ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೂಗಿರೆ ಗುರುಗಳ ತೂಗಿರೆ ಯತಿಗಳ ತೂಗಿರೆ ದಾಸಗ್ರೇಸರರ ನಾಗಶಯನನು ರಾಗವ ಪಡೆದಂಥ ಯೋಗಿವರೇಣ್ಯರ ತೂಗಿರೆ ಪ ಈ ಮಹಿಯೊಳು ಪುಟ್ಟಿ ಶ್ರೀಮುದತೀರ್ಥ ಸು- ನಾಮದಿ ಕರೆಸುವರ ತೂಗಿರೆ ಆ ಮುದತೀರ್ಥ ಪದ್ಮನಾಭ ನಾಮದಿಂದಿರುವರ ತೂಗಿರೆ1 ರಾಮನ ತಂದಿತ್ತ ನರಹರಿ ಮುನಿಪರ ಮಾಧವ ತೀರ್ಥರ ತೂಗಿರೆ ಆಮ- ಹಾವಿದ್ಯಾರಣ್ಯರನ ಗೆಲಿದಂಥ ಶ್ರೀ ಮದಕ್ಷೋಭ್ಯರ ತೂಗಿರೆ 2 ಕಾಕಿಣಿತೀರಸ್ಥ ಟೀಕಾಚಾರ್ಯರೆಂಬೊ ನಾಕಪಾಂಶಜರನ ತೂಗಿರೆ ಶ್ರೀಕೃಷ್ಣ ತಟದಿ ಜಿತಾಮಿತ್ರರೆಂಬೊ ಪಿ- ನಾಕಿ ಅಂಶಜರನ ತೂಗಿರೆ 3 ರಾಜರಂದದಿ ಸುಖಭೋಜನ ಕೃದ್ಯತಿ ರಾಜ ಶ್ರೀಪಾದರ ತೂಗಿರೆ ವ್ಯಾಜದಿ ವಿಜಯ ಸಾಮ್ರಾಜ್ಯರೆನಿಸಿ ವ್ಯಾಸರಾಜರು ಮಲಗ್ಯಾರ ತೂಗಿರೆ 4 ವಾದಿಗಳನು ಯುಕ್ತಿವಾದದಿ ಗೆಲಿದಂಥ ವಾದಿರಾಜರನ್ನ ತೂಗಿರೆ ಮೇದಿನಿಯೊಳು ಕೃಷ್ಣದ್ವೈಪಾಯನರೆಂಬೊ ವೇದವ್ಯಾಸಾತ್ಮಜರ ತೂಗಿರೆ 5 ಪರಿಮಳ ರಚಿಸಿದ ವರಹಜ ತೀರಸ್ಥ ಇರುಳು ಕಾಲದಲಿ ತರಣಿಯ ತೋರಿದ ಗುರುಸತ್ಯ ಬೋಧರ ತೂಗಿರೆ 6 ಪರಮತ ಖಂಡನ ನಿರುತದಿ ಮಾಡಿದ ಗುರುವರದೇಂದ್ರರ ತೂಗಿರೆ ಗುರು ಭುವನೇಂದ್ರರ ಕರಜವ್ಯಾಸತತ್ವ ವರಿತ ಯತೀಶರ ತೂಗಿರೆ 7 ವರಭಾಗವತಸಾರ ಸರಸದಿ ರಚಿಸಿದ ಗುರುವಿಷ್ಣು ತೀರ್ಥರ ತೂಗಿರೆ ಪರಮ ಕ್ಷೇತ್ರಕೂಡಲಿಯೊಳಗಿರುವಂಥ ಗುರುರಘುವೀರರ ತೂಗಿರೆ 8 ಹರಿಯ ಮಹಿಮೆಯನ್ನು ಸರಸದಿ ಪೇಳಿದ ಪುರಂದರ ದಾಸರ ತೂಗಿರೆ ಹರಿಸರ್ವೋತ್ತಮನೆಂದು ಸುರಮುನಿ ಗರುಹಿದ ಗುರು ವಿಜಯದಾಸರ ತೂಗಿರೆ 9 ಬನ್ನವ ಬಿಡಿಸಿ ಶಿಷ್ಯನ್ನ ಪಾಲಿಸಿದ ಭಾಗಣ್ಣ ದಾಸರನ್ನು ತೂಗಿರೆ ಘನ್ನ ಹರಿಯಗುಣ ವರ್ಣಿಸಿದಂಥ ಜ ಗನ್ನಾಥ ದಾಸರ ತೂಗಿರೆ 10 ಮಾನವಿರಾಯರ ಪ್ರಾಣಪದಕರಾದ ಪ್ರಾಣೇಶದಾಸರ ತೂಗಿರೆ ವೇಣುಗೋಪಾಲನ್ನ ಗಾನದಿ ತುತಿಸಿದ ಆನಂದದಾಸರ ತೂಗಿರೆ 11 ವಾಸ ಆದಿಶಿಲಾಧೀಶನ್ನ ಭಜಿಸಿದ ಶೇಷ್ಠ ದಾಸರನ್ನ ತೂಗೀರೆ ಶ್ರೇಷ್ಠ ಕಾರ್ಪರ ನರಕೇಸರಿಗತಿಪ್ರೀಯ ದಾಸೋತ್ತಮರನ್ನ ತೂಗೀರೆ 12
--------------
ಕಾರ್ಪರ ನರಹರಿದಾಸರು
ನೆನೆದು ನಮಿಸುವೆ ನಾನು ವಾರಂವಾರ ಪ ನೆನೆದು ನಮಿಸುವೆ ನಾನನುದಿನ ಹರಿಪದ ವನಜ ಮಧುಪರಾದ ಅನುಭವ ಶರಣರ ಅ.ಪ ಆದಿಮೂರುತಿತ್ರಯ ಮಧ್ವಮುನಿರೇಯ ಪದ್ಮನಾಭ ನರಹರಿ ಧ್ಯಾನ ಮಾಧವಾಕ್ಷೋಭ್ಯರ ಮಹಾ ಜಯತೀರ್ಥರಾ ರಾಧಕ ವಿದ್ಯಾದಿರಾಜ ಕವಿನಿಧಿ ಸಾದರ ವಾಗೀಂದ್ರ ಶಾಂತ ರಾಮಚಂದ್ರ ಸಾಧು ವಿದ್ಯಾನಿಧಿಯರ ರಘುನಾಥ ಮೇದಿನಿ ರಘುವರ್ಯರ ರಘೋತ್ತಮ ವೇದವ್ಯಾಸಾರ್ಯರ ವಾರಂವಾರ 1 ಇತ್ತ ವಿದ್ಯಾಧೀಶ ಈ ವೇದನಿಧಿ ಘೋಷ ಸತ್ಯವ್ರತರ ನಾಮ ಸತ್ಯನಿಧಿಯ ನೇಮ ಸತ್ಯನಾಥಾಖ್ಯಾತ ಸತ್ಯಾಭಿನವ ತೀರ್ಥ ಮತ್ತಿಳೆಯೊಳಗಿರ್ಪ ಮನಕೆ ಸೂಚಿಸಿ ಬಪ್ಪ ಕೃತ್ಯಮ್ ಸುಜ್ಞಾನ ಕೃಷ್ಣದ್ವೈಪಾಯನ ಇತ್ಯಧಿಕ ಸರ್ವರ ಜನದಲಿ ಅತ್ಯಧಿಕ ಮೀರ್ವರಾ ಪುರುಷಾರ್ಥ ಉತ್ತಮ ಪದಲಿರುವರಾ ವಾರಂ ವಾರ 2 ಶರಣೆಂದು ಆದ್ಯರ ಸಕಲ ಪ್ರಸಿದ್ಧರ ಶುಭ ವ್ಯಾಸರಾಯರ ವರ ಹಯಗ್ರೀವ ಜಗವರಿತ ವಾದಿರಾಜ ಪುರಂದರದಾಸ ಪುತ್ರರಾ ವರ ಮಧ್ವರಾ ನೆರೆ ತಾಳ ಪಾಕರ ನುತ ಮತಿ ಕನಕರ ಹರಿಭಕ್ತಿ ಉಲ್ಹಾಸರ ಬಂಡೆರಂಗ ನರಿತಿಹ ನಿಜದಾಸರ ಮಹಿಪತಿ ಗುರುಶರಣರ ತೋಷರ ವಾರಂ ವಾರ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ವೇದವ್ಯಾಸಾ ಶ್ರೀ ಹರೇ | ನಿನ್ನ ಶ್ರೀಪಾದಉದಕೇಜ - ತೋರಿಸೋ ಪ ಹರಣ ಪ್ರಬೋಧ ಮುದ್ರಾಂಕನ ಅ.ಪ. ಕಾಲ | ಸಕಲ ಸದ್ಗುಣಧಾಮ - ಶ್ರೀ ಭೂಮಿ ದುರ್ಗೆ ಲೋಲ ||ಧೃತ - ಕಾಮ ಜನಕ ನಿಸ್ಸೀಮ ಮಹಿಮ - ತ್ರಿಧಾಮದಲಿ ಭಕ್ತಸ್ತೋಮ ವಿರಿಸಿದೆ - ಶ್ರೀರಾಮಾ - ಸುಧಾಮ - ರಿಪು ಭೀಮಾ | ಸುರಸಾರ್ವಭೌಮ 1 ವಿಧಿ ಪುತ್ರಾನ್ವಿತಗೋತ್ರಾರಿ ಪ್ರಿಯ ಸತ್ಯಾವಲ್ಲಭಚಿತ್ರಾ - ಸುವಿಚಿತ್ರಾ - ಸಮಗಾತ್ರಾ | ತೋರಿಸುತವಗಾತ್ರ 2 ಚಿನುಮಯಗುಣ ವಪುಷಾ | ಅನಂತ ಶೀರ್ಷಾಅನಿಲ ಹೃದಯಾಂತರ್ಗತ ||ಧೃತ - ಮನಸಿಜ ಪಿತ ಗುರುಗೋವಿಂದ ವಿಠಲನೆತನುಮನಧನವೆಲ್ಲ ನಿನದಾಗಿರುವುದೊಮುನಿವಂದ್ಯಾ - ಮುಕುಂದ - ಗೋವಿಂದ | ಕೊಡು ಎನಗಾನಂದ3
--------------
ಗುರುಗೋವಿಂದವಿಠಲರು
ಎತ್ತಾರೆ ಹಿಂದಿನ ಮಾತು |ಭಾರತೀಶನಿನ್ನಭೃತ್ಯರು ತಮ್ಮನುವರಿತು | ನೀ ಸಲಹದಿದ್ದರೆ ಹೀಗೆಂದು ಪಮೂಗು ಹಿಡಕೊಂಡು ಕುಳಿತಿದ್ದಿ ನೂರತೊಂಭತ್ತೆಂಟು ಕಲ್ಪ |ಆಗಲೊಬ್ಬರೂ ನಿನ್ನನಾರೆಂದು ಕೇಳಾರೋ ||ಈಗ ದೇವರ ದಯೆಯಿಂದ ಹದಿನಾಲ್ಕು ಲೋಕಕ್ಕೆ ಮಂತ್ರಿ |ಯಾಗಿ ಸಂತೋಷದಿಂದ ಮೇಲು ಮೆರೆವುದಕ್ಕೀ ಗರ್ವವೆಂದು 1ಊರ ಸೇರದಲೆ ಕಂಡ ಗಿಡದ ತೊಪ್ಪಲುಗಳ ತಿಂದು |ಅರಣ್ಯದೊಳು ಬಹುಕಾಲ ಬದುಕಿದ್ದು ಮತ್ತೂ ||ಶ್ರೀರಾಮನಾಳಾಗಿ ಶಿಲೆಯ ಪೊತ್ತುದು ಜಗವೆಲ್ಲಾ ಬಲ್ಲದು ಮುಂದೆ |ವಾರಿಜಾಸನ ಪದವಿಯಾಳೆಂದುಹರಿನುಡಿದುದಕೀಗರ್ವವೆಂದು 2ತಿರಿದುಂಡು ಹನ್ನೆರಡಬ್ದ ವನವಾಸ ಅಜ್ಞಾತವೊಂದು |ವರುಷ ಮತ್ಸ್ಯಾಧಿಪನಾಗಾರದಲಿ ಪಾಕ ಮಾಡಿ ||ತರುಣೀ ಮಾನಭಂಗವ ನೋಡಿ ಸುಮ್ಮನಿದ್ದೆಯಾಗ ಕೃಷ್ಣ |ತರಿದು ದುರ್ಯೋಧನರ ರಾಜ್ಯ ನಿಮಗಿತ್ತುದಕೀ ಗರ್ವವೆಂದು 3ಎಲ್ಲರೂ ಕಂಡದ್ದು ಹುರಳಿ ಗುಗ್ಗರಿ ತಿಂದು ಭಿಕ್ಷಾರ್ಥಿಯಾಗಿ |ಮುಳ್ಳು ಮರದಡಿಯಲ್ಲಿ ಕುಳಿತದ್ದು ಹಿರಿಬದರಿಯಲ್ಲಿ ||ಸುಳ್ಳಲ್ಲ ವೇದವ್ಯಾಸಾನಂತ ವೇದಾರ್ಥ ತಿಳಿಸಿ ಸಕಲ |ಬಲ್ಲವನೆಂದು ಪೆಸರೂ ಕೊಟ್ಟದೆವೇ ಈ ಗರ್ವವೆಂದು 4ಏನೆಂಬುವ ಸರ್ವರಲ್ಲಿ ಹೊಕ್ಕು ಬಳಕೆ ಮಾಡುತಿದ್ದಿ |ಹೀನರು ನಿನಗೀಸು ನೀರ ಹಾಕಂದುಕೇಳಿ||ಪ್ರಾಣೇಶ ವಿಠಲನ್ನ ಭಜಿಸಿ ಪೂರ್ಣ ದಯಕೆ ಪಾತ್ರನಾಗಿ |ಮೀನಾಂಕಾರಿ ಮುಖರಿಂದರ್ಚನೆಗೊಂಬಕ್ಕೀ ಗರ್ವವೆಂದು 5
--------------
ಪ್ರಾಣೇಶದಾಸರು
ಶ್ರೀ ವಿಷ್ಣು ತೀರ್ಥವಿಜಯ130ಪ್ರಥಮ ಕೀರ್ತನೆಶ್ರೀ ಹರಿಪಾದಾಬ್ಜರತ ಶ್ರೀ ವಿಷ್ಣು ತೀರ್ಥವನ-ರುಹಅಂಘ್ರಿಯುಗ್ಮದಲಿ, ಶರಣಾದೆ ಸತತಪಮಹಾಕರುಣಿಯು ಪರಮಹಂಸ ಕುಲತಿಲಕರುಅಹರ್ನಿಶಿಒದಗುವರು ಶರಣು ಸುಜನರಿಗೆಅ ಪನಿರ್ದೋಷಗುಣಪೂರ್ಣಶ್ರೀ ರಮಣ ಹಂಸನಿಗೆವಿಧಿಸನಕ ಮೊದಲಾದ ಗುರುಪರಂಪರೆಗೆ,ಯತಿವರ್ಯ ಅಚ್ಚುತ ಪ್ರೇಕ್ಷರಿಗೆ ಆನಂದತೀರ್ಥರ ಪದಾಂಬುಜಗಳಿಗೆ ಆನಮಿಪೆ 1ಪಂಕೇರುಹನಾಭ ನರಹರಿಮಾಧವಅಕ್ಷೋಭ್ಯ ಜಯತೀರ್ಥ ವಿದ್ಯಾಧಿರಾಜವಾಗ್ವಜ್ರ ರಾಜೇಂದ್ರ ಕವಿವರ ಕವೀಂದ್ರವಾಗೀಶರಿಗೆ ನಮೋ ರಾಮಚಂದ್ರರಿಗೆ 2ಶ್ರೀರಾಮ ಪ್ರಿಯ ರಾಮಚಂದ್ರರ ಕರಜರುಸೂರಿಗಳುವಿಭುದೇಂದ್ರ ವಿದ್ಯಾನಿಧಿಗೆಎರಗಿ ವಿದ್ಯಾನಿಧಿಯ ಸುತ ರಘುನಾಥರಿಗುಕರುಣಾಳು ರಘುವರ್ಯರಿಗು ಆನಮಿಪೆ 3ವೇದಾಂತಕೋವಿದರಘೂತ್ತಮ ತೀರ್ಥರಿಗೆವೇದವ್ಯಾಸಾಭಿದ ಯತಿಗಳಿಗೆ ನಮಿಪೆವೇದವ್ಯಾಸ ತೀರ್ಥರ ಕರಕಮಲ ಸಂಜಾತವಿದ್ಯಾಧೀಶರ ಚರಣಕಾ ನಮಿಪೆ 4ವೇದನಿಧಿ ಸತ್ಯವ್ರತ ಸತ್ಯನಿಧಿ ಸತ್ಯ -ನಾಥ ಸತ್ಯಾಭಿನವ ಸತ್ಯಪೂರ್ಣರಿಗೆಸತ್ಯವಿಜಯ ಸತ್ಯಪ್ರಿಯ ಸತ್ಯಬೋಧರಿಗೆಸತ್ಯಸಂಧ ಈ ಸರ್ವ ಗುರುಗಳಿಗೆ ನಮಿಪೆ 5ಸತ್ಯವರ ತೀರ್ಥರ ಚರಣಕಾ ನಮಿಸುವೆಸತ್ಯವರ ಕರಕಂಜ ಸಂಜಾತರಾದಸತ್ಯರಮಣ ಪ್ರಿಯ ಶ್ರೀ ವಿಷ್ಣುತೀರ್ಥರವೃತತಿಜಾಂಘ್ರಿಗಳಲ್ಲಿ ಶರಣಾದೆ ಸತತ 6ಶ್ರೀ ತ್ರಿವಿಕ್ರಮಪಾದಅಬ್ಜಜಾಸರಿತವಶಿರದ ಮೇಲ್ ಧರಿಸಿದ ಗಿರಿಜೇಶನಂತೆಹರಿಭಕ್ತಾಗ್ರಣಿ ವೈರಾಗ್ಯ ನಿಧಿಯು ಈಸೂರಿಕುಲತಿಲಕ ಶ್ರೀ ವಿಷ್ಣು ತೀರ್ಥಾರ್ಯ7ಸವಣೂರು ಪ್ರಾಂತದ ಸಿದ್ಧಾಪುರದವರುಮಾಧ್ವದಂಪತಿ ಭಾಗೀರಥಿ ಬಾಳಾಚಾರ್ಯಸೇವಿಸಿದರು ಟೀಕಾಚಾರ್ಯರ ಭಕ್ತಿಯಿಂದೇವಸ್ವಭಾವ ಮಗ ಪುಟ್ಟಬೇಕೆಂದು 8ರಾಘವಾನಂದ ಮುನಿ ಅಕ್ಷೋಭ್ಯ ತೀರ್ಥರಾ -ನುಗ್ರಹ ಸದಾಪೂರ್ಣ ಜಯತೀರ್ಥ ಮುನಿಯುಬಾಗಿ ಬೇಡಿದ ಈ ಸಾಧುದಂಪತಿಗೊಲಿದುಯುಕ್ತ ಕಾಲದಿ ದೊರೆಯಿತು ಪುತ್ರ ಭಾಗ್ಯ 9ಸ್ಪಟಿಕನಿಭ ಅಕಳಂಕ ಕಾಂತಿಯುಕ್ ಮಗನಿಗೆಇಟ್ಟು ಜಯತೀರ್ಥನಾಮವ ಮುಂಜಿ ಮಾಡಿಪಾಠ ಓದುವುದಕ್ಕೆ ಐಜಿ ಆಚಾರ್ಯರಲಿವಟುವ ಕಳುಹಿಸಿದರು ಕೃತಕೃತ್ಯ ತಂದೆ 10ಜಯತೀರ್ಥರನುಗ್ರಹದಿ ಜಯತೀರ್ಥ ವಟುವುವಿದ್ಯಾಭ್ಯಾಸ ಐಜಿ ಆರ್ಯರಲ್ಲಿಗೈಯುವಾಗ ಇತರ ವಿದ್ಯಾರ್ಥಿಗಳಿಗಧಿಕದಿವ್ಯ ಪ್ರತಿಭಾವನ್ನ ತೋರಿಸುತ್ತಿದ್ದ 11ಶ್ರೀದ ಒಲಿದಿಹ ಇವನ ಯೋಗ್ಯತೆ ದೊಡ್ಡದು,ವೈದಿಕ ಸುಪೂರ್ಣ ಬೋಧರ ಶಾಸ್ತ್ರವೆಲ್ಲ,ಓದಿ ಶ್ರೀ ಐಜಿ ವೇಂಕಟರಾಮಾರ್ಯರಲ್ಲಿಉತ್ತಮ ಜ್ಞಾನಿಯು ಆದ ಜಯತೀರ್ಥ 12ಸುರವೃಂದದಲಿ ದೊಡ್ಡ ಸ್ಥಾನದವ ಇವನೆಂದುಹರಿಯೇ ಈ ಜಯತೀರ್ಥನಲಿ ತೋರಿಹನುಗುರುಐಜಿಯರ ಸುತನ ಅಪಮೃತ್ಯು ತರಿದಿಹನುಭಾರಿತರ ಆಶ್ಚರ್ಯ ಇನ್ನೂ ತೋರಿಹನು 13ಬೃಹತಿಸಹಸ್ರಪ್ರಿಯ ಮಹಿದಾಸ ಜಗದೀಶಬ್ರಹ್ಮಪಿತ ಭಕ್ತಪಾಲಕ ಪರಮಹಂಸಮಹಿಶಿರಿಕಾಂತ `ಶ್ರೀ ಪ್ರಸನ್ನ ಶ್ರೀನಿವಾಸ'ಮಹಾಭಕ್ತ ಶ್ರೀ ವಿಷ್ಣು ತೀರ್ಥಾಯಶರಣು 14 ಪ
--------------
ಪ್ರಸನ್ನ ಶ್ರೀನಿವಾಸದಾಸರು