ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜೋ ಜೋ ರುಕ್ಷಿಣಿರಮಣ ಜೋ ಜೋ ಕಲ್ಯಾಣ ಜೋ ಜೋ ಗುಣಪರಿಪೂರ್ಣ ವೆಂಕಟರಮಣ ಪ. ರನ್ನ ಮಾಣಿಕದೊಜ್ರ ಚಿನ್ನ ಮಂಟಪದಿ ಘನ್ನ ನವರತ್ನದಿಂ ಮೆರೆವ ತೊಟ್ಟಿಲೊಳು ರನ್ನೆರಿಬ್ಬರ ಕೂಡಿ ನಲವಿಂದ ಕೃಷ್ಣ ಸನ್ನುತನಾಗಿ ಸುರರಿಂದ ಪವಡಿಸಿದ ಜೋ ಜೋ 1 ಕನಕಮಯ ಸರಪಳಿ ಥಳಥಳನೆ ಹೊಳೆಯೆ ಮಿನುಗುವಾಭರಣಗಳು ಝಗ ಝಗಿಸುತಿರಲು ಸನಕಾದಿ ಒಡೆಯನ ಫಣಿಪ ಹಿಂತೂಗೆ ಮುನಿವರನು ಮುಂದೆ ತಾ ಲಾಲಿ ಪಾಡಿದನು ಜೋ ಜೋ 2 ವೇದವನೆ ಕದ್ದವನ ಕೊಂದವನೆ ಜೋ ಜೋ ಸಾಧಿಸಿ ಸುಧೆ ಸುರರಿಗುಣಿಸಿದನೆ ಜೋ ಜೋ ಜಲಧಿ ಮೇದಿನಿ ತಂದೆ ಜೋ ಜೋ ಸಾಧಿಸಿ ಸುಧೆ ಸುರರಿಗುಣಿಸಿದನೆ ಜೋ ಜೋ 3 ಬಲಿಯನೊಂಚಿಸಿದಂಥ ತರಳನೆ ಜೋ ಜೋ ಕುಲವನೆ ಸವರಿದ ಬಲಶಾಲಿ ಜೋ ಜೋ ಲಲನೆ ಸೀತೆಯ ತಂದ ಶ್ರೀರಾಮ ಜೋ ಜೋ ಮೆಲಲು ಪಾಲು ಬೆಣೆÉ್ಣ ಕದ್ದವನೆ ಕೃಷ್ಣ ಜೋ ಜೋ4 ತ್ರಿಪುರ ಸತಿಯರ ವ್ರತವಳಿದೆ ಜೋ ಜೋ ಚಪಲತನದಿಂ ಹಯವನೇರಿದನೆ ಜೋ ಜೋ ಅಪರಿವಿತದವತಾರದಿಂ ಬಳಲಿ ಬಂದು ನಿಪುಣರೆಲ್ಲರು ಸ್ತುತಿಸೆ ಪವಡಿಸಿದೆ ಕೃಷ್ಣ ಜೋ ಜೋ 5 ಅರಸು ಜಯದೇವಿ ಸಂಕರ್ಷಣನೆ ಜೋ ಜೋ ಸಿರಿದೇವಿಪ್ರಿಯ ಶ್ರೀ ನರಹರಿಯೆ ಜೋ ಜೋ ವರರುಕ್ಮಿಣಿ ಸತ್ಯವರ ಕೃಷ್ಣ ಜೋ ಜೋ ಅರಸಿ ಪದ್ಮಾವತಿ ಸಹಿತ ವೆಂಕಟನೆ ಜೋ ಜೋ6 ನಾರದಾದಿಗಳೆಲ್ಲ ನರ್ತನದಿ ಪಾಡೆ ಊರ್ವಶಿ ಅಪ್ಸರರು ನೃತ್ಯವನು ಮಾಡೆ ತೋರೆ ಗಂಧರ್ವರು ಗಾನಗಳ ರಚನೆ ಸಾರಿಸಾರಿಗೆ ಭಕ್ತರೆಲ್ಲ ನುತಿಗೈಯೆ 7 ಭಕ್ತನಾದ ವಾಯು ಸಹಿತ ಪವಡಿಸಿದೆ ಜೊತ್ತಾದ ತೊಟ್ಲುಗಳು ಭೃತ್ಯರು ತೂಗೆ ಮತ್ತೆ ನಿವಿ್ಮೂರ್ವರಿಗೆ ನಿದ್ರೆ ಇನ್ನುಂಟೆ ಭಕ್ತರನು ಸಲಹಲು ಲೀಲೆ ಕೈಕೊಂಡೆ ಜೋ ಜೋ 8 ಶ್ರೀಪಾದಪದ್ಮಯುಗಳಕೆ ಎರಗಿ ನಮಿಪೆ ಗೋಪಾಲಕೃಷ್ಣವಿಠ್ಠಲನೆ ನೀ ಸಲಹೊ ಶ್ರೀ ಪದ್ಮಭವ ಭವರಿಂ ಸೇವೆ ಕೊಳುತ ಈ ಪಯೋಜ ಭವಾಂಡದೊಳು ಲೀಲೆ ತೋರ್ಪೆ ಜೋ ಜೋ9
--------------
ಅಂಬಾಬಾಯಿ
ನಂದ ಕಂದನೇ ಇವಸುರವೃಂದ ವಂದ್ಯನೇ ಧರೆಯ ಮರೆಗಿಂದು ಬಂದನೇ ಹಿಂದೆವೇದವನೆ ರಕ್ಷಿಸಿದವನೇ ಮಂದರಗಿರಿ ಪೊತ್ತವನೇ ಸುಂದರಿ ಶರಯನೆ ಬಿಡಿಸಿದ ದೇವನೇ ಛಂದದಿ ಮಗು ಕಾಯ್ದವನೇ 1 ನಾನಾ ರೂಪನೇ ಧರಿಸಿ ಧರ್ಮವನೆ ಸ್ಥಾಪನೇ ಮಾಡುವದುಷ್ಟ ಜನ ಲೋಪನೇ ತುನಾಭಿಲಾಷನೇ ನೆಗೆಹಿದ ಪರುಷನೇ ಮಾನಿನೀ ಕೃತ್ಕೂಲುಷನೇ ಮಾನಿನೀ ಹೃತ್ಕಲುಷನೇ ಬುದ್ಧ ಕಲ್ಕೇಶನೇ ದಾನವ ಜಗದಂಕುಶನೇ 2 ಮಾನುವೆನ್ನಲೆ ಗಿರಿಯ ಪೊತ್ತದೇನು ಕಣ್ಣಿಲೇ ಕಾಣದೇ ಜನ ತಾನು ತನ್ನಲೇ ಸ್ವಾನಂದ ಲೀಲೆ ದೋರಲು ಬಾಲೇ ನಿಜಗುಣ ಮಾತೇ ಮಹಿಪತಿಜ ಪ್ರಿಯನ ಬಲೆ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡಿ ದಣಿಯದೊ ನಯನ ಪಾಡಿ ದಣಿಯದೊ ಜಿಹ್ವೆ ನಾಡಿಗೊಡೆಯನೆ ರಂಗ ದೇವ ದೇವ ಪ. ಬೇಡಲೇನನೊ ಸ್ವಾಮಿ ಕಾಡಲ್ಯಾತಕೊ ದೇವ ನೀಡೊ ನಿನ್ನ ಪದಕಮಲ ಶ್ರೀ ಶ್ರೀನಿವಾಸ ಅ.ಪ. ಶಿರದಲ್ಲಿ ಮಕುಟ ವರ ಫಣೆಯಲ್ಲಿ ತಿಲುಕವು ಉರದಲ್ಲಿ ಸಿರಿವತ್ಸ ಹಾರ ಪದಕಗಳು ಕರ ಶಂಖ ಚಕ್ರಯುತ ನೆರಿಗೆ ಪೀತಾಂಬರವು ಪಾದ ಕಮಲಗಳ 1 ಮಂದಹಾಸ ಮುಖಾರವಿಂದದಲಿ ಕಿರುನಗೆಯು ಬಂದ ಭಕ್ತರಿಗಭಯ ತೋರ್ಪಕರವೊ ನಿಂದು ಸ್ತುತಿಸುವರಿಗಾನಂದ ತೋರುವ ದಿವ್ಯ ಒಂದೊಂದು ಅವಯವದ ಸುಂದರಾಕೃತಿಯ 2 ವೇದವನೆ ತಂದು ಸುತಗಾದರದಿ ಇತ್ತೆ ಕ್ಷೀ- ರೋದಧಿಯ ಮಥಿಸಿ ಸುಧೆಯ ಸುರರಿಗುಣಿಸಿದೆಯೊ ಭೂದೇವಿಯನೆ ಪೊರೆದು ಉದ್ಭವಿಸಿ ಕಂಭದೊಳು ಪಾದದಲಿ ಭೂಮಿಯನು ಅಳೆದ ವಟುರೂಪಿ 3 ದುಷ್ಟ ಕ್ಷತ್ರಿಯರನೆ ಕುಟ್ಟಿ ಕೆಡಹಿದ ಶೌರಿ ದಿಟ್ಟತನದಲಿ ಅನ್ನ ಬಟ್ಟೆಯನೆ ತೊರೆದೆÀ ಕೊಟ್ಟು ಗೋಪಿಗೆ ಮುದವ ಮೆಟ್ಟಿ ಕಾಳಿಂಗನ ಬಿಟ್ಟು ವಸನವ ಕಲಿದುಷ್ಟರನೆ ಕೊಂದೆ 4 ಅಪದ್ರಕ್ಷಕ ನಿನ್ನ ವ್ಯಾಪಾರ ರೂಪಗಳು ತಾಪ ಪರಿಹರಗೈದು ಕಾಪಾಡೆಲೊ ಶ್ರೀಪತಿಯೆ ಅಂತರ್ಬಹಿವ್ರ್ಯಾಪ್ತ ನಿರ್ಲಿಪ್ತನೇ ತಾಪ ಪರಿಹಾರನೆ 5
--------------
ಅಂಬಾಬಾಯಿ
ಶ್ರೀನಿವಾಸನೆ ನಿನ್ನ | ವರ್ಣಿಸಲು ಅಳವೇ ಮಾನನಿಧಿ ಗುಣಪೂರ್ಣ | ನಿನ್ನಂಘ್ರಿ ಭಜಿಪರ ಬನ್ನ ಪ. ವೈನತೇಯನ ವರೂಥ ನಾನಾ ಹಾರ ಪದಕದಿ ಮೆರೆವ ಸುಂದರ ಕಾಮಪೂರ್ಣ ಮುಖಾರವಿಂದನ ನೀ ಮನದಿ ತೋರುತ್ತ ಪೊರೆಯೊ ಅ.ಪ. ಶೇಷಪರ್ವತವಾಸ | ಭಕ್ತರನು ಸಲಹೋ ಈ ಕ್ಷಿತಿತ್ರಯಕೀಶ ಪೋಷಿಸುವೋ ಭಕ್ತರವಾಸಿ ನಿನ್ನದೊ ಶ್ರೀಶ ಲಕ್ಷ್ಮೀನಿವಾಸ ದೋಷದೂರನೆ ಎನ್ನ ಅವಗುಣ ದೋಷಗಳನೆಣಿಸದಲೆ ಸಲಹೊ ಶೇಷವರ ಪರ್ಯಂಕಶಯನ ವಿ- ಭೀಷಣ ಪ್ರಿಯ ಭೀಷ್ಮವರದ1 ಮಾಘ ಸಪ್ತಮಿ ಕುಂಭ | ಸಂಕ್ರಮಣ ದಿವ್ಯ ಯೋಗ ಶುಕ್ಲದಿ ಎಂಬ | ಸ್ಥಿರವಾರದಲ್ಲಿ ಆಗ ರಥದಲ್ಲಿ ಬಿಂಬ | ಭಕುತರಿಗೆ ಕಾಂಬ ಜಾಗು ಮಾಡದೆ ಸೂರ್ಯಮಂಡಲ ಬೇಗ ಬಿಗಿದಿಹ ಸಪ್ತ ಹಯಗಳ ಬಾಗಿ ಭಜಿಸಲು ಭಕ್ತವರ್ಗವು ನೀ ಜಗದಿ ಮೆರೆಯುತ್ತ ಪೊರೆದೆ 2 ವಿೂನನಾಗಿ ಮತ್ತೆ ವೇದವನೆ | ತಂದು ಆ ನಳಿನಭವಗಿತ್ತೆ ಅಲ್ಲಿಂದ ಸುರರಿಗೆ ಪ್ರಾಣದಾನವನಿತ್ತೆ ಮೇದಿನಿಯ ಪೊತ್ತೆ ನಾನೆ ಜಗಕೆಂಬ ದಾನವನ ಕೊಂದು ದಾನ ಬೇಡಿ ಭೂಮಿ ಅಳೆದು ಮಾನಿನಿ ಶಿರ ತರಿದು ಸೀತಾ ಮಾನಿನಿಗೆ ಅಂಬುಧಿಯ ಬಿಗಿದೆ 3 ಮಾನಿನಿಯರಿಗೆ ಕಾಣದೆ | ಬೆಣ್ಣೆಯನು ಕದ್ದು ಮಾನವೆಲ್ಲವ ಕಳೆದೆ ಅಲ್ಲಿಂದ ಮುಂದೆ ಮಾನವ ಬಿಟ್ಟು ನಿಂದೆ ಏನ ಹೇಳಲಿ ಹಯವನೇರಿ ದಾನವರ ಸಂಹರಿಸಿ ಮೆರೆದೆ ನಾನಾ ರೂಪ ನಾಟಕಧರ ನೀನೀ ಪರ್ವತದಲಿ ನಿಂದಿಹೆ 4 ದೇಹವ್ಯಾಪ್ತಕ ನೀನೆ | ದೇಹಗಳ ಕೊಟ್ಟು ಮೋಹಗೊಳಿಸುವ ನೀನೆ ದೇಹಸ್ಥನಾಗಿ ತೋರುವ ಬಿಂಬ ನೀನೆ | ಜೀವಾಕಾರನೆ ಈ ಹದನ ಎನಗಿನ್ನು ತಿಳಿಯದೊ ಮೋಹ ಹರಿಸಿ ಸುಜ್ಞಾನ ನೀಡೊ ಸ್ನೇಹ ಗೋಪಾಲಕೃಷ್ಣವಿಠ್ಠಲ ಶ್ರೀ ಹರಿಯೆ ಹೃದಯದಲಿ ನಿಲಿಸೊ 5
--------------
ಅಂಬಾಬಾಯಿ