ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೋಸ ಪೋದೆಯಲ್ಲೇ ಭಾಸುರಾಂಗಿ ನೀನು ಪ ಕಾಶಿ ನಿವಾಸಿ ವಿಶ್ವೇಶ್ವರನಹುದೆಂದು ಅ.ಪ. ವಿಶ್ವೇಶ್ವರನವನಲ್ಲ ತಿಳಿದು ನೋಡು ನೀನು ವಿಶ್ವಪತಿಯಾ ವಿಷ್ಣುವಿನಡಿಯಾಳು ಅವನು ಸುಸ್ವಭಾವದ ಸರಳ ಹೃದಯಾನ್ವಿತಳು ನೀನು ಕಪಟ ಕಿರಾತನವನು 1 ತ್ರಿಪುರ ಸುಂದರಿಯೆಂಬ ಬಿರುದು ಪೊತ್ತಿಹೆ ನೀನು ಕಪಟ ವೇಷದೊಳು ಬಂದ ವಿಷಕಂಠನವನು ಚಪಲಾಕ್ಷಿಯೆ ನಿಜಸ್ಥಿತಿ ಅರಿಯಲಿಲ್ಲ ನೀನು ಗುಪಿತದಲಿ ನಿನ ಕಂಡು ಮರುಳು ಮಾಡ್ದನವನು 2 ರಾಜರಾಜೇಶ್ವರಿಯಾಗಿ ರಾಜಿಸುವೆ ನೀನು ಭೋಜನಕಾಗಿ ಭಿಕ್ಷ ಬೇಡುವನಲ್ಲೆ ಅವನು ಮೂಜಗವು ಮೋಹಿಸುವ ಕೋಮಲಾಂಗಿಯು ನೀನು ಈ ಜಗವರಿಯೆ ಸರ್ವದ ಭಸ್ಮಾಂಗನವನು 3 ಕನಕ ಮಣಿಮಯದಂತಃಪುರವಾಸಿಯು ನೀನು ಶುನಕ ಗೋಮಾಯ್ಗಳೆಡೆ ಮಸಣವಾಸಿಯವನು ಘನ ವಿಶಾಲಾಕ್ಷಿಯೆ ಮಂದಹಾಸಮುಖಿ ನೀನು ಮಿನುಗುವ ಬೆಸಗಣ್ಣಿನುರಿಮೊಗದೊಳಿಹನವನು 4 ಚಾರು ಪೀತಾಂಬರ ಧರಿಸಿ ಶೋಭಿಸುವೆ ನೀನು ಕೋರಿ ಗಜಚರ್ಮಧರಿಸುವ ಭಿಕಾರಿಯವನು ಭೂರಿ ಸುಖಭೋಗಂಗಳನನುಭವಿಸುವೆ ನೀನು ನಾರಸಿಂಹ ಮಂತ್ರ ಜಪಿಪ ವಿರಾಗಿಯವನು5 ಕರುಣಾ ಕಟಾಕ್ಷದಿಂ ಜಗವ ಪೊರೆದಪೆ ನೀನು ಕರುಣವಿಲ್ಲದೆ ಮೂಜಗವನುರುಹುವನವನು ಪರಮ ಭಕತರಿಗೆ ಮುಕುತಿಪಥ ತೋರುವೆ ನೀನು ನರನಾದ ಭಕ್ತನೊಳು ಹೋರಾಡಿದವನು 6 ಮಂಗಳಪ್ರದೆಯೆಂದು ಖ್ಯಾತಿಗೊಂಡಿರುವೆ ನೀನು ಜಂಗಮ ಜೋಗಿಗಳಿಗೆ ನೆಲೆಯಾಗಿಹನವನೂ ಗಂಗಾಜನಕನ ಪ್ರಿಯತಮ ಸೋದರಿಯು ನೀನು ರಂಗೇಶವಿಠಲನ ಚರಣ ಸೇವಕನವನು 7
--------------
ರಂಗೇಶವಿಠಲದಾಸರು
ಕೊಡಬಹುದೇ ಮಗಳ - ಸಮುದ್ರರಾಜಕೊಡಬಹುದೇ ಮಗಳ ಪನಡೆದರೆ ಬಡವಹಳೆಂಬ ಕುಮಾರಿಯ |ಹಿಡಿಬಿಟ್ಟಿ ಮಾಡಿ ಹರಿಗೆ ಸಿಂಧುರಾಜನುಅ.ಪಕುರುಹಬಲ್ಲವರಾರು, ಕುಲಗೋತ್ರವಾವುದೊ |ಅರಿತ ರಾಯರೊಳಗೆ ಆರ ಮಗನೊ ಇವ |ವರುಶಭಾಂಗಿಗೆ ತಕ್ಕ ವರನಹುದೆ ಇವ |ಹಿರಿಯರೆಂಬುದ ನೆರೆಹೊರೆಯೂ ಕಾಣದನಿವ |ಪರಿಪಂಥಿಜನಕೆಲ್ಲ ಪ್ರಾಣಘಾತಕನಿವ |ನಿರುತ ಮೇಘವ ಪೋಲ್ವ ನೀಲಮೆಯ್ಯವನಿವ,ಹಿರಿದಾದ ನಾಲ್ಕು ಹಸ್ತಗಳುಳ್ಳವನಿವ |ಅರುಣಚ್ಛಾಯೆಯ ರೇಖೆ ಅರಳಿಸಿಹಾರುವ ||ಗರುಡಹಕ್ಕಿಯ ನೆಚ್ಚಿದ - ಎದೆಯ ಮೇಲೆ |ಭರದಿ ಒದೆಯ ಮೆಚ್ಚಿದ - ಘೋರರೂಪ |ಧರಿಸಿ ಕೋಪದಿ ಹೆಚ್ಚಿದ - ಕರೆವ ಗೋವ |ಕರುಗಳ ಕೊರಳುಚ್ಚಿದ - ಸಂಸಾರದೊಳ್ |ಇರುತಿಹ ನಾರಿಯರ ಮನವೆಲ್ಲ ಬಿಚ್ಚಿದ 1ಅಡಿಗಡಿಗೆ ಹತ್ತು ಅವತಾರವ ಮಾಡಿದ |ಕಡುಕಪತಿಯಲ್ಲದೆ ಭಾರಿ ಗುಣದವನಲ್ಲ |ಗಿಡದ ಮರೆಯಲಿದ್ದು ಕಪಿಯ ಕೊಂದನುಹೊಲ್ಲ |ನಡತೆಯಲಿ ಸಲೆ ಜನಲಜ್ಜೆ ಇವನಿಗಿಲ್ಲ |ಹಿಡಿದು ಪೂತನಿ ಮೊಲೆಯುಂಡ ಚೌಪಟಮಲ್ಲ |ಮಡುಹಿದ ಮಾವನ ಮಧುರೆಯೊಳಗೆಖುಲ್ಲ |ಕೊಡೆಮಾಡಿ ಬೆಟ್ಟವ ಗೋಕುಲದೊಳಗೆಲ್ಲ |ಮಡದಿಯರುಡುಗೆಯ ಕದ್ದದ್ದು ಹುಸಿಯಲ್ಲ ||ಕಡಹದ ಮರವೇರಿದ -ಅವರಮಾನ - |ಕೆಡಿಸಿ ಭಂಡರ ಮಾಡಿದ - ದಧಿಕ್ಷೀರ - |ಗಡಿಗೆ ಸೂರೆಯ ಮಾಡಿದ - ಕಾಳಿಂಗನ - |ಮಡುವ ಕಲಕಿ ನೋಡಿದ - ಸ್ಯಂದನವನು |ನಡೆಸುವ ಕಾರಣ ನರಗೆ ಸಾರಥಿಯಾದ 2ಊದುತ ಕೊಳಲನರಣ್ಯದೊಳ್ ಗೋಗಳ |ಕಾದು ಕುಂಚಿಗೆ ಮಾಡಿ ಕಂಬಳಿ ಪೊದೆವನು |ಓದನವನು ಬೇಡಿ ಹೊಟ್ಟೆಯ ಹೊರೆದನು |ಯಾದವರೊಳಗಾಡಿ ಎಂಜಲನುಂಡನು |ಕ್ರೋಧದಿಂದ ಸುರರ ಕೊಂದು - ಕೊಂದಿಡುವನು |ಪಾದರಿ ಪೆಣ್ಣುಗಳೊಳಗಿರುತಿಪ್ಪನುಆದಿಯೆ ಇವಗಿಲ್ಲ ಎಂದೆಂದಿಗಿಪ್ಪನು |ಭೂದಿವಿಜರ ಕೂಡ ಬಿಕ್ಷಕೆ ಪೋಪನು ||ಮೇದಿನಿಯೊಳಗಿರುವ - ಮಸ್ತಕವು ಬೋ - |ಳಾದವರೊಳಗಿರುವ - ನೋಡಲು ಭೇದಾ - |ಭೇದದಂದದಿ ತೋರುವ - ಸಭೆಯೊಳಗೆ |ಬೈದರೆ ಮೈದೋರುವ ಶೇಷಶಾಯಿ - |ಯಾದಂಥಪುರಂದರ ವಿಠಲನೆಂದರಿಯದೆ3
--------------
ಪುರಂದರದಾಸರು