ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲೆ ಮನಸೆ ನಾಂ ಪೇಳ್ವ ಬುದ್ಧಿ ಮಾತುಗಳ ಕಲಿತು ಜಾಣನಾಗಿ ನಿಜಸುಖದಿ ಬಾಳು ಪ ಪರನಿಂದೆ ಬೆರೆಸದಿರು ನಿರುತರನು ಜರಿಯದಿರು ದುರಿತದೊಳಗುರುಳದಿರು ಪರಚಿಂತೆ ಮಾಡು ಗುರುಹಿರಿಯ್ಹರಳಿಯದಿರು ದುರುಳರೊಳಗಾಡದಿರು ಹರಿಯಶರಣರ ಸೇವೆ ಸ್ಥಿರವಾಗಿ ಮಾಡು 1 ಮರವೆ ಪರದೆಯ ಹರಿ ಅರಿವಿನಮೃತ ಸುರಿ ಸ್ಥಿರಜಾನ್ಞದೊಳು ಸೇರಿ ಹರಿಚರಿತ ಬರಿ ಹರಿದಾಟವನು ಮರಿ ಜರೆಮರಣದು:ಖ ತರಿ ಪರಮಹರುಷದಿ ಮರೆ ದುವ್ರ್ಯಸನ ತೂರಿ 2 ಕ್ರೋಧವನು ಕಡೆಮಾಡು ವಾದಬುದ್ಧಿಯ ದೂಡು ಸಾಧುಜನರೊಳಗಾಡು ಶೋಧನ ಮಾಡು ಖೇದವನು ಈಡ್ಯಾಡು ವೇದದರ್ಥವ ಮಾಡು ಪಾದಸೇವೆಯ ಮಾಡು ಮಾಧವನ ಕೂಡು 3 ಕಾಮಲೋಭವ ಕಡಿ ಭೂಮಿಮೋಹವ ತೊಡಿ ಭಾಮೆಯರ ಪ್ರೇಮ ಬಿಡಿ ಕ್ಷೇಮಪಥ ಪಿಡಿ ತಾಮಸದೂರಮಾಡಿ ಸಾವಧಾನದ್ಹಿಡಿ ಪಡಿ ನೇಮದ್ಹುಡುಕಾಡಿ 4 ಮೋಸಪಾಶವ ಗೆಲಿ ಕ್ಲೇಶಗುಣಗಳ ತುಳಿ ದಾಸಜನರೊಳು ನಲಿ ಶಾಶ್ವತವ ತಿಳಿ ಹೇಸಿಕ್ವಾಸನೆಯಳಿ ದೋಷರಾಸಿಯಿಂದುಳಿ ಶ್ರೀಶ ಶ್ರೀರಾಮನಲಿ ದಾಸನಾಗಿ ಸೆಳಿ 5
--------------
ರಾಮದಾಸರು
ನೆಲೆಯಾವುದಯ್ಯ ಹೊಲಬಾವುದಯ್ಯತಿಳಿದು ಆತ್ಮನನು ತಿಳಿಯದ ಮನುಜರಿಗೆ ಪ ವೇದ ಸಾರವನೋದಿ ವೇದದರ್ಥವ ಕಂಡುಆದಿಯಾಗಿಹಅನಾದಿ ಮೂರುತಿಯನ್ನುಸಾಧಿಸಿ ಸಾಧ್ಯವಾಗದೆ ಸರ್ವರೊಳಗಾಗಿಬಾಧೆಯೊಳಗೆ ಸಿಕ್ಕುಬಿದ್ದ ಮನುಜಗೆ 1 ತನುದುಸ್ಥಿತಿಯ ಕಂಡು ತನುವಲಿಹನ ಕಂಡುಚಿನುಮಯವಾದ ಚಿದ್ರೂಪನೆಂಬನಮನದ ಕೊನೆಯಲಿಟ್ಟು ಮಥಿಸಲಾರದೆ ತಾನುಘನ ದುಃಖದೊಳು ಬಿದ್ದು ಗಲಭೆಯಾದವಗೆ2 ಕರಣ ಚರಿತೆಯ ನೋಡಿ ಕರಣ ಸಾಕ್ಷಿಯ ಕಂಡುಸ್ಥಿರ ಬುದ್ಧಿಯಾಗಿಯೆ ಸ್ಥಿಮಿತನಾಗದೆ ತಾನುವರ ಚಿದಾನಂದ ಪದ ಹೊಂದಲಾರದೆ ನರಕದೊಳಗೆ ಬಿದ್ದು ನರಳಾಡುವವನಿಗೆ 3
--------------
ಚಿದಾನಂದ ಅವಧೂತರು