಪರಿಮಳಿಸುವ ಪುಷ್ಪ ವರಮೊಕ್ಷವೇ ಫಲವು ಇದು ಜ್ಞಾನಯೋಗ 6 ಯೋಗಮಾರ್ಗವ ತಿಳಿದು ಅನುಸಂಧಿಯಿಂ ಸಕಲ ತ್ಯಾಗ ಮಾಡುವ ನಿಯಮವೆನಗಸಾದ್ಯ ಆಗಾಗ ನಿನ್ನ ನಾಮಂಗಳನು ಪೇಳ್ವುದೇ ಯೋಗವೆಂದೆನಿಸುವ ಮಾಂಗಿರಿರಂಗ ನೀಲಾಂಗ 7
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕೈವಲ್ಯ ಇದೇವೆ ದೇವಾಲ್ಯ ತ್ರಾಹಿ ತ್ರಾಹಿ ತ್ರಾಹಿ ಎಂದು ನೋಡಿಮನದ ವೈಶಾಲ್ಯ ಧ್ರುವ ಮಹಾಮಹಿಮೆ ದೋರುವ ಇದೆ ದೇವದ್ವಾರ ಸೋಹ್ಯದೋರಿ ಕುಡುತಿಹ ಪುಣ್ಯ ಸಹಕಾರ ಬಾಹ್ಯಾಂತ್ರ ಭಾಸುತಿಹ ಸದ್ಗುರು ಸಹಕಾರ ದೇಹ ಅಭಿಮಾನ ಬಿಟ್ಟು ಮಾಡಿ ಜಯ ಜಯಕಾರ 1 ಮಾರ್ಗ ಸುಪಥವಿದೆ ನೋಡಿ ಸಾಕ್ಷಾತ್ಕಾರ ವರ್ಗ ಷಡ್ವೆರಿಗಳ ಮಾಡಿ ಬ್ಯಾಗೆ ದೂರ ದೀರ್ಘದಂಡ ಹಾಕಿ ಗುರುವಿಗೆ ನಮಸ್ಕಾರ ಸ್ವರ್ಗ ಸುಖಗೊಳ್ಳಲಿಕೆ ಇದೇವೆ ಸಹಕಾರ 2 ಸ್ವರ್ಗ ಭೂಕೈಲಾಸ ವೈಕುಂಠವಿದೆ ನೋಡೆವೈ ಪಾದ ಪದ್ಮಕೂಡಿ ಯೋಗ ಇದೆ ಸುಗಮ ಸಾಧನವ ಮಾಡಿ ಸುಙÁ್ಞನ ಸೂರೆಗೊಂಡು ಮಹಿಪತಿ ನಿಜಗೂಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೈವಲ್ಯ ಮನದ ವೈಶಾಲ್ಯ ಧ್ರುವ ಅದ್ವೈತಾಗಮ್ಯಗೋಚರನದ್ವಿತೀಯ ಅಧ್ಯಾತ್ಮ ವಿದ್ಯದಾಗರ ಸಿದ್ಧರಪ್ರಿಯ ಸದ್ಗತಿ ಸುಖಸಾಗರ ಸದ್ಗುಣಾಲಯ ಬೋಧ ಪೂರ್ಣೋದಯ 1 ಆದಿತ್ಯಕೋಟಿ ಪ್ರಕಾಶ ಸದೋದಿತ ಸಾಧು ಹೃದಯನಿವಾಸ ಭೇದಾತೀತ ಶುದ್ಧಾತ್ಮ ಸುಖಸಂತೋಷ ಸದಾ ಸುಶಾಂತ ಸದಮಲಾನಂದಘೋಷ ಆದಿದೇವ ಸಾಕ್ಷಾತ2 ಕೈವಲ್ಯನಿಧಿ ನಿಶ್ಚಯ ದೇವಾಧಿದೇವ ಅಕ್ಷಯ ಶ್ರೀವಾಸುದೇವ ಭವಾತ್ಮ ಭಜಕಹೃದಯ ಸರ್ವರೊಳಿ ಹ್ಯ ಬಾಹ್ಯಾಂತ್ರ ಭಾಸುತಿಹ್ಯ ಮಹಿಪತಿ ಮನದೈವ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ರಾಘವೇಂದ್ರ ನೀನೆನ್ನ ರಕ್ಷಕನಯ್ಯ ನಾಗಶಯನಧ್ಯಾನ ಒದಗಿಸೋ ಜೀಯ ಪ ಭಾಗ್ಯದೇಯ ವೈಶಾಲ್ಯ ಹೃದಯ ಮಂತ್ರಾಲಯ [ತುಂಗಾತೀರ] ಕ್ಷೇತ್ರ ನಿಲಯ ಅ.ಪ ಭಕ್ತರಕ್ಷಕ ನೀ ರಾಘವೇಂದ್ರ ಭಕ್ತ ಪಾಲಕ ನೀ ರಾಘವೇಂದ್ರ ಮುಕ್ತಿದಾಯಕ ನೀ ರಾಘವೇಂದ್ರ ಶಕ್ತಿ ಸ್ವರೂಪ ನೀ ರಾಘವೇಂದ್ರ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್