ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾರಾಯಣ ನಾರಾಯಣ ನಾರಾಯಣ ನಾರಾಯಣ ಪ. ದೇವರದೇವನೆ ಬಾರೊ ದೇವಕಿನಂದನ ಬಾರೊ ದೇವೇಂದ್ರನ ಸಲಹಿದ ದೇವ ಬಾರೊ ಹರಿಯೆ ಅ.ಪ. ಮಚ್ಚನಾಗಿ ಶ್ರುತಿಯ ತಂದಿತ್ತ ಭಕ್ತವತ್ಸಲನೆ ಭೃತ್ಯ ಸತ್ಯವ್ರತನಿಗೊಲಿದ ಮಚ್ಚಬಾರೊ ಹರಿಯೆ 1 ಸಾರಿದ ಸುರರಿಗಾಗಿ ನೀರೊಳಗೆ ಮುಳುಗಿ ಕೂರ್ಮ ಬಾರೊ ಹರಿಯೆ 2 ಧsÀರೆಯನುದ್ಧರಿಸಲು ವರಾಹನಾದವನೆ ಹಿರಣ್ಯಾಕ್ಷನ ಸೀಳ್ದ ಧೀರ ಬಾರೋ ಹರಿಯೆ 3 ನಂಬಿದ ಭಕ್ತರ ಕಾವ ನಂಬೆ ಕರುಣದಿ ಕಲ್ಲ- ಡಿಂಬ ಬಾರೊ ಹರಿಯೆ 4 ಮಾಣವಕವೇಷನಾಗಿ ಕ್ಷೋಣಿ ಅಳೆದವನೆ ದಾನವನ ಸೋಲಿಸಿದ ಜಾಣ ಬಾರೊ ಹರಿಯೆ5 ಕಡಿ[ದು] ದುಷ್ಟನೃಪರ ಬಿಡದೆ ಚಪ್ಪೆಕೊಡಲಿಯ ಪಿಡಿದುಗ್ರ ಒಡೆಯ ಬಾರೊ ಹರಿಯೆ 6 ವೃಂದಾರಕವಂದ್ಯ ಸೇತುಬಂಧದಿ ದಶಕಂಧರನ ಕೊಂದ ರಾಮಚಂದ್ರ ಬಾರೊ ಹರಿಯೆ 7 ಮಲ್ಲರ[ನೆಲ್ಲ] ಸೀಳಿ ಬಲ್ಲಿದ ಮಾವನ ಕೊಂದೆ ಎಲ್ಲರ ವಲ್ಲಭ ಎಂಬೊ ಮಲ್ಲ ಬಾರೊ ಹರಿಯೆ 8 ಬೌದ್ಧನಾಗಿ ದೈತ್ಯರಿಗೆ ಶುದ್ಧಬುದ್ಧಿಯ ತೋರಿ ರುದ್ರನ್ನ ಸೋಲಿಸಿದ ಸುಭದ್ರ ಬಾರೊ ಹರಿಯೆ 9 ಕರ್ಕಶದ ಖಳರನ್ನು ಕಲ್ಕಿರೂಪನಾಗಿ [ಮೂಲೆ ಲಿಕ್ಕಿಸುವ ಸುಜನರ ಚೊಕ್ಕ ಬಾರೊ ಹರಿಯೆ 10 ವಿಜಯ ಹಯವದನ ಭಜಕರ ಭಾಗ್ಯನಿಧಿ ಸುಜನಾಬ್ಧಿ ವಾದಿರಾಜನ ತೇಜ ಬಾರೊ ಹರಿಯೆ 11
--------------
ವಾದಿರಾಜ
ಮಾನಸ ಪೂಜೆಯನು ಮಾಡು | ಧ್ಯಾನ ಪೂರ್ವದಿಂದ ಕುಳಿತು ಪ ಜ್ಞಾನ ಭಕುತಿಯ ವಿಡಿದು ಲಕುಮಿ | ಪ್ರಾಣನಾಥನ ಪ್ರೇರಣೆಯಿಂದ ಅ.ಪ ಕಾಮ ಕ್ರೋಧವ ಹಳಿದು ವಿಷಾದವೆಂಬೋ | ಸ್ತೋಮಗಳನು ತೊರೆದು ರಜೋ ಮೊದಲಾದ || ತಾಮಸದ ಬುದ್ಧಿ ಬಿಟ್ಟು ನೇಮನಿತ್ಯ ತೀರಿಸಿಕೊಂಡು | ಈ ಮನಸ್ಸು ಇಟ್ಟು 1 ಹೃದಯ ಪದುಮದೊಳಗೆ ಹರಿಯ ಪದುಮ ಪದಗಳಿಟ್ಟು | ದೇಹ ಕದಲದಂತೆ ಇದ್ದು ಜ್ಞಾನ ಉದಿತವಾದ ದೃಷ್ಟಿಯ || ಹದುಳದಿಂದ ತಿಳಿದು ಅಂತರವೆಲ್ಲವನು ನೋಡಿ | ಕದವ ತೆರೆದು ಕೊಟ್ಟ ಮುದದಿ ದೃಢವ ಸಂಪಾದಿಸಿ2 ನೀಲ ರತುನದಂತೆ ಹೊಳೆವ ಪಾಲಸಾಗರತನುಜೆ | ಮೇಲು ಮಂಗಳರಮಣನಾದ ಮೇಲುಗಿರಿಯ ತಿಮ್ಮನ || ತವಕ ಬೀಳದಲೆ ಪೂಜೆ ವಿಧಾ | ಸಾಲುಗಳನು ತಿಳಿದು ವಿಶಾಲ ಬುದ್ಧಿ ಯುಕುತಿಯಿಂದ 3 ವೇದ ಮಂತ್ರಗಳನು ಪೇಳಿ ಆದಿಯಲ್ಲಿ ಪೀಠಪೂಜೆ- | ಯಾದ ತರುವಾಯ ವಿನೋದದಿಂದಲಾವರಣ || ಆದರಣೆಯಿಂದ ಬಳಿಕ ಮಾಧÀವರಿಗೆ ಸಕಲ ಭೂಷ- | ಣಾದಿಗಳನು ರಚಿಸಿ ಪುಣ್ಯಹಾದಿಯನು ತಪ್ಪದೆ 4 ದೋಷರಾಶಿಗೆ ದ್ವೇಷನಾಗಿ ಈ ಶರೀರವÀ ಘಾಸಿಮಾಡದೆ | ಪಾದ || ಲೇಸಿನಿಂದ ಭಜನೆಗೈದು ವಾಸವಾಗು ಪದದಲ್ಲಿ | ಶ್ರೀಶ ವಿಜಯವಿಠ್ಠಲರನ್ನ ದಾಸ-ದಾಸರ ದಾಸನೆಂದು5
--------------
ವಿಜಯದಾಸ
ಸಂಕರ್ಷಣ ಜಯಾತನಯಗೆ ಮಂಗಳ ಕಂತು ಭವನ ಪದವಿಯೋಗ್ಯಗೆ ಶಂಕ ಇಲ್ಲದ ಜೀವರಾಶಿಗಳೊಳಗಚ್ಯು ತಾ ಕಸ್ಥನೆನಿಸಿದ ಪವಮಾನಗೆ 1 ವಾನರ ವೇಷನಾ ತೋರ್ದಗೆ ಮಂಗಳ ಭಾನುತನಯನ ಕಾಯ್ದ್ದಗೆ ಮಂಗಳ ಜಾನಕಿಗುಂಗುರವಿತ್ತಗೆ ಮಂಗಳ ದಾನವತತಿ ಪುರವ ದಹಿಸಿದವಗೆ ಮಂಗಳ 2 ಅತಿ ಬಲವಂತರೆಂದೆನಿಸಿದ ದೈತ್ಯ ಸಂ ತತಿಗಳನೆಲ್ಲವ ಸವರಿದವಗೆ ಮಂಗಳ ಪ್ರೋತನದೊಳಗೆ ಪ್ರತಿಕೂಲ ಸುಯೋಧನನ ಮೃತಿಗೆ ಕಾರಣನಾದ ಮರುದಂಶಗೆ 3 ಏಳೇಳು ಲೋಕದ ಗುರುವರನೆನಿಸಿ ಮೂ ರೇಳು ಕುಭಾಷ್ಯವ ಮುರಿದವಗೆ ಮಂಗಳ ಏಳುಕೋಟ ಲೋಕದೊಳಗಿಟ್ಟು ದೈತ್ಯರ ಪಳದಂತೆ ಮಾಡಿದ ಯತಿರಾಯಗೆ 4 ಮೂರು ರೂಪಗಳಿಂದ ಮುಕ್ತಿ ಪ್ರದಾಯಕ ನಾರಾಧಿಸಿದ ಅನಿಮಿಷ ಪೂಜ್ಯಗೆ ಮಂಗಳ ಶ್ರೀ ರಮಾರಮಣ ಜಗನ್ನಾಥ ವಿಠಲನ ಕಾರುಣ್ಯ ಪಾತ್ರ ಸಮೀರಣಗೆ ಮಂಗಳ 5
--------------
ಜಗನ್ನಾಥದಾಸರು
ಸುವ್ವಿ ಶ್ರೀ ದೇವಿರಮಣ ಸುವ್ವಿ ಸರ್ಪರಾಜಶಯನ ಹರಣ ಸುವ್ವಿ ನಾರಾಯಣ ಪ ಭವ್ಯಚರಿತ ದುರಿತವಿಪಿನ ಹವ್ಯವಾಹನ ಭವೇಂದ್ರಾದಿ ಸೇವ್ಯಮಾನ ಸುಪ್ರಸಿದ್ಧ ಸುಲಭsÀ ಮೂರುತಿ ಅವ್ಯಯಾಮಿತ ಸುಖಾತ್ಮ ದಿವ್ಯ ಮಹಿಮೆ ತುತಿಪೆ ಸುವಿವೇಕಿಗಳಿಗೆ ಕೊಡುವುದಮಿತ ಮೋದವ 1 ವಾಸವಾದ್ಯಮರ ವಾರಾಶಿ ಶಾರದೇಂದು ಮಧ್ವ ದೇಶಿಕಾರ್ಯ ಚಿತ್ತ ಸಿಂಹಪೀಠಮಧ್ಯಗ ದೇಶಕಾಲ ವ್ಯಾಪ್ತ ಸರ್ವೇಶ ಸಾರ್ವಭೌಮ ಶ್ರೀಮ ಹೀ ಸಮೇತ ಕೃಷ್ಣ ಕೊಡಲಿ ಎಮಗೆ ಮಂಗಳ 2 ಕಮಲ ಸಂಭವನ ವೇದ ತಮನು ಒಯ್ಯತಿರಲು ಲಕ್ಷ್ಮೀ ಶರಧಿ ಮಥನದಿ ಕಮಠ ರೂಪಿನಿಂದ ಸುರರಿಗಮೃತವಿತ್ತು ಕಾಯ್ದ ಅಖಿಳ ಸುಮನಸೇಂದ್ರ ಸ್ವಾಮಿ ಕೊಡಲಿ ಎಮಗೆ ಮಂಗಳ 3 ಕನಕ ಲೋಚನನ ಸದೆದು ಮನುಜಸಿಂಹ ವೇಷನಾದ ದ್ಯುನದಿ ಪಡೆದು ಜನನಿ ಕಡಿದು ವನವ ಚರಿಸಿದ ಜನಪ ಕಂಸನ್ನೊದೆದು ತಿರಿಪುರವನಿತೆಯರ ಸುವ್ರ್ರತ ವಿನುತ ಕಲಿ ದೇವರಾಜ ಎಮ್ಮ ಸಲಹಲಿ 4 ಪಾಹಿ ಪಾವನ ಚರಿತ್ರ ಪಾಹಿ ಪದ್ಮ ಪತ್ರನೇತ್ರ ನಿಗಮ ಗಾತ್ರ ಮಾಂ ಪಾಹಿ ಸಜ್ಜನಸುಮಿತ್ರ ಪಾಹಿ ದೋಷದೂರ ಸುಗುಣ ಪಾಹಿ ಜಗನ್ನಾಥ ವಿಠಲ ಜಯ ತ್ರಿಧಾಮಗ 5
--------------
ಜಗನ್ನಾಥದಾಸರು