ಬಾರೋ ಭವದೂರಾ ರಂಗಾ ನಾರಾಯಣಪ
ಆ ರಾವಣ ಭೀಕರ ಜಯ ಸರೋಜದಳಾಂಗ ಅ.ಪ
ಚರಣಶ್ರಿತ ಪರಿಪಾಲಿತ ಮರಳೀಧರ ದೇವ
ಪರಮಾತ್ಮನೆ ಪಾಂಡವಮಣಿ ತರವೇ ನಿರುತರಕೇಂದ್ರ 1
ಉಭಯ ವೇದಾಂತಾರ್ಯನೆ ಅಭಯಾಕರ ಶೌರೀ
ಅಭಿಮಾನಯೇನದು ಕಾರಣ ಶುಭದಾಯಕನಾಗಿ ಬೇಗಾ 2
ಪರತಂತ್ರನೆ ಪಾಪಾಂತಕ ನರವೇಷ ಭಾಷೆ
ಸುರನಾಯಕವಿನುತನಾಗುರು ಭರತಾಗ್ರಜ ತುಲಶೀರಾಮಾ3