ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಮೋ ನಮಸ್ತೇ ನರಸಿಂಹ ದೇವಾ ಸ್ಮರಿಸುವವರ ಕಾವಾ ಪ ಸುಮಹಾತ್ಮ ನಿನೆಗೆಣೆ ಲೋಕದೊಳಾವಾ ತ್ರಿಭುವನ ಸಂಜೀವಾ ಉಮೆಯರಸನ ಹೃತ್ಕಮಲದ್ಯುಮಣಿ ಮಾ ರಮಣ ಕನಕ ಸಂಯಮಿ ವರವರದಾ ಅ ಕ್ಷೇತ್ರಜ್ಞ ಕ್ಷೇಮಧಾಮ ಭೂಮಾ ದಾನವ ಕುಲಭೀಮಾ ಸನ್ನುತ ಬ್ರಹ್ಮಾದಿ ಸ್ತೋಮಾ ಸನ್ಮಂಗಳ ನಾಮಾ ಚಿತ್ರ ಮಹಿಮನಕ್ಷತ್ರನೇಮಿಸ ರ್ವತ್ರಮಿತ್ರ ಸುಚರಿತ್ರ ಪವಿತ್ರ 1 ಅಪರಾಜಿತ ಅನಘ ಅನಿರ್ವಿಣ್ಣ ಲೋಕೈಕ ಶರಣ್ಯ ಶಫರಕೇತು ಕೋಟಿಲಾವಣ್ಯ ದೈತ್ಯೇಂದ್ರ ಹಿರಣ್ಯಕ ಶಿಪುಸುತನ ಕಾಯ್ದಪೆನೆನುತಲಿ ನಿ ಷ್ಕಪಟ ಮನುಜಹರಿವಪುಷ ನೀನಾದೆ 2 ತಪನ ಕೋಟಿ ಪ್ರಭಾವ ಶರೀರಾ ದುರಿತೌಘವಿದೂರಾ ಪ್ರಪಿತಾಮಹ ಮಂದಾರ ಖಳವಿಪಿನ ಕುಠಾರಾ ಕೃಪಣಬಂಧು ತವ ನಿಪುಣತನಕೆ ನಾ ನುಪಮೆಗಾಣೆ ಕಾಶ್ಯಪಿವರವಾಹನಾ 3 ವೇದವೇದಾಂಗವೇದ್ಯಾ ಸಾಧ್ಯ ಅಸಾಧ್ಯ ಶ್ರೀದ ಮುಕ್ತಾಮುಕ್ತರಾರಾಧ್ಯಾ ಅನವದ್ಯ ಮೋದಮಯನೆ ಪ್ರಹ್ಲಾದವರದ ನಿ ತ್ಯೋದಯ ಮಂಗಳ ಪಾದಕಮಲಕೆ 4 ಅನಿಮಿತ್ತ ಬಂಧು ಜಗನ್ನಾಥ ವಿಠಲ ಸಾಂಪ್ರತ ನಿನಗೆ ಬಿನ್ನೈಸುವೆ ಎನ್ನಯ ಮಾತಾ ಲಾಲಿಸುವುದು ತಾತಾ ಗಣನೆಯಿಲ್ಲದವ ಗುಣವೆನಿಸಿದೆ ಪ್ರತಿ ಕ್ಷಣಕೆ ಕಥಾಮೃತ ಉಣಿಸು ಕರುಣದಿ 5
--------------
ಜಗನ್ನಾಥದಾಸರು
ಶರಣು ಸಹಜಭಾವ ಸಿರಿಯರ ಜೀವ ಶರಣು ಶರಣು ದೇವ ದೇವ ಪ ಶರಣು ನಿನ್ನ ಚರಣಸೇವೆ ಕರುಣಿಸೆನಗೆ ನಿರುತದಭವ ಪರಮಪಾವನ ನಿಮ್ಮ ಚರಿತ ಕರುಣಿಸೆನ್ಹøದಯಕ್ಕೆ ಸತತ ಪೊರೆಯೊ ಪ್ರೇಮದಿ ದುರಿತಪರ್ವತ ತರಿದು ತೊರೆಸಿ ಜಗದ ಮಮತೆ ಅ.ಪ ಸಾರ ಸುರಸಮೂಹಸೇವಿತ ಮಾರಾರಿವಿನುತ ಕ್ಷೀರವಾರಿಧಿ ಸುತೆಯ ಪ್ರಿಯನಾಥ ಸನಕಾದಿನಮಿತ ಸೇರಿ ಭಕ್ತರಗಣದಲಿ ಗುಪ್ತ ನಲಿಯುವಿ ಮಮತೆ ತೋರಿ ಎನ್ನನು ಮಾಡು ಪಾವನ ಮೀರದ ಸಂಸಾರಬಂಧನವಾರಿಯ ದಾಂಟಿಸುಯೀಕ್ಷಣ ಸೇರಿಸದೆ ಎನ್ನ ಮಾಯಾಜಾಲದಿಂ ಸೇರಿಸು ನಿಜಜ್ಞಾನ ದಯದಿ 1 ವೇದವೇದಂಗಳಿಗೆ ಅಗೋಚರ ವೇದಂಗಳಾಧಾರ ವೇದವೇದ್ಯಮಳೈರ್ಕ ಪರತರ ವೇದಗಳ್ಹಿತಕರ ವೇದವೇದಾಂಗ ಶ್ಯಾಮಸುಂದರ ವೇದಾದಿ ಮನೋಹರ ವೇದವಿದ್ಯೆ ಬೋಧಿಸಯ್ಯ ವೇದಸಾಧನ ತೋರಿಸಯ್ಯ ವೇದಮಂತ್ರ ಸಿದ್ಧಿಸಯ್ಯ ವೇದವೇದಾಂತದೊಳು ಗೌಪ್ಯವಾದ ತತ್ವದ ಮೂಲ ತಿಳಹಿ ವಾದಬುದ್ದಿಯ ನೀಗಿಸಿ ನಿಮ್ಮ ಪಾದಭಕ್ತಿಯ ಕರುಣಿಸಭವ 2 ಭುವನತ್ರಯದ ಪರಮ ಸುಸೂತ್ರ ವಾರಿಜನೇತ್ರ ಭುವನತ್ರಯದ ಪಾವನ ಸ್ತೋತ್ರ ಪರಮಪವಿತ್ರ ಭುವನಜಾತೆಯ ಮೋಹದ ಮಿತ್ರ ವನರುಹ ಗಾತ್ರ ಭುವನದ್ಹತ್ತವತಾರ ದೇವ ಭುವನವೀರೇಳು ಹೊತ್ತು ಆಳುವ ಜಯವ ಪೊಂದಿಸಿ ನಿಮ್ಮಯ ಕರುಣದೊರಕಿಸಿ ದಯದಿ ಮುಕ್ತಿಯ ಕೊಡು ಶ್ರೀರಾಮ 3
--------------
ರಾಮದಾಸರು