ತರುಣಿಯರೆಲ್ಲರು ಬಾರೆಂದು ಕರೆವರು
ವರಮಣಿಪೀಠಕೆ ಮುದದಿ ಪ.
ಕ್ಷೀರವಾರಿಧಿಜಾತೆ ಚಾರುಸುಂದರಗಾತ್ರೆ ಮಾರಜನಕದಯಿತೆ
ಸಾರಸಾನನೆ ಮದ ವಾರಣಗಮನೆ ನಿನ್ನಅ.ಪ
ಇಂದು ಕುಂದಣದ ಹಸೆಗೆ
ಮಂದಹಾಸವ ತೋರಿ ಬಂದೆಮ್ಮ ಮನೆಯೊಳೆಂದೆಂದಿಗು
ಕುಂದದಾನಂದವ ಬೀರೆಂದು 1
ಗಾಡಿಕಾರನಾ ಕೃಷ್ಣನ
ದೃಢಭಕ್ತರ ಕೈ ಬಿಡದಾಧರಿಸುತ್ತ 2
ನಿರುತಸೇವಿಪ ವರವ
ವರಶೇಷಗಿರಿವಾಸನರಸಿ ನೀನಲಿದಿಂದು 3