ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಿದ್ದರೇನು ಶ್ರೀ ಹರಿಗಲ್ಲದವನು ಪ ನಿಲ್ಲದೆ ಜಪಿಸಿದರೆ ಸಲ್ಲುವನೆ ಸದ್ಗತಿಗೆ ಅ.ಪ ಕಪ್ಪೆ ಕಮಲದ ಬಳಿಯೆ ತಪ್ಪದೆ ಅನುಗಾಲ | ಅರೆ ಘಳಿಗೆ ಬಿಡದೆ || ಬಪ್ಪದಿಂದಲಿ ಅದರ ಪರಿಮಳದ ಸೊಬಗ ನೀ- | ಕಪ್ಪೆ ವಾಸನೆಗೊಂಡು ಹರುಷಪಡಬಲ್ಲುದೆ 1 ಹಾಲುಕೆಚ್ಚಲು ಬಳಿಯೆ ತೊಣಸಿ ಹತ್ತಿಕೊಂಡು | ಕಾಲವನು ಕಳೆವ ಬಗೆ ಬಲ್ಲಿರೆಲ್ಲ || ವೇಳೆವೇಳೆಗೆ ಹಸುವ ಕರೆದುಂಬ ನರನಂತೆ | ಕೀಳು ತೊಣಸಿಯು ಉಂಡು ಹರುಷಪಡಬಲ್ಲ್ಲುದೆ2 ತುಳಸಿ ಸಾನ್ನಿಧ್ಯದಲಿ ನೀರುಳ್ಳಿಯನು ಹಾಕಿ | ಹೊಲಸು ಹೋಗ್ವುದೆ ಹಲವು ಕಾಲಿದ್ದರೆ || ಸಿರಿ ವಿಜಯವಿಠ್ಠಲನ ಬಳಿಯಲಿದ್ದರೇನು ದೂರಿದ್ದರೇನು 3
--------------
ವಿಜಯದಾಸ
ಕಲಿಯುಗದ ಮಹಿಮೆಯನು ಕಂಡಷ್ಟು ಪೇಳುವೆನು ಪ ಜಲಜನಾಭನ ಕೃಪೆಯ ಪಡೆದವರು ಕೇಳಿ ಅ ಸತ್ಯಧರ್ಮಗಳೆಲ್ಲ ಎತ್ತ ಪೋದವೊ ಕಾಣೆಉತ್ತಮರ ಜೀವನಕೆ ದಾರಿಯಿಲ್ಲನಿತ್ಯದಲಿ ಕಳವು ವ್ಯಭಿಚಾರವುಳ್ಳವರೆಲ್ಲಅರ್ಥ ಸಂಪನ್ನರಾಗನುಭವಿಸುತಿಹರು1 ಅತ್ತೆಯೇ ಸೊಸೆಯಾಗಿ ಸೊಸೆಯು ಅತ್ತೆಯು ಆಗಿಪುತ್ರ ಪಿತನಾಗಿ ಪಿತ ಪುತ್ರನಾಗಿಮತ್ತೆ ಗಂಡನಿಗೆ ಹೆಂಡತಿಯೆ ಗಂಡಳು ಆಗಿವರ್ತಿಸುವರಯ್ಯ ತಮಗೆದುರಿಲ್ಲವೆಂದು 2 ವೈರಿ ಸಿರಿ ಮದದಿ ಸೊಕ್ಕಿದರುಕಾವರಾರೈ ಸಾಧು ಸಜ್ಜನರನೀಗ3 ವೇದ ವಿಪ್ರರು ತಮ್ಮ ವೃತ್ತಿ ಸ್ವಾಸ್ಥ್ಯವ ಕಳೆದುಆಧಾರವಿಲ್ಲದೆ ತಿರಿದು ತಿಂಬುವರುಕಾದುವ ಶೂರರಿಗೆ ಕಾಸು ಕೊಡುವವರಿಲ್ಲಮೇದಿನಿಗೆ ಬೀಳ್ವ ಮಳೆ ಖಂಡಮಂಡಲವು 4 ಅನ್ನವಸ್ತ್ರಗಳಿಂದ ಚೆನ್ನಾಗಿ ಬಾಳುವರಭಿನ್ನ ತಂತ್ರವ ಮಾಡಿ ಕೆಡಿಸುತಿಹರುಗನ್ನಗತಕವ ಮಾಳ್ಪ ಗ್ರಾಮಣ್ಯಗಳ ಕಲಿತುಕುನ್ನಿಗಳು ಹೆಚ್ಚಿದರು ಕ್ರೂರ ಫಣಿಯಂತೆ 5 ಆಳಿದೊಡೆಯಂಗೆರಡು ಬಗೆಯುವಾತಗೆ ಒಳ್ಳೆಮಾಳಿಗೆಯ ಮನೆ ತುರುವು ಧನಧಾನ್ಯವುವೇಳೆವೇಳೆಗೆ ಬರುವ ಹೆಂಡತಿಯ ಲೆಕ್ಕಿಸದೆಸೂಳೆಯನು ನೆಚ್ಚಿ ಕಾಲವ ಕಳೆವರಯ್ಯ6 ಸೇರಿ ದ್ರೋಹವ ಮಾಳ್ಪ ಕ್ರೂರಕರ್ಮಿಗಳ ಮತಪೂರೈಸಿ ಕೊಡುವರರಸುಗಳೆಲ್ಲರುಧಾರಿಣಿಯ ಭಾರವನು ತಾಳಲಾರದೆ ದೇವಿಶ್ರೀರಾಮ ರಾಮೆಂದು ಶಿರವ ತೂಗುವಳು7 ಪತಿ ನೀನೆ ಗತಿಯೆನಲುಮುತ್ತೈದೆಗುಡುವುದಕೆ ವಸ್ತ್ರವಿಲ್ಲಮತ್ತೆ ವ್ಯಭಿಚಾರಿಣಿಗೆ ತೊಡಿಗೆ ಬಂಗಾರಗಳುವರ್ತನೆಯಿದೇನಯ್ಯ ಕಲಿಯುಗದ ಮಹಿಮೆ 8 ಪತಿವ್ರತೆಯರೆಂಬುವರು ಶತಸಹಸ್ರಕೊಬ್ಬರುಮಿತಿಮೀರಿ ಇಹರಯ್ಯ ಇತರ ಜನರುಮತಿಗೆಟ್ಟು ಮನಸೋತು ಅನ್ಯ ಪುರುಷರ ಕೂಡಿಗತಿಗೆಟ್ಟು ಹೋಗುವರು ಮೂರು ತೊರೆದು 9 ಹರಿಹರರ ಪೂಜೆಗಳು ಹಗರಣಗಳಾದವುಉರಿ ಮಾರಿ ಚಾಮುಂಡಿ ಶಕ್ತಿಗಳಿಗೆಕುರಿ ಕೋಣ ನೈವೇದ್ಯ ಧೂಪದೀಪಗಳಿಂದಪರಮ ಭಕ್ತಿಯ ಸಲಿಸಿ ಪೂಜಿಸುವರಯ್ಯ10 ನಡೆವ ಕಾರ್ಯಗಳೆಲ್ಲ ನುಡಿಯಲೆನ್ನಳವಲ್ಲಒಡೆಯ ನೀನೇ ಬಲ್ಲೆ ಕಲಿಯುಗದ ಮಹಿಮೆತಡವ ಮಾಡಲಿ ಬೇಡ ತಾಳಲಾರದು ಲೋಕಮೃಡನ ವೈರಿಯ ಪೆತ್ತ ಆದಿಕೇಶವನೆ11
--------------
ಕನಕದಾಸ
ಧನ್ಯರಾದರು ಗುರುಗಳನು ಪೂಜಿಸುತ ಇನ್ನಿವರ ಪಾತಕವು ತೊಲಗಿತು ಜಗದಿ ಪ. ತಂದೆ ಮುದ್ದುಮೋಹನದಾಸ ರಾಯರನು ಚಂದದಿಂ ಸತಿಸಹಿತ ಕರೆತಂದು ಮನೆಗೆ ಮಂದರೋದ್ಧರನ ಪದಸೇವೆ ಇದು ಎಂದರಿತು ಮಂದಹಾಸದಲಿ ನಸುನಗುತ ಸದ್ಭಕ್ತರು 1 ಮಂಗಳೋದಕದಿಂದ ಮಜ್ಜನವಗೈಸುತಲಿ ಅಂಗಗಳನೊರೆಸುತಲಿ ನಾಮಗಳನ್ಹಚ್ಚಿ ರಂಗನಾಥನಿಗರ್ಪಿಸುತ ಪುಷ್ಪಹಾರವನ್ಹಾಕಿ ಶೃಂಗಾರವನೆಗೈದು ಶ್ರೀ ಗುರುಗಳನ್ನು 2 ಪಚ್ಚೆಕರ್ಪೂರ ಕೇಸರಿಯಿಂದ ಕೂಡಿದ ಅಚ್ಚ ಗಂಧವನ್ಹಚ್ಚಿ ಅಕ್ಷತೆಯನಿಟ್ಟು ಮಚ್ಛರೂಪಿಯ ನೆನೆದು ಪಾದಕಮಲವ ತೊಳೆದು ನಿಚ್ಚಳದ ಭಕ್ತಿಯಲಿ ನಿಜ ಭಕ್ತರೆಲ್ಲ 3 ಸತಿಸಹಿತ ಕುಳ್ಳಿರಿಸಿ ಗುರುಗಳನು ಪೀಠದಲ್ಲಿ ಅತಿಶಯದಿ ಕುಡಿಬಾಳೆ ಎಲೆಗಳನೆ ಹಾಕಿ ಮತಿಯಿಂದ ರಂಗೋಲೆಗಳನ್ಹಾಕಿ ಲವಣ ಸ- ಪರಿಯಂತ ಬಡಿಸುತಲಿ 4 ಅನ್ನಾದಿ ಸಕಲ ಷಡ್ರಸಗಳನೆ ಬಡಿಸುತ್ತ ಘನ್ನ ಮಹಿಮರಿಗೆ ಭಕ್ಷಾದಿಗಳ ಬಡಿಸಿ ಸನ್ನುತಿಸುತಲಿ ತೀರ್ಥ ಆಪೋಷನವನ್ಹಾಕಿ ಪನ್ನಗಶಯನನಿಗೆ ಅರ್ಪಿಸುತ ಮುದದಿ 5 ಘೃತಶರ್ಕರಾದಿಗಳನಡಿಗಡಿಗೆ ಬಡಿಸುತಲಿ ನುತಿಸಿ ಗಾನಗಳಿಂದ ಗುರುಮಹಿಮೆಯ ದಧಿ ಕ್ಷೀರದನ್ನಗಳನುಣಿಸುತಲಿ ಘೃತ ಕ್ಷೀರದಿಂದ ಕೈ ತೊಳೆದು ಸಂಭ್ರಮದಿ 6 ಯಾಲಕ್ಕಿ ಕರ್ಪೂರ ಮಿಳಿತ ವೀಳೆಯವನಿತ್ತು ವೇಳೆವೇಳೆಗೆ ತಪ್ಪು ಕ್ಷಮೆಯ ಬೇಡುತಲಿ ವ್ಯಾಳಶಯನಗರ್ಪಿಸುತ ಉಡಿಗೆ ತೊಡಿಗೆಗಳನಿತ್ತು ಮಾಲೆಹಾಕುತ ಆರತಿಯನೆತ್ತಿ ಮುದದಿ 7 ಹರಿಪ್ರೀತನಾಗುವನು ಗುರು ಹೃದಯದಲಿ ನಿಂತು ಕರ್ಮ ತೊಡಕುಗಳು ಸರಸಿಜಾಕ್ಷನು ತಾನು ಹರುಷಪಡುವನು ದಯದಿ ಕರಕರೆಯ ಸಂಸಾರ ಕಡಿದು ಗತಿ ಈವ 8 ಗುರುದ್ವಾರ ಒಲಿಯುವನು ಹರಿಯು ಮೋಕ್ಷಾರ್ಥಿಗಳ ಅರಘಳಿಗೆಯಗಲದಲೆ ಕಾಯುವನು ಸತತ ಗುರು ಅಂತರ್ಯಾಮಿ ಶ್ರೀ ಗೋಪಾಲಕೃಷ್ಣವಿಠ್ಠಲ ತ್ವರಿತದಿಂ ಹೃದಯದಲಿ ತೋರ್ವನು ತನ್ನ9
--------------
ಅಂಬಾಬಾಯಿ
ಬಂಟನಾಗಿ ಬಾಗಿಲ ಕಾಯ್ವೆ ಹರಿಯ ಪ ವೈಕುಂಠದ ಸೊಂಪಿನ ದಾಸರ ಮನೆಯ ಅ ಹೊರಸುತ್ತು ಪ್ರಾಕಾರ ನಾ ಸುತ್ತಿ ಬರುವೆಬರುವ ಹೋಗುವರ ವಿಚಾರಿಸುತಿರುವೆಕರದಿ ಕಂಬಿಯ ಪೊತ್ತು ಅಲ್ಲಿ ನಿಂದಿರುವೆ ಶ್ರೀಹರಿಯ ಸಮ್ಮುಖದ ಓಲಗದೊಳಿರುವೆ 1 ತೊತ್ತು ತೊಂಡನಾಗಿ ಬಾಗಿಲ ಕಾಯ್ವೆಚಿತ್ರದ ಚಾವಡಿ ರಜವನು ಬಳಿವೆಮುತ್ತಿನ ರಂಗವಲ್ಲಿಯನಿಟ್ಟು ಬರೆವೆರತ್ನಗಂಬಳಿ ಹೊತ್ತು ಹಾಸುವೆನು 2 ವೇಳೆವೇಳೆಗೆ ನಾನೂಳಿಗವ ಮಾಡುವೆಆಲವಟ್ಟಿಗೆ ಚಾಮರವ ಬೀಸುವೆತಾಳದಂಡಿಗೆ ಭೃಂಗಿ ಮೇಳಗಳ ಕೂಡಿ ಶ್ರೀಲೋಲನ ಕೊಂಡಾಡಿ ಪಾಡುವೆನು 3 ಎಂಜಲ ಹರಿವಾಣಂಗಳ ಬೆಳಗುವೆಕಂಜನಾಭನ ಪಾದಕಮಲವ ತೊಳೆವೆರಂಜಿಪ ಕುಸುಮದ ಮಾಲೆ ತಂದಿಡುವೆಸಂಜೆಗೆ ಪಂಜಿನ ದಾಸನಾಗಿರುವೆ 4 ಮೀಸಲೂಳಿಗವ ನಾ ಮಾಡಿಕೊಂಡಿರುವೆಶೇಷ ಪ್ರಸಾದವ ಉಂಡುಕೊಂಡಿರುವೆಶೇಷಗಿರಿ ಕಾಗಿನೆಲೆಯಾದಿಕೇಶವನದಾಸರ ದಾಸರ ದಾಸರ ಮನೆಯ 5
--------------
ಕನಕದಾಸ
ಗಂಗಾದಿತೀರ್ಥ ಫಲಂಗಳ ನೀವುದು- ಹರಿಯ ನಾಮ |ಸ್ನಾನ ಜಪಂಗಳ ಸಾಧಿಸಿದವರಿಗೆ- ಹರಿಯ ನಾಮ |ವೇಳೆವೇಳೆಗೆ ವೆಚ್ಚ-ವ್ಯಯಗಳ ನೀವುದು- ಹರಿಯ ನಾಮ |
--------------
ಪುರಂದರದಾಸರು