ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

2. ಈಶ್ವರ ಭವ ಭಂಗ ಗಂಗೋತ್ತಮಾಂಗಾ ಸಶುಭಾಂಗಾ ಎಚ್ಚರಿಕೆ ಪ ಶಂಕರ ಶಿವ ಮಹದೇವನೆ ಕಿಂಕರ ಜನಪಾಲಾ ವೆಂಕಟರಮಣಾಸಖ ನಿಜಾಂಕುಶ ನಿಜಲೋಲಾ 1 ವೇದನುತಪಾದಾ ಪರವಾದಿ ನಿಜಬೋಧ ಸಾಧುಮಣಿ ಕರುಣಿಸೊ ನಿನ್ನ ಸೇವಕನು ನಾನಾದೆ 3 ಫಣಿಭೂಷನೆ ಪರಿಪಾಲಿಸೋ ತ್ರಿಣೆಯಾ ಕರಶೂಲಾ ಗಣಪತಿಪಿತ ಅಣುದೈ ನೀತ್ರಿಗತ್ವರಿಪಾಲಾ 3 ಇಂಕೀ ಪರಿನಿಂತಾ ಪರಚಿಂತೆಯೊಳಿರುವಂತೆ ಸಂತೋಷವಗೈಸಿದ ಶಿವಗುರು ತುಲಶೀನೀನಂತೆ 4
--------------
ಚನ್ನಪಟ್ಟಣದ ಅಹೋಬಲದಾಸರು
ಕೋಳಿ ಕೂಗಿತು ತಂಪು ಗಾಳಿ ಬೀಸಿತು ಏಳಯ್ಯಾ ಬೆಳಗಾಯಿತು ಪ ಧೀರ ಸೋಮಕನಿರಿದು ಮೇರು ಬೆನ್ನಲಿ ಪೊತ್ತು ಘೋರ ಹಿರಣ್ಯಾಕ್ಷ ಕಶ್ಯಪರ ಶೀಳಿ ಮಾರಿ ಬಲಿಯನ್ನೊತ್ತಿ ಕಂಸ ದಾನವರನಳಿದು ಶೇರಿ ತ್ರಿಪುರರ ದಹಿಸಿ ಕ್ರೂರ ದುಷ್ಟರ ತರಿದು ಭಾರಿ ಆಯಾಸದಲಿ ನಿದ್ರೆ ಹತ್ತಿರೆ ಸ್ವಾಮಿ1 ವೇದವನು ತಂದೆ ಸುರವೃಂದಕಮೃತವನಿತ್ತೆ ಮೇದಿನಿಯ ನೆಲಸಿ ಪ್ರಲ್ಹಾದನಾ ಪೊರೆದೆ ಮೋದಿಗಂಗೆಯ ಜನಿಸಿ ಭೂದಾನ ಮಾಡಿದೆ ಮೋದದಿಂದಜಪದವಿಯ ಆಂಜನೇಯಗಿತ್ತೆ ಪೋದ ಮಕ್ಕಳ ತಂದು ಗುರುಪತ್ನಿಗೇ ನೀಡಿ ವೇದನುತ ನಿರ್ವಸನ ಸುಹಯಾರೂಢನೇ2 ಶರಣಜನ ಬಂದು ಸುಸ್ವರದಿಂದ ಪಾಡುತಿರೆ ಪರಿ ಕಣ್ಣಮುಚ್ಚುವುದೇ ಸರಿಯೆ ಬೆನ್ಮರೆಮಾಡಿ ಮಣ್ಣನಾಡಾಡುವುದೇ ಉರಿಮೋರೆಯಿಂದ ತರಳಾಟ ಆಡುವುದೇ ಪರಶು ಶರ ಚಕ್ರಗಳ ಪಿಡಿದು ಉಡಿಗೆಯ ಮರೆತೆ ಭರದಿ ತುರಗವನೇರು ನರಸಿಂಹ ವಿಠ್ಠಲಾ 3
--------------
ನರಸಿಂಹವಿಠಲರು
ಲಘುವಾವುದೆಂಬುದನು ನಿಜವಾಗಿ ನುಡಿಯುವೆನು ಸುಗುಣವಂತರು ಕೇಳಿ ವಿನಯದಲಿ ಬೇಡುವೆನು ಪ ಲಘುತೃಣವು ತಾನಲ್ಲದಿಟವೆ ಸರಿ ಈ ಮಾತು ಲಘುತೃಣವ ತಾವುಂಡು ಪಾಲ್ಕೊಡವೆ ಗೋವುಗಳು ಅ.ಪ. ನಾರಿಯನು ಸಾಕುವೆಡೆ ಕೈಲಾಗದ ಲಘುವು ಭಾರಿಸಿರಿಯನು ಪತಿಗೆ ತಾರದಾ ಸೊಸೆ ಲಘುವು ನಾರಿಯರ ಕೈಗೊಂಬೆಯಾಗಿರುವ ನರ ಲಘುವು ಸಿರಿವಂತ ನೆಂಟರಲಿ ಬಡವ ಸೇರಲು ಲಘುವು 1 ವಿತ್ತವಿಲ್ಲದ ಪಿತನು ಪುತ್ರನಿಲ್ಲಿರೆ ಲಘುವು ಪುತ್ರವತಿಯರ ನಡುವೆ ಸವತಿ ಬಂಜೆಯು ಲಘುವು ಅತ್ತಿಗೆಗೆ ಬಹು ಲಘುವು ರಿತ್ತ ಮೈದುನ ಮಂದಿ ಭತ್ರ್ಯತಾನತಿ ಲಘುವು ಶ್ರೀಮಂತ ಕನ್ನಿಕೆಗೆ 2 ಮೋದತೀರ್ಥರ ಮತಕೆ ಮಿಕ್ಕುದೆಲ್ಲವು ಲಘುವು ವೇದನುತ “ಶ್ರೀಕೃಷ್ಣವಿಠಲ”ನ ನೆನೆಯದವ ಶುದ್ಧಲಘು ತಮನೈಯ ವೃದ್ಧ ಸಮ್ಮತ ಹೌದು 3
--------------
ಕೃಷ್ಣವಿಠಲದಾಸರು