ಒಟ್ಟು 6 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುವಿಗೆರಗೀ ತರಣೋಪಾಯವನರಿಯಲಿಲ್ಲಾ ಮನವೇ | ಮರುಳನೋ ತರಳನೋ ಬಲು ದುರುಳನು ನಾನರಿಯೇ ಪ ಶ್ರೀನಾಥನಂಘ್ರಿ ಕಮಲಾ ಧ್ಯಾನವಿಲ್ಲ ಮನವೇ | ಮಾನವನಫ ದಾನವನೋ ನೀದನವೇನೋ ನಾನರಿಯೇ 1 ರತಿಯ ಬಿಟ್ಟು ವಿಷಯದಲ್ಲಿ ಗತಿಯಾ ಜರದೀ ಮನವೇ | ಹಿತವೇನೋ ಮಿತವೇನೋ ಉನ್ಮತವೇನೋ ನಾನರಿಯೇ 2 ಪೊಡವಿಯೊಳು ನರದೇಹವ ವಿಡಿದು ಬಂದೆ ಮನವೇ | ನಡಿದೇನೋ ನುಡಿದೇನೋ ಸುಖಪಡಿದೇನೋ ನಾನರಿಯೆ 3 ಭಕ್ತಿ ಜ್ಞಾನಾ ಬಲಿವಾ ಸುವಿರಕ್ತಿ ಇಲ್ಲಾ ಮನವೇ | ಸಕ್ತನೋ ಯುಕ್ತನೋ ಆಯುಕ್ತನೋ ನಾನರಿಯೆ 4 ಗುರು ಮಹಿಪತಿ ಪ್ರಭು ಶರಣರ ಕಾಯ್ದಾ ಮನವೇ | ನರವರನೋ ಸುರವರನೋ ಕಲ್ಪತರು ವರನೋ ನಾನರಿಯೆ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಧ್ವರಾಯರ ಶುದ್ಧಸಿದ್ಧಾಂತ ಪದ್ಧತಿಯಲಿ ಇದ್ದ ಮನುಜಗೆ ಕರಸಿದ್ಧವೈಯ್ಯಾ ಮುಕುತೀ ಪ ಬಿದ್ದು ಪೋಗುವುದಘ ವೃಂದಗಳೆಲ್ಲವು ಶುದ್ಧಜ್ಞಾನದಿ ಸತ್ಯ ಉದ್ಭರಿಪ ಹರಿ ವೇದಸಿದ್ಧವಿದುಕಾಣೋ ಅ.ಪ. ಖ್ಯಾತಿಯಿಂದಲಿಲಂಕೆ ಸುಟ್ಟು ಪ್ರೀತಿಲಿ ರಾಮನ ಭಜಿಸಿದರೋ ವ್ರಾತಖಳಕುಲ ಘಾತಿ ಮಾಡಿಸಿ, ವೀತಿಹೋತ್ರಗೆ ತುತ್ತು ನೀಡುತ ನಾಥರಾಮನ ವರದಿ ಮುಂದಿನ ಧಾತನಾಗಿ ಬರುವ ನಮ್ಮ 1 ದ್ವಾಪರದಲಿವರು ಪಾಪಿ ದುರ್ಯೋಧನನ ಭೂಪನಂದದಿ ಅಳಿಸಿ ಶ್ರೀಪತಿಸೇವೆನಡಿಸಿದರೋ ಶ್ಯಾಮಸುಂದರ ಕೃಷ್ಣರಾಯನ ನೇಮದಿಂದಲಿನಾಮ ಪಠಿಸುತ ತಾಮಸಾರನು ಯಮಗೆ ಕಳಿಸಿ ಕಾಮವಿಲ್ಲದೆ ಯಜ್ಞವನಡೆಸಿದ ಭಾಮೆ ದ್ರೌಪದಿ ಪ್ರೇಮ ಪತಿಯಾದ2 ಕಲಿಯುಗ ಕಳ್ಳರು ಸಲ್ಲದರ್ಥಗಳನ್ನು ಸುರರು ಮೊರೆಯಿಡಲು ವಲ್ಲಭನು ಶ್ರೀನಲ್ಲ ನಲ್ಲದೆ ಇಲ್ಲ ಜಗದೊಳು ಎಂದು ಸ್ಥಾಪಿಸಿ ಎಲ್ಲವೇದದ ಎಲ್ಲನಾದವು ನಲ್ಲ ಹರಿ ಯಂತೆಂದು ತೋರಿದ 3 ಜೀವೇಶ ಬೇಧವು ಪಂಚಬೇಧವು ಸುಳ್ಳು ತಾವೆ ನಾಥರು ಜಗಕೆ ತಾರತಮ್ಯವು ಠಕ್ಕೂ ಶಿವನೆ ಸರ್ವೋತ್ತಮ ಬ್ರಹ್ಮನಿರ್ಗುಣನು ಈ ವಿಧವಾದವ ವೇದವ್ಯಾಸರ ಕಂಡು ಬದರಿಲಿ ಸೂತ್ರ ಭಾಷ್ಯವ ಮಾಧವನೆ ಜಗದಾದಿಕಾರಣ ಮೋದ ನೀಡಿದ 4 ಮಧ್ವರಾಯರವಾಣಿ ಶುದ್ಧವೇದದಸಾರ ವೇದವ್ಯಾಸರ ಮತವು ಇದುಸಿದ್ಧ ಹರಿ ಆಣೆ ಕೇಳಿ ಗದ್ದರಾಗದೆ ಬಿದ್ದು ಇವರಡಿ ತಿದ್ದಿ ಮನವನು ಒದ್ದುದುರ್ಮತ ಪದ್ಮನಾಭನ ಪಾದಧ್ಯಾನದಿ ಅದ್ದಿ ಚಿತ್ತವ ಸಿದ್ಧಮಾಡಿರೋ ಮುಕ್ತಿಪಥವ 5 ಪರಿಸರನೀತನು ಪರಮಾಪ್ತನುಹರಿಗೆ ಗುರುವೊ ಜಗಕೆಲ್ಲ ಬರುವ ಬ್ರಹ್ಮನು ಕಾಣೋ ಓಡಿಸುಮಾರಿಮತಗಳ ಇಲ್ಲವೊ ಹರಿಯ ಧಾಮವು 6 ಮೂರುಹತ್ತು ಎರಡು ಗುರುಲಕ್ಷಣ ಕಾಯರು ನಿರುತ ಹಂಸೋಪಾಸನೆ ಮೂರುವಿಧದಲ್ಲಿ ಮಾಳ್ವರು ಭಾರತೀಶನ ಸಾರಗುಣಗಳ ಸೂರಿಗಳಿಗಳವಲ್ಲ ಅರಿಯಲು ಚರಣಪಿಡಿಯಿರೋ 7 ದಶದಿಶೆಗಳ ವಳಗೆ ಬಿಸಜನಾಭನ ಕೀರ್ತಿ ಎಸೆದು ಹಿಗ್ಗುವ ನಮ್ಮ ಅಸಮ ಮಧ್ವರನೋಡೋ ನಾಶಮಾಡುತ ಭಾಸಕರು ಎಂದೆನಿಸಿದ 8 ಅನಿಲದೇವನ ನಾಮ ಕನಸಿಲಾದರು ಒಮ್ಮೆ ನೆನೆದವನೇ ಧನ್ಯ ಮಾನ್ಯನೋ ಜಗದೊಳಗೆ ದೀನನೆನಿಸುತಲಿ ದಾನಿ ಜಯಮುನಿ ಅನಿಲನಂತರ ಶ್ರೀನಿವಾಸ ಕೃಷ್ಣವಿಠಲಗೆ ಶರಣು, ಶರಣು, ಶರಣೆಂದು 9
--------------
ಕೃಷ್ಣವಿಠಲದಾಸರು
(ಒರಳುಕಲ್ಲು ಪೂಜೆಯ ಪದ)ಜಯ ಹನುಮಂತ ಭೀಮ | ಜಯ ಸರ್ವಜ್ಞಾಚಾರ್ಯ |ಜಯ ಭಾರತೀಶಾ ನಿರ್ದೋಷಾ || ನಿರ್ದೋಷ ಶ್ರೀ ವ್ಯಾಸಲಯನೆ ನಿನ್ನಂಘ್ರೀಗೆರಗೂವೆ | ಸುವ್ವಿ ಸುವ್ವೀ ಸುವ್ವಾಲಾಲೆ ಪಮುದದಿಂದಾ ಶ್ರೀ ಹರಿಯಾ | ಮದಿವಿ ಹಮ್ಮೀಕೊಂಡು |ಪದುಮಾಕ್ಷಿಯರೆಲ್ಲಾ ಒರಳೀಗೇ || ಒರಳಿಗಕ್ಕಿ ಹಾಕಿಪದ ಪಾಡಿದದನೂ ಬಣ್ಣೀಪೇ1ದೇವಕಿ ಯಶೋದೆ ಶ್ರೀ | ದೇವಭೂತೇ ಕೌಸಲ್ಯ ಸ- |ತ್ಯವತಿ ನೀವೆಂಥ ಧನ್ಯರೇ || ಧನ್ಯಾರೆ ಪಡದು ಶ್ರೀ |ದೇವೇಶಗೆ ಮೊಲಿಯಾ ಕೊಡುವೀರಿ 2ಅಕ್ಷರಳೆ ಪರಮಾತ್ಮನ | ವಕ್ಷ ಸ್ಥಳ ಮಂದಿರೆ |ಲಕ್ಷೂಮಿದೇವಿ ಜಯಶೀಲೆ || ಜಯಶೀಲೆ ಎಮ್ಮನು |ಪೇಕ್ಷಿಸಿದೆ ಕಾಯೇ ವರವೀಯೇ 3ಅಚ್ಛಿನ್ನ ಭಕ್ತರು ನೀವಚ್ಯುತಗೆ ಮುಕ್ತಿಯಾ |ತುಚ್ಛವೆಂಬುವಿರೆ ಸರಸ್ವತೀ || ಸರಸ್ವತಿಭಾರತಿ|ನಿಶ್ಚೈಸಿ ಒರಳೀಗೊದಗೀರೆ 4ಅಕ್ಕಿ ಥಳಿಸಲಿ ಬಾರೆ | ಅಕ್ಕ ಸೌಪರಣಿ ಶ್ರೀ |ರಕ್ಕಸಾ ವೈರೀ ಮದುವೀಗೇ || ಮದುವೀಗೆವಾರುಣಿತಕ್ಕೊಳ್ಳೆ ಕೈಲಿ ಒನಕೀಯಾ 5ಕೂಸಾಗಿ ಇದ್ದಾಗ ಆ ಶಿವನೆ ಬರಲೆಂದು |ಪೋಷಿಸಿದೆ ದೇಹಾ ತಪಸೀದೆ || ತಪಸೀದೆ ಪಾರ್ವತಿನೀ ಶೀಘ್ರ ಬಾರೇ ಒರಳೀಗೆ6ಇಂದ್ರ ಕಾಮನಸತಿಯಾರಿಂದು ಬನ್ನಿರಿ ನಮ್ಮ |ಮಂದರೋದ್ಧರನಾ ಮದಿವೀಗೇ || ಮದುವೀಗೆ ಒರಳಕ್ಕಿ |ಛಂದದಿಂದಲಿ ಪಾಡಿ ಥಳಿಸೀರೇ 7ಶತರೂಪಿ ನೀ ಪ್ರೀಯ ವ್ರತ ಮೊದಲಾದವರನ್ನ |ಪತಿಯಿಂದ ಪಡದೂ ಅವನೀಯಾ || ಅವನೀಯ ಪಾಲಿಸಿದಪತಿವ್ರತೀ ಒನಕೀ ಕೈಕೊಳ್ಳೇ8ದೇವರಂಗನಿಯರಿಗೆ ಸಾವಧಾನದಿ ಜ್ಞಾನ |ನೀ ವರದೇ ಎಂಥಾ ಗುಣವಂತೇ || ಗುಣವಂತೆ ಕರುಣಾಳೆಪ್ರಾವಹೀ ಪಿಡಿಯೇ ಒನಕೀಯಾ 9ಅರುವತ್ತು ಮಕ್ಕಳನಾ ಹರುಷದಿಂದಲಿ ಪಡದು |ವರನೋಡಿ ಕೊಟ್ಟೀ ಪ್ರಸೂತೀ || ಪ್ರಸೂತಿ ನೀನುಹಂದರದ ಮನಿಯೊಳೂ ಇರಬೇಕೂ 10ಗಂಗಾದೇವಿ ಯಂಥ ಇಂಗಿತಜÕಳೆ ನೀನು |ಹಿಂಗಿಸಿದೆ ವಸುಗಳಪವಾದಾ || ಅಪವಾದ ತ್ರಯ ಜಗ-ನ್ಮಂಗಳೇ ಪಿಡಿಯೇ ಒನಕೀಯಾ 11ಅನಿರುದ್ಧಾಶ್ವಿನಿ ಚಂದ್ರ ಇನಕಾಲಾ ಸುರಗುರು |ವನತಿಯರೆ ಉಳಿದಾ ನವಕೋಟೀ || ನವಕೋಟಿ ಸುರರಮಾನಿನಿಯೇರು ಬಂದೂ ಥಳಿಸೀರೇ 12ಅನ್ಯರನ ಪಾಡಿದರೆಬನ್ನಬಡಿಸುವ ಯಮನು |ವನ್ನಜಾಂಬಕನಾಶುಭನಾಮಾ || ಶುಭನಾಮ ಪಾಡಿದರೆಧನ್ಯರಿವರೆಂದೂ ಪೊಗಳೂವಾ13ಈ ವ್ಯಾಳ್ಯದಲಿ ನೋಡಿ ನಾವು ಥಳಿಸೀದಕ್ಕಿ |ಪಾಪನ್ನವಾಗೀ ತ್ವರದಿಂದಾ || ತ್ವರದಿಂದ ನಮ್ಮ ಶ್ರೀಗೋವಿಂದನ ಶಾಸೀಗೊದಗಲೀ 14ಹೆಚ್ಚಿನಂಬರ ಉಟ್ಟು ಅಚ್ಚಿನ ಕುಪ್ಪುಸ ತೊಟ್ಟು |ಪಚ್ಚಾದಿ ರತ್ನಾಭರಣಿಟ್ಟೂ || ಇಟ್ಟು ಸುಸ್ವರಗೈದುಅಚ್ಯುತನ ಪಾಡೋರಿನಿತೆಂದೂ 15ಲಕ್ಕೂಮಿ ಪತಿಯಾಗಿ ಬಹು ಮಕ್ಕಳನ ಪಡದಿದ್ದಿ |ಇಕ್ಕೊಳ್ಳಿ ಈಗಾ ಮದುವ್ಯಾಕೇ || ಯಾಕೊನತರಾನಂದಉಕ್ಕೀಸುವದಕೆ ರಚಿಸೀದ್ಯಾ16ಎಂಂದಾಗೆದೊ ಶ್ರೀ ಮುಕುಂದ ನಿನ್ನಾ ಮದುವಿ |ಹಿಂದಿನಾ ಬ್ರಹ್ಮರರಿತಿಲ್ಲಾ || ರರಿತಿಲ್ಲಅವಿಯೋಗಿಎಂದು ಕರಸುವಳು ಶೃತಿಯೋಳೂ 17ಶೀಲಿ ಸುಂದರಿ ನಿನ್ನ ಆಳಾಗಿ ಇರುವಳು |ಶ್ರೀ ಲಕ್ಷ್ಮೀ ನೀನು ಸ್ವರಮಣಾ || ಸ್ವರಮಣನಾಗೆವಳಮ್ಯಾಲೆ ಮದುಪ್ಯಾಕೊ ಭಗವಂತಾ18ಆರು ಮಹಿಷಿಯರು ಹದಿನಾರು ಸಾವಿರ ಮ್ಯಾಲೆ |ನೂರು ನಾರಿಯರೂ ಬಹುಕಾಲಾ || ಬಹುಕಾಲ ಬಯಸಿದ್ದುಪೂರೈಸಿ ಕೊಟ್ಯೋ ದಯಸಿಂಧು 19ವೇದನೆಂಥಾ ಪುತ್ರ ವೇದನಂತಾ ಬಲ್ಲ |ವೋದುವಾ ನಿರುತಾ ನಿನ ಪೌತ್ರಾ || ಪೌತ್ರೌ ನಿಮ್ಮಣ್ಣ ಸ್ವ-ರ್ಗಾಧಿಪತಿ ಎಂದೂ ಕರಸೂವ 20ಜಗವ ಪಾವನ ಮಾಳ್ಪ ಮಗಳೆಂಥ ಗುಣವಂತಿ |ಅಗಣಿತಜ್ಞಾನವಂತಾರೊ || ಜ್ಞಾನವಂತರೊ ನಿನ್ನಯುಗಳಸೊಸಿಯರೂ ಪರಮಾತ್ಮಾ21ಈ ವಸುಧಿಯೊಳಗೆಲ್ಲಾ ಆವಶುಭಕಾರ್ಯಕ್ಕೂ |ದೇವೇಶ ನಿನ್ನಾ ಸ್ಮರಿಸೋರೋ || ಸ್ಮರಿಸುವರೊ ನಿನ ಮದುವಿ-ಗಾಂವೀಗ ನಿನ್ನೇ ನೆನೆವೇವೊ 22ಅಕ್ಲೇಶಾ ಅಸಮಂಧಾ ಶುಕ್ಲಶೋಣಿತದೂರಾ |ಹಕ್ಲಾಸುರಾರೀ ದುರಿತಾರೀ || ದುರಿತಾರಿ ಅಸಮ ನಿ-ನ್ನೊಕ್ಲಾದವರಗಲೀ ಇರಲಾರೀ 23ವೇದವೆಂಬದು ಬಿಟ್ಟು ಭೂ ದಿವಿಜಾರಮರಾರು |ಮಾಧವನ ಗುಣವಾ ಪೊಗಳೂವಾ || ಪೊಗಳುವಾ ಸುಸ್ವರವಾಶೋಧಿಸೀ ಕೇಳೂತಿರುವಾರೂ 24ಕಾಮಾದಿಗಳ ಬಿಟ್ಟು ಸೋಮಪರ ರಾಣಿಯರು |ಸ್ವಾಮಿಯ ವಿವಾಹಾ ನಾಳೆಂದೂ || ನಾಳೆಂದರಿಷಿಣದಕ್ಕೀಹೇಮಾಧರಿವಾಣಕ್ಕಿರಿಸೋರೂ25ಜಯ ಮತ್ಸ್ಯಾ ಕೂರ್ಮಾಕಿಟಿಜಯ ನರಸಿಂಹಾ ಋಷಿಜ |ಜಯ ರಾಮಕೃಷ್ಣಾ ಶ್ರೀ ಬುದ್ಧಾ || ಶ್ರೀಬುದ್ಧಕಲ್ಕಿ ಜಯಜಯ ದತ್ತಾತ್ರಯಶುಭಕಾಯಾ 26ಆನಂದಾದಿಂದಾ ಸುರ ಮಾನಿನಿಯಾರಾಡೀದ |ಈ ನುಡಿಯಾ ಪಾಡೀದವರೀಗೆ || ಅವರಿಗಿಹಪರದಲ್ಲಿಪ್ರಾಣೇಶ ವಿಠಲಾ ಒಲಿವೋನೂ 27
--------------
ಪ್ರಾಣೇಶದಾಸರು
ಬಾರೋ ಮಗನೆ ಬಳಲಿದೆಯಾಡಿಬಾರೊ ಮಗನೆ ಪ.ಎಲ್ಲಿಗೆ ಹೋಗಿದ್ಯೊ ಎನ್ನೆದೆಝಲ್ಲು ಝಲ್ಲು ಎನುತಲಿದೆಮೆಲ್ಲೆದೆಗಾರ್ತಿ ಗೊಲ್ಲತೀರು ನಿನ್ನಗಲ್ಲ ಕಚ್ಚಿಹರಲ್ಲೊ ಹಸುಳೆ 1ಬಾಡಿತೊವದನಇಂದಾರೊಳುಮಾಡಿದ್ಯೊಕದನಕಾಡುವ ಬಾಲ ಪ್ರೌಢಿಯರ ತೋರಿಸುನಾಡ ಬಿಟ್ಟವರನೋಡಿಸುವೆ ನಡೆ 2ಕೂಸಿನಾಟವಲ್ಲೊ ಜಟ್ಟಿಗನವಿೂಸಲಂಜಿಕಿಲ್ಲೊಹೇಸದೆ ಬೆಣ್ಣೆಯ ಸವಿದು ನಿರ್ದೋಷ ಕೃಷ್ಣ ನೀ ಘಾಸಿಯಾದೆ 3ಕೋಮಲಾಂಗವಿದು ಕಲ್ಲೆದೆಕಾಮಿನಿಯರೊಯಿದುಕಾಮುಕಿಯರತಿ ಪ್ರೇಮದಲಪ್ಪಪ್ಪಿದಾಮಸಡಿಲ್ಯದೆ ಶ್ರೀಮುರಾರಿ4ಮುದ್ದಿನಾಮೃತೆ ಬಾ ಪೊಂದೊಟ್ಟಿಲೊಳ್ನಿದ್ರೆಗೈಯಲಿಲ್ಲ ಎದೆಗದ್ದಿಗೆಲಿದ್ದು ನಲಿದಾಡೊ ಪೂರ್ಣಶುದ್ಧ ಪ್ರಸನ್ವೆಂಕಟ ಶ್ರೀಕೃಷ್ಣ 5
--------------
ಪ್ರಸನ್ನವೆಂಕಟದಾಸರು