ಒಟ್ಟು 6 ಕಡೆಗಳಲ್ಲಿ , 1 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಈ) ಆತ್ಮನಿವೇದನಾ ಕೃತಿಗಳು ಅಕಟಕಟ ಬಹಳ ಬಡತನವಡಸಿದುದೆ ನಿನಗೆ ಅಕಳಂಕ ಚರಿತ ಹರಿಯೆ ಪ ಪ್ರಕಟತನದಿಂ ಗೋದಾನಕ್ಕೆ ಕೈನೀಡುವರೇ ಸುಖಮಯ ಶರೀರ ಚನ್ನರಾಯಾ ಅ.ಪ ಹಿಂದೆ ಯಜ್ಞದಲಿ ಬಲಿಯಿತ್ತ ಭೂದಾನಕ್ಕೆ ದಂದಿಗೆ ಸಾಲದಾಯಿತೆ ಅಂದು ಕರ್ಣನು ಕೊಟ್ಟ ದಾನವನು ನೀ ಪಿಡಿದು ದಂದಿಗೆ ಸಾಲದಾಯಿತೆ ಇಂದು ನಿನ್ನಯ ದಾಸಾನುದಾಸನು ಕೊಟ್ಟ ಗೋದಾನ ದೊಂದೊಂದು ಗೋಗಳಿಗೆಛಂದದಲಿ ನಿಂದು ದಾನವ ಕೊಂಡೆಯಾ ಸ್ವಾಮಿ 1 ಉರದೊಳಗೆ ಅನವರತ ವಾಸವಾಗಿರುತಿಪ್ಪ ಶರಧಿಸುತೆ ಕೈಬಿಟ್ಟಳೇ ಬೆರೆತು ಪೋದುದೇ ಪಾಲ್ಗಡಲು ಮುನಿಸಿಕೊಂಡು ಬರಡಾಯಿತೇ ಕಾಮಧೇನೂ ತಿರುಕ ಹಾರುವನಂತೆ ಪರಿಪರಿಯ ದಾನಕ್ಕೆ ಭರದಿ ಕೈ ಒಡ್ಡುತಿಹರೆ ಪುರುಷೋತ್ತಮನೆಂಬ ಅಭಿಮಾನವಿನಿತಿಲ್ಲದೇ ದೂರಿಗೊಳಗಾಗಬಹುದೆ ಸ್ವಾಮಿ 2 ಇತ್ತ ದಾನದ ಗೋವುಗಳನೆಲ್ಲ ಗುಡಿಯೊಳಗೆ ಮೊತ್ತದಿಂ ಕೂಡಿಕೊಂಡೂ ಒತ್ತಿ ಮುದ್ರೆಯನು ನಾಮವನಿಟ್ಟು ಬಾಲಗಳಿ ಗೆತ್ತಿ ಘಂಟೆಗಳ ಕಟ್ಟೀ ಅರ್ಥಿಯಿಂ ತೋರಿಸಿ ಯೆನ್ನ ಕುಲಕೋಟಿಗಳಿ ಗಿತ್ತೆ ಸುರಪದವನು ಕರ್ತುೃ ವೈಕುಂಠ ವೇಲಾಪುರಾಧೀಶ್ವರನೇ ಭೃತ್ಯನ್ನ ಕಾಯೊ ಸತತ ಸ್ವಾಮಿ 3
--------------
ಬೇಲೂರು ವೈಕುಂಠದಾಸರು
ಒಲ್ಲೆ ಸಂಪದವನೆಲ್ಲವನು ತೆಗೆದುಕೊ ಚೆಲ್ವ ವೇಲಾಪುರೀಶಾ ಸ್ವಾಮಿ ಪ ಬಲ್ಲವರು ನಿನಗೆ ಸರಿಯಿಲ್ಲೆಂದು ಪೊಗಳುತಿಹ ಸೊಲ್ಲ ನಾ ಕೇಳಲಾರೆ ಸ್ವಾಮಿ ಅ.ಪ ಪೆತ್ತಯ್ಯ ತಿರುಮಲಾರ್ಯರು ವರ್ಣಕರ ಚಕ್ರ ವರ್ತಿಯೆಂಬಾ ಬಿರುದನು ಒತ್ತಿ ಪೊಗಳಿಸಿಕೊಂಡುದೇನಂದದಲಿ ತಿರು ಗುತ್ತಿರ್ದಡೇನು ಭಾಗ್ಯಾ ಮತ್ತದೆನಗಾರ್ಜಿತವೆ ಸತ್ತವರ ಸಂಪದವ- ನತ್ತಲೇ ಕಳುಹಿಕೊಡದೆ ಇತ್ತಪರೆ ನಿನ್ನ ದಾಸನುದಾಸರಿಗೆ ಸೇ ವ್ಯೋತ್ತಮನೆ ಕೆಡಿಸಬೇಡಾ ಸ್ವಾಮಿ 1 ಹರಿಯೆ ನೀ ಒಲಿದೂಳಿಗವನು ಮಾಡಲು ಬಳಿಕ ಕಿರುನುಡಿಯ ಮೀರದಿರಲು ಕರುಣದಿಂದಾಗಾಗ್ಯೆ ಕರೆದುಡುಗೊರೆಯ ಕೊಡಲು ಬಿರುದುಗಳು ಮೆರೆಯುತಿರಲೂ ಸ್ಥಿರವಿಲ್ಲದಷ್ಟ ಮಹದೈಶ್ವರ್ಯವಿರುತಿರಲು ಪಿರಿಯರೆಲ್ಲರು ಪೊಗಳಲೂ ಮೆರೆಯನೇ ಮಿಗೆ ಅಹಂಕರಿಸನೇ ಬೆರೆಯನೇ ನರಕಕಿಳಿಯನೇ ಮರಳಿ ಜನಿಸನೇ ಸ್ವಾಮಿ 2 ಸುಖವಿಲ್ಲ ಸುಖವಿಲ್ಲ ಸುಖವಿಲ್ಲ ಭಾಗ್ಯದಾ ಸಕರೆಯನು ನಾನೊಲ್ಲೆನೂ ಭಕತವತ್ಸಲನೆ ಭಾಗವತಲೋಲುಪನೆ ದುಃ ಖಕೆ ಕಾರಣವಿಲ್ಲವೆ ಅಕಳಂಕ ಚರಿತನೆ ಆದಿನಾರಾಯಣನೆ ಮಕರಧ್ವಜನ ತಾತನೆ ಸುಖವೀಯೊ ವೈಕುಂಠ ವೇಲಾಪುರಾಧೀಶ ಭಕುತಿಯನು ಕೊಟ್ಟು ಸಲಹೊ ಸ್ವಾಮಿ 3
--------------
ಬೇಲೂರು ವೈಕುಂಠದಾಸರು
ಒಲ್ಲೆನೀ ಕವಚ ಕುಂಡಲಗಳನ್ನು ಒಲ್ಲೆ ನಾನು ಕಿರೀಟ ಪಾದುಕೆಗಳನ್ನು ಪ ಹಗಲು ಹಾದರಗಿತ್ತಿಯಂತಿಪ್ಪ ಮನುಜನಿಗೆ ಸೊಗಸುವುದು ಸೊಗಸದೆಂಬರುಹಿಲ್ಲದೇ ಜಗದುದರ ನಿನ್ನಿಂದ ಶೋಭಿಸುವನಘ್ರ್ಯದ ವ ಸ್ತುಗಳ ಎನಗೀಯಲೇತಕೆ ಮೆಚ್ಚಿದೆಯೋ ದೇವ 1 ನೋಡಲೆವೆ ಸೀವುದಿದನಿಟ್ಟು ಕೈಕೊಂಡ ಪ್ರಾಣ ಗೂಡಿನೊಳಗಿಹುದೇ ಅಕಟಕಟ ಹರಿಯೇ ಬೇಡವೀ ಮಾಯ ಕೃಪೆಯಿಂದ ಸದ್ಭಕುತಿಯ ಜೋಡ ತೊಡಿಸಿದನೊಲ್ಲೆ ಕಾಡಬೇಡವೋ ದೇವ 2 ಶಿರಕೆ ಕರ್ಣಕೆ ಚರಣಗಳಿಗೆ ಕಥೆಯನ್ನು ಪೇ ಳ್ದೆರಗುವುದನೊಲಿದು ಕುಣಿದಾಡುವುದನು ಕುಂಡಲ ಕಿರೀಟಗಳನು ವರ ಪಾದುಕೆಗಳ ನಾನೊಲ್ಲೆ ಹರಿಯೇ 3 ನಿನ್ನ ದಾಸಾನುದಾಸ ದಾಸರ ಗುಣಾರ್ಣವದೊ ಳೆನ್ನೊಳೆಳ್ಳನಿತುಂಟೆ ಅಕಟಕಟ ಹರಿಯೇ ಬನ್ನಬಡಿಸಲು ಬೇಡ ದಕ್ಕದೀಯುಡುಗೊರೆಯು ಚುನ್ನವಾಡುವರು ಧಾತ್ರಿಯ ಮನುಜರೆಲೆ ದೇವ 4 ಇದನು ಕೊಡಬೇಕಾದಡೆಯು ಮುಕ್ತ್ಯಾಂಗನೆಯ ಮದುವೆಯನು ಮಾಡಿ ಯಾಬಳಿಕನಿತ ವೊದವಿಸುವುದುಚಿತ ಒಪ್ಪಂದವಾಗಿಹುದು ಚದುರ ವೈಕುಂಠ ವೇಲಾಪುರಾಧೀಶ 5
--------------
ಬೇಲೂರು ವೈಕುಂಠದಾಸರು
ಕಂಡೆನದ್ಭುತ ಮೂರ್ತಿಯನೂ ಹಿಂಡು ದೈವದಗಂಡ ವೇಲಾಪುರಾಧೀಶನನು ಪ ಪರಮಪದನಾಥ ಜಯ ಪರಮಪುರುಷನೆ ಜಯ ಮರಮೇಷ್ಠಿಜನಕಜಯ ಪರಮಪಾವನನೆ ಜಯ ಪರಮ ಸುಖವಾರ್ಧಿಜಯ ಪರಮಸುಜ್ಞಾನಿ ಜಯ ಪರಮ ಶುಭಗಾತ್ರಜಯ ಪರಮಸಂತೋಷಿ ಜಯತು 1 ಪರಮಸ್ವತಂತ್ರಜಯ ಪರಮ ಕಾರಣನೆಜಯ ಪರಮತ್ರಿಗುಣಾತ್ಮಜಯ ಪರಮಪಂಡಿತನೆ ಜಯ ಪರಮಗುರುವರ್ಯಜಯ ಪರಮಮುನಿವಂದ್ಯಜಯ ಭಾಗವತ ಪ್ರಿಯ ಜಯಜಯತು2 ಸರ್ವೋತ್ತಮನೆ ಜಯಜಯತು ಸ್ವಾಮಿ ಕರಿರಾಜವರದ ಜಯಜಯತು ಹರಿಯೇ ಅರವಿಂದನಾಭ ಜಯಜಯತು ಅಸುರ ಶರಧಿ ಬಡಬಾನಲನೆ ಜಯಜಯತು 3 ತರಳನ ಕಾಯ್ದವನೆ ಜಯಜಯತು ಶಿಶುವು ಕರೆಯೆ ಬಂದವನೆ ಜಯಜಯತು ತಪವ ಚರಿಸಿದನ ಕಾಯ್ದವನೆ ಜಯತು ನಿಜ ಶರಣರಿಗೆ ಪದವನಿತ್ತವನೆ ಜಯಜಯತು 4
--------------
ಬೇಲೂರು ವೈಕುಂಠದಾಸರು
ಪಾಪಾತ್ಮನಾನಲ್ಲ ಪಾಪವೆನಗಿನಿತಿಲ್ಲ ಶ್ರೀಪತಿಯೆ ನಿನಗೆ ನೀನೇ ಮಾಡಿಕೊಂಡೆ ಪ ಅಂದು ಭೃಗುಮುನಿಯೆದೆಯಲೊದೆಯಲವನಿಗೆ ಪಾಪ ಬಂದುದೇ ಮೂದಲಿಸಿ ಬೈದವನಿಗಾ ದೋಷವು ನಿಂದುದೇ ಹಣೆಯೊಡೆಯಲೆಸೆದ ಭೀಷ್ಮಂಗಘವು ಹೊಂದೀತೆ ಪಾಂಡವರ್ಗೆ ಕುಂದು ಬಂದೀತೆ ದೇವಾ 1 ವರದನಾಕಾರದೊಳಗುಷ್ಣಜಲ ಮೃತ್ತಿಕೆಯ ತರಲು ಕೈಸುಡಲು ಹಣೆಯನು ಟೊಣದು ಬೈದೇ ಮರಳಿ ನಾಚಿಕೆಯಿಲ್ಲದೆ ಚರಣಕ್ಕೆ ಪಾವುಗೆಯ ನಿರಿಸಿದಪರಾಧ ನಿನ್ನದೋ ಯೆನ್ನದೋ ದೇವಾ 2 ಕುರುಡನಿಗೆ ದಾರಿಯನು ತೋರುವಾಪ್ತನು ಮುಳಿದು ಜರಿದು ನೂಕಿದೊಡಾತನೇನ ಮಾಡುವನೂ ಗುರಿಯನಿಡುವವನು ತಪ್ಪೆಸೆಯೆ ಸರಳಿನದೇನು ಅರಸಾಳಕೊಂದಡವನೇನು ಮಾಡುವನೂ 3 ಕುಣಿಸಿದಂತಾಡುವುದು ಬೊಂಬೆಯು ಸ್ವತಂತ್ರವದ ಕಿನಿತುಂಟೆ ಕಪಟನಾಟಕ ಸೂತ್ರಧಾರೀ ಎನಿತಾಡಿಸಿದೊಡಾಡುವೆನು ಪಾಪಪುಣ್ಯವೆಂ ಬೆಣಿಕೆಗಾನಲ್ಲ ನೀನಲ್ಲದೆಲೆ ದೇವಾ4 ತಂದೆ ತಾಯ್ಗಳು ತಮ್ಮ ಕಂದನನು ಸರ್ಪಮುಖ ದಿಂದ ಕಚ್ಚಿಸಲು ತರಳನಲಿ ತಪ್ಪೇನೂ ಮುಂದರಿಯದಜ್ಞಾನಿಯೆಂದು ನೀಕ್ಷಮಿಸಿಕೋ ತಂದೆ ವೈಕುಂಠ ವೇಲಾಪುರಾಧೀಶಾ 5
--------------
ಬೇಲೂರು ವೈಕುಂಠದಾಸರು
ಶ್ರೀರಂಗ ಯಾತ್ರೆಯನು ಮಾಡಿಬಾರೆಂದೆನ್ನ ಈ ರೀತಿಯನುವ ಮಾಡಿದೆಯ ಸ್ವಾಮಿ ಪ ಕಾರುಣ್ಯನಿಧಿಯೆ ವೇಲಾಪುರಾಧೀಶ್ವರನೆ ಆರುಣ್ಯದೊಳು ಕೆಡಹಿದೆಯ ಸ್ವಾಮಿ ಅ.ಪ ದಾರಿಯನು ತೋರಲೈತಂದ ಶ್ರೀವೈಷ್ಣವನು ಸೇರಿಸಿದ ನೀಯಡವಿಯಸ್ವಾಮಿ ಕಾರುಗತ್ತಲೆ ಸುರಿವ ಮಳೆಯ ಸಿಡಿಲಿನ್ನೆಲ್ಲಿ ಸೇರುವೆನು ಈ ಗಿರಿಯೊಳೂ ಸ್ವಾಮಿ 1 ನಾರಿ ಮಕ್ಕಳು ಭೃತ್ಯರೆಲ್ಲಿ ಪೋದರೋ ಯೇನು ಕಾರಣಬಂದೆನಯ್ಯ ಸ್ವಾಮಿ ಭೂರಮಣ ತ್ರಿಭುವನಾಧಾರ ನೀ ನಲ್ಲದಿ ನ್ನಾರು ಕಾವರೆನ್ನನು ಸ್ವಾಮಿ 2 ಘುಡಿಘುಡಿಸುತಲಿವೆ ಪುಲಿ ಕರಡಿ ಸುತ್ತಲು ಭೋ ರಿಡುತಲಿವೆ ಭಕ್ಷಿಸುವಡೇ ಸ್ವಾಮಿ ಬಿಡದೆ ಕರಿಗಳು ಕೂಗಿ ಕಂಗೆಡಿಸುತಲಿವೆ ಇದೇ ಕಡೆಗಾಲವಾಯಿತೆಲ್ಲೋ ಸ್ವಾಮಿ 3 ನಡೆವರೆಡೆಗಾಣೆ ಇಲ್ಲಿರುವುದಾಗ ದಾಗದು ಕಷ್ಟ ಬಡುವುದಕೆ ಗುರಿಯಾದೆನೇ ಸ್ವಾಮಿ ಎಡಬಲಕ್ಕೊಲೆಯೆ ಕಪ್ಪು ಕಲ್ಲು ಮುಳ್ಳುಗಳಿದೆಕೋ ಒಡೆಯ ಕೈವಿಡದೆ ಸಲಹು ಸಲಹೋ ಸ್ವಾಮಿ 4 ಒಂದೆಸಗಲೇಳಡಸಿತೆಂದು ಪೇಳುವ ನುಡಿಗೆ ಸಂದು ಬಸವಳಿದೆನೆಲೋ ಸ್ವಾಮಿ ಇಂದು ಸಂಧ್ಯಾ ಗಾಯತ್ರಿ ಕರ್ಮವುಳಿದುದರ ವಿಂದಾಕ್ಷ ಸುಮ್ಮನಿಹರೇ ಸ್ವಾಮೀ 5 ಎಂದೆಂದು ಮಾತನಾಡುವನಾಥರಕ್ಷಕನೆ ಬಂದುದೀಗೇನು ಸಿರಿಯು ನಿನಗೇ ಬಂಧನವ ಬಿಡಿಸು ದುರ್ಮರಣದಲಿ ಕೊಲ್ಲದಿರು ತಂದೆ ವೈಕುಂಠ ರಮಣಾ ಸ್ವಾಮೀ 6
--------------
ಬೇಲೂರು ವೈಕುಂಠದಾಸರು