ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಔಷಧದ ಬೇರೊಂದನು ನಾರದನು ತಂದ ಪೋಷಣೆಗೆ ಸಕಲರೂ ಸವಿಯಲೆಂದ ಪ ಜ್ವರಭೇದಗಳಿಗೆಲ್ಲ ನರಹರಿ ಎಂಬ ಬೇರು ಶಿರವೇಧೆ ಎಂಬುದಕೆ ಹರಿಹರಿ ಎಂಬ ಬೇರು ವಾತ ರುಜೆಗಳಿಗೆ ಸಿರಿಲೋಲನೀ ಬೇರು ಪರಿಪರಿಯ ಭವಗಳಿಗೆ ನಾರಾಯಣಾ ಎಂಬ ಬೇರು 1 ಪಿತ್ತರೋಗಂಗಳಿಗೆ ಚಿತ್ತಜನಪಿತನೆಂಬ ಪೃಥ್ವಿಯೊಳಗತ್ಯಧಮ ವಿಭಂದ ರೋಗಗಳಿ ಗರ್ಥಿಯಿಂ ಲೇಪಿಸುವ ಸತ್ವಗುಣನಿಧಿಯೆಂಬ ನಿತ್ಯಶೌರಿಯ ನಾಮ ಶಿವಬೇರು 2 ನಾರದನು ಬೇರೂರೆ ನೀರೆರೆದ ಪ್ರಹ್ಲಾದ ಧೀರಬಲಿ ಬೆಳೆಯಿಸಿದ | ನೀರ ಗಜನೆರೆದ ವೀರದಶಶಿರನನುಜನೆಚ್ಚರದೊಳಿದ ಕಾಯ್ದ ನಾರಿ ದ್ರೌಪದಿ ಶಿರದಿ ಮೊಗ್ಗಾಗಿ ಧರಿಸಿದಂಥ 3 ಅರಳಿದ ಸುಮಗಳನು ಅಕ್ರೂರ ಪೋಷಿಸಿದ ತ್ವರಿತದಿ ಕಾಯ್ಗಳನು ಶುಕದೇವ ಕಾಯ್ದ ನರರೆಲ್ಲರೀ ಫಲವ ದಿನದಿನವು ಮೆಲಲೆಂದು ವರದ ಮಾಂಗಿರಿರಂಗ ಪೇಳುತಿಹನು 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕರುಣಿಸೆನ್ನೊಳು ದೀನಬಂಧು ಪ. ಕರುಣಿಸೆನ್ನೊಳಿರುವ ಸಕಲದುರಿತಜಾತ ರೋಗಗಳನು ಪರಿಹರಿಸಿ ಪಾದಾರವಿಂದ ಸಿರದೊಳಿರಿಸಿ ಸಲಹು ಬೇಗ ಅ.ಪ. ಮೂರು ವಿಧದಲಿ ಸುತ್ತಿಕೊಂಡ ಘೋರ ತಾಪದಿ ಸೂರೆಗೊಳುವ ಗಹನ ಸಂಸಾರ ಕೂಪದಲ್ಲಿ ಬಿದ್ದು ಚೀರುತಿಹೆನು ಚಿತ್ತದಲ್ಲಿ ತಾರೊ ತರಳಗೊಲಿದ ದೇವ 1 ಆದಿ ಭೌತಿಕಾದೇಹಜನಿತಾಗಾಧ ಮೋಹ ತಾ ಬಾಧೆ ಸಹಿಸಲಾರೆ ಮುನಿಸಮಾಧಿಗಮ್ಯ ನಿನ್ನ ಮರವ ವೇಧೆ ವದಗಿ ಬರುವ ಮೊದಲೆ ಮಾಧವನೆ ಮದೀಯನೆಂದು 2 ಮಂದನಾದೆನು ಮಮತೆಯಿಂದ ಕುಂದಿಹೋದೆನು ಮುಂದುಗಾಣವಂದ ಕಾಣದಿಂದು ನಿನ್ನ ಬೇಡಿಕೊಂಬೆ ಇಂದಿರೇಶ ವೆಂಕಟೇಶ ಎಂದು ನಿನ್ನ ಪದವ ಕಾಂಬೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ನಾರಸಿಂಹ ನಮಿಪೆ ನಿಮ್ಮ ನತಜನಾಶ್ರಯ ಪ ಘೋರ ದುರಿತದೂರ ಭಕ್ತಕುಮುದಕುಡುರಾಯ ಅ.ಪ ವಿವಿಧಗತಿಯಲಸುರ ಸುತನ ವೇಧೆಪಡಿಸಲು ತವ ಪದಾಂಬುರುಹವ ನೆನೆಯೆ ಒಂದೆ ಕ್ಷಣದೊಳು 1 ಕೋಟಿ ಸಿಡಿಲು ಬಡಿದ ತೆರದಿ ಕೂಗು ಪುಟ್ಟಲು ಚಾಟ ಸ್ತಂಭದೊಳುದಿಸೆ ದನುಜಕೂಟ ಬೆದರಲು 2 ತರಳಗೊಲಿದೆ ಗುರುರಾಮ ವಿಠಲ ನಂಬಿದೆ 3
--------------
ಗುರುರಾಮವಿಠಲ
ಪ್ರಣವ ಪ್ರತಿಪಾದ್ಯನು ಶ್ರೀನಾರಾ- ಯಣನೊಬ್ಬನೆ ಧ್ಯೇಯನುಜಗಕೆ ಪ ಎನುತ ಪೊಗಳುವದು ಶೃತಿ ತತಿಯೂ ಅ.ಪ ನಿಸ್ಸಂಶಯವಾಗಿರುವುದು ಸದ್ಭೋಧೆ ಪೇಳುವದು ದುರ್ಬೋಧೆ ಜೀವರಿಗೊಂದೇ ವೇಧೆ ತುದಿಗೆ ಎರಡು ಗುಂಪಿನವರನು ವಿಚಾರಿಸಿ ಮಾಳ್ಪೆನು ಕಾಲನು ಬಾಧೆ 1 ತಾಯಿ ಒಬ್ಬಳಿಗೆ ಮಕ್ಕಳು ಮೂವರು ತತ್ವವಿದೇ ನಿಶ್ವಯ ದಾರಿ ಪುರಂಜನ ಇವರಾಯತವಿವರಿವರಿಗೆ ಬಾರಿ ರಾದ್ಧಾಂತ ಪರಸ್ಪರ ಸೇರಿ 2 ನೇಮವಾಗಿ ವೇದದೊಳಿಲ್ಲ ಖಂಡಿತವಾಗಿ ಉತ್ತಮವಲ್ಲ ಪಾಮರರಾಗಿಹ ಮಧ್ಯಮಜನ ಸಂಪಾದಿಸಿದರೆ ದಕ್ಕುವದಿಲ್ಲ ಮೂವ್ವರ ಮರ್ಮವು ಬಲ್ಲಾ 3
--------------
ಗುರುರಾಮವಿಠಲ
ಶ್ರೀ ಕರಾರ್ಚಿತ ಪರಮಪುರುಷ ಶೋಕವರ್ಜಿತ ಪ ಸಾಕುವರ್ಯಾರೊ ಮಾಕಳತ್ರಹರಿ ಅ.ಪ. ರಜತಪೀಠ ಪುರದೊರೆಯೆ ನಿನ್ನ ಭಜನೆಗೈವರ ಬಲ್ಲುದು ಗಜರಾಜವರದ 1 ಮೋದಮುನಿಮನಾನಂದ ನೀ ಯಶೋದೆ ನಂದನ ಆದಿಮೂರÀುತಿಯನಾದಿಯಾದೆನ್ನ ವೇಧೆಕಳೆಯೊ ನಿನ್ನ ಪಾದವ ನಂಬಿದೆ 2 ಕಂಗಳಿಂದ ನಾ ನಿನ ನೋಡಿ ವಿಹಂಗವಾಹನ ಶ್ರೀ ರಂಗೇಶವಿಠಲ 3
--------------
ರಂಗೇಶವಿಠಲದಾಸರು