ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಲಿಸಯ್ಯ ಪದುಮವದನ ಪಾಲಸಾಗರಶಾಯಿ ನಂಬಿದೆ ಪ ಪಾಲ ಸುಜನಶೀಲ ಸುಗುಣ ಕಾಲಕಾಲದಿ ತವ ಭಜನ ಅ.ಪ ನಾದಬ್ರಹ್ಮನಾದಿಕಾಲದ ಆದಿವಸ್ತು ಭಜಿಪೆ ಸದಾ ಮೋದದೀಯೋ ಎನಗೆ ಮುದ ಭೇದವಾದ ಗೆಲಿದ ವಿಮಲ ಸಾಧುಸುಜನರಮಿತವರ್ತನ ವೇದವೇದಾಂತದೊಳು ಗೌಪ್ಯ ವಾದ ನಿಜ ಬೀಜಮಂತ್ರ 1 ಮಾಲತುಲಸಿ ಕೌಸ್ತುಭಾಂಬರ ಮೇಲುನಿಲಯ ಕುಜನಕುಠಾರ ಶೀಲ ಸುಗುಣ ಕರುಣಾಮಂದಿರ ಕೀಳುತನದಿ ಮಾಡಿದ ಎನ್ನ ಹಾಳು ಪಾಪಗಳನು ಸುಟ್ಟು ಬಾಲನೆಂದು ಕರುಣವಿಟ್ಟು ಮೂಲತತ್ತ್ವಕಿಳಿಸು ದಯದಿ 2 ಭಾಸುರಕೋಟಿವರಪ್ರಕಾಶ ಸಾಸಿರನಾಮ ಜಗಜೀವೇಶ ದೋಷಹರಣ ಭವವಿನಾಶ ದಾಸಜನರ ಪ್ರಾಣಪ್ರಿಯ ಪೋಷಿಸೆನ್ನನುಮೇಷÀ ನಿಮ್ಮ ದಾಸರ ದಾಸನೆನಿಸಿ ಶೇಷಶಯನ ಶ್ರೀಶ ಶ್ರೀರಾಮ 3
--------------
ರಾಮದಾಸರು
ಶರಣು ಸಹಜಭಾವ ಸಿರಿಯರ ಜೀವ ಶರಣು ಶರಣು ದೇವ ದೇವ ಪ ಶರಣು ನಿನ್ನ ಚರಣಸೇವೆ ಕರುಣಿಸೆನಗೆ ನಿರುತದಭವ ಪರಮಪಾವನ ನಿಮ್ಮ ಚರಿತ ಕರುಣಿಸೆನ್ಹøದಯಕ್ಕೆ ಸತತ ಪೊರೆಯೊ ಪ್ರೇಮದಿ ದುರಿತಪರ್ವತ ತರಿದು ತೊರೆಸಿ ಜಗದ ಮಮತೆ ಅ.ಪ ಸಾರ ಸುರಸಮೂಹಸೇವಿತ ಮಾರಾರಿವಿನುತ ಕ್ಷೀರವಾರಿಧಿ ಸುತೆಯ ಪ್ರಿಯನಾಥ ಸನಕಾದಿನಮಿತ ಸೇರಿ ಭಕ್ತರಗಣದಲಿ ಗುಪ್ತ ನಲಿಯುವಿ ಮಮತೆ ತೋರಿ ಎನ್ನನು ಮಾಡು ಪಾವನ ಮೀರದ ಸಂಸಾರಬಂಧನವಾರಿಯ ದಾಂಟಿಸುಯೀಕ್ಷಣ ಸೇರಿಸದೆ ಎನ್ನ ಮಾಯಾಜಾಲದಿಂ ಸೇರಿಸು ನಿಜಜ್ಞಾನ ದಯದಿ 1 ವೇದವೇದಂಗಳಿಗೆ ಅಗೋಚರ ವೇದಂಗಳಾಧಾರ ವೇದವೇದ್ಯಮಳೈರ್ಕ ಪರತರ ವೇದಗಳ್ಹಿತಕರ ವೇದವೇದಾಂಗ ಶ್ಯಾಮಸುಂದರ ವೇದಾದಿ ಮನೋಹರ ವೇದವಿದ್ಯೆ ಬೋಧಿಸಯ್ಯ ವೇದಸಾಧನ ತೋರಿಸಯ್ಯ ವೇದಮಂತ್ರ ಸಿದ್ಧಿಸಯ್ಯ ವೇದವೇದಾಂತದೊಳು ಗೌಪ್ಯವಾದ ತತ್ವದ ಮೂಲ ತಿಳಹಿ ವಾದಬುದ್ದಿಯ ನೀಗಿಸಿ ನಿಮ್ಮ ಪಾದಭಕ್ತಿಯ ಕರುಣಿಸಭವ 2 ಭುವನತ್ರಯದ ಪರಮ ಸುಸೂತ್ರ ವಾರಿಜನೇತ್ರ ಭುವನತ್ರಯದ ಪಾವನ ಸ್ತೋತ್ರ ಪರಮಪವಿತ್ರ ಭುವನಜಾತೆಯ ಮೋಹದ ಮಿತ್ರ ವನರುಹ ಗಾತ್ರ ಭುವನದ್ಹತ್ತವತಾರ ದೇವ ಭುವನವೀರೇಳು ಹೊತ್ತು ಆಳುವ ಜಯವ ಪೊಂದಿಸಿ ನಿಮ್ಮಯ ಕರುಣದೊರಕಿಸಿ ದಯದಿ ಮುಕ್ತಿಯ ಕೊಡು ಶ್ರೀರಾಮ 3
--------------
ರಾಮದಾಸರು
ಶ್ರೀರಾಘವೇಂದ್ರರು ಸಂತಜನರ ಪ್ರಿಯ ಸಂತತಕರುಣಿಸು ಮಂತ್ರಾಲಯ ಸುಖದಾತ ನಮೋ ಮಂತ್ರಮೂರ್ತಿ ಗುರುನಾಥ ಪ ಬಾಗಿವಂದಿಪೆ ದಯಾಸಾಗರ ನಿಜಯತಿ ರಾಘವೇಂದ್ರ ಸುಖದಾತ ನಮೋ ಮಂತ್ರಮೂರ್ತಿ ಗುರುನಾಥ 1 ಜ್ಞಾನಕವಚ ತೊಟ್ಟು ಕ್ಷೋಣಿಯೊಳ್ ಅವತರಿಸಿದಿ ಜ್ಞಾನಶರಧಿ ಸುಖದಾತ ನಮೋ ಮಂತ್ರಮೂರ್ತಿ ಗುರುನಾಥ 2 ಮೇದಿನ್ಯುದ್ಧರಿಸಿದಿ ವೇದವೇದಾಂತದ ಸ್ವಾದವರಿದು ಸುಖದಾತ ನಮೋ ಮಂತ್ರಮೂರ್ತಿ ಗುರುನಾಥ 3 ವಾದಿಮತರ ಕುವಾದ ಮುರಿದು ಸು ಮಂತ್ರಮೂರ್ತಿ ಗುರುನಾಥ 4 ಜಗದೊಳಗನುಪಮ ಭಗವದ್ಭಕ್ತಿ ಘನ ಮಿಗಿಲೆನಿಸಿದಿ ಸುಖದಾತ ನಮೋ ಮಂತ್ರಮೂರ್ತಿ ಗುರುನಾಥ 5 ನಿತ್ಯ ನೆನಿಪ ನಿಜ ತತ್ತ್ವದಾದಿ ಜಗ ಕುತ್ತರಿಸಿದಿ ಸುಖದಾತ ನಮೋ ಮಂತ್ರಮೂರ್ತಿ ಗುರುನಾಥ 6 ಸತ್ಯವಾದ ಪರಮಾರ್ಥಪಥದಿ ನಿಂತು ನಿತ್ಯದಾಡಿದಿ ಸುಖದಾತ ನಮೋ ಮಂತ್ರಮೂರ್ತಿ ಗುರುನಾಥ 7 ಪೃಥ್ವಿಯೊಳು ನಿಮ್ಮ ಭಕ್ತಜನರ ಬಿಡ ಗುರುನಾಥ 8 ಕೂಡಿಸಿ ದ್ವಿಜವೃಂದಾಡುತಲನುದಿನ ಮಂತ್ರಮೂರ್ತಿ ಗುರುನಾಥ 9 ನಿರುತ ಭೂಸುರಗಣಕ್ಹರುಷವಿತ್ತು ಸದಾ ಮಂತ್ರಮೂರ್ತಿ ಗುರುನಾಥ 10 ಬೇಡಿದವರಿಗೆ ಬೇಡಿದ ವರಗಳ ಮಂತ್ರಮೂರ್ತಿ ಗುರುನಾಥ 11 ಗಾಢಮಹಿಮೆ ತೋರಿ ರೂಢಿಜನರ ಕಾ ಪಾಡ್ಹಿದ್ಹಿತದಿ ಸುಖದಾತ ನಮೋ ಮಂತ್ರಮೂರ್ತಿ ಗುರುನಾಥ 12 ಧರೆಯೊಳು ನರಹರಿ ಶರಣಜನರ ಕೂಡಿ ಮಂತ್ರಮೂರ್ತಿ ಗುರುನಾಥ 13 ಮುಳುಗಿರ್ದ ಪುಣ್ಯಮಯದಿಳೆಯನು ನಿಮ್ಮೊಳು ಗುರುನಾಥ 14 ಧರ್ಮಗೆಟ್ಟಿಳಗೆ ಸದ್ಧರ್ಮ ಬಿತ್ತಿದಿ ಸ್ಥಿರ ಮಂತ್ರಮೂರ್ತಿ ಗುರುನಾಥ 15 ಸಾಧಿಸಿ ಮಹ ತಪದಾದಿ ಮೂರ್ತಿಯಿಂ ಮಂತ್ರಮೂರ್ತಿ ಗುರುನಾಥ 16 ನಿಗಮಾತೀತನೊಳ್ ಬಗೆಬಗೆಯಾಟವ ಮಂತ್ರಮೂರ್ತಿ ಗುರುನಾಥ 17 ಮಂಗಳಮೂರ್ತಿಯ ಕಂಗಳಿಂದ ಕಂಡು ಭವ ಮಂತ್ರಮೂರ್ತಿ ಗುರುನಾಥ 18 ತುಂಗನಿವಾಸ ಮಹ ಮಂಗಳಾಂಗ ಸುಜ ಮಂತ್ರಮೂರ್ತಿ ಗುರುನಾಥ 19 ನಿತ್ಯ ನಿಮ್ಮಪಾದ ಭಕ್ತಿಯಿಂ ಭಜಿಸಲು ಮಂತ್ರಮೂರ್ತಿ ಗುರುನಾಥ 20 ಮುಕ್ತಿದಾಯಕ ಜಗದಾಪ್ತ ಶ್ರೀರಾಮನಂ ಮಂತ್ರಮೂರ್ತಿ ಗುರುನಾಥ 21
--------------
ರಾಮದಾಸರು
ಬಂದನು ಸರದಾರ ಸರದಾರಅಂಧಕರಿಪು ಸುಕುಮಾರ ಪ.ಶರಣಾಗತಜನಸುರಮಂದಾರ ದುರಿತಾರಣ್ಯಕುಠಾರಸುರನರಾದಿತ್ರೈಲೋಕೋದ್ಧಾರ ಗಿರಿಜಾಂಕಾಲಂಕಾರ 1ವಲ್ಲೀದೇವಿಮನೋಹಾರ ಒಲ್ಲದಜನಕತಿದೂರಬಲ್ಲವವೇದವೇದಾಂತದಸಾರಖುಲ್ಲದನುಜ ಸಂಹಾರ2ಸುಕ್ಷೇತ್ರಪಾವಂಜಾಖ್ಯಪುರವರ ಸುಜ್ಞಾನನಿಧಿ ಗಂಭೀರಲಕ್ಷ್ಮೀನಾರಾಯಣನಕಿಂಕರರಕ್ಷಿಸು ನಮಿತಕುಬೇರ3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ