ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಮಾನಂದ ಕರುಣಾಸಿಂಧು ವರವ ನೀಡಲು ಭಕುತಬಂಧು ಪ ಪರಮಚರಿತ ದುರಿತರಹಿತ ಪೊರೆಯೊ ಪ್ರಥಮಜನರ ಪ್ರೀತ ಸ್ಮರಿಪೆ ನಿರುತ ಸುರಗಣನುತ ಮೊರೆಯೊ ಕೇಳೆಲೊ ವರಪ್ರದಾತ 1 ಉರಗಭೂಷ ಭಜಕಪೋಷ ದುರಿತನಾಶ ಸುಜನವಾಸ ವರಮಹೇಶ ತ್ರಿ ಜಗದೀಶ ಪೊರೆ ಪ್ರಕಾಶ ತ್ರಿಪುರನಾಶ 2 ನಿಗಮವಿನುತ ಭಗವದ್ಭಕ್ತ ಸುಗುಣವಿಖ್ಯಾತ ಜಗನ್ನಾಥ ಜಗಜೀವಿತ ಶ್ರೀರಾಮ ಪ್ರೀತ ಈಗೆನ್ನಂತರಂಗ ಪಾಲಿಸೊ 3
--------------
ರಾಮದಾಸರು
ಪುರಹರ ಗೌರಿವರ ಕರುಣಾಕರ ಕರುಣಿಸೆನ್ನ ಪ ಫಾಲನೇತ್ರ ಪಾಲಯ ಜಗ ನೀಲಕಂಠ ಮೇಲುಮಂದಿರ ಶೂಲಪಾಣಿ ಕಾಲಮರ್ದನ ಬಾಲನೆಂದು ಪಾಲಿಸೆನ್ನ 1 ದುರಿತರಹಿತ ಕರುಣಭರಿತ ಪರಮಚರಿತ ಸ್ಮರನ ಭಂಜಿತ ಉರಗಭೂಷ ವರಮಹೇಶ ಹರಿಯ ಪ್ರೇಮ ದೊರಕಿಸೆನಗೆ 2 ಒಡೆಯ ಶ್ರೀರಾಮನಡಿಯ ಧ್ಯಾನ ಪಿಡಿದು ಬಿಡದ ದೃಢಭಕುತಿ ಗಡನೆಕೊಡೆಲೊ ಮೃಡನೆಯಿದನು ದೃಢದಿ ಬೇಡ್ವೆ ಜಡಧಿಧರನೆ 3
--------------
ರಾಮದಾಸರು