ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕನ್ಯಾರತ್ನವನಿತ್ತನು ಹರಿಗೆ ಸತ್ರಾಜಿತರಾಯನು ಪ ಧನ್ಯನು ತಾನೆಂದೆನ್ನುತ ಯದುಕುಲರನ್ನ ಸುಗುಣ ಸಂಪನ್ನಗೆ ಹರುಷದಿ ಅ.ಪ. ಸನ್ನುತ ಚರಣನಿಗೆ ಕಮನೀಯ ಸ್ವರೂಪಗೆ ಕಮಲಾರಮಣಗೆ ಸ್ವರತನಿಗೆ ಕಾಮಿತ ಫಲದಾತಗೆ ಸುಮಬಾಣನ ಪಿತ ಸುಂದರಗೆ ಸುಮದಳನೇತ್ರನಿಗೆ ನಮಿಪ ಜನರ ಸುರದ್ರುಮನೆಂದೆನಿಸುವ ಅಮಿತ ಮಹಿಮಯುತಸಮವಿರಹಿತನಿಗೆ 1 ಬೃಂದಾರಕ ಬೃಂದ ಸುವಂದಿತಗೆ ಶ್ರೀ ಗೋವಿಂದಗೆ ಬೃಂದಾವನ ವಿಹರಣ ವಿಭವಗೆ ವಿಶ್ವಂಭರನಿಗೆ ಮಂದಾಕಿನಿ ಜನಕಗೆ ಮಾಧವಗೆ ಮರಕತಶ್ಯಾಮನಿಗೆ ಮಂದರಧರ ಮುಚುಕುಂದವರದ ಪೂ ರ್ಣೇಂದು ವದನಗುಣಸಾಂದ್ರ ಮುಕುಂದಗೆ 2 ವರಲೀಲಾ ಮಾನುಷ ವೇಷನಿಗೆ ವದನಾಂಬುಜದಲಿ ಸರಸಿಜ ಜಾಂಡವ ತೋರಿಪಗೆ ಸಾರಸನಾಭ ಪರಮಪಾವನ ಚರಿತಗೆ ಪುರುಷೋತ್ತಮನಿಗೆ ಗರುಡಗಮನ ಶ್ರೀ ಕರಿಗಿರೀಶ ಯದು ವರಕುಲಮಣಿ ಮುರಹರನಿಗೆ ಮುದದಲಿ 3
--------------
ವರಾವಾಣಿರಾಮರಾಯದಾಸರು
ನಿತ್ಯ ಶುಭಮಂಗಳ ಪ ಶ್ರೀರಂಗನಾಥನಿಗೆ ಮೂರಂಗವೇಷನಿಗೆ ಮಾರಾರಿಸಖನೆಂಬ ಮದನಪಿತಗೆ ನೂರೆಂಟುತಿರುಪತಿಗೆ ಕಾರಣನು ನಿಜದಿವ್ಯ ವೀರವೈಷ್ಣವನೆಂಬೊ ಮಹಾರಾಜಗೆ 1 ನೀಲಕಂಠನಪ್ರಿಯಗೆ ಮೇಲುಕೋಟೆಯ ಧೊರೆಗೆ ಏಳುಸುತ್ತಿನ ಕೋಟೆಯೊಳಗಿರುವಗೇ ಕಾಳೆಕೊಂಬುಧ್ವನಿಯ ಕೇಳುವಾನಂದನಿಗೆ ವಾಲಿಯನು ಕೊಂದಂತ ವೋಂಕಾರಗೆ 2 ಶಂಕರಪ್ರಿಯನಿಗೆ ಶ್ರೀಪಂಕಜಾಕ್ಷನಿಗೆ ಕುಂಕುಮಾಂಕಿತ ಪಕ್ಷಿವಾಹನನಿಗೆ ಕಂಕಣವು ಕರದೊಳಗೆ ಕಟ್ಟಿ ವೊ ಶ್ರೀಗುರು [ವಂಕ]ತುಲಸಿರಾಮದಾಸ ಪೋಷಿತನಿಗೆ 3
--------------
ಚನ್ನಪಟ್ಟಣದ ಅಹೋಬಲದಾಸರು