ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯಜಯವೆಂದು ಶರಣೆನ್ನಿ ಹನುಮಯ್ಯಗ | ಜಯ ಭೀಮಶೇನಾನಂದ ತೀರ್ಥರೇಯಗ ಪ ಆದಿಲಿ ಅಂಜನಿ ಉದರದಲಿ ಬಂದಾ | ಸಾದರ ರಘುಪತಿ ಸೇವೆಯಲಿ ನಿಂದಾ | ಶ್ರೀದೇವಿ ಸುದ್ದಿ ಶರಧಿಯ ದಾಟಿ ತಂದಾ | ಭೇದಿಸಿ ರಾವಣನಾ ದಳವೆಲ್ಲಾ ಕೊಂದಾ 1 ತರಿ ತರಿದೊಟ್ಟದಾ ಕುರುಕುಲಾನ್ವಯ ವೃಂದಾ ಅರಸ ಯುಧೀಷ್ಠಿರನಾ ವಾಸಿಯ ತಂದಾ2 ಮೂರನೇ ರೂಪದಿ ಮಧ್ಯಗೇಹದಿ ಬಂದಾ ನೆರೆ ಬಾದರಾಯಣನಾಜ್ಞೆಲಿ ನಿಂದಾ ವರವರದ್ಹೇಳಿದ ತತ್ಪಾರ್ಥ ಛಂದಾ ಗುರುವರ ಮಹಿಪತಿ ನಂದನ ಮನಕಾನಂದಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡಿದ್ಯಾ ಈ ದೇಹಕೆ ಬಂದು | ನೋಡಿದ್ಯಾ ನೋಡಿದ್ಯಾ |ನೋಡದವನ ನೀ ನೋಡುವೆ ಎಂದರೆ | ನೋಡುವಿ ಎಂದಿಗೆ ನೋಡಿದ್ಯಾ ಪ ಒಬ್ಬವರ್ಯಾರೂ ತೋರುವದಲ್ಲ | ತೋರಿಸಿಕೊಂಡರದು ತಾನಲ್ಲ | ತೋರಡಗುವದಕೆ ಮೀರಿರುವದು ಎಂದು | ಸಾರುತಿಹುದು ಶ್ರುತಿಸಾರವೆಂದು 1 ರೂಪವನ್ನು ಕಲ್ಪಿಸಲಿಲ್ಲಾ | ಚಿದ್ರೂಪವನು ಸರ್ವರೊಳೆಲ್ಲಾ | ಪಾಪ ಪುಣ್ಯಕೆ ವ್ಯಾಪಕನಾದ | ದೀಪ ಪ್ರಕಾಶನ ಬೋಧಿಪ ಬಲ್ಲಾ 2 ಕರೆದರೆ ಎತ್ತೆತ್ತ ಬಾರ ಮತ್ತೆ | ಮರೆದರೆ ಎತ್ತೆತ್ತ ಹೋಗನು ದೂರ | ಗುರು ಭವತಾರಕ ಶಿರದೊಳು ಕರವಿಟ್ಟು | ವರದ್ಹೇಳಿದ ವಸ್ತು ಪರಿಪೂರ್ಣವಾಗೆ 3
--------------
ಭಾವತರಕರು