ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡಿರಯ್ಯ ಈ ರೂಢಿಯ ಜನರೆಲ್ಲಾ ಮೂಡಲಗಿರಿವಾಸನಾ ವೆಂಕಟೇಶನಾ ಪ ಬೇಡಿದ ವರಗಳ ಭಕ್ತ ಸಮೂಹಕೆ ನೀಡುತಲಿ ಕೊನೆಗೆ ನಿಜಪದವೀವನಾ ಅ.ಪ ಹರಿಬ್ರಹ್ಮರೊಳಾವನುತ್ತಮನೆಂದು ಪರೀಕ್ಷಿಸೆ ಭೃಗುಮುನಿಯು ತೆರಳಿಬಂದು ಅಜಹರನೊಪ್ಪದೆತಾ- ಪರಮಪದಕೆ ಬರಲು ಪರಿ ಸಿರಿಯ ತೊಡೆಯ ಮೇಲೆ ಹರಿಮಲಗಿರೆ ಕಂಡು ಚರಣದಿಂದ ಹೃದಯಕೆ ತಾಡನೆ ಮಾಡಲು ಪರಮ ಭಕುತಿಯಿಂದ ಋಷಿಯ ಪೂಜಿಸಿದ 1 ಸಿರಿಕರವೀರಪುರವನೈದಲು ಧರೆಯೊಳು ವೆಂಕಟಗಿರಿಯ ಸಾರುತ- ಲ್ಲಿರೆ ವಲ್ಮೀಕದಲಿ ಸರಸಿಜಭವ ಶಿವರು ತುರುಕರುವಾಗಿ ಪಾ ಲ್ಗರೆಯೆ ವಲ್ಮೀಕದಲಿ ದೊರೆ ಚೋಳನ ಭೃತ್ಯಗೋವನು ಭಾದಿಸೆ ಶಿರದೊಳಾಂತು ನೃಪಗೆ ಶಾಪವನಿತ್ತ 2 ಮನುಜನೋಲ್ ನಟಿಸುತಲಂಬರರಾಜನ ತನುಜೆಯ ಕೈಪಿಡಿದು ನೆನೆವರಿಗೆ ತಿರುಪತಿಯೆ ವೈಕುಂಠ- ವೆನುತ ಸಾರಿ ಒಲಿದು ಘನಮಹಿಮೆಗಳನು ತೋರಿ ಸಕಲರಿಂ ಗುಣನಿಧಿ ಶ್ರೀಗುರುರಾಮವಿಠಲ ಈ ಘಣಿಗಿರಿಯೊಳಗಿರುತಿಪ್ಪ ತಿಮ್ಮಪ್ಪ 3
--------------
ಗುರುರಾಮವಿಠಲ
ಹರಿದಾಸರು ದಾಸೋತ್ತಮ ನೀನೆ ಶ್ರೀ ವೈಕುಂಠ-ದಾಸೋತ್ತಮ ನೀನೆ ಪ. ಮಕ್ಕಳುಗಳಿಗೆ ಮೊಮ್ಮಕ್ಕಳುಗಳಿಗೆ ದೇ-ವಕ್ಕಳಿಗೆ ಮನುಮುನಿಗಳಿಗೆಸಿಕ್ಕದ ಪರಬೊಮ್ಮನ ಕೂಸುಮಾಡಿ ತಂ-ದಿಕ್ಕಿ ತೊಡೆಯಮ್ಯಾಲೆ ಆಡಿಸಿ ಮುದ್ದ್ದಿಸುತಿ[ಹ]1 ಅಪರೋಕ್ಷ ಜ್ಞಾನಿಯಾ[ದೆ] 2 ಹರಿಸರ್ವೋತ್ತಮ ಹಯವದನ ಮೂರುತಿ ವೇಲಾ-ಪುರದರಸಗೆ ಪ್ರತಿಬಿಂಬನಾದವರ ವೈಕುಂಠ ದಾಸೋತ್ತಮ ಎನಗೆ ಹರಿಯತೋರಿಸಿ ಪರಮ ಧನ್ಯನಮಾಡಿದ 3
--------------
ವಾದಿರಾಜ