ಸತ್ಯಸುಧಾರ್ಣವ ನಿತ್ಯಸ್ವಯಂಭುವ
ನುತ್ಯಸ್ವಭಾವಗುಣ ರಮಾಧವ ಪ
ಭವ ಭಂಜನ ರಾಘವ
ಅತ್ಯಂತ ಸುಖವೀವ ದೇವ ಕೃಪಾರ್ಣವ ಅ.ಪ
ಪವನನಂದನನುತ ಭುವನಾರಾಜಿತ
ಧೃವ ಪರಿಭಾವಿತ ಮುನಿಸೇವಿತ
ಕವಿಹೃದಯಾನತ ದಿವಿಜಾರಾಧಿತ
ನವಘನಸುಂದರ ವಿಧಿವಿನುತಾ 1
ರಥಾಂಗ ಶ್ರೀಕರ
ತುಂಗ ಕೃಪಾಕರ ಧರಣೀಧರಾ
ಮಾಂಗಿರಿ ವರನರಸಿಂಗ ಪರಾತ್ಪರ
ಅಂಗಜಜನಕ ಭುಜಂಗ ಶೃಂಗಾರ 2