ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಈ) ಯತಿವರ್ಯರು ಶ್ರೀ ವ್ಯಾಸರಾಯರ ಸ್ತುತಿ ಇದಿರ್ಯಾರೊ ಗುರುವೆ ಸರಿಯಾರೊ ಯತಿಗೆ ಸಮರ್ಯಾರೊ ಪ ದುರುಳ ವಾದಿಗಳನ್ನು ಮರುಳು ಮಾಡೋರನ್ನ ತರಿದಟ್ಟಿ ಚಂದ್ರಿಕೆ ಗ್ರಂಥವ ರಚಿಸಿ ಧರಣಿ ಸುರರ ಪರಿವೃಢರ ಸುನಿಕರಕೆ ಪರಿಪರಿಯಲಿ ಉಪದೇಶಿಸುತಿಪ್ಪಗೆ 1 ಕನಕ ಕಶಿಪುತನಯನ ಘನ ಅಂಶದಿ ಫಣಿಗಣ ರಮಣನಾವೇಶದಿ ಪೊಳೆಯುತ ದಿನದಿನದಲಿ ಹರಿಮನ ತಣಿಸುತಲಿಹ ಘನ ಮಹಿಮನೆ ಶ್ರೀ ಯತಿಕುಲತಿಲಕಾ 2 ಉದ್ದಂಡ ವಿತಂಡಕೆ ಗಂಡುಸಿಂಹ ತರ್ಕದೆ ತಾಂಡವ ಯುಕ್ತಿಯ ದಂಡುಗಳನೆ ಕಟ್ಟಿಕೊಂಡು ತಾರ್ಕಿಕರ ಷಂಡಗಳನೆ ಖಂಡಿಸುತಿಹ ಯತಿಯೆ 3 ಬ್ರಹ್ಮಣ್ಯತೀರ್ಥರ ಕರಕಮಲದಿ ಪುಟ್ಟಿ ಬ್ರಹ್ಮಜನಕ ನರಸಿಂಹ ಮೂರುತಿಯ ಹೃ- ದ್ಗಂಹ್ವರದಲಿ ಧ್ಯಾನಿಸುತಿಹ ವ್ಯಾಸರಾ ಹೃದಯಾಂಬುಧಿಯೊಳು ಮೆರೆವಗೆ 4 ದಶದಿಶೆಯಲಿ ದಶರಥಸುತ ಮಹಿಮೆಯ ಕುಶಲದಿಂದಲಿ ಸಭೆಯೊಳಗೆ ಸ್ಥಾಪಿಸುತ ಹೊಸ ಹೊಸ ಬಿರುದು ಸಂದ್ಹೆಸರುವೆತ್ತಿರುವಂಥ ವಸುಧಿಯೊಳಗೆ ಸುಕರ ಸುಚರಿತೆಗೆ 5 ಹೊಳೆಯುತಲಿರುವ ರುಕ್ಮಿಣಿಪತಿ ಕೃಷ್ಣನು ನಲಿಯುತ ಕುಣಿಕುಣಿದಾಡುತಲಿಪ್ಪನು ಥಳಥಳಿಸುವ ರಾಮ ವೇದವ್ಯಾಸರು ನಿಮ- ಗಿಳೆಯೊಳಮೂಲ್ಯ ಪ್ರಸಾದವನೀವರು 6 ಅಡಿಗಡಿಗತಿ ದೃಢತರ ಯುಕ್ತಿಗಳಿಂದ ಸಡಗರದಿಂದಲಿ ಬಿಡದೆ ನುಡಿಯುತ ನಡದದ್ವೈತದಡವಿಯೊಳಗೆ ಪೊಕ್ಕು ಕೆಡಗುತಿಹ ನ್ಯಾಯಾಮೃತಾಚಾರ್ಯರಿಗೆ 7 ಶ್ರೀದವಿಠಲಗತಿ ಪ್ರೀಯರಾದ ಶ್ರೀ- ಪಾದರಾಯರಲಿ ಓದಿ ಗ್ರಂಥಗಳ ವಾದಿರಾಜ ವಿಜಯೀಂದ್ರ ಪ್ರಮುಖರಿಗೆ ಆದರದಲಿ ಪಾಠ ಹೇಳುತಲಿಪ್ಪಗೆ 8
--------------
ಶ್ರೀದವಿಠಲರು
ಚರಣಕಮಲಯುಗಕೆ ನಮಿಪೆ ನಿರುತವನುದಿನ | ಶ್ರೀ ರಾಘವೇಂದ್ರ ಪ ಕರುಣಾಸಾಂದ್ರ ಯತಿಕುಲೇಂದ್ರ ಅ.ಪ ವೇನಮತವಿದಾರ ಸುಂದರ ಜ್ಞಾನದಾತ ಗುರುವರ | ಶ್ರೀನಾಥನ ಪದಪಂಕಜಧ್ಯಾನನಿರತ ಸುಗುಣಭರಿತ 1 ಮಧ್ವಶಾಸ್ತ್ರಪಠಿಸಿ ಬಹುಪ್ರಸಿದ್ಧಟೀಕೆ ರಚಿಸುತ | ಸದ್ವೈಷ್ಣವ ಸಿದ್ಧಾಂತವೇ ಶುದ್ಧವೆನಿಸಿ ಮೆರೆದ ಧೀರಾ 2 ನರಹರಿ ಸಿರಿರಾಮಕೃಷ್ಣ ವರವೇದವ್ಯಾಸರು | ಇರುತಿರುವರು ನಿನ್ನೊಳು ತವ ಪರಿಜನ ಸೇವೆಗಳ ಕೊಳುತ3 ವಾರಾಹಿ ಸುಕ್ಷೇತ್ರನಿಲಯ ಚಾರುಚರಿತ ಗುಣಮಯ | ಆರಾಧಿಪ ದೀನಾಳಿಗೆ ಸಾರಸೌಖ್ಯವೀವ ಕಾವ 4 ಶ್ರೀಶಕೇಶವಾಂಘ್ರಿದೂತ ದಾಸಜನನುತ | ಲೇಸಾಗಿಹ ಭೂಸುರ ಸಹವಾಸವಿತ್ತು ಕರುಣಿಸಯ್ಯ 5
--------------
ಶ್ರೀಶ ಕೇಶವದಾಸರು
ಪುರಂದರ ಗುರುವರ್ಯ ಪ ಗುರುವರ್ಯ ಕಾಯಬೇಕೆನ್ನ ಮಧ್ವ ಗುರುಕೃತ ಗ್ರಂಥಾರ್ಥಜ್ಞಾನ ಕೊಟ್ಟು ಕರಣತ್ರಯ ಗಳಿಂದಾಚರಿಸುವ ಕರ್ಮವ ಹರಿಮಾಡಿಸುವನೆಂಬ ಸ್ಮರಣೆಯ ಕರುಣಿಸೊ ಅ.ಪ ಸುರಮುನಿ ನಿನ್ನ ಪ್ರಾರ್ಥನದಿ ಶ್ರೀ ಮ ದ್ಗುರು ವೇದವ್ಯಾಸರು ದಯದಿ ಪಾ- ಮರ ಪಂಡಿತರಿಗೆ ಸುಲಭದಿ ಧರ್ಮ ತಿಳಿದಾ- ಚರಿ ಪರೆಂದು ಮುದದಿ ಅರಿತು ನಿರುತ ಶೇವಿಪರಿಗೆ ಪರಮ ಮಂಗಳವೀವ ಭಾಗವತ ಗ್ರಂಥ ನಿರ್ಮಿಸಿದರು ಸತ್ಯ 1 ಕಲಿಯುಗದಲಿ ಹರಿನಾಮ ಜನರ ಕಲಿ ಕಲ್ಮಷಾದ್ರಿ ಸೂತ್ರಾಮ ಎಂದು ತಿಳಿದು ಕೀರ್ತಿಪರಿಗೆ ಪರಮ ಮಂ ಗಳ ಕರನಾಮದ ಮಹಿಮ ಎನುತ ಪುರಂದರ ಗಡ ದಲಿ ಪುಟ್ಟಿ ಬಲು ವಿಧ ಹರಿನಾಮಂ- ಗಳನು ವಿರಚಿಸಿದ 2 ಕಾಶ್ಯಾದಿ ಕ್ಷೇತ್ರ ಸಂಚರಿಸಿ ಪದ ರಾಶಿ ಸುಳಾದಿಗಳ ರಚಿಸಿ ಸಂ- ತೋಷ ತೀರ್ಥರ ಮತ ಬಲಿಸಿ ಗುರು ವ್ಯಾಸರಿಂದುಪದೇಶ ಗ್ರಹಿಸಿ ಜಗದಿ ಭೂಸುರ ಪಾಲಕ ಶ್ರೀಶಕಾರ್ಪರನರ ಕೇ ಸರಿ ಗತಿ ಪ್ರಿಯ ದಾಸರೆಂದೆನಿಸಿದ 3
--------------
ಕಾರ್ಪರ ನರಹರಿದಾಸರು
ರಾಘವೇಂದ್ರನೆಂದು ನುಡಿದವರಿಗೆ | ಅನುರಾಗದಿಸಲಹುವರಾ ಯೋಗಿ ಶ್ರೀ ರಾಘವೇಂದ್ರರಾಯಾ ಪ ರಾಮಧ್ಯಾನವನು ಮಾಡುತಲನುದಿನ | ಜಯಿಸಿದಿ ರಾಕ್ಷಸರಾ ರಾಯರಾವ್ಯಾಧಿಗಳಳಿದು ಸೇವಾ ಕೊಡುತಿಹರಾ ರಮಾವಲ್ಲಭನಾಶ್ರಯ ಮಾಡಿ | ರಾಜ್ಯವಾಳಿದರೆ ರಾಘವೇಂದ್ರ 1 ಘಾತುಕ ದನುಜನ ಕಾಲವಿದೆಂದು ಎಣಿಸದೆ ಕಲಿಯುಗ ಘನ ಪರಾಕ್ರಮದಿಂದ ಮೆರೆಯುವಿ | ಸುಯತೀಂದ್ರ ನೀ ಘನ ಜಾಡ್ಯಗಳ ಕಳೆದು ಜನರಿಗೆ ಸುರಿಸಿದಿ ಸುಖಮೇಘ ಘಾ ಬುರಿಯಿಂದಲಿ ಬಂದ ಆತುರರಿಗೆ ಕಳದಿರೊ ನೀ ಅಘವಾ 2 ವೇದಶಾಸ್ತ್ರ ಪಾರಾಯಣ ಮಾಡುತ | ವೃಂದಾವನ ದೊಳಿರುವೇ ವ್ಯಥೆಯಿಂದಲಿ ಬಂದಾ ತುರರಿಗೆ | ಅತಿಸುಖವನು ಸುರಿವೇ ವೇದವ್ಯಾಸರು ಮೊದಲಾದರೊಳು | ಆಧಾರದೊಲಿರುವೇ ವೇಷತಾಳಿ ನೀ ಯತಿಯಾಗಿ ಈ ಜಗದೊಳುನೀ ಮೆರೆವೆ 3 ಬಿಡುವೆನುರಾಘವೇಂದ್ರಾ ಮತ್ಸ್ಯ ದ್ರಾಕ್ಷಾಫಲದಂತೆ ಮಧುರವು ತೋರಿಸಲಹೊಗುಣಸಾಂದ್ರಾ ದ್ರವ್ಯ ಪತಿಸಿರಿ ನರಸಿಂಹ ವಿಠಲನ ತೋರೋದಯದಿಂದ ನೀರಾಘವೇಂದ್ರಾ 4
--------------
ಓರಬಾಯಿ ಲಕ್ಷ್ಮೀದೇವಮ್ಮ
ವಾದಿರಾಜಗುರು ನಿಮ್ಮಡಿಗೆರಗುವೆ ಸಾದರದಿಂದಲಿ ಮಂದನ ಕೈಪಿಡಿಯೋ ಪ ಸಾಧುಜನಾಶ್ರಯ ಮೇದಿನೀಸುರತರು ಪಾದವಪಿಡಿದಿಹೆ ಬೋಧಿಸು ವಿಜ್ಞಾನ ಅ.ಪ. ಕಾದಿಡೆ ಸುಜನಕೆ ಮಧ್ವಾಗಮನಿಧಿ ಸಾದರದುದಿಸಿದಿ ಬುಧಜನಕುಲಮೌಳಿ ಬೂದಿಯ ಮಾಡುತ ದುರ್ಮತಜಾಲವ ಮಾಧವ ಮಧ್ವರ ಸೇವೆಯ ಸಲ್ಲಿಸಿದೇ 1 ಕವಿತಾವನಿತೆಯ ಕುಣಿಸುತ ಶಾಸ್ತ್ರವ ನವವಿಧ ರಸದಿಂ ಪೇಳಿದೆ ಶಿಷ್ಯರಿಗೆ ಭುವಿಯಲಿ ಮೆರೆದೆಯೋ ಮಧ್ವಾನುಜ ತೆರ ಪವನ ಮತಾಬ್ಧಿಯ ಸೋಮನೆ ಶರಣೆಂಬೆ2 ರಿಕ್ತಬ್ರಹ್ಮನ ಭಕ್ತರ ನೊಲ್ಲನು ಯುಕ್ತಿಗಳೆಂಬುವ ಮಲ್ಲಿಗೆ ಪಟ್ಟಲಿ ಶಕ್ತಯತೀಂದ್ರನೆ ಅಡಗಿಸಿ ಸರ್ವೋ- ದ್ರಿಕ್ತನ ಗುಣಗಣ ಸಾಧಿಸಿ ನೀ ಮರೆದೇ3 ತೀರ್ಥಕ್ಷೇತ್ರವ ಪಾವನಗೈಯ್ಯಲು ಸುತ್ತುತನೀಡಿದೆ ತೀರ್ಥಪ್ರಬಂಧವನೂ ಪಾರ್ಥಿವ ಮೊರೆಯಿಡೆ ಅಕ್ಷತೆನೀಡುತ ಶತ್ರುಗಳಳಿಸುತ ಪೊರೆದೆಯೊ ಕರುಣಾಳು4 ಅರವತ್ನಾಲ್ಕು ಕಲಾಜ್ಞನೆ ಗುಣನಿಧಿ ಸುರಗಣಗಚ್ಚಿರಿಯೇ ಸರಿ ತವ ಮಹಿಮ ಹರಿಸಿದೆ ಮೃತ್ಯುವ ರಾಜನ ಅಳಿಯಗೆ ಸಿರಿಪತಿ ವ್ಯಾಸರ ಕಂಡೆಯೊ ಪ್ರತ್ಯಕ್ಷ5 ಗುಂಡಕ್ರಿಯೆ ವೈಕುಂಠ ವರ್ಣನೆ ಕಂಡಕಂಡಪದ ಪುಂಜವ ಪಾಡುತಲೀ ಕೂಡದು ಭಾಷಾ ಸಡಗರ ವೆಂಬುದ ಪಂಡಿತನಿಕರಕೆ ತೋರಿದೆ ಯತಿತಿಲಕಾ6 ಜಂಗಮಗರುವನ ಭಂಗಿಸೆ ತವಕದಿ ಇಂಗಿಸಿ ಸಲಹಿದೆ ವಿಪ್ರರ ಕಷ್ಟಗಳ ಗಂಗಾಪಿತ ತ್ರಿವಿಕ್ರಮ ದೇವನ ಮಂಗಳ ಸುರಿಸಲು ಸ್ವಾದಿಲಿ ಸ್ಥಾಪಿಸಿದೆ7 ಗೋಧರ ಹಯಮುಖ ಸಾಕ್ಷಾತ್ತಿ ಎಂಬುವ ಛಂದದಿ ನೀಡಿದ ಓದನವೆಂತೆನೆ ಸಾಧ್ಯವೆ ಶೇಷನು ಪೊಗಳಲು ನಿಮ್ಮನು ಮಂದಿರನವನಿವ ನೆನ್ನುತ ಕೈ ಪಿಡಿಯೋ8 ಇಂದ್ರನ ದೂತರ ತಡೆಯುತ ದಿನತ್ರಯ ಚಂದದಿ ಕುಳಿತೆಯಾ ಬೃಂದಾವನದೊಳಗೆ ಇಂದಿಗು ನೋಳ್ಪರು ಬುಧಜನ ನಿಮ್ಮನು ವೃಂದಾರಕಗಣ ವಂದಿತ ಚರಣಯುಗ9 ಸುಂದರ ಹಯಮುಖ ರಾಮನು ಕೃಷ್ಣನು ವೇದವ್ಯಾಸರು ಹನುಮಾದಿ ತ್ರಯರು ಮಧ್ಯದಿ ಕುಳಿತಿಹ ನಿನ್ನ ಸುನಾಲ್ಕೆಡೆ ನಿಂದಿಹರೆಂಬುದು ಸಿದ್ಧವು ಮಹಮಹಿಮಾ 10 ಬೃಂದಾವನ ಪಂಚದಿ ಹರಿ ತಾನಿಹ ಚಂದದಿ ಸೇವೆಯ ಕೊಳ್ಳುತ ನಿನ್ನಿಂದ ಸುಂದರ ದಶಗಳ ಪಂಚನುರೂಪವ ವಂದಿಸಿ ನೋಡುತ ನೆನೆಯುವೆ ಏನೆಂಬೆ11 ಗಂಗಾಪಿತ ತ್ರಿವಿಕ್ರಮದೇವನ ಹಿಂಗದೆ ನೆನೆಯುವೆ ಲಕ್ಷಾಭರಣವನು ರಂಗಗೆ ನೀಡಿದೆ ನಮ್ಮಯ ಭವವನು ಇಂಗಿಸೆ ಕಷ್ಟವೇ ಗುರುವರ ದಯಮಾಡೋ12 ಜಯಮುನಿ ಹೃದಯದಿ ವಾಯುವಿನಂತರ ಜಯದಿಂ ನಲಿಯುವ ಶ್ರೀಕೃಷ್ಣವಿಠಲನ ದಯದಿಂ ತೊರಿಸು ಭಾವೀಜಯಾಸುತ ಹಯಮುಖ ಕಿಂಕರ ನಮಿಸುವೆ ಭೂಯಿಷ್ಠಾ13
--------------
ಕೃಷ್ಣವಿಠಲದಾಸರು