ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃಪಾಳೊ ಗುರುವರ ಶ್ರೀಪವಮಾನ ಭವಹಾರಿ ಸ್ಮರಹರನುತ ದೀನಜನಮಂದಾರ ಅ.ಪ ಕಾವಕರುಣಿ ಜೀವವರೇಣ್ಯ ವಿನುತ ಜಯಶೀಲಾ ವಿಧಿ ದುರಿತೌಷ ಹಾರಿ 1 ಆದಿಪುರದಿ ಮೆರೆವನಾಥಾ ಸದಯ ಭಕ್ತ ಜನಕೆ ಶುಭದಾತ ಬುಧರಾರಿ ಸಜಾತ ಭ್ರಾತಾ ಸದಯ ಧರ್ಮಾನು ಜಾತಾ 2 ಪ್ರೇಮಶರಧಿ ವಾನರೇಶಾ ಅಮಿತ ಸತ್ವಯತಿ ಮಹಿಮಯತಿರಾಜಾ ರೋರೋಮ ವ್ಯೋಮಕೇಶಾ ಶಾಮಸುಂದರನ ಮೋಹದ ದಾಸಾ 3
--------------
ಶಾಮಸುಂದರ ವಿಠಲ
ನೊಂದು ಬಂದೆನೊ ಕಾಂತೇಶ | ಕೈಯನೆ ಪಿಡಿಯೊ ಮಂದಭಾಗ್ಯಳ ಜೀವೇಶ ಪ. ಅಂದು ಶ್ರೀ ರಾಮರ ಸಂದೇಶವನ್ನೆ ಭೂ- ನಿಂದನೆಗೆ ಅರುಹುತಲಿ ಬಹು ಆನಂದಪಡಿಸಿದ ವಾನರೇಶ ಅ.ಪ. ಶೌರಿ | ಭಕ್ತರ ಕಾಯ್ವ ದುರಿತದೂರನೆ ಉದಾರಿ ಚರಣಕ್ಕೆ ನಮಿಸುವೆ ಹರಿಗೆ ಪರಮಾಪ್ತನೆ ದುರಿತ ತರಿಯುತ ಪೊರೆಯೊ ಗುರುವರ ರಾಮಕಿಂಕರ 1 ಗುರುಕರುಣದ ಬಲದಿ | ಅರಿತೆನೊ ನಿನ್ನ ಚರಣ ನಂಬಿದೆ ಮನದಿ ಪರಿ ಭವಕ್ಲೇಶ ಪರಿಯ ಬಣ್ಣಿಸಲಾರೆ ಹರಿವರನೆ ದಯಮಾಡು ಶ್ರೀ ಹರಿ ದರುಶನವನನವರವಿತ್ತು 2 ಕಾಂತನ ಅಗಲಿರಲು | ಚಿಂತೆಯಲಿ ಭೂ ಕಾಂತೆ ವನದೊಳಗಿರಲು ಸಂತೋಷದಿಂ ರಾಮನಂತರಂಗವನರುಹಿ ಸಂತಸವಪಡಿಸುತಲವನಿಸುತೆಯ ನಿಂತೆ ರಾಮರಿಗ್ಹರುಷ ತೋರಿ 3 ದ್ರುಪದ ಸುತೆಯಳ ಕೀಚಕ | ದುರ್ಮನದಲಿ ಅಪಮಾನಪಡಿಸೆ ದುಃಖ ತಪಿಸಿ ನಿನ್ನನು ಬೇಡೆ ಆ ಪತಿವ್ರತೆ ಸತಿ ಕುಪಿತದಿಂದಲಿ ಖಳನ ಕೊಂದೆ ಅಪರಿಮಿತ ಬಲಭೀಮ ಪ್ರೇಮ 4 ಮಿಥ್ಯಾವಾದದ ಭಾಷ್ಯಕೆ | ಸುಜ್ಞಾನಿಗಳ್ ಅತ್ಯಂತ ತಪಿಸುತಿರೆ ವಾತಜನಕನಾಜ್ಞೆ ಪ್ರೀತಿಯಿಂದಲಿ ತಾಳಿ ಘಾತುಕರ ಮತ ಮುರಿದ ಮಧ್ವನೆ ಖ್ಯಾತಿ ಪಡೆದೆÀ ಸಿದ್ಧಾಂತ ಸ್ಥಾಪಿಸಿ 5 ಪ್ರಾಣಪಾನವ್ಯಾನ | ಉದಾನ ಸ ಮಾನ ಭಾರತಿ ಕಾಂತನೆ ಜ್ಞಾನಿಗಳಿಗೆ ಪ್ರೀತ ಜ್ಞಾನ ಭಕ್ತಿಪ್ರದಾತ ದೀನಜನ ಮಂದಾರ ಕಾಯೊ ದೀನಳಾಗಿಹೆ ಕೈಯ ಮುಗಿವೆ 6 ನೋಯಲಾರೆನೊ ಭವದಿ | ಬೇಗನೆ ತೋರೊ ಧ್ಯೇಯ ವಸ್ತುವ ದಯದಿ ವಾಯುನಂದನ ನಿನ್ನ ಪ್ರಿಯದಿಂ ನಂಬಿದೆ ಕಮಲ ದ- ಳಾಯತಾಕ್ಷನ ಮನದಿ ತೋರಿ7 ಹರಣ ನಿನಗೊಪ್ಪಿಸಿದೆ | ಸುರವಂದಿತ ಕರೆದು ಮನ್ನಿಸಿ ಕಾಪಾಡೊ ಸಿರಿವರನನು ಹೃತ್ಸರಸಿಜದಲಿ ತೋರೊ ಧರೆಯ ವಸ್ತುಗಳ್ ಮಮತೆ ತೊರೆಸು ಹರಿಯ ನಾಮಾಮೃತವನುಣಿಸು 8 ಈ ಪರಿಬಂದೆ ಅನಿಲ | ನಿನ್ನೊಳು ವಾಸ ಗೋಪಾಲಕೃಷ್ಣವಿಠ್ಠಲ ಶ್ರೀಪತಿ ಕೃಪೆಯಿಂದ ನೀ ಪ್ರೀತನಾಗುತ ಕೈಪಿಡಿದು ಸಂತೈಸು ಕರುಣದಿ ಭಾಪುರೇ ಕದರುಂಡಲೀಶ 9
--------------
ಅಂಬಾಬಾಯಿ
ಮಂಗಳಭಾರತಿರಮಣಗೆ ಜಯ ಮಂಗಳ ಮುಖ್ಯ ಪ್ರಾಣೇಶನಿಗೆ ಪ ಆಶಾ ಸಮುದ್ರವ ದಾಟಿ ಸಾಮಥ್ರ್ಯದಿ ಭಾಸುರಾಂಗ ವಾನರೇಶನಿಗೆ 1 ಕೋಪಾದುರ್ಗುಣ ಮೊದಲಾದ ನೂÀರ್ವರ ನಿರ್ ಪಾಪಿ ಕೀಚಕ ಮುಖ್ಯಪಾಮರರನು ಕೊಂದು ದ್ರೌಪದಿಗಿಷ್ಟ ನೀಡಿದಾತಗೆ 2 ಭೂಮಿಗಧಿಕ ಶಿಡ್ಲಘಟ್ಟನಿಲಯ ಗುರು ರಾಮವಿಠಲ ಪ್ರಿಯ ದೂತನಿಗೆ 3
--------------
ಗುರುರಾಮವಿಠಲ