ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕನ್ಯಾರೂಪವ ತಾಳಿದ ಚನ್ನಿಗ ಕೃಷ್ಣರಾಯನಾ ಪ ದಾನವರ ಮರಳು ಮಾಡಿ ಮಾಣದೆ ಸುಧೆಯನೆರೆದು ಆ ನಿರ್ಜರರ ಪಾಲಿಸಿದ ಶ್ರೀ ನಾರಾಯಣಿ ವೇಷವಾ 1 ಆರಾರು ಸಾವಿರ ಸಕಲ ಶರೀರದ ಎಡಕೆ ಇಪ್ಪ ಸಾರಸುಂದರವಾಗಿದ್ದ ನಾರಿ ರೂಪಗಳು ಇದೊ 2 ಭೂತಳದೊಳಗೆ ಜನಕೆ ಮಾತೆಯಾಗಿ ಕಾವುತಿಪ್ಪ ಜಾತರಹಿತ ವಿಜಯವಿಠ್ಠಲ ಶ್ರೀ ತರಣಿಯಾಳಿದ ಪೆಣ್ಣಿನ 3
--------------
ವಿಜಯದಾಸ
ಪರಮಯೋಗಿಯ ನೋಡಿರೊ ನೀವೆಲ್ಲರು | ಪರಮಯೋಗಿಯ ನೋಡಿರೊ || ಪರಮಯೋಗಿಯ ನೋಡಿ ಪ್ರೀತಿವಂತರಾಗಿ | ನಿರಯವ ಕಳೆದು ಆನಂದ ಬೇಡುವರೆಲ್ಲ ಪ ವಾನರ ವೇಷವಾಗಿ ಪರ್ವತ ಸೇರಿದಾ | ಭಾನುನಂದನ ಮನೋಬಯಕಿಯ ಸಲ್ಲಿಸಿ || ಏನೆಂಬೆ ಬಲು ಒಂದು ರೂಪವಾಗಿ ತೋರಿ | ತಾನೆ ತನ್ನೊಳಗೆದ್ದು ದುರುಳರ ಮೋಹಿಸಿದಾ 1 ವಿಷವನುಂಡು ಮೂರು ಲೋಕದೊಳಗೆ ಮೆರೆದು | ಅಸುರ ಬಕನ ಸೀಳಿ ಧರಿಗೆ ಬಿಸುಟು | ಶಶಿಮುಖಿಯಳ ಪ್ರೀತಿಬಡಿಸಿ ಅರ್ಜುನಗೊಲಿದು | ಶಶಿಕುಲದಲಿ ಪುಟ್ಟಿ ದುರ್ಜನ ಸಂತಾಪಬಡಿಸಿ2 ಯತಿಯಾಗಿ ಜನಿಸಿ ಸುವಾಕ್ಯವ ಬಯಸಿ | ಮತಿಹೀನ ಜನರ ಶಾಸ್ತ್ರವ ಖಂಡಿಸಿ || ತುತಿಸಿದ ಭಕ್ತರ್ಗೆ ಗತಿಯ ಕೊಡುವ ಪ್ರಾಣ- ನಿತ್ಯ ಪರಮ 3
--------------
ವಿಜಯದಾಸ
ಸಿರಿರಮಣ ತವ ಚರಣಕೆರಗಿ ಬೇಡುವೆ ನಾನು ತ್ವರದಿ ಉದ್ಧರಿಸೋ ಈ ಭವದಿ ಬೇಗಾ ಪ ಪೊಟ್ಟಿಯೊಳಿರುವ ಶಿಶು ಕಷ್ಟವನೆ ಕೊಡಲು ಸಹ ಕೆಟ್ಹೋಗಲೆಂದು ತಾ ಬಯಸಳು ಸೃಷ್ಟಿ ನಿನ್ನೊಳಗಿರಲು ಹೊಟ್ಟೆಯೊಳಗಿರುವೆನು ಅಷ್ಟು ತಪ್ಪೇನು ಕ್ಷಮಿಸಿ ಪೊರೆವುದಾ ತೆರದಿ 1 ಜ್ಞಾನವಿಲ್ಲದೆ ಹರಿಯೇ ನಾನು ನೀನು ಸರಿಸ- ಮಾನರೆಂದರಿತು ನಾ ಮೋಸ ಹೋದೆ ನಾನು ನಿನ್ನಾಧೀನವಿರುವೆನೇ ಹೊರ್ತು ನೀ ನೆನ್ನಧೀನನೆಂದಿಗೂ ಅಲ್ಲವೊ ದೊರೆಯೇ 2 ಏಸು ಜನ್ಮಗಳಿಂದ ವೇಷವಾ ಧರಿಸಿ ಹನು- ಮೇಶ ವಿಠಲನೆ ನಾ ತೋರಿಸಿದೆನೋ ಕೇಶವಾ ಕೊಡು ನೀ ಸಂತೋಷವಾಗಿರೆ ಮುಕ್ತಿ ಬೇಸರಾಗಿರೆ ಇನ್ನು ವೇಷವನು ಬಿಡಿಸೊ 3
--------------
ಹನುಮೇಶವಿಠಲ