ಒಟ್ಟು 4 ಕಡೆಗಳಲ್ಲಿ , 1 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕನಸನು ಕಂಡೆನು ಕೇಳೌ ಘನ ಶ್ರೀ ಗುರು ಬಂದು ಶಾಸ್ತ್ರ ತತ್ವವ ಪೇಳ್ದಂ ಮನಸಿನ ಸಂಶಯವಳಿಯಿಸಿ ತನಯಗೆ ರಾತ್ರಿಯೊಳು ತೋರಿದಂ ಸತ್ಪಥಮಂ ಕಂದ ಕನಸನು ಕಂಡೆನು ಕೇಳೌ ಶ್ರೀಗುರುಭರದಿಂ ತಾ ಬಂದೂ ಪ ತನಯನ ಸಂಶಯವಳಿಯಿಸಿ ಪರತರ ಗತಿಯನು ತಾ ಕೊಡುವ ಅ.ಪ ಶ್ರೀಹರಿ ಪೂಜೆಯು ಸ್ತೋತ್ರವು ಚಿಂತನೆ-ಶ್ರೀಹರಿಮಂತ್ರವನೂ ಶ್ರೀಹರಿ ಲಾಂಛನ ಧರಿಸುತ ಸಂತತ ವಿಠಲನ ಭಜಿಸೆಂದು 1 ಬಂಧುರದೇಗುಲ ವರಕ್ಷೇತ್ರದೊಳಾನಂದವನೋಡುತಲೀ ನಿಂದಿಹ ಪರಿಪರಿ ಸಾಧುವೈಷ್ಣವರಿಗೊಂದನೆಮಾಡೆಂದ 2 ಸತ್ಯಪ್ರಬಂಧವು ಅಷ್ಟಾಕ್ಷರಿಜಪತತ್ವ ಸುದ್ವಯಮಂತ್ರ ನಿತ್ಯಹೃದಯದೊಳು ಸೋಹಂಭಾವದಿ ಭಕ್ತಿಯೊಳ್ಬೆರೆಯೆಂದ 3 ವರಮಹದೇವನ ಪುರಶ್ರೀರಂಗನಚರಣವ ಗುರಿಮಾಡೀ ಮರೆಯದೆ ಧ್ಯಾನಿಸು ನಾನೇ ನಿನ್ನನು ಪೊರೆಯುವೆನೆಂತೆಂದ 4
--------------
ರಂಗದಾಸರು
ತಂದೆಯೆ ನೀನೆನಗಹುದೈ ಬಂಧುರ ದುರಿತಾರಿ ನಿನ್ನ ಬಾಲನು ನಾನಾ ನಂದದಿ ಪೇಳ್ವೆನು ಕರುಣಾ ಸಿಂಧುವೆ ಪೊರೆಯೆನ್ನನಿಂದು ಶ್ರೀಮದ್ಗುರುವೇ ಕಂದ 1 ಸನ್ನುತಗುರುವರ ನಿಮ್ಮಯ ಚನ್ನಡಿದಾವರೆಯ ನಂಬಿ ಸಲೆ ಸೇವಿಸುವಂ ಗಿನ್ನಿತರ ಕ್ಷೇತ್ರಭ್ರಮೆ ಯೆನ್ನುವುದೇನುಂಟು ನೋಡಲಿಳೆಯೊಳಗನಿಶಂ 2 ತಂದೆಯಹುದು ನೀನೆ ಶ್ರೀಗುರು ತಂದೆಯಹುದು ನೀನೆ ಪ ಅಂದದಿ ಸಂಸೃತಿಸಂಗವ ಜಾರಿಸಿ ಬಂಧುರ ತತ್ವವನರುಹಿದ ಪರಮನೆ ಅ.ಪ ಎಷ್ಟುಕರುಣಿ ಎನ್ನ ಪಾಪವಸುಟ್ಟು ಭ್ರಾಂತಿವಿಷಯ ಕೃಷ್ಣನಪಾದವಮುಟ್ಟಿ ಯಜಿಸಿ ಮನ ನೆಟ್ಟುಯೋಗದಲಿ ವಿಮಲನಮಾಡಿದ 1 ನಾಮ ರೂಪ ಮರೆಸಿ ಸೋಹಂ-ಭಾವಮುದ್ರೆ ಧರಿಸಿ ತಾಮಸ ಬುದ್ಧಿಯ-ತರಿದೀಡಾಡಿಸಿ ನೇಮದಿ ಜಗದೊಳು-ಚರಿಸೆಂದರಸಿದ 2 ಭೇದವಾದ ತೊರಸಿ ಚಿತ್ಕಳೆ-ನಾದಕವಚ ತೊಡಿಸಿ ಸಾಧಿಸಿ ವಿರತಿಯ-ವರವೈರಾಗ್ಯವ ಬೋಧಿಸುತಲಿ ತನ್ನಂತೆಯೆಮಾಡಿದ 3 ಚರಮ ಶ್ಲೋಕವನ್ನು ಅಷ್ಟಾಕ್ಷರಯುಗಮಂತ್ರವನ್ನು ತಿರುಮಂತ್ರಾರ್ಥವ ತೀರ್ಥಪ್ರಸಾದವ ತರಳನಿಗಿಯುತ ಮರವೆಯ ನೂಕಿದ 4 ಬಂದ ಕಷ್ಟಗಳನು ಬೇಗದಿಭಂಗಮಾಡಿ ತಾನು ಬಂದು ಹೃದಯ ವರಮಂದಿರದೊಳುತಾ ನಿಂದು ಮೋಕ್ಷವನು ಸಂಧಿಸಿ ಸಲಹಿದ 5 ಶರಣು ಪೊಕ್ಕ ನರನ ಸಂತತಕರವ ಪಿಡಿದು ಮುನ್ನ ವರಮಹದೇವನ ಪುರ ಶ್ರೀರಂಗನೆ ಹರುಷದೊಳೆನ್ನನು ಪರದೊಳ್ಬೆರಸಿದ 6
--------------
ರಂಗದಾಸರು
(ಈ) ಲೋಕನೀತಿ-ತಾತ್ವಿಕ ಕೃತಿಗಳು ಕರ್ಮತ್ಯಾಜ್ಯವ ಮಾಡಿರೊ ಸನ್ಮಾರ್ಗದೋಳ್ ಕರ್ಮತ್ಯಾಜ್ಯವ ಮಾಡಿರೊ ಪ ನಿರ್ಮಲ ಮನಮೂಡಿ ಮರ್ಮಜ್ಯೋತಿಯ ಕೂಡಿ ಅ.ಪ ಕಾಮಕ್ರೋಧಗಳ ಸುಟ್ಟು ಸಂಸೃತಿಯಳಿದು ತಾಮಸಮತಿಯ ಬಿಟ್ಟು ಹೇಮದಾಸೆಗೆಮನ ಪ್ರೇಮಮಾಡದೆ ಭಿನ್ನ ನಾಮರೂಪವ ನೂಂಕಿ ರಾಮನೊಳ್ಮನ ನೆಟ್ಟು 1 ಪರಮಪಾವನಮಾದ ಶ್ರೀಹರಿಯಲ್ಲಿ ಬೆರೆಯುತಾನಂದದಿಂದ ಅರಿಗಳಾರರಸಂಗ ಕರಿಗಳೆಂಟರ ಭಂಗ ಕಿರಿದುಎಂಟರ ಅಂಗ ಭರದಿ ತರಿದು ಈಗ 2 ಧರೆಯೊಳ್ದುಷ್ಟರ ಮರದು ಮಹನೀಯರ ಚರಣಸೇವೆಯೊಳ್ಬೆರದು ವರಮಹದೇವನಪುರದ ಶ್ರೀರಂಗನ ನಿರುತ ನಂಬಿಯೆ ಸದ್ಗುರುವ ಸೇವಿಸಿ ದುಷ್ಟ 3
--------------
ರಂಗದಾಸರು
ವಂದನೆಯ ಮಾಡುವೆ ಶ್ರೀಗುರುವಿಗೆ- ವಂದನೆಯ ಮಾಡುವೆÀ ಪ ವಂದನೆ ಮಾಡುವೆನಿಂದು ಯದುಶೈಲದೋಳ್ ಚಂದದೊಳಿರುತಿಹ ತಂದೆ ನಾರಾಯಣಗೆ ಅ.ಪ ಹರುಷದಿಂದಲಿ ಇನ್ನು ಹರಸಿ ಸಜ್ಜನರಿಗೆ ವರಗಳ ಕೊಡುತಿಹ ವರಲಕ್ಷ್ಮಿ ತಾಯಿಗೆ 1 ಹಿರಿದಾದ ದೈತ್ಯನ ಸೀಳಿ ಸಂತೋಷದಿ ಮೊರೆಹೊಕ್ಕ ಕಂದನ ಪೊರೆದ ನರಸಿಂಹಗೆ 2 ಪಾವನತರಮಾದ ದೇವಸಮೂಹವ ಕಾವ ಕೃಪಾನಿಧಿ ಕಲ್ಯಾಣಮ್ಮಗೆ 3 ವಿಸ್ಫುರಿತದಲ್ಲಿರ್ಪ ವೈರ್ಮುಡಿ ತಿರುಮಣ್ಣು ಸರ್ಪಶಯನಗರ್ಪಿಸಿದಂತ ಗರುಡಗೆ 4 ಶ್ರೀಲೋಲನಡಿಗಳ ಲೀಲಾಮೃತಗಳ ಶೀಲರಾಗಿ ಕುಡಿದ ಶ್ರೇಷ್ಠ ಆಳ್ವಾರ್ರಿಗೆ 5 ವರದವಿಠಲನ ಒಲಿದು ತಾ ಬಂದಿನ್ನು ಗಿರಿಯೊಳು ನೆಲೆಸಿದ ವರ ಗುರುಪೀಠಕೆ 6 ಪಂಕಜಾಕ್ಷನಪಾದಪಂಕಜ ನಂಬಿಹ ವೆಂಕಟಪುರದೊಳಗಿರುವ ವೈಷ್ಣವರಿಗೆ 7 ವಿಷ್ಣುವಿನಂಶದಿ ಪುಟ್ಟಿ ಸಂತೋಷದಿ ಸೃಷ್ಟಿಯನಾಳ್ವ ಶ್ರೀ ಕೃಷ್ಣಭೂಪಾಲಗೆ8 ಮರೆಯದೆ ಭಕ್ತರ ಕರುಣದಿಂದಲಿ ಕಾಯ್ವ ವರಮಹದೇವನ ಪುರದಶ್ರೀರಂಗಗೆ 9
--------------
ರಂಗದಾಸರು