ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತನ್ನ ಸ್ಮರಣೆ ತಾನರಿಯದ ಮನವು ಚಿನುಮಯ ರೂಪನ ಬೆನ್ನವಿಡಿವುದುಂಟೆ ಪ ಹಾವಿನ ಹೆಜ್ಜೆಯ ಹಾವರಿವಂದದಿ ಭಾವಿಸಿಕೊಳ್ಳದೆ ತಗ್ಗು ಮುಗ್ಗುಗಳ ಗೋವಳನಿಲ್ಲದ ಗೋವಿನ ತೆರನಂತೆ ಜೀವನುಂಗುವ ವ್ಯಾಘ್ರನಗ್ರಕೆ ಸುಳಿಯಲು 1 ಕನ್ನಡಿ ಶುದ್ಧವಾಗಿಯೆ ಕಾಣದ ದೃಷ್ಟಿ ಚಿನ್ನವಾರಿಕೆಯನ್ನು ಮಾಡುವ ಪರಿಯು ನಗದ ಮನ ಮನ್ನಣೆಯಿಲ್ಲದ ಮನೆಯೊಳುಂಬರೆ ಹೇಸ2 ಹೇಳಿದ ಮಾತನು ಕೇಳಿ ಮಾನಸದೊಳು ಮೇಳವಾಗುವೆನೆಂದು ಖೂಳತನದಿ ಪೋಗಿ ಕೇಳಿದ ಉತ್ತರಕುತ್ತರ ಹರಿಸದೆ ಆಳು ಬಾವಿಯ ಹಾರಿ ಹೊಳಚುವ ತೆರನಂತೆ 3 ಕಾಗೆಯು ಗರುಡನ ಸರಿಯೆಂದು ಜೂಜಾಡಿ ಸಾಗರವನು ಹಾರಿ ನಡುವೆ ಬಿದ್ದಂದದಿ ಯೋಗಿಯ ಪರಿಯಂತೆ ತಪವೆಂದು ತನ್ನಯ ಮೂಗ ಮುಚ್ಚಲು ಭವರೋಗ ಹಾರುವುದಂತೆ 4 ಮೀಸಲಿಗೊದಗುವ ಶೇಷಗಿರೀಶನ ಆಸೆಯಗ್ರಾಸವ ಬೇಡಿಕೊಳ್ಳದ ಮನ ಸಾಸಿರ ವೆಗಡದ ಭಾಂಡದೊಳೋಗರ ಬೇಯಿಸಿ ಭುಂಜಿಪೆಯೆಂದು ಮೋಸ ಮಾಡುವದಿಂದು 5 ಚಿತ್ರಿಕ ರಚಿಸಿದ ಸೇನೆ ಸೇನೆಗಳಲ್ಲ ಪ್ರಸ್ತುತಕೊದಗುವದೆನುತಿಹ ರಾಯನ ಮುತ್ತಿಕೊಂಡಿಹ ಪರಸೇನೆಯ ಇದಿರೊಳು ಮೃತ್ಯುದೇವತೆ ಬಂದು ಮೂದಲಿಸುವಳೆಂದು6 ಮೊಸರನ್ನ ತನ್ನ ಕೈಯೊಳಗಿದ್ದಂತೆ ಹಸಿವಾದ ವೇಳ್ಯದಿ ಹಸಿಯ ಮೆಲ್ಲುವದೇಕೆ ಕುಶಲದಿ ನೆನೆಯಲು ಹಸನದಿ ಸಲುಹುವ 7
--------------
ವರಹತಿಮ್ಮಪ್ಪ
ಹೃದಯ ವೃಂದಾವನದೊಳಿರುವ ಕೃಷ್ಣನ ಸಾಧಿಸಿ ನೋಡ್ವೆನೆಂದು ಪೋದರು ಗೋಪಾಂಗನಾ ಪ ನಾದದ ಕೊಳಲನ್ನು ಊದುವ ವೇಳ್ಯದಿ ಸದ್ಭಕ್ತಿವೆತ್ತಿಗೋಪಾಂಗನಾ ವಿನೋದದಿ ಆಧಾರ ಮಾರ್ಗದಿಂದಾ ಪೋದರು ಬೇಗದಿ ಶೋಧಿಸಿ ನೋಡಲಾಗಿ ತ್ಯಾಗಿಸಿ ಕಾಮನಾ 1 ಉಬ್ಬೇರಿ ಮೆಲ್ಭಾಗದಿಂದಾ ವಿನೋದದಿ ಅಬ್ಬರದಿಂದಲೀ ಆ ಷಟದ್ವಾರ ಭೇದದಿ ಗರ್ಭಿತನಾದ ರಾಜಹಂಸೊಹಂಸ್ವರದಿ ಮುಬ್ಬರದಿಂದಲಿ ಪಾಡುತ್ತಾ ರಂಗನ 2 ನಳಿನ ಚಂಪಕಾದಿ ನಾಗ ಪುನ್ನಾಗವು ಕುಂದ ಬಕುಲವು ಮಾಲತಿ ಜಾಜಿ ಹೂವು ಶ್ರಿಲೋಲನಾಮವೂ ಮೇಳಿತವಾಗಿ ಪೋಗಿ ಏರಿದರು ಸುಮನಾ 3 ಮೂರ್ತಿ ಸಂಗೀತ ಕೇಳುತಾ ಆ ಮಹಾ ಮಕುಟದಾ ಬೆಳಕು ನೋಡುತಾ ಶ್ರೀ ಗುರುಮಹಾದೇವನೊಳ್ ರಮಿಸಿ ಸೂಸದಾ ಪ್ರೇಮದಿ ಶಾಂತಿ ಸುಖದೊಳ್ ಬೆರತು ಸಘನಾ 4
--------------
ಶಾಂತಿಬಾಯಿ
ಕರುಣಾಕರ ನಿನ್ನ | ಕರವೊಡ್ಡಿ ಬೇಡುವೆ ||ಕರುಣಿಸು ವರವನ್ನು | ಖರ ಸಂಹಾರ 1ಕರಿರಾಜನು ನಿನ್ನ | ಕರಗುತ ಭಜಿಸಲು ||ಖಗವಾಹನನಾಗಿ | ಕರುಣದೀ ಪೊರೆದೆ 2ಕಡುದಾರಿದ್ರನು | ಕಷ್ಟದಿ ಸ್ಮರಿಸಲು ||ಕರುಣದಿ ಸುಧಾಮಗೆ | ಕರೆದಿತ್ತೆ ವರವ 3ಕಾಲನ ದೂತರು | ಕಾಡುವ ವೇಳ್ಯದಿ ||ಕಂದನ ಕರೆಯೆಗೋ | ವಿಂದನೆ ಪೊರದೇ 4
--------------
ಗೋವಿಂದದಾಸ