ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹನುಮ-ಭೀಮ-ಮಧ್ವ ಸ್ತೋತ್ರ ಅಪಮೃತ್ಯು ಪರಿಹರಿಸೊ ಅನಿಲದೇವಾ ಕೃಪಣ ವತ್ಸಲನೆ ಕಾಯ್ವರ ಕಾಣೆ ನಿನ್ನುಳಿದು ಪ ನಿನಗಿನ್ನು ಸಮರಾದ ಅನಿಮಿತ್ತ ಬಂಧುಗಳು ಎನಗಿಲ್ಲವಾವಾವ ಜನ್ಮದಲ್ಲಿ ಅನುದಿನ ನೀನೆಮ್ಮನುದಾಸೀನ ಮಾಡುವುದು ಅನುಚಿತವು ಜಗಕೆ ಸಜ್ಜನ ಶಿಖಾಮಣಿಯೆ 1 ಕರಣಮಾನಿಗಳು ನಿನ್ನ ಕಿಂಕರರು ಮೂಲೋಕ ದೊರೆಯು ನಿನ್ನೊಳಗಿಪ್ಪ ಸರ್ವಕಾಲ ಪರಿಸರನೆ ಈ ಭಾಗ್ಯ ದೊರೆತನಕೆ ಸರಿಯುಂಟೆ ಗುರುವರಿಯ ನೀ ದಯಾಕರನೆಂದು ಮೊರೆ ಹೊಕ್ಕೆ 2 ಭವರೋಗ ಮೋಚಕನೆ ಪವಮಾನರಾಯಾ ನಿ ನ್ನವರನು ನಾನು ಮಾಧವಪ್ರಿಯನೇ ಜವನ ಬಾಧೆಯ ಬಿಡಿಸು ಅವನಿಯೊಳು ಸುಜನರಿಗೆ ದಿವಿಜಗಣ ಮಧ್ಯದಲಿ ಪ್ರವರ ನೀನಹುದಯ್ಯ 3 ಜ್ಞಾನಾಯು ರೂಪಕನು ನೀನಹುದೋ ವಾಣಿ ಪಂ ಚಾನನಾದ್ಯಮರರಿಗೆ ಪ್ರಾಣದೇವಾ ದೀನವತ್ಸಲನೆಂದು ನಿನ್ನ ಮೊರೆ ಹೊಕ್ಕೆ ದಾನವಾರಣ್ಯ ಕೃಶಾನು ಸರ್ವದ ಎಮ್ಮ 4 ಸಾಧನ ಶರೀರವಿದು ನೀ ದಯದಿ ಕೊಟ್ಟದ್ದು ಸಾಧಾರಣವು ಅಲ್ಲ ಸಾಧುಪ್ರಿಯಾ ವೇದವದೋದಿತ ಜಗನ್ನಾಥ ವಿಠಲನ ಮೋದ ಕೊಡು ಸತತ5
--------------
ಜಗನ್ನಾಥದಾಸರು