ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಕಾಣೂರು ಮಠದ ನರಸಿಂಹ) ನೋಡಿರಯ್ಯ ನರಸಿಂಹ ಮೂರ್ತಿಯ ಪಾಡಿರೋ ಕೀರ್ತಿಯನು ಪ. ಚಿಕ್ಕವನ ಗೋಳಿಕ್ಕಿಸುತಲತಿ ಸೊಕ್ಕಿದಸುರನನು ಧಿಕ್ಕರಿಸುತಿಹ ಕಕ್ಕುಲತೆಯಿಂದುಕ್ಕಿ ರೋಷವನು ಮಿಕ್ಕ ದೇವರ ಲೆಕ್ಕಿಸದವನ ತಿಕ್ಕಿ ತೊಡೆಯೊಳಗಿಕ್ಕಿ ನಖಗಳನಿಕ್ಕರಿಸಿ ಸಾಲಿಕ್ಕಿ ತರುವ ಕರುಳಕ್ಕರದಿ ತೆಗೆದ್ಹಕ್ಕಿಗಮನನ 1 ವೇದಮುಖ ಸುರರೆಲ್ಲ ದೂರದಿ ಕಾದುಕೊಂಡಿರಲು ಸಿರಿನಡು ಹಾದಿಯಲಿ ಚಿನ್ಮೋದನಿರಕಾಲ್ಹಾದ ಬಡುತಿರಲು ಪಾದಪದ್ಮಗಳನ್ನು ಭಕ್ತಿರಸಾರದರದಿ ಶಿರಕಿಕ್ಕಿರುವ ಪ್ರ- ಲ್ಹಾದನನು ಪಿಡಿದೆತ್ತಿ ಪರಮವಿನೋದಗೊಂಡ ಪರಾಪರೇಶನ 2 ಅರ್ಥಿಯಿಂದಲಿ ಬಂದಿರುವರು ಪೂರ್ಣಾರ್ಥದಾಯಕನಾ ವ್ಯರ್ಥವೈರದ ದ್ವ್ಯರ್ಧಿದೈತ್ಯರ ಮೂರ್ತಿದಹಿಸುವನಾ ಅರ್ತಿಹರ ಶೇಷಾದ್ರಿವರ ಪುರುಷಾರ್ಥ ಪಾಲಿಪೆನೆಂದು ವಾಮನ ತೀರ್ಥ ಕೃತ ಪೂಜಾರ್ಥವಿಲ್ಲಿಗೆ ಕೀರ್ತಿಕರ ನಿಲಯಾರ್ಥದಾತನ 3
--------------
ತುಪಾಕಿ ವೆಂಕಟರಮಣಾಚಾರ್ಯ
ಆರೂ ಸಮಯಕ್ಕೊದಗಲಿಲ್ಲಮೋರೆ ನೋಡುತ ಸುಮ್ಮನಿಹರೆಲ್ಲ ಪ ಮಗಳು ಮಹಲಕುಮಿ ಮೊಮ್ಮಗನು ಸರಸಿಜಭವನುಖಗರಾಜವಾಹನನು ತನ್ನಳಿಯನುಅಗಜನಂದು ತನ್ನೊಡಲೊಳಿಂಬಿಟ್ಟು ಮೂ-ರ್ಬೊಗಸೆ ಮಾಡಿದ ಮುನಿಯ ಬಿಡಿಸಲಿಲ್ಲ1 ಶ್ರೀದೇವಿ ಭೂದೇವಿ ಮಾತೆಯರು ತಾವಿರಲುಯಾದವರಾಯ ಮೋಹದ ತಂದೆಯುವೇದಮುಖದಣ್ಣನಿರೆ ಉರಿ ನಯನದಿಂದ ಸ್ಮರಬೂದಿಯಾಗುವಾಗ ಬಿಡಿಸಲಿಲ್ಲವೇಕೆ2 ಬೊಮ್ಮ ಮನ್ಮಥರಿರಲಾಗಿಕ್ಷಿತಿಯೊಳಗೆ ಶಶಿ ಕ್ಷೀಣವಾಗುವ ಸಮಯದಿ 3 ತೆತ್ತೀಸ ಕೋಟಿ ದೇವರ್ಕಳು ತಾವಿರಲುಒತ್ತಿನಲಿ ಇಂದ್ರ ಉಪೇಂದ್ರರಿರಲುಮತ್ತೆ ಪಾರ್ವತಿ ಪುತ್ರ ವೀರೇಶ ದಕ್ಷನನೆತ್ತಿ ಹರಿಗಡಿವಾಗ ನೋಡುತಿಹರೆಲ್ಲ 4 ಇಂಥಿಂಥ ದೊಡ್ಡವರು ಈ ಪಾಡು ಪಡಲಾಗಿಭ್ರಾಂತ ಮನುಜರಿಗೆ ಪೇಳಲಿನ್ನೆಷ್ಟುಕಂತುಪಿತ ಕಾಗಿನೆಲೆಯಾದಿಕೇಶವನಸಂತೋಷದಿಂ ನೆನೆದು ಸುಖಿಯಾಗೊ ಮನುಜ5
--------------
ಕನಕದಾಸ