ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಪಮೃತ್ಯು ಪರಿಹರಿಸೊ ನಾರಸಿಂಹಕೃಪಣ ವತ್ಸಲ ಹರಿಯೆ ಬಿನ್ನವಿಪೆ ನಿನಗೇ ಪ ಅನ್ಯರಿಗೆ ಮೊರೆ ಇಡೆನೊ | ನಿನ್ಹೊರತು ಇನ್ನಿಲ್ಲಮನ್ಯು ಸೂಕ್ತೋದಿತನೆ | ಎನ್ನ ಶಿಷ್ಯನಿಗೇಬನ್ನ ಬಡಿಸುವ ರೋಗ | ವನ್ನು ಮೋಚಿಪುದಯ್ಯಅನ್ನಂತ ಮಹಿಮ ಹರಿ | ನಿನ್ನ ಕೃಪೆ ತೋರೋ 1 ಜ್ವರ ಹರಾ ಹ್ವಯನೆಂದು | ವರ ವೇದಮಾನಿಗಳುಪರಿಪರಿಯಲಿಂ ನಿನ್ನ | ಸ್ತೋತ್ರ ಗೈವುದನಅರಿತು ನಿನ್ನಲಿ ನಾನು | ಮೊರೆಯ ಇಡುವೆನೊ ಹರಿಯೆಪರಿಪೊಷಿಸೋ ಇವನ | ಕರುಣರಸ ಪೂರ್ಣ 2 ತಂದೆ ತಾಯಿಯು ನೀನೇ | ಬಂಧು ಬಳಗವು ನೀನೇಇಂದು ಅಂದಿಗು ನೀನೇ | ಎಂದೆಂದು ನೀನೇ |ಕಂದನನು ಸಲಹೆಂದು | ಸಿಂದುಶಯನನೆ ಬೇಡ್ವೆಇಂದಿರಾಪತಿ ಗುರು | ಗೋವಿಂದ ವಿಠಲಾ3
--------------
ಗುರುಗೋವಿಂದವಿಠಲರು
ಜನನಿ ಜಾನಕೀ ನೀದಯಮಾಡೇ ಜಗದೀಶ್ವರ ನಾಯಕೀ ಪ ಫಣಿವಿಲಾಸನ ಪ್ರೀಯೆ ಭಜಕರ ಮನವಿಗಳ ನೀಕಾಯೆ ತಾಯಳೇ ಪ್ರಣವರೂಪಳೆ ಪ್ರಣಮಿಸುವೆ ತ್ರಿಣಯಸಖನಾರಾಣಿ ಸುಂದರೀ 1 ಸರ್ವತಂತ್ರಳೆ ಸಾಕ್ಷರೂಪಿಣಿ ದುರ್ಮದಾಂತಕಿ ದುಃಖದೂರಳೆ ನಿರ್ವಿಕಲೆ ಗೀರ್ವಾಣೆ ಶುಭಕರಿ ಉರ್ವಿಪಾಲಿಕಳಾದ ಸೀತೆಯ 2 ಆದಿಶಕ್ತಿ ಅನಂತರೂಪಳೆ ವೇದಮಾನಿನಿ ವಾದಿಭೀಕರಿ ಪಾದಸೇವ ಕನಿಷ್ಟಮೊದಗಿಸೆ ಭೂಧರಗೆ ನಿಜರಾಣಿ ವೈಭವೆ 3 ರಂಗನಾಯಕಿ ರಾಧೆ ಶ್ರೀ ಜಯ ಮಂಗಳಾಂಗಿ ಸಮೋದೆ ನಿಚ್ಚಲೆ ಜಂಗಮಾರ್ಚಿತ ಗುರುವು ತುಳಸೀ ಬೆಂಗಳೂರೊಳಗಿರುವ ಕಾರಣ4
--------------
ಚನ್ನಪಟ್ಟಣದ ಅಹೋಬಲದಾಸರು
ಶರಣು ಶರಣು ಕೃಷ್ಣಕೃಷ್ಣ ಶರಣು ಶರಣು ರಾಮ ರಾಮ ಶರಣು ಶರಣು ಶ್ರೀನಿವಾಸ ಶರಣು ಶರಣು ಶ್ರೀ ಹರೇ ಪ ಗುರುಸು ಭಕ್ತಿ ನೀಡಿ ಎನಗೆ ವರಿಸಿ ಶುದ್ಧ ದಾಸನೆಂದು ಕರುಣ ತೋರೊ ಕೇಶವ ಅನಂತ ರೂಪಿಯೇ ಅ.ಪ ಲೇಸಿನಿಂದ ಬ್ರಹ್ಮಶಿವರ ಪ್ರೇರಿಸುತ್ತ ಜಗವ ಪೊರೆವೆ ದಾಸನೆಂದು ಮೊರೆಯ ಹೊಕ್ಕೆ ಕಾಯೊ ಕೇಶವಾ 1 ವಾರಿನಿಲಯ ದೋಷದೂರ ಪೂರ್ಣಕಾಮ ಮುಕ್ತರೀಶ ಶರಧಿ ನಾರಾಯಣ 2 ವೇದಮಾತೆ ಶೃತಿ ಸುಗೀತೆ ವೇದಮಾನಿ ಲಕ್ಷಿರಮಣ ಶೂನ್ಯ ಮಾಧವ 3 ವಿನುತ ಸಾರ ವೇದಬಲ್ಲ ಸಾಧು ಪ್ರಾಪ್ಯ ವೇದಪಾಲ ಶರಣು ಗೋವಿಂದ 4 ವಿಶ್ವಜನಕ ವಿಶ್ವಪಾಲ ವಿಶ್ವವ್ಯಾಪ್ತ ವಿಶ್ವಭೋಕ್ತ ವಿಶ್ವಜೂತಿ ವಿಶ್ವಬಲನೆ ಶರಣು ವಿಷ್ಣುವೆ 5 ಆದಿ ದೈತ್ಯರನ್ನು ಕೊಂದು ಮೇದಿನೀಯ ಪೊರೆದ ದೇವ ಬಾಧೆ ಹರಿಸು ಮೂರು ವಿಧಧ ಮಧುಸೂದನ 6 ಲೋಕತ್ರಯವ ನಳೆದ ನೇಕ ಏಕನಿನಗೆ ಸಾಟಿಯಾರು ಜೋಕೆಯಿಂದ ಸಾಕಬೇಕು ತ್ರಿ-ವಿಕ್ರಮ 7 ಸೋಮ ಹಳಿದ ಕಾಂತಿಧಾಮ ನೇಮದಿಂದ ಬಲಿಯ ಕಾಯ್ದೆ ಹೇಮ ಜ್ಯೋತಿ ಪೂರ್ಣ ಸುಖಿಯೆ ಶರಣು ವಾಮನ 8 ಬೊಮ್ಮಶಿವರ ಕುಣಿಸಿ ಆಳ್ವ ಅಮ್ಮ ಪ್ರಕೃತಿಯನ್ನು ಧರಿಸಿ ಸುಮ್ಮಗೇನೆ ಜಗವ ಕಾವೆ ಶರಣು ಶ್ರೀಧರ 9 ಕರಣ ವ್ರಾತದಲ್ಲಿ ನಿಂತು ಕರಣಕಾರ್ಯಗಳನು ನಡಿಸಿ ಕರಣ ಪತಿಗಳನ್ನು ಪೊರೆವೆ ಹೃಷಿಕೇಶನೆ 10 ಉದರದಲ್ಲಿ ಜಗವ ಪೊತ್ತು ಸದರದಿಂದ ಒಪ್ಪಿಕೊಂಡೆ ಉದರದಲ್ಲಿ ರಜ್ಜುಭಂಧ ದಾಮೋದರ 11 ಚೊಕ್ಕವಿಧಿಯ ಹಾಗೆ ಜಗವ ಕುಕ್ಷಿಯಲ್ಲಿ ಪಡೆದ ದೇವ ಶರಧಿ ಶಯನ ಪದ್ಮನಾಭನೆ12 ಭಕ್ತಜನರ ಪಾಪಸೆಳೆವ ಶಕ್ತ ಪ್ರಲಯ ಸ್ತುತಿಗೈವ ದೇವ ಮುಕ್ತಿದಾತ ವಿಶ್ವಕುಕ್ಷಿ ವಾಸುದೇವನೆ 14 ಮೇರೆಯಿರದ ಕಾಂತಿಮಯನೆ ಸೇರಿ ಭಾಸ ಕೊಡುವೆ ರವಿಗೆ ಬೀರಿ ಜ್ಞಾನ ಭ್ರಾಂತಿ ಹರಿಸು ಪ್ರ-ದುಮ್ನನೆ 15 ನೀ ನಿರೋಧ ಕಾಣೆ ಎಂದು ನೀನೆ ಸಿಗುವೆ ಭಕ್ತಿ ಬಲೆಗೆ ಕೃಪಣ ಕ್ಷಮಿಸು ಅನಿ-ರುಧ್ಧನೆ 16 ಕ್ಷರರು ಜೀವ ರಾಶಿ ಎಲ್ಲಕ್ಷರ ವಿರುಧ್ಧ ಲಕ್ಷ್ಮಿತಾನು ವರನು ಭಿನ್ನ ಉಭಯರಿಂದ ಪುರುಷೋತ್ತಮ 17 ಕರಣಗಳಿಗೆ ಸಿಗುವನಲ್ಲ ಕರಣಗಳಲಿ ಭೇದವಿಲ್ಲ ಕರಣಜಯವ ಸಿಧ್ಧಿಸೆನಗೆ ಅ-ಧೋಕ್ಷಜ18 ದೋಶರಹಿತ ಮುಕ್ತರೀಶ ನಾಶರಹಿತ ಲಕ್ಷ್ಮಿರಮಣ ಈಶಬಿಂಬ ಜೀವ ಹೃಸ್ಥ ನಾರಸಿಂಹನೆ 19 ಜೀವರೊಡನೆ ವಿತತ(ಇರುವೆ) ಅಚ್ಯುತ 20 ಇಂದ್ರನನುಜ-ನಿಜಮಹೇಂದ್ರ ತಂದೆ ಸುಖವ-ದಿವಿಜಣಕೆ ವಂದ್ಯ ವಂದ್ಯ-ವಂದಿಸುವೆನು ಶ್ರೀ- ಉಪೇಂದ್ರನೆ 21 ಸೃಷ್ಠಿಗೈದು ಜಗವ ಲಯಿಪೆ ದುಷ್ಟದಮನ ಶಿಷ್ಟವರದ ಹುಟ್ಟು ಸಾವು ಕಟ್ಟು ಬಿಡಿಸೊ ಶ್ರೀ ಜನಾರ್ದನ 22 ಯಜ್ಞಭೋಕ್ತ ಮನುವ ಪೊರೆದೆ ಭಗ್ನಗೈಸಿ ದೋಷವೆನ್ನ ಜ್ಞಾನ ನೀಡೋ ಸುಜ್ಞನೆನಿಸು ವಾಜಿವದನ ಶರಣು ಶ್ರೀಹರೇ 23 ವಿಭವ ಮೂರ್ತಿ ಭಕ್ತಮನವ ಪಾಪ ಸೆಳಿವೆ ರಿಕ್ತನಾನು ಸರ್ವವಿಧಧಿ ಕಾಯೊ ಶ್ರೀಕೃಷ್ಣ 24 ಸರ್ವ ಶಬ್ದವಾಚ್ಯ “ಶ್ರೀಕೃಷ್ಣವಿಠಲ”ನನ್ನು ನೆನೆಯೆ ಸರ್ವಸುಖಗಳಿತ್ತುಕಾವ ಜಿಷ್ಣು ತೆರದಿ ಸತ್ಯಹೋ 25
--------------
ಕೃಷ್ಣವಿಠಲದಾಸರು