ವಾಸುದೇವ ಬಲ್ಲಭಾಸುರಾಂಗ ಶ್ರೀವಾಸುಕಿಶಯನನಸಾಸಿರ ನಾಮವ ಲೇಸಾಗಿ ಪಠಿಸದೆ ಪ
ಮುರ ಮುಷ್ಟಿಕ ವೈರಿಯನಿಷ್ಠೆಯಿಂದ ನಾ ದೃಷ್ಟಿಸಿ ನೋಡದೆ 1
ಕಾಯವು ಸ್ಥಿರವಲ್ಲ ಎನ್ನೊಳುಮಾಯೆ ತುಂಬಿತಲ್ಲಪ್ರಾಯಮದದಿ ಪರಸ್ತ್ರೀಯರ ಕೊಂಡಾಡಿಕಾಯಜಜನಕನ ಗಾಯನ ಮಾಡದೆ2
ಕಂಗಳಿಂದಲಿ ನೋಡೋ ದೇವ ನಿ -ನ್ನಂಗಸಂಗವ ನೀಡೋಮಂಗಳಮಹಿಮ ಶ್ರೀರಂಗವಿಠಲ ಮುಂ-ದಂಗಬಾರದಂತೆ ನೀ ದಯಮಾಡೋ 3