ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಲ ಸಜ್ಜನರಿಗನ್ನಕಿಲ್ಲದ ಸಾವಕಾಲ ಪ ಅರಮನೆಯ ಬಾಗಿಲನು ಕಾದು ಕೊಂಡಿರ್ದು ನೃಪ ವರನೊಡನೆ ಮಾತುಕಥೆಗಳ ನಡೆಸುತ ವರಮಂತ್ರಿಯಾಗಿ ರಾಜಾಧಿ ಕಾರಂಗಳನು ಕಾಲ 1 ಅಡಗಡಿಗೆ ಮಂತ್ರಿಗಳನಾಶ್ರಯಿಸಿ ಕೋವಿದರು ಗಡಿಗಳನು ಕೊಡಿಸೆನಗೆ ತನಗೆನ್ನುತ ಕಾಲ 2 ಮತ್ತಿವರನಾಶ್ರಯಿಸಿ ಕೆಲರು ಮಣಿಹಂಗಳನು ಪೊತ್ತು ಸೀಮೆಯ ಗ್ರಾಮಗಳ ನೋಡುತ ಇತ್ತ ಕುಳ ಸ್ಥಳ ವಂಚನೆಗಳೆಂದು ಬಂದ ಕಾ ಕಾಲ 3 ಬುಡಗಳನ್ನು ಗೈದೆ ಹಾಳ್ಮಾಡಿ ಕೊಂಡಿರ್ದರಿಗೆ ಕಡ ಮೊದಲುಗಳ ಕೊಟ್ಟು ಪೋಗೆಂಬರು ಅಡೆಯಂಚು ಮೂಲೆಗೆಳಗೈದು ಕುಳದೆರಿಗೆಯನು ಕಾಲ ಕಾಲ 4 ಚಾಡಿ ಕೋರರು ಹೆಚ್ಚಿ ಕೆಡಿಸಿವರ ರಾಜ್ಯವನ್ನು ರೂಢಿ ಪತಿಗಳಿಗೆಲ್ಲ ಕಿವಿಯೇ ಕಣ್ಣು ನೋಡಿದರೆ ಮರುತ ಸುತ ಕೋಣೆ ಲಕ್ಷ್ಮೀರಮಣ ನಾಡಿಸಿದ ವೋಲು ಜಗವಾಡುತಿಹುದು 5
--------------
ಕವಿ ಪರಮದೇವದಾಸರು
ಸಾವಾತ ನಾನಲ್ಲಾ ಸಾವು ಮೊದಲೆನಗಿಲ್ಲಾ ಯೋಗಿ ತಾ ಬಲ್ಲಾ ಪ ಧರೆಯೆನಿಸಿ ದೊರೆಯಾಜÉ್ಞಯೊಳಾಳುತಿಹೆ ನಾನು ವರಮಂತ್ರಿಯಾಗಿ ವರ್ತಿಸುವವನೆ ನಾನು ಕರಣಿಕರ ತೆರದಿ ಲೆಕ್ಕವ ನೋಡುತಿಹೆ ನಾನು ಪರಿವಾರವಾಗಿ ಓಲೈಸುವವನೆ ನಾನು 1 ವಾಹನ ಹೊರುವಾತ ನಾನು ಹೊತ್ತಂತಿರುವೆ ನಾನು ಹರಿನಾಮ ಹರನಾನು ನರನಾನು ಸರ್ವವೀ ಪರಿಯೊಳಗೆ ಮೆರೆದು ವಿಸ್ತರಿಪೆ ನಾನು 2 ಅಣುರೇಣು ತೃಣಕಾಷ್ಠ ಭರಿತನಾಗಿಹೆ ನಾನು ಗಣನೆಯಿಲ್ಲದ ಗುಣವ ತೋರ್ಪೆ ನಾನು ಉಣಲಿಕ್ಕುವವ ನಾನು ಉಂಡು ತೃಪ್ತಿಪೆ ನಾನು ರಣನಾನು ರಣವ ಗೆಲುವಾತ ನಾನು 3 ಭೂಮಿಯಾಗಿಹೆ ನಾನು ಬೆಳೆವ ಬೆಳೆಯೇ ನಾನು ಸೋಮ ಸೂರ್ಯಾಗ್ನಿ ವಾಯುಗಳೆ ನಾನು ನಾಮರೂಪಾತೀತ ವಸ್ತುವಾಗಿಹೆ ನಾನು ಕಾಮಿನಿಯರಾಗಿ ಕಾಮಿಸುವವನೆ ನಾನು 4 ಒಲಿವಾತನೇ ನಾನು ಒಲಿದರಗಲೆ ನಾನು ಕೊಲಿಸಿಕೊಂಬುವೆ ನಾನು ಕೊಲುವಾತ ನಾನು ಸುಲಭದಿಂದಲಿ ಜ್ಞಾನ ಫಲವಿಕ್ಕುವವ ನಾನು ಚೆಲುವ ವಿಮಲಾನಂದ ಗುರುರಾಯ ನಾನು 5
--------------
ಭಟಕಳ ಅಪ್ಪಯ್ಯ