ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆದಿವರಾಹನೇ ಆದಿತ್ಯಸನ್ನಿಭನೆ ಆದ್ಯಂತರಹಿತನೆ ಸತ್ವಮಯನೆ ಭವರೋಗ ಭೇಷಣಾಸಕ್ತ ನಾರಾಯಣ ಭೂರಮಣ ಭಯಹರಣ ಕಲಿತಸುಗುಣ ಸಾರ ಜಗದಾಧಾರ ವಾರಾಶಿಜಾಗಾರ ವೇದಸಾರ ಕನಕಾಕ್ಷ ಮದಶಿಕ್ಷ ಅನಿಮಿಷಾಧಿಪ ಪಕ್ಷ ದಾನವಾಳಿವಿಪಕ್ಷ ಶರಣರಕ್ಷ ನಿತ್ಯ ನಿರ್ವಿಕಲ್ಪ ಸರಸಿಜಾಯತನೇತ್ರ ವಜ್ರಗಾತ್ರ ಪರಿಪಾಹಿ ಮಾರಮಣ ದಿವ್ಯ ಚರಣ
--------------
ನಂಜನಗೂಡು ತಿರುಮಲಾಂಬಾ
ಈತನೆ ಕಾಣಿರೊ ಮಧ್ವಮುನಿ ಪ. ಪರಿಪರಿ ಶ್ರುತಿಗಳೆಂಬ ಗುಹೆಗಳಲಿ ಕೇ-ಸರಿಯಂತೆ ಚರಿಸುತ್ತಹರಿಯೆ ಸರ್ವೋತ್ತಮನೆಂಬ ಘೋಷಗಳಿಂದದುರುಳ ವಾದಿಗಳೆಂಬ ನರಿಗಳೋಡಿಸಿದಾತ 1 ಸಕಲಾಗಮಗಳೆಂಬ ಶರಧಿಯೊಳಗೆಯುಕುತಿಯಿಂದಲಿ ಮಥಿಸಿಅಕಳಂಕ ಶ್ರೀಹರಿಯೆಂಬ ರತ್ನವ ಕಂಡುಮಕುಟದೊಳಿಟ್ಟು ಲೋಕದಿ ಮೆರೆಸಿದಾತ 2 ವೇದಸಾರವೆಂಬ ಈಶತತ್ವವಾದಸುಧೆಯ ಕಲ್ಪಿಸಿಕೊಂಡುಆದಿಮೂರುತಿ ಶ್ರೀ ಹಯವದನನ ದಿವ್ಯಪಾದ ಸೇವಕನಾದ ಮಧ್ವಮುನಿಯೆಂಬಾತ 3
--------------
ವಾದಿರಾಜ
ದ್ವಾದಶನಾಮ ಸ್ತುತಿ ನಿನ್ನ ನೋಡಿ ಧನ್ಯನಾದೆನು ಶ್ರೀರಂಗನಾಥ ಪ ನಿನ್ನ ನೋಡಿ ಧನ್ಯನಾದೆ ಪನ್ನಗಶಯನ ರಂಗ ಮನ್ನಿಸಿ ರಕ್ಷಿಸು ಎನ್ನ ಮುನ್ನಜನ್ಮ ಬಾರದಂತೆ ಅ.ಪ. ಅರ್ಚ ಶೇಷಶಯನ ಲಕ್ಷ್ಮಿಗೆರಗಿ ಕೇಶವ ನಿಮ್ಮ ಸ್ತುತಿಸುವೆ 1 ಆದಿಸೃಷ್ಟಿಯಲ್ಲಿ ಬ್ರಹ್ಮನ ನಾಭಿಕಮಲದಲ್ಲಿ ಸೃಷ್ಟಿಸಿ ವೇದಸಾರವಾದ ಪ್ರಣವ ಓದಿ ಪೇಳಿದ ನಾರಾಯಣ 2 [ಆರ್ತಿ]ಯಿಂದ ಅಜನು ನಿಮ್ಮ ಮೂರ್ತಿಗಾಗಿ ತಪವ ಮಾಡೆ ಮಧುವೈರಿ ಮಾಧವಾ 3 ಪ್ರಣವಾಕಾರ ವಿಮಾನದಲ್ಲಿ ನಾಲ್ಕು ವೇದಶೃಂಗವಿರಲು [ವಿಷ್ಣು] ಪರವಾಸುದೇವರಿಂದ ಬಂದ ಶ್ರೀಗೋವಿಂದ 4 ಸತ್ಯಲೋಕದಲ್ಲಿ ನಿಂತು ನಿತ್ಯಪೂಜೆಯನ್ನು ಗ್ರಹಿಸಿ ಮತ್ತೆ ಇಕ್ಷ್ವಾಕುಗೊಲಿದ ವಿಶ್ವಮೂರುತಿ ವಿಷ್ಣುವೇ 5 ಸರಯು ತಮಸ ತೀರಮಧ್ಯದಿ ಹರಿಯೆ ನಿಮ್ಮನಿರಿಸಿ ದೊರೆಯು ಪರಮಪುರುಷನಿಂದ ಪೂಜೆ ಗ್ರಹಿಸಿದ ಮಧುಸೂದÀನ 6 ರಾಜ್ಯಾಭಿಷೇಕ ಕಾಲದಲ್ಲಿ ರಾಮಚಂದ್ರರು ರಾಕ್ಷಸೇಂದ್ರಗೆ ಕೊಡಲು [ರಾಜ್ಯವ] ಕಾವೇರಿ ಮಧ್ಯದಿನಿಂದು ತ್ರಿಜಗವಳೆದ ತ್ರಿವಿಕ್ರಮ 7 ಫಾಲ್ಗುಣ ಮೀನ ಉತ್ತರ ಫಲ್ಗುನೀ ನಕ್ಷತ್ರದಲ್ಲಿ ಬಾಲನಾಗಿ ಚಂದ್ರಪುಷ್ಕರಿಣಿ ತೀರದಿ ನಿಂದ ವಾಮನ 8 ಜಾಮಾತನೆನಿಸಿ ಗ್ರಹಿಸಿ[ದ] ಶ್ರೀದೇವಿ ಸಹಿತ ಶ್ರೀಧರ 9 ಮಳೆಯನಿಟ್ಟು ಧ್ವಜವಕಟ್ಟಿ ಸುರರ ಕರದು ಯಾಗವ ಮಾಡಿ ಯಾತ್ರದಾನದ [ತಳೆದ] ಹೃದಯವಾಸ ಹೃಷಿಕೇಶವ 10 ವೀರ ಮರುದಿನದಿ ಜಟಾಶೋಧಕರ ಮಂಟಪದಿ ನಿಂದು (?) [ಧೀರ] ಮುದುಕಿಗೊಲಿದು ದಧ್ಯಾನ್ನವ ಉಂಡ ಶ್ರೀಪದ್ಮನಾಭ 11 ನಾಲ್ಕು ದಿವಸದಲ್ಲಿ ನಾಗವೈರಿಯನ್ನು ಏರಿಬಂದು ಕಲ್ಪವೃಕ್ಷವು ಸರ್ಪವಾಹನ ಏರಿದ ದಾಮೋದರ 12 ಆರು ದಿವಸದಲ್ಲಿ ವರಿಯೂರಿಗೆ ಹೋಗಿ ನಿಮ್ಮ ಸಂತೈಸಿ ಮಾಲೆಧರಿಸಿದ ಸಂಕರ್ಷಣ 13 [ಮಾರನೆ] ದಿವಸದಲಿ ಚೂರ್ಣಾಭಿಷೇಕವನು ಧರಿಸಿ ವಾಸುದೇವ 14 ಎಲ್ಲೇಕೆರೆಗೆ ಪೋಗಿ ಭೂಮಿಯೆಲ್ಲ ನೋಡಿ ಹರುಷದಿಂದ ಅ[ಲ್ಲೆ] ತೇಜಿಯನೇರಿ ತೇರಿನೆದುರೆ ಪೇರಿಬಿಟ್ಟ ಪ್ರದ್ಯುಮ್ನ 15 ಪಂಗುನ್ಯತ್ತರವು ಬರಲು ಉಂಗುರವನು ಬೇಡಿತಂದು ಅನಿರುದ್ಧ 16 ತಿಂದ ಪಂಜಿನಪ್ರಹಾರ ಹರುಷದಿಂದ ಪುರುಷೋತ್ತಮ 17 ಪತ್ನಿಯೊಡನೆ ಪ್ರೇಮಕಲಹ ಅರ್ತಿಯಿಂದ ಮಾಡುತಿರಲು ವಿಷ್ಣು ಚಿತ್ತರ ವಾಕ್ಯದಿಂದ ಅರಸಿಗೇರಿದಾ ಅಧೋಕ್ಷಜಾ 18 ಮಂದರೋದ್ಧರ ತನ್ನ ಇಂದಿರೆಸಹಿತವಾಗಿ ಬಂದು ಗೋರಥವನೇರಿ ನಾಲ್ಕುಬೀದಿ ಮೆರೆದ ನಾರಸಿಂಹ 19 ವಾರಿಜಾಕ್ಷ ರಥವನಿಳಿದು ಕಾವೇರಿಯಲ್ಲಿ ತೀರ್ಥವಿತ್ತು ದರ್ಪಣದ ಗೃಹದಿ ನಿಂದ ಅರ್ತಿಯಿಂದ ಅಚ್ಚುತ 20 ಸಪ್ತ ಆವರಣವೆಲ್ಲ ಶಬ್ದವಿಲ್ಲದೆ ಸುತ್ತಿ ಬಂದು ಭಕ್ತ ಭಾಷ್ಯಕಾರರಿಗೊಲಿದ ದುಷ್ಟಮರ್ದನ ಜನಾರ್ಧನ 21 ಪೃಥವಿಯೊಳಗಾಶ್ಚರ್ಯವಾದ ಪ್ರತಿಯಿಲ್ಲದ ಪಲ್ಲಕ್ಕಿಯೇರಿ ಅತಿಶಯದಿಂದ ಬಂದ ಉರಗಶಯನ ಉಪೇಂದ್ರ 22 ಅಂದು ಸುರರ ಛಂದದಿಂದ ಮಂದಿರಕ್ಕೆ ಕಳುಹಿ ರಂಗ ಬಂದು ಭಕ್ತರ ಪಾಪ[ವ] ಪರಿಹರಿಸಿದಾ ಶ್ರೀಹರಿ 23 ಅಷ್ಟು ಚರಿತ್ರೆಯನ್ನು ಕೇಳಿ ಕಟ್ಟಿದ ಕಂಕಣವ ಬಿಚ್ಚಿ ಶ್ರೇಷ್ಠವಾದ ಸ್ಥಾನದಲ್ಲಿ ಮಂತ್ರಿ ಸಹಿತನಿಂದ ಶ್ರೀಕೃಷ್ಣ 24 ದಕ್ಷಿಣಗಂಗೆಯಾಗಿ ನಿಂದು ಭಕ್ತನ ದ್ವೀಪವನ್ನು ನೋಡುತ ಮುಕ್ತಿಮಾರ್ಗವನ್ನು ತೋರಿದ ಭಕ್ತವತ್ಸಲ ವೆಂಕಟರಂಗ 25
--------------
ಯದುಗಿರಿಯಮ್ಮ
ಪೋಷಿಸೆನ್ನ ದಾಸಶ್ರೇಷ್ಠನೆ ವಸುಧಿದೇವ ನಿಕರಪಾಲ ವ್ಯಾಸರಾಯನ ಪ್ರೇಮಪಾತ್ರನೆ ಪ ವೇದಸಾರವಾದ ಕವನಗೈದು ಪ್ರಾಕೃತದಿ ಜಗದಿ ಭೇದಜ್ಷಾನ ತಾರತಮ್ಯ ಬೋಧಿಸಿದ ಸಾಧುಶೀಲ 1 ಜ್ಞಾನಿ ವೀಣಾಪಾಣೆ ದೇವ ಮೌನಿ ದಾನಿ | ಸ ನ್ಮಾನಿ ಗಾನಲೋಲ ದೀನಪಾಲನ 2 ನಂದಗೋಪಕಂದ ಶಾಮಸುಂದರವಿಠಲಗೆ ಪರಮ ಯೆಂದು ಸಾರಿ ಸುಪಥ ತೋರಿ ಮಂದÀರನ್ನು ಪೊರೆದ 3
--------------
ಶಾಮಸುಂದರ ವಿಠಲ
ಮಂಗಳ ಪಾಡಿರೆ ಭಾವೆಯರೇ ರಂಗನ ರಮಣಿಯ ಭಾವಿಸಿರೇ ಪ ಅಂಗಜಜನನಿಯ ಕೃಪೆಯಿ ಸ- ತ್ಸಂಗತಿ ಪಡೆದೆವು ನಿಶ್ಚಯಂಅ.ಪ ಭೋಗವತೀಪತಿಶಾಯಿಯೊಳು ಅನು ರಾಗಗೊಂಡಿಹ ದೇವಿಯಿವಳ್ ಭಾಗ್ಯಲಕ್ಷ್ಮಿಯ ಪಾದದೊಳು ಬಾಗುತ ಶಿರವನು ರಾಗದೊಳು 1 ವೇದಸಾರದ ವಾಕ್ಯದಲಿ ಮಾಧವಿಯಂ ಸ್ತುತಿ ಮಾಡುತಲಿ ಭೇದವೆಣಿಸದೆ ಸಲಹೆನ್ನುತಲಿ ಮಾಧವನಂ ಕೊಂಡಾಡುತಲಿ 2 ತಾಪತ್ರಯಗಳ ಪರಿಹರಿಸಿ ಆಪತ್ತುಗಳಿಂದುದ್ಧರಿಸಿ ಕಾಪಾಡುವಳಿವಳೆಂದೆನಿಸಿ ಶ್ರೀಪದ್ಮಿನಿಯನು ಸಂಸ್ಮರಿಸಿ 3 ಶರಣಾಗತ ಸಂರಕ್ಷಕಿಗೆ ವರಶೇಷಗಿರಿನಿಲಯನಿಗೆ ಕರುಣಾರೂಪಿಣಿ ಪದ್ಮಿನಿಗೆ ಕರಗಳ ಮುಗಿಯುತೆ ಮಾಧವಿಗೆ 4
--------------
ನಂಜನಗೂಡು ತಿರುಮಲಾಂಬಾ
ಮನ್ನಿಸೆನ್ನ ಮನ್ಮಥಜನಕ ಮಧು ಸೂ-ದನ್ನ ಮಂದರೋದ್ಧಾರ ನಿನ್ನ ನಂಬಿದೆ ನಿರಂತರದಿ ನೀನಿಹಪರದಲಿ ಕಾಯಯ್ಯ ಅ ಖಗ ತುರಂಗ ಜಗದಂತÀರಂಗವಿಧಿ ಕುರಂಗಧರ ನಮಿತ ಸಾರಂಗಪರಿಪಾಲ ಸುಗುಣಜಾಲ ಲಕುಮಿಲೋಲಕೃಪಾರಸತರಾಂಗಿತಾಪಾಂಗ ದುರಿತಭಂಗಧsÀೃತರಥಾಂಗ ಶುಭಾಂಗ 1 ಕಾರುಣ್ಯನಿಧಿ ಶರಣ್ಯವತ್ಸಲ ಲೋಕಶರಣ್ಯ ದೇವವರಣ್ಯ ಘನಶ್ಯಾಮ ಚರಣ ಕಮಲಕ್ಕೆ ಶರಣು ಹೊಕ್ಕೆ ತಾಮಸವ್ಯಾಕೆಸಲಹೊ ಶ್ರೀಧರ ಯದುವೀರ ದುರಿತದೂರವೇದಸಾರ ಗಂಭೀರ 2 ಸನಂದನಾದಿ ಮುನಿಪ್ರಿಯ ಸಚ್ಚಿದಾನಂದನಂದತನಯ ಏನೆಂದು ಪೇಳ್ವೆ ನಿನ್ನ ಮಾಯಾಮರೆಯಲರಿಯೆ ಯುಧಿಷ್ಠಿರ ಧನಂಜಯಸಹಾಯ ಶ್ರೀಕೃಷ್ಣರಾಯ ಸಹೃದಯಗೇಯ ನಮೋ ನಮೋ ಜೀಯ3
--------------
ವ್ಯಾಸರಾಯರು