ಒಟ್ಟು 16 ಕಡೆಗಳಲ್ಲಿ , 8 ದಾಸರು , 12 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಥವನಲ್ಲಾ ಕಾಣಿರೇ ಸಂತತ ತೃಪ್ತಾ ಪ ಹಸಿದರೆ ಬಂದು ಬೇಡಿ ತುಸು ಹಾಲು ಕೊಳ್ಳಲರಿಯಾ ಮೊಸರಾಲು ಕುಡಿಯ ಬಲ್ಲನೇ ನಮ್ಮ ಶ್ರೀರಂಗಾ 1 ಗಡಿಬಿಡಿಯನ್ನಾಲಾಗ ವಡನೆಂಜಿಸಾರುವ ಕಡೆವ ಬೆಣ್ಣೆಯ ಮೆಲುವನೇ 2 ತರಳರ ಕೂಡ ಹೋಗಿ ಬರಲು ಹಾದಿ ತಪ್ಪವ ಕೇರಿ ಕೇರಿತಿರುಗಬಲ್ಲನೇ 3 ಹೊಸ ಮೋರೆ ಕಾಣಲು ಕುಸಿದು ತಲೆ ಭಾಗುವ ವಿಷಯಕ್ಕೆ ನಿಮ್ಮ ಯಳೆವನೇ 4 ಅಡಿಯಿಡ ವುತ-ಕಾಲ ತೊಡಕಿತಾ ಬೀಳುವಾ ತುಡುಗದಿ ಓಡ ಬಲ್ಲನೇ 5 ಹಡೆದಾ ಮಕ್ಕಳು ನಿಮಗ ಪೊಡವಿಯೊಳಿಲ್ಲವೇನೇ ಬಿಡ ನುಡಿಗವ ಸಲ್ಲನೇ 6 ಗುರು ಮಹಿಪತಿ ಸ್ವಾಮಿ ಸರಸಾಟಕವತಾಳಿ ಚರಿಸುವ ಅಂತದೋರನೇ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎಲೆ ದೇವಿ ಇಂತು ಚಿಂತೆಯು ಯಾಕ| ಸುಲಭದಿ ತಂದು ತೋರುವೆ ನಿನ್ನರಸನಾ ಪ ನಳಿನಗಳಲಿ ಅಪರಾಧವಾಯಿತೆಂದು| ಮುಳಿದು ಬಿಂಕದಿ ಅಳಿಮೊರೆದು ತಾನೆದ್ದು| ಕಲಸಾರುವೇನೇ ನಿನ್ನಯ ತನುಗುಪವ| ತೊಲಗಿಬಿಟ್ಟು ನಿಲ್ಲುವನೇನೇ ರಂಗಾ1 ಹಣ್ಣಾಗಿ ರಂಜಿಸತಿಹಾ ಚೂತದ ಫಲವನ್ನು| ತ್ಯಜಿಸಿ ಬಂದ ತಪ್ಪಾಯಿತೆಂದು| ಉಣಲೋಲ್ಲದೇ ಶುಕಬಿಟ್ಟು ಪೋಪದೇನೇ| ಪೊಂಬಣ್ಣಾಧರಸವಿಯಾ ಬಿಟ್ಟು ನಿಲ್ಲುವನೇ2 ಘನ್ನ ಚಿಂತೆಯಬಿಟ್ಟು ಹರುಷದಲಿರು ತಾಯೆ| ಇನ್ನು ನಾ ಪೋಗಿ ನಾನಾ ಪರಿಯಿಂದಾ| ನಿನ್ನ ಬಳಿಗೆ ಒಪ್ಪಂತೆ ಮಾಡುವೆನೆ ಸಂ| ಪನ್ನ ಕೀರುತಿ ಮಹಿಪತಿ ಸುತ ಪ್ರೀಯನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕದವ ತೆಗೆಯಲ್ಹ್ಯಾಂಗ ಮಧ್ಯರಾತ್ರಿಯಲಿ ಚದುರ ನಿನ್ನ ಗುರ್ತು ಪೇಳು ಮೊದಲಿನಲಿ ಪ ನೀರ ಪೊಕ್ಕು ವೇದವನ್ನು ತಂದಿಹೇನೇ ಭಾರವನ್ನು ಬೆನ್ನಿನಲ್ಲಿ ಪೊತ್ತಿಹೇನೇ ಕೋರೆಯ ಮ್ಯಾಲಿಳೆಯನ್ನಿಟ್ಟಿಹೇನೇ ಕೋರೆದಾಡಿಯಿಂದ ದನುಜನಳ್ದಿಹೇನೇ 1 ದಾನಬೇಡಿ ಬಲಿಯನ್ನೊತ್ತಿಹೇನೇ ಮಾನ್ಯವೆಂದು ತಾಯಶಿರ ಛೇದಿಸಿಹೇನೇ ದಾನವನ ಪತ್ತುತಲೆಯರದಿಹೇನೇ ದಾನಮಾಡಿ ದೇಹವನ್ನು ಮೆರದಿಹೇನೇ 2 ಬತ್ತಲ್ಯಾಗೆ ಬೌದ್ಧನೆನಿಸುವೇನೇ ಕುದುರೆಯಾಗಿ ಧಕ ಧಕ ಕುಣಿಸುವೇನೇ ಅಧüರಪಾನವನ್ನು ನಾ ಬಯಸಿಹೇನೇ ಚದುರ ನರಸಿಂಹವಿಠಲನೆನಿಸುವೇನೇ 3
--------------
ನರಸಿಂಹವಿಠಲರು
ಜಗಕ್ಕಿಂತ ಭಾರವೇನೊ ನಮ್ಮ ರಂಗ ನಗಕ್ಕಿಂತ ಗಾತ್ರನೇನೋ ಪ ಜಗಕ್ಕಿಂತ ಭಾರವೇನೋ | ಖಗಪೊತ್ತು ತಿರುಗಲೆ[ೀಕೆ] ನಗದ ಮೇಲೇ ಕುಳಿತಿಹ ಭಾರ ಜಗಂಗಳ ಹೊರುತಲಿ ನಲಿವವನಿವನೇ ನಗಗಳ ಬೆರಳಲಿ ಎತ್ತಿದನಿವನೇ ಖಗಮೃಗಗಳಿಗೆ ಒಲಿದವನಿವನೇ1 ತೃಣಕ್ಕಿಂತ ಹಗುರನೇನೋ ರಣದೆ ರಾವಣನ ಕೊಂದೆ ಮಣಿಗಿಂತ ಸಣ್ಣನೇನೋ ಧರಣಿಯನಳೆದೈತಂದೆ ತೃಣಕ್ಕೆಲ್ಲಾ ತೃಣರೂಪಾಗಿಹನು ಮಣಿಗೆಲ್ಲಾ ಶ್ರೀಮಣಿಯಾಗಿರುವ ಸ ದ್ಗುಣಿಗಳಿಗೆ ಕರುಣಿಯು ಇವನು 2 ಎಲ್ಲೆಲ್ಲು ಇರುವನೇನೋ ನಮ್ಮ ರಂಗ ಎಲ್ಲಿಯೂ ಇರುವನೇನೇ ಅಲ್ಲಲ್ಲಿ ಇರುವ ರಂಗ ಎಲ್ಲೆಲ್ಲು ಇಲ್ಲವೇನೇ ಅಲ್ಲಲ್ಲಿ ಅಂತರಂಗ 7 ಬಲ್ಲಿದರೆಲ್ಲ ಬಲ್ಲರು ಇವನ ಕಲ್ಲೆಂಬುವರಿಗೆ ಇವನು ಇಲ್ಲದ ತಾಣವೊಂದಿಲ್ಲವು ಭಕ್ತಿಯ ಸೊಲ್ಲಿಗೆ ಸೋಲುವ ಮಾಂಗಿರಿರಂಗ 8
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ತುಂಗಭದ್ರ ನದಿ ತೀರದಿ ನೆಲಸಿಹನ್ಯಾರೆ ಪೇಳಮ್ಮಯ್ಯ ಪ. ರಂಗ ತಾನು ಇಲ್ಲಿರುತಿಹನಮ್ಮ ಅ.ಪ. ಶಂಖ ಚಕ್ರ ತ್ರಿಶೂಲವ ಧರಿಸಿಹನ್ಯಾರೇ ಪೇಳಮ್ಮಯ್ಯ ಶಂಕಿಸದಂದದಿ ತೋರುವನಮ್ಮ 1 ಈ ಪರಿರೂಪವ ಧರಿಸಲು ಕಾರಣವೇನೇ ಪೇಳಮ್ಮಯ್ಯ ಈ ಪರಿರೂಪವ ಧರಿಸಿಹನಮ್ಮ 2 ಪರಿ ಶುದ್ಧ ಸಾತ್ವಿಕರಿಗೆ ಹ್ಯಾಗೇ ಪೇಳಮ್ಮಯ್ಯ ಶುದ್ಧ ಜ್ಞಾನವನಿತ್ತು ಸಲಹುವನಮ್ಮ 3 ವಿಷ್ಣು ಭಕ್ತರ ಮನಸಿಗೆ ತೋರುವ ಮತಿ ಏನೇ ಪೇಳಮ್ಮಯ್ಯ ಬಿಟ್ಟಿರಲಾರದ ಗುಟ್ಟು ಕಾಣಮ್ಮ 4 ಪರಿ ಲೀಲೆ ಇದೇನೆ ಪೇಳಮ್ಮಯ್ಯ ಹರಿಯು ತಾನು ಒಲಿಯನು ಕಾಣಮ್ಮ 5 ಪರಿ ಹ್ಯಾಗೇ ಪೇಳಮ್ಮಯ್ಯ ಪರಿ ಧರಿಸುವದೊಂದರಿದೇನಮ್ಮ 6 ಹರಿಹರ ಕ್ಷೇತ್ರದಿ ನೆಲಸಿಹ ಸ್ವಾಮಿಯ ಭಜಿಸುವದ್ಹ್ಯಾಗೇ ಪೇಳಮ್ಮಯ್ಯ ಕರಕರೆ ಭವವನು ಕಳೆಯಬೇಕಮ್ಮ 7 ಶ್ರೀಸತಿ ಪಾರ್ವತಿ ಸಹಿತದಿ ನೆಲಸಿಹನ್ಯಾರೇ ಪೇಳಮ್ಮಯ್ಯ ಶೇಷಭೂಷಣ ಸಹ ಶ್ರೀನಿವಾಸ ಕಾಣಮ್ಮ 8
--------------
ಅಂಬಾಬಾಯಿ
ನೀಲವರ್ಣ ಗೋಪಾಲನು ಎಲ್ಲೆ ಕಾಣಿರೇನೇ ವ್ರಜದ ಒಳಗೆ ಲೀಲಿ(ಲೆ ಇ?) ದೇನೆ ನಮ್ಮ ಸಂಗಡ ಹೇಳೇ ಗೋಪ್ಯಮ್ಮ 1 ಚಿಣ್ಣಿಕೋಲು ಚೆಂಡು ಬುಗುರಿ ವೇಣುಕೊಳಲಧ್ವನಿಯ ಆಲಿಸಿ ಓಣಿ ಓಣಿ ಹುಡುಕಲು ನಂದ- ಸೂನು ಎಲ್ಲಿಹನೆ 2 ಗೋಪಿ ಗೋಪಾಲ ಕೂಡಿ ಧಾಳಿ ಮಾಡ್ವುದು ದಾರಿಗೆ ತರವೆ ಗೂಳಿಮಾಡಿದಿ ಗೋಕುಲದೊಳು ನಿನ- ಗ್ಹೇಳುವುದಿನ್ನೇನೆ 3 ನವನೀತ ದಧಿ ಘೃತ ಸುರಿದೋಡಲು ನೀ ಸುಮ್ಮನೆ ಬಿಟ್ಟು ಯಾತಕೆ ಹಿಡಿತಾರದೆ ದೂರ್ಹೇಳುವಿ ಈ ಮಾತು ನಿರ್ಧಾರವೇನೆ 4 ಹೆತ್ತತಾಯಿ ನೀ ಬಳಲುವಿ ಎಂದು ಸಿಕ್ಕೊರಳಿಗೆ ಕಟ್ಟಿಸಿ ಕೊಂಡೆಳೆದು ಸಿಕ್ಕುವುದುಂಟೇನೆ 5 ವಜ್ರದ್ಹಾರ ಪದಕ ಹÉೂನ್ನರಳೆಲೆ ಗೆಜ್ಜೆ ಕಾಲಂದಿಗೆ ಝಳಿ ಝಳಿಸುತ ಮೂರ್ಜಗದೊಳು ಮುದ್ದಿರಲೀಕೂಸ್ಹೊರ- ಗ್ಹೆಜ್ಜೆನಿಡುವುದೇನೆ 6 ಶಿಶುವೇನೇ ಅಸುವ್ಹೀರಿ ಪೂತನಿ ಕೇಶಿ ಧೇನು ತೃಣಾವರ್ತ ಶಗಟಾಸುರ ಬಕನ ಕೊಂದವಗೆಂತು ನೀ ಅರ್ಭಕ- ನೆಂತಾಡುವಿಯೆ 7 ಹೆಡೆಯ ತುಳಿದ ಕಾಳಿಂಗನ ಮಡುವ ಕಲಕಿದ ಕಡುವಿಷಕಂಜದೆ ಹುಡುಗರ ಕಾರ್ಯವಿದೇನೆ ಬಿಡು ನಿನ್ನ ಬಡಿವಾರವು ಸಾಕೆ 8 ಕಾಡುಕಿಚ್ಚನು ನುಂಗಿದ ನಿನಸುತ ಬೇಡಿಯಜ್ಞದೊಳುಂಡನ್ನವನು ಸಾಲದೆ ಇಂದ್ರನ ಪುರವುಂಡ್ಹೊಟ್ಟೆ ಗಿ- ನ್ನೀಡೆಲ್ಲಿಹುದ್ಹೇಳೆ 9 ಶಕÀ್ರನ ಬಲಿ ಅನ್ನವ ದಕ್ಕಿಸಲವ ಸಿಟ್ಟಲಿ ಸಪ್ತದಿನ ಮಳೆಕರೆಯೆ ಎತ್ತಿ(ದ) ಗೋವರ್ಧನಗಿರಿ ನಮ್ಮದಾರಿ- ಚ್ಚೆಗೆ(?) ಸಲಹುವನೆ 10 ಕಾತ್ಯಾಯಿನಿ ವ್ರತಮಾಡೋ ಸ್ತ್ರೀಯರ ವಸ್ತ್ರಗಳನೆ ಕದ್ದು ಮರನೇರಿದ ಬತ್ತಲೆ ಚಪ್ಪಾಳಿಕ್ಕುತ ತಿರುಗಲಿನ್ನೆ- ಷ್ಟಂತ್ಹೇಳುವೋಣೆ 11 ಚೋರತನವೊಂದಲ್ಲದೆ ಕಲಿತಿಹ ಜಾರತನ ಕೇಳರಿಯೆ ಯಶೋದ ನೀರುತಿದ್ದುವ ಎಲ್ಲರ ಒಗತನಕಿವ ಪಾರುಗಾಂಬುವುದ್ಹ್ಯಾಗೆ 12 ಗಂಡರುಳ್ಳ ಗರತಿಯೇರೆನ್ನದೆ ಪುಂಡೆಬ್ಬಿಸಿ ಬೃಂದಾವನದೊಳಗೆ ಬಂದಮ್ಮನ ಹಿಂದಡಗಲು ನಿನಗೆ ಮುದ್ದಿನ್ಯಾರಿಗೆ ಹೇಳೆ 13 ಮಾಧವ ತಾ ಕೊಳಲೂದು- ತಿರೆ ನಾವು ಮೋಹಿತರಾಗಿ ಹೋದ ಸುದ್ದಿಗಳೊಂದ್ಹೇಳೆ ಲಜ್ಜೆ ಬಾ- ಹೋದೆ ನಮಗಿನ್ನು 14 ಬಳೆ ಬಾಪುರಿ ಕಂಕಣ ಚೂಡ್ಯ ಗಳನು ತೊಡೆಗÉೀರಿಸಿ ಕಾಲಂದಿಗೆ ಕರದಿ ಕಾಲುಂಗುರ ಕಿವಿಗಿಟ್ಟು ಬಾವುಲಿ ಪಾದದಿ ರಚಿಸಿದೆವೆ 15 ಹೊನ್ವಾಲೆ ಹೊಸಕೊಪ್ಪು ಮೂಗುತಿ ಚಿನ್ನದ ಒಡ್ಯಾಣದ ನಡುವಿಟ್ಟು ಕಣ್ಣಿಗೆ ಕಸ್ತೂರಿಬಟ್ಟು ಕುಂಕುಮ ಕಾಡಿಗೆ ನೊಸಲಿಗೆ ರಚಿಸಿ 16 ಬಿಟ್ಟಮಂದೆ ಕಟ್ಟದೆ ಕರುಗಳ ತೊಟ್ಟಿಲೊಳಗಿಟ್ಟು ಶಿಶುವಿಗೆ ಕಣ್ಣ ್ಹ(ಣ್ಣಿ ಹ?)ಚ್ಚಿ ನಾವೆಚ್ಚರಿಕಿಲ್ಲದೆ ಪೋದೆವೆ ಅಚ್ಚುತನಿದ್ದೆಡೆಗೆ 17 ಬಂದವರನೆ ಮನ್ನಿಸದೆ ನಿನಸುತ ಅ- ಲ್ಲಿಂದೊಬ್ಬಳ ಹೆಗಲೇರಿಸಿ ಪೋಗೆ ಹಿಂದಾಲ್ಪರಿದ್ವನವನಿತೆಯರ್ಕೂಡಿ ಬಂದೆವ್ಯಮುನೆ ದಡಕೆ18 ಇಬ್ಬರಿಬ್ಬರ ನಡುವೆ ನಿನಸುತ ಒಬ್ಬನಾಗಿ ಜಲದ ಒಳಗೆ ಅಬ್ಬರದಿಂದಾಡಲು ಜಲಕ್ರೀಡೆ ಕ- ಣ್ಗ ್ಹಬ್ಬವಾಗಿರೆ ಜನಕÉ 19 ಗೋಪಿ ಗೀತವಿದೆಂದು ನಿನಸುತ ಖ್ಯಾತಿ ಮಾಡಿದ ಜಗದ ಒಳಗೆ ಯಾತಕೆ ಕೂಸೆಂದಾಡುವೆ ತಿಳಿ ನಿನ್ನ ಪ್ರೀತಿ ಮೋಹಗಳೆಂದು 20 ಅಂಕದಲ್ಯಾರೋಪಿತನಾಗೆ ಶÀಂಕಿಲ್ಲದೆ ಹಾರ ಭಾರವನೆ ತಾಳಿದೆ ಬಿಂಕವ ಬಿಡು ಮಗನೆಂದಾಡುವುದು ಈ ಮಂಕು ಬುದ್ಧಿಗಳಿನ್ನು 21 ಮಗುವೇನೆ ಹೃದಯದೊಳ್ಹದಿನಾಲ್ಕು ಜಗವ ಕಂಡು ನೀ ತೆಗೆಯದೆ ನೇತ್ರ ಜಗಜಗಿಸುವ ಚಂದ್ರಮನಂಗೈಯಲಿ ಈ ಬಗೆ ನಿನಗರಿಕಿಲ್ಲೆ 22 ಗೋಪಾಂಗನೆಯರಾಡುವ ಮಾತು ಕೋಪದಿ ಕೇಳುತಲೆಶೋದೆ ಗೋಪಾಲಕೃಷ್ಣ ನಿನ್ನೆಲ್ಲಿ ಕಳುಹಲೆಂದಳು 23 ದುಷ್ಟ ಕಾಲನೇಮಿ ಕಂಸನು ನಿನ್ನ ಕರೆಯಕಳುಹಲು ಕರಕರೆಯಾಕೋ ನಾರಾಯಣ ನಿನ್ನಟ್ಟುವೆ(ವು) ಮಧುರೆಗೆ ನಾವೆಲ್ಲರು ಕೂಡಿ 24 ದುಷ್ಟತನವ ಬಿಡೋ ಭೀಮೇಶ- <ಈಔಓಖಿ s
--------------
ಹರಪನಹಳ್ಳಿಭೀಮವ್ವ
ಬಾರೆನ್ನ ಸಖಿಯೇ ಕರೆದು ತೋರಿಸೇ ಪ ಕರೆದು ತೋರಿಸೇ ಕಂಜನಯ್ಯಾನಾ| ಕರಿವರ ದಾಯಕ ಕರುಣಾ ಸಾಗರನಾ 1 ಸರಸಿಜ ಲೋಚನ ಮುಕುಟ ಕುಂಡಲನಾ| ಕೌಸ್ತುಭ ಕೇಯೂರ ಧರನಾ 2 ಮದನ ಶರಕ ಗುರು ಮಾಡುವರೇನೇ| ಮಧುಹರ ಮುನಿವದು ಉಚಿತ ವೇನೇ 3 ಒಂದರಗಳಿಗೆಯ ಮರೆದಿರ ಲಾರೆ| ಇಂದು ನೀ ಧನ್ಯಳ ಮಾಡಲೆ ನೀರೆ4 ಬೆರೆದು ಬಿಡುವನಲ್ಲಾ ಸಕಲಂತರ್ಯಾಮಿ| ನೆರೆದನು ಗುರು ಮಹಿಪತಿ ಸುತಸ್ವಾಮಿ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಿದ್ದೆ ನಿಮ್ಮಯ ಪಾದದಲ್ಲಿ ನಾ ಪ ಮಧ್ವರಾಯರ ಮನದಲ್ಲಿ ಇದ್ದು ವಲಿವ ವೇದವ್ಯಾಸ ಅ.ಪ. ವೇದ ಓದದ ಶುದ್ಧ ಕಳ್ಳನಾ ಮೆದ್ದು ಮೆಲ್ಲುತ ವೃದ್ಧನಾದೆ ಭಲ್ ಗದ್ದ ದಾಸಗೆ ಕರುಣದಿ ತೋರಿ ಉದ್ಧರಿಸುವ ಬಗೆ ಬಲ್ಲೀ 1 ಅನ್ಯದೇವರ ನಾ ನೊಲ್ಲೆ ನಿನ್ನ ಪಾದವ ಬಿಡಲೊಲ್ಲೆ ಘನ್ನಕರುಣಿ ನೀನು ಬಲ್ಲೆ ನಿನ್ನ ಬಿಡಲು ಜಗಕಲ್ಲೇ 2 ಉತ್ತಮೋತ್ತಮ ದೇವ ಸತ್ಯ ಭೃತ್ಯಜೀವನು ಎಂಬೆನಿತ್ಯ ಭಕ್ತ ಪ್ರಥಮ ಪ್ರಾಣನೀನೇ ಮುಕ್ತಿನಿನ್ನಾಧೀನವೇನೇ 3 ವಿಧಿ ಪರಿವಾರ ಎಂದೆಂದಿಗೂ ಭಿನ್ನರೇನೇ ಎಂದೆಂದು ಅಧೀನರೇನೇ 4 ಶ್ರೀಕೃಷ್ಣವಿಠಲ ಏಕ ಸಕಲ ದೋಷ ವಿದೂರ ಪೊರೆಯೋ ಎಂದು ಕೂಗಿ 5
--------------
ಕೃಷ್ಣವಿಠಲದಾಸರು
ಭಗವಂತನ ಸಂಕೀರ್ತನೆ ಗೋಪಿ ಚೆಂದವೇನೇನಿನ್ನ ಮಗನ ದುಡುಕು - ಚೆಂದವೇನೇ ಪ ಚೆಂದದಿಂದಲಿ ಅರವಿಂದಾಕ್ಷ ಬೆಣ್ಣೆಯ ತಿಂದು ಬೇಗದಿ ಕೃಷ್ಣ ಬಂದೋಡಿ ನಿಂತನೆ 1 ಸದ್ದು ಮಾಡದೆ ಪಾಲು ಕದ್ದು ನಮ್ಮನೆಯೊಳಗಿದ್ದ ಸ್ತ್ರೀಯರನೆಲ್ಲ ಮುದ್ದಾಡಿ ಪೋದನೆ 2 ಪಾದ ಸೇರಿದೆ ನಾನೀಗ 3
--------------
ವೆಂಕಟೇಶವಿಟ್ಠಲ
ಮಾತನಾಡಲೆ ಜಾಣೆ ಮೋಹನಿಭಿ ಮದಯಾನೆ| ರೀತಿ ನಿನಗುಚಿತವೇನೇ|ಯಾತಕಿದು ಮನ ಮುನಿಸು| ಎನ್ನೊಳು ಸುಖಬೆರೆಸು ಪ್ರೀತಿ ರತಿಸೊಬಗು ದೊರೆನಾರೀ ಪ ತಿಂಗಳಾನನೆ ನಿನ್ನ ತೋಳಿಂಬವಿಲ್ಲದಿರೆ| ಕಂಗಳಿವೆ ಗೊಡವಲ್ಲೆ ನಲ್ಲೆ| ಅಂಗ ದವಯವವು ತಮ್ಮ ಅರ್ಥಿಯನೆ ಜರಿದವಾ| ಲಿಂಗನವ ಬಯಸಿ ನೋಡೆ ನೀಡೇ1 ಮುಂದಕಡಿಯಿಡಲಾರೆ ಮನಸೋತವಗೆ ದಯ| ದಿಂದಕರ ಪಲ್ಲವಾರೆ ದೋರೆ| ಬಂದ ನಿನ್ನಯ ವಿರಹ ಬಹಳ ತಾಪಕ ಸರಸಾ| ನಂದ ಮಳೆಯಗರಿಯೇ ವೆರಿಯೇ 2 ಏಣಾಕ್ಷಿ ಕೇಳಿನ್ನಯ ದೇವನೀಗ ಯಾಚಕನು| ತಾನಾಗಿಬಂದೆನಲ್ಲೆ ನಿಲ್ಲೆ| ತಾ ನೊಲಿದು ಅಧರಾಮೃತ ಫಲವೇ ಸೂರೆಯನು| ಮೌನದಲಿ ಕೊಡಲಿಬಾರೇ ನೀರೇ 3 ಕಾಂತೆ ನಿನ್ನ ವಿಯೋಗ ಕೇಳು ಜನವನ ವಾಗೆ| ಎಂತಶನ ಶುಚಿ ಹೇಳೆ ಕೇಳೆ| ಕಂತುವಿನ ಶರಗಳರಕಂ ಮಡುವಂ ಪೊಕ್ಕೆಗುಣ| ವಂತೆ ಫಣೀ ವೇಣಿ ಪಿಡಿಯೇ ಜಡಿಯೆ4 ಮಂದಗಮನೆ ಬುದ್ದಿಮೋಹಿಸುವದೇನು|ನಿಜ| ಛಂದ ವಾಜಿಯಲಿ ಕೂಡೆ ನೋಡೇ| ಎಂದ ವಚನನಲಿದು ಎರಗಿ ಗಿರಿ ಮಹಿಪತಿ|ನಂದ ನೊಡೆಯನ ನೆರದಳೇ ತರಳೇ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಲಕ್ಷ್ಮೀದೇವಿ ದಾಸನಲ್ಲವೇ ನಿನ್ನ ದಾಸನಲ್ಲವೆ ಪ ದಾಸನಾದ ಮೇಲೆ ಎನ್ನ ಘಾಸಿಗೊಳಿಸುವುದುಚಿತವೇನೇ ಘೋಷ ರೂಪನ ಪೆತ್ತ ತಾಯಿ ಅ.ಪ. ಮಾರ ಮುಖ್ಯ ಶರತಾಪವ ಹರಿಸುತ ಮಾನದಿಂದ ಕಾಂiÉಮಾರನ ತಾಯೇ 1 ಶರಧಿ ನಾನು ತಿದ್ದಿ ತೋರೆ ಹೃತ್ಪದ್ಮನಿವಾಸಿಯ ಶಿರಿಪದ್ಮನ ರಮಣಿಯೆ 2 ಭವ ಕಟ್ಟು ಬಿಡಿಸಿ ನೋಡೇ ಯೆಷ್ಟೆಂದು ಪೇಳಲಿ ಗುರುಕೃಷ್ಣನ ಪೆತ್ತ ಶಿಷ್ಟ ಶಿಖಾಮಣಿಯೆ 3 ಸಾರಶಾಸ್ತ್ರ ತೊರೆದೂ ದಿವ್ಯ ಮಾರಶಾಸ್ತ್ರ ಸುರದೂ ಶಾಸ್ತ್ರಾ ಶಾಸ್ತ್ರದ ದಾರಿಯ ತೋರಿಸಿ ಶತ್ರು ನಿವಾರಿಸು 4 ಇಂದು 5
--------------
ಸಿರಿಗುರುತಂದೆವರದವಿಠಲರು
ಹನುಮಂತದೇವರ ಸ್ತೋತ್ರ ಬಿಡುವೇನೇನಯ್ಯಾ ಹನುಮ ನಿನ್ನಬಿಡುವೇನೇನಯ್ಯಾ ಪ ಬಿಡುವೆನೇನೋ ಹನುಮ ನಿನ್ನಅಡಿಗಳಿಗೆ ಶಿರವ ಕಟ್ಟಿ (ಎರಗುವೆ ನಾನು)ದೃಢ ಭಕ್ತಿ ಸುಜ್ಞಾನವನ್ನುತಡಮಾಡದಲೆ ಕೊಡುವೋ ತನಕ ಅ.ಪ ಹಸ್ತವ ಮ್ಯಾಲಕೆ ಎತ್ತಿದರೇನುಹಾರಗಾಲ ಹಾಕಿದರೇನುಭೃತ್ಯನು ನಿನ್ನವನು ನಾನುಹಸ್ತಿ ವರದನ ತೋರೋ ತನಕ 1 ಹಲ್ಲು ಮುಡಿಯ ಕಟ್ಟಿದರೇನು ಗುಲ್ಲು ಮಾಡಿದರಂಜುವನಲ್ಲಫುಲ್ಲನಾಭ ಲಕುಮೀಲೋಲನಇಲ್ಲಿಗೆ ತಂದು ತೋರುವ ತನಕ 2 ಡೊಂಕು ಮೋರೆ ಬಾಲವ ತಿದ್ದಿಹುಂಕರಿಸಿದರೆ ಅಂಜುವನಲ್ಲಕಿಂಕರನು ನಿನ್ನವನೋ ನಾನುವೆಂಕಟವಿಠಲನ ತೋರುವ ತನಕ 3
--------------
ವೆಂಕಟೇಶವಿಟ್ಠಲ