ಒಟ್ಟು 9 ಕಡೆಗಳಲ್ಲಿ , 4 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಜೇಂದ್ರ ಮೋಕ್ಷ ವರಶಂಖಗದೆ ಪದ್ಮಕರದಿ ಚಕ್ರವ ಪಿಡಿದ ಗರುಡಗಮನ ನಮ್ಮ ಕರಿವರದಹರಿಯನ್ನ ನಿರುತ ನೆನೆನೆನೆದು ಬದಿಕಿರಯ್ಯಾ ಪ ಹರಿಧ್ಯಾನ ಹರಿಸೇವೆ ಹರಿಭಕ್ತಿ ಹರಿಚರಿತೆ ದುರಿತದುರ್ಗಕೆಕುಲಿಶ ವರಮುಕ್ತಿಸೋಪಾನ ಕಾಣಿರಯ್ಯಾ ಅ.ಪ. ಕ್ಷೀರಸಾಗರ ಮಧ್ಯೆ ಗಿರಿತ್ರಿಕೂಟ ದೊಳಗೆ ಇರುವುದೂ ಋತುಮಂತ ವರುಣನ ವರವನವು ಅಲ್ಲಿ ಪರಿಪರಿಯ ಲತೆಬಳ್ಳಿ ಸರಸಸ್ಥಾನಗಳಲ್ಲಿ ಮೆರೆವೋರು ಸುರಸಂಘ ನಾರಿಯರ ಸಹಿತಾ 1 ಪದ್ಮಗಾಶ್ರಯವಾದ ಪದ್ಮಕೊಳಾದೊಳಗೆ ಮದಿಸಿದಾ ಗಜವೊಂದು ಐದಿತು ಪರಿವಾರ ಸಹಿತ ವಿಧಿಯ ಬಲ್ಲವರಾರು ಮುದದಿರ್ದ ಆ ಗಜಕೆ ವಿಧಿ ವಕ್ರಗತಿಯಿಂದ ಪಾದವನೆ ಪಿಡಿಯಿತು ನಕ್ರವೊಂದು 2 ಒಂದು ಸಾವಿರ ವರುಷ ಕುಂದದೆಲೆ ಕರಿಮಕರಿ ನಿಂದು ಹೊರಾಡೆ ಸುರವೃಂದ ಬೆರಗಾಯಿತು ಬಂಧು ಬಳಗವು ಮತ್ತೆ ಅಂದ ಹೆಂಡಿರು ಎಲ್ಲ ಕುಂದು ಅಳಿಸದೆ ಇರಲು ಛಂದದಲಿ ಯೋಚಿಸಿತು ಗಜವೂ 3 ಏನಿದ್ದರೇನಯ್ಯ ಶ್ರೀನಿವಾಸನಕೃಪೆಯು ಇನ್ನಿಲದಾಮೇಲೆ ಕುನ್ನಿಗೆ ಸರಿಎಂದು ಹೀನ ಎನ್ನಯ ಜನ್ಮ ದೀನ ಭಾವದಿ ಹರಿಯ ಮಾನವನು ಬದಿಗಿಟ್ಟು ಧ್ಯಾನಿಸಿ ಸ್ತುತಿಸಿದಾ 4 ಸತ್ಯಶಾಶ್ವತಭೋಕ್ತ ಸೃಷ್ಟ್ಯಾದಿಕರ್ಮವಿಗೆ ನಿತ್ಯ ತೃಪ್ತನು ಆದ ಶಾಡ್ಗುಣ್ಯಪರಿಪೂರ್ಣನೆ ವಂದಿಸುವೆನೋ ಓತಪ್ರೋತದಿ ಜಗದಿ ವ್ಯಾಪ್ತ ಆಪ್ತನು ಆದ ಆರ್ತದಲಿ ಕರೆವೆನೋ 5 ಎಲ್ಲಕಡೆಯಲಿ ಇರ್ಪ ಎಲ್ಲರೂಪವ ತಾಳ್ವ ಎಲ್ಲ ಪ್ರೇರಣೆಮಾಳ್ವ ಎಲ್ಲರಿಂ ಭಿನ್ನನಿಗೆ ವಂದಿಸುವೆನೋ ಎಲ್ಲರಿಂ ಉತ್ತಮಗೆ ಎಲ್ಲರಾ ಬಿಂಬನಿಗೆ ಎಲ್ಲರ ವಾಚ್ಯನಿಗೆ ನಲ್ಲನೆಂತೆಂದು ನಾಕರೆವೆನೋ 6 ಎಲ್ಲರನು ಗೆದ್ದವಗೆ ಎಲ್ಲರಾನಲ್ಲನಿಗೆ ಎಲ್ಲ ದೋಷವಿಹೀನ ಒಳ್ಳೆ ಗುಣ ಪೂರ್ಣನ ಕರೆವೆನೋ 7 ನಿನ್ನ ತಿಳಿದವರಿಲ್ಲ ನಿನ್ನ ಮೀರಿದುದಿಲ್ಲ ಜನನ ಮರಣಗಳಿಲ್ಲ ನಿನಗಿಲ್ಲ ಸಮ ಅಧಿಕ ವಂದಿಸುವೆನೋ ನಿನ್ನನಾಮಕೆ ಗುಣಕೆ ನಿನ್ನ ಅವಯವಕೆ ನಿನ್ನ ಕ್ರಿಯ ರೂಪಗಳಿಗೆ ಇನ್ನಿಲ್ಲವೊ ಭೇದಸಾರಿ ನಾಕರೆವೆನೋ 8 ವೇದಗಮ್ಯನುನೀನೆ ವೇದದಾಯಕ ನೀನೆ ವೇದಾತೀತನು ನೀನೆ ಸಾಧು ಪ್ರಾಪ್ಯನುನೀನೆ ವಂದಿಸುವೆನೋ ಖೇದವರ್ಜಿತನೀನೆ ಅಂದ ಸಾರವು ನೀನೆ ಬಂಧನೀಡುವ ನೀನೆ ಅದ್ಭುತ ಅಚಿಂತ್ಯಶಕ್ತಿವಂತನ ಕರೆವೆನೋ 9 ಜ್ಞಾನಿಗೋಚರನೀನೆ ಗುಣಾತೀತನು ನೀನೆ ಗುಣಪ್ರವರ್ತಕನೀನೆ ಅನಾಥ ಸರ್ವಸಮ ವಂದಿಸುವೆನೋ ಜ್ಞಾನದಾಯಕನೀನೆ ಆನಂದಮಯನೀನೆ ನೀನೇ ಸರ್ವಾಧಾರ ನೀನೆ ಏಕನು ಎಂದು ಕೂಗಿ ನಾಕರೆವೆನೋ 10 ಸಾಕಾರ ನಿರಾಕಾರ ಆಕಾರ ಅಹೇಯ ಓಂಕಾರ ವಾಚ್ಯನೆ ಸಾಕಲ್ಯಸಿಗದವನೆ ಸ್ವೀಕಾರ ಮಾಡೋ ವಿಕಾರ ವರ್ಜಿತನೆ ಲೋಕೈಕವೀರಾನೆ ನೀ ಕೆವಲನು ಮುಕ್ತೇಶ ಸಲಹೋ 11 ಏನು ಕೊಡಲೊ ದೇವ ದೀನನು ನಾನಯ್ಯ ನಿನ್ನದೇ ಈ ಭಾಗ್ಯ ಮನ್ನಿಸುತ ದಯಮಾಡಿ ಸಲಹೋ ಘನ್ನಕರುಣಾಳುವೆ ಅನ್ಯರನು ನಾ ನೊಲ್ಲೆ ನಿನ್ನವನು ನಿನ್ನವನೋ ನಿನ್ನ ಚರಣಕೆ ಶರಣು ಶರಣೂ 12 ಕರಿ ತಾನು ಮೊರೆಯಿಡುತ ಕೂಗಲು ಸುರವೃಂದ ಯೋಚಿಸುತ ಹರಿಯಲ್ಲದನ್ಯತ್ರ ಅರಿಯೆವೀಗುಣವೆಂದು ಅರಿತು ಸುಮ್ಮನಿರಲೂ ಹರುಷದಿಂದಲಿ ಹರಿಯು ಗುರುಡನೇರುತ ಬರಲು ತರಿದು ನಕ್ರನ ಭರದಿ ಕರಿಯಪೊರೆಯೆ ಆದ 13 ಏನೆಂದು ವರ್ಣಿಸಲಿ ಶ್ರೀನಿವಾಸನ ಕರುಣ ದೀನ ಭಕ್ತರ ಮೇಲೆ ಸಾನುರಾಗದಿ ಕರಿಯ ಹಿಡಿದೆತ್ತಿದಾ ಇನ್ಯಾಕೆ ಭಯವಯ್ಯ ಘನ್ನ ಇಂದ್ರದ್ಯುಮ್ನನೆ ಏಳು ಮುನ್ನಿನಾ ದೋಷವಿದು ಇನ್ನು ನೀ ಧನ್ಯನಹುದೋ 14 ದೇವಲನ ಶಾಪದಲಿ ಆ ವರ ನಕ್ರನಾಗಿದ್ದ ಶ್ರೀವರನ ಭಕ್ತ ಹೂಹೂ ಗಂಧರ್ವನೆರಗಿ ಬಿದ್ದನು ಹರಿಗೇ ದೇವೇಶ ಹುಸಿನಗುತ ಈವೆ ವರವನು ಕೇಳಿ ಯಾವಾತ ಈ ಕಥೆಯ ಭಾವಶುದ್ಧದಿ ಭಜಿಸೆ ಉದಯದಲಿ ನಾ ಒಲಿವೆ ತವಕದಲಿ ಎಂದನೂ 15 ಹರಿಗೆ ಸಮರಾರಿಲ್ಲ ಹರಿಭಕ್ತ ಗೆಣೆಯಿಲ್ಲ ಸುರರು ಮೊರೆಯಿಟ್ಟರಾಗ ಹರಿವಾಯುಗುರುಗಳು ಕರುಣದಿಂದಲಿ ಇದನು ಮನ್ನಿಪುದು ಬುಧರೂ 16 ಮುದ್ದುಜಯತೀರ್ಥರ ಹೃದಯದಲಿನಲಿಯುವ ಮಧ್ವಾಂತಃಕರಣದಿ ಮುದ್ದಾಗಿ ಕುಣಿಯುವಂಥ ಮಾಧವ ಶ್ರೀಕೃಷ್ಣವಿಠಲರಾಯನು ಬೇಗ ಮೋದ ಸುರಿಸುವ ಈ ಪದವ ಪಠಿಸಲೂ 17
--------------
ಕೃಷ್ಣವಿಠಲದಾಸರು
ಥೂ ನಿನ್ನ ಮೋರೆಗೆ ಬೆಂಕ್ಯ್ಹಚ್ಚ ಮನವೆ ಕುಯುಕ್ತಿ ಬಿಡು ಮನವೆ ಪ ಮುನ್ನ ನೀ ಪಡೆದದ್ದು ನಿನ್ನಗಿರಲಿಕ್ಕಾಗಿ ಅನ್ಯರೊಡವೆಯ ಬಯಸಿ ಕಣ್ಣಿಕ್ಕಿ ಕುದಿವಿ ಕುನ್ನಿಮನಸೆ ನಾಳೆ ಕಣ್ಣಿನೋಳುರಿಗೆಂಡ ವನ್ನು ತುಂಬಿಸುವೆ ಮನಚೆನ್ನಾಗಿ ನೋಡೊ 1 ಮಿಥ್ಯ ಸತಿಸುತರಿಗೆ ತೊತ್ತಾಗಿ ದುಡಿದು ಮುದಿಕತ್ತೆ ನೀನಾದಿ ಮೃತ್ವಿಗೆ ತುತ್ತಾಗಿ ಅತ್ತತ್ತು ಬಾಯಿಬಿಡುವ ಹೊತ್ತಿಗಿರರಾರಾರು ಅರ್ತು ನೀ ನೋಡೊ 2 ಚಿತ್ತಜಪಿತನಂಘ್ರಿ ಸತ್ಯಭಜನಕೆ ಕರೆಯೆ ಸುತ್ತಿ ಮಲುಗುವಿ ಸತಿಸತ್ತಳುವನಂತೆ ಮತ್ತೆ ಎತ್ತಕೆ ಕರೆಯೆ ವತ್ತರಿಲ್ಲ ಓಡ್ವಿ ಮುಕ್ತಿಕೊಂಡೆಯ್ವೆ ಮನ ತೊತ್ತಾಗಬೇಡೊ 3 ದಾಸಾನುದಾಸರ ದೂಷಣೆಯ ಮಾಡಿ ಮಹ ಹಾಸ್ಯದಿಂ ನಗುವಿ ಭವಪಾಶದೋಳ್ಸಿಲ್ಕಿ ನಾಶಬುದ್ಧಿಯ ಬಿಡು ಹೇಸಿಮನುಜನೆ ಯಮ ಪಾಶ ಬರುವುದು ಮುಂದೆ ಸೋಸಿ ನೀನೋಡೊ 4 ನೆರೆದು ತೋರುವ ಸಂತೆಪರಿಯಂತೆ ಸಂಸಾರ ಮರೆಮೋಸದ ಉರುಲು ದುರಿತದ ತವರು ಮರುಳತನವನು ನೀಗಿ ಪರಮ ಶ್ರೀರಾಮನ ಚರಣಸ್ಮರಣೆಯೊಳಿರ್ದು ವರಮುಕ್ತಿ ಪಡೆಯೊ 5
--------------
ರಾಮದಾಸರು
ಪೋಗವಲ್ಲದು ಇಹ್ಯಭೋಗದಾಸೆಯು ಇನ್ನು ನಾಗಶಯನ ನೀನೆ ನೀಗಿಸು ಇದನು ಪ ಏಸು ಸಾರ್ಹುಟ್ಟ್ಹುಟ್ಟಿ ಆಶಪಾಶದಿ ಬಿದ್ದು ನಾಶ ವೊಂದುತ ಬಲು ಬೇಸತ್ತೆ ಹರಿಯೆ 1 ಹೇಯಭರಿತವಾದ ಕಾಯಸುಖಕ್ಕೆ ಮೆಚ್ಚಿ ಪಾವನಪಥ ಮರೆದು ಬವಣೆಬಟ್ಟೆಭವ 2 ಅರಿದು ತವಪದಕ್ಕೆ ಎರಗಿ ಬೇಡುವೆ ಸ್ಥಿರ ವರಮುಕ್ತಿಸುಖ ನೀಡಿ ಪೊರೆಯೊ ಶ್ರೀರಾಮ 3
--------------
ರಾಮದಾಸರು
ಬೇಡುವೆನು ಉಡಿಯೊಡ್ಡಿ ನಾ ನಿನ್ನ ಭಜಿಸಿ ಮಾಡುದಯ ನಿನ್ನವರ ಒಡನಾಡ ಹರಿಯೆ ಪ ಇಡುವ್ಯೋ ಸಂಸಾರದಿ ಕೊಡು ಬಿಡದೆ ನಿರ್ಮೋಹ ನಡೆಸುವೆಯೊ ಹಿರೇತನದಿ ನುಡಿಸದಿರು ಪಕ್ಷ ಬಡತನದಿ ಇಡುವೆಯೋ ಕಡುಧೈರ್ಯ ಕೃಪೆಮಾಡು ಸಡಗರದ ಸಿರಿಕೊಡುವ್ಯೋ ಕಡುಶಾಂತಿ ನೀಡು 1 ಬೇನೆಯೊಳು ನೂಕುವೆಯೋ ತ್ರಾಣಕೊಡು ತಡೆವ ಬಹು ಮಾನ ಕೊಡುವೆಯೋ ಮೊದಲು ನಾನೆಂಬುದ್ಹರಿಸು ಕಾನನದಿ ತಿರುಗಿಸುವಿಯೋ ಜ್ಞಾನಪಾಲಿಸು ಅಪ ಮಾನವಿತ್ತರೆ ನಿನ್ನ ಧ್ಯಾನದೊಳಗಿರಿಸು 2 ತಿರಿದುಣಿಸಿ ಬದುಕಿಸುವ್ಯೋ ತೋರಿಸು ಜಗದಭಿಮಾನ ಪರಿಪಕ್ವಾನ್ನುಣಿಸುವೆಯೋ ಪರಪಂಕ್ತಿ ಬಿಡಿಸು ದೊರೆತನವ ಕರುಣಿಸುವ್ಯೋ ಕರುಣಗುಣ ವರ ನೀಡು ನರರೊಳಗೆ ಆಡಿಸುವ್ಯೋ ಮರೆಸು ಅನೃತವ 3 ಶರಣರ್ವರ್ತನದೆನ್ನ ನಿರಿಸುವೆಯೊ ಅನುಗಾಲ ನಿರುತು ಧರ್ಮಗಲದ ಸ್ಥಿರಬುದ್ಧಿ ನೀಡು ಮರೆವೆ ಮಾಯವ ತರಿದು ಅರಿವಿನೊಳಿರಿಸುವೆಯೊ ಹರಿಶರಣರಹುದೆನುವ ವರ್ತನವ ನೀಡು 4 ಹರಣಪೋದರು ನಿಮ್ಮ ಚರಣಕ್ಕೆರಗಿದ ಶಿರವ ಪರರಿಗೆರಗಿಸದಿರು ಶರಣಾಗತಪ್ರೇಮಿ ಜರಾಮರಣ ಪರಿಹರಿಸಿ ವರಮುಕ್ತಿ ಪಾಲಿಸಿ ವರದ ಶ್ರೀರಾಮ ನಿಮ್ಮ ಚರಣದಾಸೆನಿಸು 5
--------------
ರಾಮದಾಸರು
ಮರುಳೆ ಸುಖ ನೀನೆನು ಪಡೆದಿ ನರಜನುಮ ತಾಳಿ ಇಹ್ಯದಿ ಪ ಪರಿಪರಿ ಜನುಮ ತಾಳಿ ಪರಮ ಬಂಧದೊಳೊರಲ ಉರುಳಿ ವರಮುಕ್ತಿ ದೊರೆವ ಕೀಲಿ ಸ್ಮರಿಸಿ ಬಂದಿ ಹರಿಯ ಬಳಲಿ 1 ಅರಿಯದೆ ಮತ್ತು ಭವಮಾಲೆ ಕೊರಳಿಗ್ಹಾಕಿಕೊಂಡಿ ದುರುಳ ಮರೆಯಮೋಸ ಕಾಂಬೋದೆಲ್ಲ ಹರಿದು ಪೋಗ್ವುದು ಸ್ಥಿರವಲ್ಲ 2 ಸಮಯ ಮಿಂಚಿಪೋದ ಬಳಿಕ ಕ್ರಮದಿ ಮತ್ತೆ ಸಿಗುವುದೆ ಮೂರ್ಖ ವಿಮಲ ಶ್ರೀರಾಮ ಪಾದಕಮಲ ನಮಿಸಿ ಪಡಕೊ ಮುಕ್ತಿಮಾಲಾ 3
--------------
ರಾಮದಾಸರು
ಲಕ್ಷ್ಮೀವಲ್ಲಭ ವಿಠಲ | ಪೊರೆಯ ಬೇಕಿವಳಾ ಪ ಅಕ್ಷಯ್ಯ ಫಲದ ಕೃ | ಪೇಕ್ಷಣದಿ ನೋಡಿಅ.ಪ. ಸಂಸಾರ ವಿರಸತರ | ಅಂಶವನೆ ತಿಳಿಸೊ ಹರಿಕಂಸಾರಿ ನಿನ್ನ ಪದ | ಪಾಂಸು ಭಜಿಸುತ್ತಾ ಸಂಶಯ ರಹಿತ ಹರಿ | ಹಂಸನಾಮಕ ಸೇವೆಶಂಸಾರ್ಯ ಸರ್ವಧಿಕ | ಸವೋತ್ತಮೆನುತಾ 1 ಹರಿನಾಮ ಕವಚವನು | ಸರ್ವದಾ ಧರಿಸುತ್ತಾದುರಿತನಾಳುಟ್ಟಳಿಯ | ಪರಿಹಾರ ಮಾರ್ಗಅರಿವಿನಿಂದಲಿ ಹರಿಯ | ವರನಾಮ ಸ್ಮರಿಸುತ್ತಕರಗತವು ಆಗಲಿಯೊ | ವರಮುಕ್ತಿಪಥವು 2 ಎರಡು ಮಾರ್ಭೇದಗಳು | ಅರಿವಾಗಲೀಕೆಗೇತರತಮಂಗಳು ಮನಕೆ | ಬರುತಿರಲಿ ಸರ್ವದಾಸಿರಿವಾಯು ಮತ ದೀಕ್ಷೆ | ಗೆರಗಲೀಕೆಯ ಮನಸುಹರಿಯ ಮಮ ಕುಲದೈವ | ಉದ್ದರಿಸೊ ಇವಳಾ 3 ಸಾಧನಕೆ ಸತ್ಸಂಗ | ನೀದಯದಿ ಕೊಟ್ಟಿವಳಮೋದ ಬಡಿಪದು ದೇವ | ಆದಿ ಮೂರುತಿಯೇ |ಮಾಧವನೆ ಬಿನೈಸೆ | ಆದರಿಸುತಿವಳೀಗೆಕಾದುಕೊ ಬಿಡದಲೆ | ಹೇ ದಯಾ ಪೂರ್ಣ 4 ದೇವದೇವೊತ್ತಮನೆ | ಕಾವದೇವನೆ ಹರಿಯಭಾವದಲಿ ಮೈದೋರಿ | ಪೊರೆಯೊ ಇವಳಾಕಾವ ಕರುಣೆಯ ಗುರು | ಗೋವಿಂದ ವಿಠಲನೆನೀವೊಲಿಯದಿನ್ನಿಲ್ಲ | ಈ ವಾಣಿ ಬಲುಸತ್ಯ 5
--------------
ಗುರುಗೋವಿಂದವಿಠಲರು
ಶುಭ | ಮಂಗಳ ಶ್ರೀ ಲಕ್ಷ್ಮೀ ನರಸಿಂಹಗೇ | ಸಹಸ್ರ | ಮಂಗಳ ಭಕ್ತರ ಸಲಹುವಗೆ ಪ ಶರಣ ಪ್ರಲ್ಹಾದಗೆ ಪಟ್ಟಾಭಿಷೇಚನ | ಕರುಣದಿಮಾಡಿಸಿಸುರದಿಂದಲಿ | ಅರಸುತನವಕೊಟ್ಟು ಭಕ್ತಾಗ್ರಣಿ ಮಾಡಿ ವರಮುಕ್ತಿಗಳ ಸೂರಾಡಿದವಗೆ | ಮಂಗಳ .... 1 ಎನ್ನನು ನೆನೆಯಲಿ ನೆನೆಯದವರಿರಲಿ ಒಮ್ಮೆ | ನಿನ್ನ ನೆನೆದು ಘನ ಚರಿತೆಯನು || ಮನ್ನಿಸಿ ಒದುವ ಕೇಳುವ ಮನುಜರ | ಚೆನ್ನಾಗಿ ಕಾಯ್ವೆನೆಂದಭಯ ವಿತ್ತವಗೆ ಮಂಗಳ ..... 2 ಅಂದಿಗಿಂದಿಗೆ ತನ್ನ ದಾಸರಾದಾಸನಾ | ಮಂದಿರ ಸಾರಿದವಗೆ ದಯದೀ || ಚಂದಾಗಿ ತನ್ನ ಭಕುತಿ ಎಚ್ಚರವ ನೀವ | ತಂದೆ ಮಹೀಪತಿ ಸುತ ಪ್ರೀಯಗೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿನ್ನ ಧ್ಯಾನ ಶುಭಮೂಹೂರ್ತ ನಿನ್ನ ಭಜನ ಶುಭದಿನವು ಪನಿನ್ನ ನಾಮ ಜಯಕಾರವು ನಿನ್ನ ಸ್ಮರಣ ಶುಭತಿಥಿಯುನಿನ್ನ ಸ್ತುತಿಯೆ ಶುಭಕಾಲ ಅನ್ಯ ಎಲ್ಲಪುಸಿಮಾಧವದೇವಅಪನಿತ್ಯನಿರುಪಮ ನಿನ್ನ ನಿತ್ಯದಲ್ಲಿ ಪೊಗಳುವುದೆಉತ್ತಮ ಶುಭವಾರವುಚಿತ್ತಜಪಿತ ನಿನ್ನ ಚಿತ್ತದಲಿ ನೆನೆಯುವುದೆಅತ್ಯಧಿಕ ಪಕ್ಷಮಾಸವುಮೃತ್ಯುದೂರನೆ ನಿನ್ನ ಸತ್ಕಥೆಯನಾಲಿಪುದೆ ನಕ್ಷತ್ರ ಶುಭಕರಣವುಭಕ್ತವತ್ಸಲ ನಿನ್ನ ಭಕ್ತಿಯಿಂ ಪಾಡುವುದೆನಿತ್ಯಅಮೃತಯೋಗವು ನಿಜವು1ದಿವನಿಶೆಯ ಇಡದೊಂದೆಸವನೆ ನಿನ್ನರಸುವುದೆರವಿಚಂದ್ರ ಭೌಮ್ಯ ಒಲವುಭವಪರಿಹರ ಸಿರಿಧವ ನಿನ್ನ ಸಚ್ಚರಿತಕವಿಗುರುಸೌಮ್ಯ ಬಲವುಬುವಿಯರಸ ನಿನ್ನಸಮ ಸುವಿಲಾಸ ಲೀಲೆ ಕೇಳಾವುದಮಿತ ಶನಿಬಲವುಭುವಿಜಪತಿ ಭಕ್ತಿಯ ಭವಭವದಿ ರಾಹುಕೇತುನವಗ್ರಹಂಗಳ ಬಲವು ಗೆಲವು 2ಕರಿಧ್ರುವರ ಪೊರೆದ ತವಪರಮ ಬಿರುದುಗಳನ್ನುಸ್ಮರಿಸುವುದೆ ಭವದೂರವುಹರದಿಗಕ್ಷಯವಿತ್ತ ವರದ ನಿನ್ನಡಿ ದೃಢವುಸ್ಥಿರಶಾಂತಿ ಸುಖಸಾರವುಸುರಗಣಕೆ ಸೌಖ್ಯವನು ಕರುಣಿಸಿದ ನಿಮ್ಮ ಮೊರೆಪರಲೋಕ ನಿಜಸ್ವಾದವುವರದ ಶ್ರೀರಾಮ ನಿಮ್ಮ ಚರಣದಾಸತ್ವದೆವರಮುಕ್ತಿ ಕೈಸಾಧ್ಯವು ಸ್ಥಿರವು 3
--------------
ರಾಮದಾಸರು
ನೀ ದಯದಿ ನೋಡಿದರೆ ನಾ ಧನ್ಯ ಶ್ರೀರಂಗನೀ ಮುಖವ ತಿರುವಲು ನಾ ಪರದೇಶಿ ವಿಮಲಾಂಗ ಪವನಜಾಕ್ಷ ನೀ ಕೊಡಲು ಧನವಂತನೆನಿಸಿಹ್ಯದೀಜನರೊಳಗೆ ಘನವಂತನೆನಿಸಿಕೊಂಬೆಅನುಗಾಲ1ಹರಿನಿಮ್ಮ ವರಚರಣಕರುಣವಿರೆ ಧರೆಮೇಲೆದುರುವಾದಿಗಳ ಜೈಸಿ ನಿರುತನೆನಿಪಿಅನವರತ2ವರವೇದಸ್ಮøತಿಶಾಸ್ತ್ರ ಸ್ಥಿರದರಿವು ನಿಜಜ್ಞಾನವರಮುಕ್ತಿ ಲಭ್ಯತವಕರುಣದಿಂ ಶ್ರೀರಾಮ 3
--------------
ರಾಮದಾಸರು