ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(3) ರಂಗನಬೆಟ್ಟ(ಸೋಲೂರು ಸಮೀಪ)ರಂಗನಾಥ ತಟ್ಟೇಕೆರೆಯಾ ರಂಗಾ ಜಯ ಮಂಗಳಾಂಗ ಪ ಪಾದ ಭಂಗ ಅ.ಪ ಲಕ್ಷ್ಮೀನಾಯಕ ಭಕ್ತವೃಂದ ರಕ್ಷಕ ಶಕ್ತ ರಕ್ಷಿಸು ಕಮಲಾಕ್ಷ ಕರುಣಾಕಟಾಕ್ಷ 1 ಪತಿತ ಪಾವನ ಪುಣ್ಯಧಾಮ ಮಹಿತಮಾನ್ಯ ಶ್ರುತಿನುತ ಗುಣಭೂಷಾ ಭವನಾಶಾ 2 ಗಾಂಗೇಯನುತನಾಮ ಹಿಂಗದೆನ್ನಲಿ ಪ್ರೇಮ ಸಾಂಗವೇದಸ್ತೋಮ ಸುತ್ರಾಮಾ 3 ಸುರಮುನಿವಂದ್ಯ ಭಾಗವತರ ವೃಂದ ಕರಿರಾಜ ಪರಿಪೋಷಾ ಹೆಜ್ಜಾಜೀಶ 4
--------------
ಶಾಮಶರ್ಮರು
ಈ ಸೊಬಗು ಇನ್ನಾವ ಕ್ಷೇತ್ರದಲಿ ಕಾಣೆನಾ ಇಲ್ಲಿ | ವಾಸುದೇವ ಮುನಿಯಿದ್ದ ಕಾರಣ ಪ ರಾಜಧಾನಿಯ ನೋಡೆ ಇಂದ್ರಭವನಕೆ ಮೇಲು | ತೇಜದಲಿ ನೋಡೆ ಸೂರ್ಯನದೆ ಸೋಲು || ಪೂಜೆದಲಿ ನೋಡೆ ಸರ್ವ ಧರಣಿಗೆ ಮೇಲು | ಭೋಜನದಲಿ ನೋಡೆ ಅಮೃತಕೆ ಮೇಲು 1 ಉತ್ಸಾಹದಲಿ ನೋಡೆ ನಹಿ ಪ್ರತಿ ನಹಿ ಪ್ರತಿ | ಸತ್ಸಂಗತಿಯ ನೋಡೆ ಬುಧ ಸಂಗತಿ || ಸುಚರಿತೆಯ ನೋಡೆ ಶುದ್ಧ ಸತ್ವದ ನೀತಿ | ಮತ್ಸರ ಮೆರೆದು ನೋಡೆ ಇಲ್ಲೆ ಮುಕುತಿ 2 ಓಲಗದಲಿ ನೋಡೆ ಸತ್ಯಲೋಕಕೆ ಸಮ | ಪೇಳುವ ಕೀರ್ತನೆ ನೋಡು ವೇದಸ್ತೋಮ || ಬಾಲ ಉಡುಪಿಯ ಕೃಷ್ಣ ವಿಜಯವಿಠ್ಠಲರೇಯನ | ತಿಳಿದ ಮಾನವಗೆ ಫಲವು ನಿಷ್ಕಾಮಾ3
--------------
ವಿಜಯದಾಸ