ಒಟ್ಟು 10 ಕಡೆಗಳಲ್ಲಿ , 3 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನಂದತೀರ್ಥ ವಂದ್ಯ ಪಾಲಿಪುದು ಸು- ಜ್ಞಾನ ಭಕುತಿಯಾನಂದ ಸಾನುರಾಗದಿ ಕಾಯೊ ಸನಕಾದಿ ಮುನಿವಂದ್ಯ ಪ. ಅಖಿಳ ವೇದವಿದಿತ ದಾಸೀಕೃತ ವಿಖನಸಗಣವಿನುತ ನಿಖಿಳ ದೋಷದೂರ ಸಕಲ ಸದ್ಗುಣಪೂರ ಪ್ರಕಟನಾಗೀಗೆನ್ನಿದಿರಿನಲಿ ಸುರನಿಕರನಂದನ ನೀರದಪ್ರಭ 1 ಮಾರನಂದನ ನಿನ್ನಯ ಲೀಲಾಮೃತವಾರುಧಿಯೊಳಗಿಳಿದು ಶ್ರೀರಮಣಿಯು ಇನ್ನು ಪಾರಗಾಣದೆ ತತ್ವ- ಸಾರ ನಿನ್ನುರವನು ಸೇರಿಕೊಂಡಿಹಳು ಕ್ರೂರ ಕರ್ಮಾಚರಣ ತತ್ವವಿಚಾರಗಂಧ ವಿದೂರವಾಗಿಹ ಹಾರಕೂಪದಿ ಮುಳುಗಿರುವನ ಕರಾರವಿಂದದಿ ಪಿಡಿದು ರಕ್ಷಿಸು 2 ವೇದ ಸ್ಮøತ್ಯುಕ್ತವಾದ ಕರ್ಮಗಳೆಂಬೊ ಹಾದಿಯನರಿಯೆ ಇನ್ನು ಈ ಧರೆಯೊಳಗಿಹ ತೀರ್ಥಕ್ಷೇತ್ರಯಾತ್ರೆ- ಯಾದರು ಮಾಡದಿನ್ನು ಎನ್ನನು ಶ್ರೀಧರ ಕರಕಮಲ ಪೂಜಿತಪಾದ ನಿನಗೊಪ್ಪಿಸಿದೆ ದೈನ್ಯದಿ ಕಾದುಕೊಂಬುವ ನೀನೆ ಕರುಣಾಂಬೋಧಿ ಶೇಷಧರಾಧಿರೇಶನ 3
--------------
ತುಪಾಕಿ ವೆಂಕಟರಮಣಾಚಾರ್ಯ
ಪರಮೇಶ್ವರಾ ಸೋಮಶೇಖರಾ ಪ ಗಿರಿಜಾವರಾ ಕರುಣಾಕರಾ ಅ.ಪ ಆದಿಮೂಲಾ ದೇವಾದಿದೇವಾ ಶಿವ ನಾದರೂಪ ಜೀವಾದಿಜೀವ ಶಿವ ವೇದವಿದಿತ ವೇದಾಂತರೂಪ ಶಿವ ವಾದವಾಕ್ಯ ಮಹಾಹ್ಲಾದ ವೈಭವಾ 1 ಅಂಗಜಾರಿ ಚರ್ಮಾಂಬರಧಾರಿ ರಂಗನಾಥ ಮಾಂಗಿರಿ ಸಂಚಾರಿ ಪಾತಕ ಪರಿಹಾರಿ ಲಿಂಗರೂಪ ಶುಭಕಾರಕ ಶೌರಿ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಾಮಚಂದಿರ ಶ್ಯಾಮಸುಂದರ ಪ್ರೇಮಸಾಗರಾ ಪ ಭೂಮಿಜಾತೆಯರಸ ಬಂಧುರ ಕೋಮಲಾಕರ ಶರಣಪಾಲಾ ಅ.ಪ ವೇದವಿದಿತಾ ಮೋದಭರಿತ ಶ್ರೀಧರಾಚ್ಯುತ ಭಾರ ನಿನ್ನದು 1 ಶಿಲೆಯ ಸತಿಯಗೈವ ಪಾದವ ತೊಳೆದ ಜನಕನು ಸುಲಭಮಾರ್ಗದಿ ಶಬರಿ ನಿನ್ನಯ ಜಲಜಪಾದ ಸೇವೆಗೈದಳು 2 ಕರುಣವೇ ಶರಣರ ಪರಮಸೌಭಾಗ್ಯ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವಾಣಿಯೆ ಪುಸ್ತಕಪಾಣಿಯೆ ಮಂಗಳ ವಾಣಿಯೆ ಬ್ರಹ್ಮನ ರಾಣಿಯೆ ವಂದಿಪೆ ಪ. ವೇದವಿದಿತೇ ತವ ಪಾದವ ಸ್ಮರಿಸುವ ಸಾಧನೆಯೆಲ್ಲವ ಮೋದದಿ ಪಾಲಿಸು 1 ಎನ್ನ ನಾಲಿಗೆಯಲ್ಲಿ ಚೆನ್ನಾಗಿ ನೆಲೆಗೊಂಡು ಅನೃತ ಬಾರದೋಲ್ ಘನ್ನೆ ನೀನಾಡಿಸು 2 ಪರಮಪಾವನ ಶೇಷಗಿರಿ ವಾಸನ ನಿಜ ಶರಣರ ಕಥೆ ಪೇಳ್ವ ಪರಿಜ್ಞಾನವಿತ್ತು ನೀಂ3
--------------
ನಂಜನಗೂಡು ತಿರುಮಲಾಂಬಾ
ವಿನತಾನುತ ಮಣಿವರೂಥ ಜನಕಸುತಾ ನಾಥಪ್ರೀತ ಪ ಕನಕಾಂಬರ ಪಾರ್ಥಸೂತ ವನಮಾಲಾ ಮಣಿರಾಜಿತ ಅ.ಪ ಶುಕ ಶೌನಕ ಪರಿಪೂಜಿತ ಸಕಲಾಗಮ ವೇದವಿದಿತ ವಕುಳಸುಮಾಭರಣಾಯತ ಸುಕರಾರ್ಜಿತ ಮೋಕ್ಷದಾತ 1 ಪಾಹಿ ಪಾಹಿ ಪರಮನಾಮ ಪಾಹಿ ಪಾಹಿ ಪೂರ್ಣಕಾಮ ಪಾಹಿ ಪಾಹಿ ದನುಜಭೀಮ ಪಾಹಿ ಪಾಹಿ ಮಾಂಗಿರಿಧಾಮ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವೇದವಿದಿತ ಮಾರಮಣ ಹರೇ ಪ ಸನ್ನುತ ಚರಣ ಶ್ರೀಧರ ಗಂಗಾಪಾದ ನಾರಯಣ ಅ.ಪ ಸಾರಯೋಗಿ ಕವಿತಾರಸ ತೋಷಿತ ಕೈರವ ಸುಮಭವ ವಾಣಿ ವಿಭೂಷಿತ ಭವ ವಾಗ್ರಂಜಿತ ನಾರಾಯಣ ತೇ ನಮೋ ನಮೋ 1 ಭೋಗ ಮಂಟಪೋಲ್ಲಾಸ ಮುಕುಂದ ತ್ಯಾಗ ಮಂಟಪೋಲ್ಲಾಸ ಗೋವಿಂದ ನಾಗಶಯನ ಶರಣಾಗತ ಬೃಂದ ಯೋಗ ಮಂಟಪ ಮಾಂಗಿರಿಪತಿ ನಮೋ ನಮೋ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವೇದವಿದಿತ ಶೌರೀ ಮುರಾರೀ ಮಧು ಕೈಟಭವೈರೀ ಪ ಭೋಗಿ ಶಯನ ಮಾಯ ಶ್ರೀಗುರು ಚಿನ್ಮಯ ನಾಗಭೂಷಣಹೃದಯಾ ಸದಯಾ ಅ.ಪ ನಡುಗಡಲಿನೊಳೆನ್ನ ಬಿಡಬೇಡ ಸಲಹೆನ್ನ ಅಡಿಗೆರಗುವೆ ನಿನ್ನ ಶ್ರೀಶ ಮೋಹನ್ನಾ ಕಡುಬಾಲ ಧ್ರುವ ತನ್ನದೃಢದಿ ನೆನೆಯೆ ನಿನ್ನ ಪಡೆದನು ಪದವಿಯ ತಾ ವಿನೀತ 1 ಅಜಮಿಳವರದನೆ ಗಜರಾಜಗೊಲಿದನೆ ಸುಜನ ಸಮ್ಮಾನಿತನೆ ಮಾಂಗಿರಿಯರಸನೆ ಅಜಸುರ ವಿನುತನೆ ರಾಮದಾಸಾರ್ಚಿತನೆ ಭಜಕ ವಾರಿಧಿಸೋಮ ವಿರಾಮಾ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವೈದೇಹಿ ಪಾಲಿಸೆನ್ನಂ ನಂಬಿದೆ ನಿನ್ನಂ ಪ. ವೇದವಿದಿತೇ ತವಪಾದವ ಸ್ಮರಿಸುವ ಕರವ ಅ.ಪ. ಕಾಮಿತಾರ್ಥವ ನೀಡುವಳೆಂಬುವ ಬಿರುದಾಂಕಿತೆಯಾಗಿರುವ ಕಾಮಜನನೀ ನಿನ್ನ ನಾಮ ಮಂತ್ರಗಳನ್ನು ನೇಮನಿಷ್ಠೆಯೋಳ್ ಜಪಿಸುವಂದದಿ ಸು ಪ್ರೇಮದಿಂದಲಿ ವಿಮಲಮತಿಕೊಡು 1 ಜಾನಕಿನಾಮವ ಧರಿಸಿ ದಾನವಕುಲವೆಂಬ ಕಾನನಂಗಳಿಗಂತು ಹವ್ಯ ವಾಹನನೆನಿಪ ರಾಮನ ಕೈಯಪಿಡಿದ ಪರಮಪಾವನೆ 2 ಶಮದಮಾದಿಗಳಿಂದ ಮೆರೆಯುತಲಿರ್ಪ ಕ್ಷಮೆಗೆ ನೀ ನೆಲೆಯೆಂದು ಯಮಿಕುಲವರ್ಯರು ನಮಿಸಿ ಸ್ತುತಿಸುತ್ತಿಹರು ವಿಮಲ ಶೇಷಾದ್ರಿನಾಥನ ರಮಣಿ ನಿನ್ನಡಿ ಮಣಿದು ಬೇಡುವೆ 3
--------------
ನಂಜನಗೂಡು ತಿರುಮಲಾಂಬಾ
ಶ್ರೀವರನೆ ಬಾ ಮುಕುಂದ ಮಾಧವ ಕಾವರನ್ಯರು ಇಲ್ಲ ಗೋವಿಂದ ಕೇಶವ ಪ ವೇದವಿದಿತ ಹರಿ ಸಾದರ ಮುರವೈರಿ ಮೇದಿನೀಪತಿ ಕೋದಂಡ ಸುವಿಹಾರಿ1 ನೋಡಿ ನಿನ್ನಯ ಚರಣ ಹಾಡಿ ನಿನ್ನಯ ಸುಗುಣ ಬೇಡಿ ನಿನ್ನಯ ಕರುಣ ಪಾಡುವೆನೋ ಶರಣ 2 ಮಂಗಳ ಸುವಿಲಾಸ ಶೃಂಗಾರ ಭಾನುಭಾಸ ಮಾಂಗಿರಿವರವಾಸ ರಂಗೇಶ ಶ್ರೀನಿವಾಸ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀಹರಿ ಶ್ರೀರಮಾ ಮನೋಹರ ನಮೋ ನಮೋರ ಪ. ಸುಜ್ಞಾನಾನಂದ ವಿಮಾನರಂಜನ [ನಮೋ ನಮೋ] ಅ.ಪ ವಿಧಿಭವಾದಿ ವಂದಿತ ನಮೋ ನಮೋ ವೇದವಿದಿತ ವಿಶುದ್ಧರೂಪ ವಿಶ್ವವ್ಯಾಪಕ ವಿದ್ಯಾಧೀಶ ವಿಜ್ಞಾನದಾಯಕ 1 ದುರಿತಹರಣ ಭಕ್ತಭರಣ ಪರಮಪಾವನ ವರಶೇಷಾದ್ರೀಶ ವರದವೆಂಕಟ2
--------------
ನಂಜನಗೂಡು ತಿರುಮಲಾಂಬಾ