ಒಟ್ಟು 5 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಿ ನೀನೆ ವೇಲಾಪುರಿ ಶ್ರೀ ಚನ್ನರಾಯಾ ಪ ಪೊಳೆವ ನಂದನವನದಲಲರ್ದ ಮಾವಿನ ನೆಳಲ ಲಲರುವಾ ಸಿರಿತೋಳ ತಲೆಗಿಂಬನೊರಗೀ ಅಳಿಯ ಮೃದುಗಾನಕ್ಕೆ ತಲೆದೂಗುತಲೆ ನುಡಿದ ವಿಲಸಿತದ ಸರಸ ವಚನವ ಚೆನ್ನರಾಯಾ 1 ಬೆಳದಿಂಗಳೆರಕದಂದದ ಸಾರದ್ಹಂದರದಿ ಪೊಳೆವಿಂದುಕಾಂತದ ಜಗುಲಿಯೊಳೆನ್ನ ತಲೆಯ ಮಗ್ಗಲನೊರಗಿ ಸುಳಿವೆಲರಗಾಳಿಗಂಜಿಸುತ ಕಲೆಯರಿತು ಮೈಮರಸಿದುದ ಚನ್ನರಾಯಾ 2 ತನುಮಿಸುಕೆ ಬಹುವಿಧದಿ ಧ್ವನಿಗೈವ ಶಕುನಿ ಪೆಸ- ರಿನ ಮಂಚದಲಿ ಹಂಸತೂಲ ತಲ್ಪದಲಿ ಮನಸಿಜಾಗಮವರಿತು ಮನವ ಮೆಚ್ಚಿಸಿದೆ ಎ- ನ್ನಿನಿಯ ಶ್ರೀ ವೈಕುಂಠಪತಿ ಚೆನ್ನರಾಯಾ 3
--------------
ಬೇಲೂರು ವೈಕುಂಠದಾಸರು
ಕೊಂಡಜ್ಜಿ ಶ್ರೀ ಜನಾರ್ದನ ಸ್ವಾಮಿ ಸ್ತೋತ್ರ ಎಂಥಾ ಸುಂದರನೊ ಶ್ರೀಕಾಂತನೂ ||ಅ|| ಸಂತರ ಮನೋರಥ ಸಂತತ ಪಾಲಿಸಿಪಂಥಾವ ಗೆಲಿಪ ಮಹಾಂತನೋ - ಶ್ರೀಕಾಂತನೂ ಅ.ಪ. ಮಾನಿನೀಯಳ ಬಿಟ್ಟು | ಮೌನಿಯಂದದಿ ನೀನುಕಾನನವನೆ ಸೇರಿ ನೆಲೆಸೀರ್ಪುದೂ | ಮುನಿಜನ ವಂದ್ಯಾ 1 ತೊಂಡ ಜನರು ನಿನ್ನ | ಬಂಡುಣಿಯಂದದಿಪುಂಡು ಮಾಡುವರೆಂದು ಬಂದೆಯಾ | ಪುಂಡರಿಕಾಕ್ಷಾ 2 ಹಿಂಡು ಭಕ್ತರು ತಮ್ಮ | ದಿಂಡು ಮಂಡಿಪರೆಂದು ಕೊಂಡಜ್ಜಿಯಲಿ ನೆಲಿಸೀದ್ಯಾ | ಪಾಂಡವ ಪ್ರೀಯಾ 3 ವೇಲಾಪುರಿಗೆ ಪೋಗ | ಲೊಲ್ಲೆನೆಂದೆನುತಲಿಇಲ್ಲೇ ನೆಲಸಿ ಪೂಜೆಗೊಂಬುದು ಫಾಲಾಕ್ಷ ಪ್ರಿಯನೇ 4 ಎಲ್ಲಿಪೋದರೂ ಬಿಡ | ಲೊಲ್ಲರೂ ನಿನ್ನ ಜನಸಲ್ಲಿಸೆನ್ನಯ ಮನೋಭೀಷ್ಟವ | ಹೇ ಜನಾರ್ಧನಾ 5 ಆರು ಕಾಯುವರಿಲ್ಲ | ಸಾರಿದೆ ತವ ಚರಣಪೋರನಾಮಯ ಹರಿಸಯ್ಯಾ | ನಾರದ ವಂದ್ಯಾ 6 ಗುರುಗಳಂತರ ಗುರು | ಗೋವಿಂದ ವಿಠಲನೆಪರಿಪರಿ ನಿನ ಕೀರ್ತಿ ನುಡಿಸಯ್ಯಾ | ಸುರವರ ವಂದ್ಯಾ7
--------------
ಗುರುಗೋವಿಂದವಿಠಲರು
ತೇನಮೋ ಜಗದೇಕನಾಥ ರಮಾ ಮಾನಸಾಂಬುಜರಾಜಹಂಸಾಯ ವಿಷ್ಣವೇ ಪ ಜಗದೇಕವೀರ ಜನನಾದಿ ದೂರಾ ಸುಗುಣ ವಿಸ್ತಾರ ಸುಖಮಯ ಶರೀರ 1 ಗಾನರಸಲೋಲ ಕನಕಮಯಚೇಲ ಆನತೋದ್ಧರಣ ಅಮೃತಾಬ್ಧಿಶಯನ 2 ಚಂದ್ರಾರ್ಕನಯನ ಚಾರುತರ ಕಥನ ಇಂದ್ರಾರಿ ಮಥನ ಇಭವೈರಿವದನ ಇಂದ್ರ ಸಂಕ್ರಮಣ ವೇಲಾಪುರಿಸದನ ವಂದ್ಯಾಖಿಲಜನ ವೈಕುಂಠ ರಮಣ3
--------------
ಬೇಲೂರು ವೈಕುಂಠದಾಸರು
ದೇವನ ನೆರೆನಂಬಿರೊ ಶ್ರೀವರ ವೇಲಾಪುರಿಯ ಚೆನ್ನಿಗನ ಪ ಕರೆಯರಿಗೊರಳಭವನ ಕೃಪೆಯಿಂದ ದಶಗ್ರೀವ ನೆರೆಭಾಗ್ಯಪಡೆದು ಗರ್ವದೊಳಿರಲು ಅರೆಯಟ್ಟಿ ಶಿರಗಳ ಕುಟ್ಟಿಹಾಕಿ ತನ್ನ ಮೊರೆಹೊಕ್ಕ ವಿಭೀಷಣಗೆ ಪಟ್ಟಗಟ್ಟಿದ 1 ಭಾಗೀರಥಿಯ ತಾಳ್ದ ಮಹೇಶನ ತಲೆ ವಾಗಿಲ ಕಾಯಿಸಿಕೊಂಡಿಹ ಬಾಣನ ತಾಗಿ ತೋಳಕಡಿದ ಸುರನ ಕುಮಾರತಿಗೆ ಭೋಗಿಸುವಂತೆ ತಮ್ಮಗೆ ಕೈವರ್ತಿಸಿ ಕೊಟ್ಟ2 ಲೋಕದೊಳಜಭವಾದಿಗಳಿಂದ ಉಬ್ಬಿದ ಅ- ನೇಕ ರಕ್ಕಸರನೊಟ್ಟಿಗೆ ತಾಹೆನು- ತಾ ಕೊಟ್ಟ ವರವನೆ ಶಿರಮುಟ್ಟಿ ಕೊಂಡಾ ಕರು ಣಾಕರ ವರ ವೇಲಾಪುರಿಯ ಚೆನ್ನಿಗನ 3
--------------
ಬೇಲೂರು ವೈಕುಂಠದಾಸರು